ರೈತರೇ ಮೋಬೈಲ್ ನಲ್ಲಿಯೇ ಪಂಪ್ ಸೆಟ್ ಗಳಿಗೆ ಅರ್ಜಿ ಹಾಕಬಹುದು. ಹೇಗೆ ಎಂದು ನೋಡಿ.

ರೈತ ಮಿತ್ರರೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತಪರ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ಅದರಲ್ಲಿ ಮುಖ್ಯವಾದುದು ಕೇಂದ್ರ ಸರ್ಕಾರದ ಪಿಎಂ ಕುಸುಮ್ ಯೋಜನೆ. ಈ ಯೋಜನೆಯ ಅಡಿಯಲ್ಲಿ ರೈತರಿಗೆ ಸರ್ಕಾರವು ಸೌರ ವಿದ್ಯುತ್ ಅನ್ನು ಕೃಷಿ ಚಟುವಟಿಕೆಗಳಿಗೆ ಬಳಸಲು ಪ್ರೋತ್ಸಾಹ ನೀಡುತ್ತಿದೆ. ಅದಕ್ಕಾಗಿ ಸದ್ಯ ಸರ್ಕಾರವು ಸೌರಶಕ್ತಿ ಬಳಕೆ ಮಾಡಿ ರೈತರಿಗೆ ಪಂಪ್ ಸೆಟ್ ಜಾಲಮುಕ್ತ ಸೌರ ಚಾಲಿತ ಕೃಷಿ ಪಂಪ್‌ಸೆಟ್‌ಗಳಿಗಾಗಿ ರೈತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪಿಎಂ- ಕುಸುಮ್ ಯೋಜನೆಯಡಿ ಮೊದಲ ಹಂತದಲ್ಲಿ ಸುಮಾರು 4400 ಜಾಲಮುಕ್ತ ಸೌರಶಕ್ತಿ ಚಾಲಿತ ಪಂಪ್‌ಸೆಟ್‌ಗಳನ್ನು ಅಳವಡಿಸುವ ಯೋಜನೆಯನ್ನು ಕೆಆರ್‌ಇಡಿಎಲ್ ಮೂಲಕ ರಾಜ್ಯ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿಗಳ ಸಹಯೋಗದೊಂದಿಗೆ ವಿತರಿಸಲಾಗುವುದು.

ಪ್ರಧಾನಮಂತ್ರಿ ಕುಸುಮ್ ಯೋಜನೆಯಡಿ ಕೃಷಿ ನೀರಾವರಿಗೆ ಸೌರವಿದ್ಯುತ್ ಚಾಲಿತ ಪಂಪ್ ಅಳವಡಿಕೆಗೆ ಟೆಂಡರ್ಗಳನ್ನು ಗುರುತಿಸಲಾಗಿದೆ. ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದರು.ಮಾತನಾಡಿದ ಇಂಧನ ಸಚಿವ ಕೆ.ಜೆ ಜಾರ್ಜ್ ಪ್ರಧಾನಮಂತ್ರಿ ಕುಸುಮ್ ಯೋಜನೆಯಡಿ ಕೃಷಿ ನೀರಾವರಿಗೆ ಸೌರವಿದ್ಯುತ್ ಚಾಲಿತ ಪಂಪ್ ಅಳವಡಿಕೆಗೆ ಟೆಂಡರ್ಗಳನ್ನು ಗುರುತಿಸಲಾಗಿದೆ, ಮೊಬೈಲ್ ಆಯಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.

ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಇಂಧನ ಇಲಾಖೆ ಶನಿವಾರ ಆಯೋಜಿಸಿದ್ದ ‘ರೈತ ಸೌರಶಕ್ತಿ ಮೇಳ’ದ ಉದ್ಘಾಟನೆ, ‘ಕುಸುಮ್’ ಬಿ ಮತ್ತು ಸಿ ಯೋಜನೆ ಹಾಗೂ ಹೊಸ ವಿದ್ಯುತ್ ಉಪಕೇಂದ್ರಗಳನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.

  1. PM-KUSUM ಯೋಜನೆಯು ಕಾಂಪೊನೆಂಟ್-ಬಿ ಮತ್ತು ಕಾಂಪೊನೆಂಟ್-ಸಿ ನಡುವಿನ ಪ್ರಮಾಣಗಳ ಅಂತರ-ಸೆ ವರ್ಗಾವಣೆಯನ್ನು ಅನುಮತಿಸುತ್ತದೆ. ಯೋಜನೆಯ ಎಲ್ಲಾ ಮೂರು ಘಟಕಗಳು ಮಾರ್ಚ್ 2026 ರ ವೇಳೆಗೆ ಸುಮಾರು 34,800 MW ನಷ್ಟು ಸೌರ ಸಾಮರ್ಥ್ಯವನ್ನು ಒಟ್ಟು ₹ 34,422 ಕೋಟಿ ಕೇಂದ್ರ ಹಣಕಾಸು ಬೆಂಬಲದೊಂದಿಗೆ ಸೇರಿಸುವ ಗುರಿಯನ್ನು ಹೊಂದಿವೆ.

PM KUSUM ಯೋಜನೆಯು ಈ ಕೆಳಗಿನ ಅಂಶಗಳನ್ನು ಹೊಂದಿದೆ:

ಘಟಕ-ಎ: ರೈತರು ತಮ್ಮ ಭೂಮಿಯಲ್ಲಿ 10,000 ಮೆಗಾವ್ಯಾಟ್ ವಿಕೇಂದ್ರೀಕೃತ ಗ್ರೌಂಡ್/ ಸ್ಟಿಲ್ಟ್ ಮೌಂಟೆಡ್ ಗ್ರಿಡ್ ಸಂಪರ್ಕಿತ ಸೌರ ಅಥವಾ ಇತರ ನವೀಕರಿಸಬಹುದಾದ ಇಂಧನ ಆಧಾರಿತ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವುದು.

ಘಟಕ-ಬಿ: 14 ಲಕ್ಷ ಅದ್ವಿತೀಯ ಸೌರ ಕೃಷಿ ಪಂಪ್‌ಗಳ ಸ್ಥಾಪನೆ.

ಕಾಂಪೊನೆಂಟ್-ಸಿ: ಫೀಡರ್ ಮಟ್ಟದ ಸೌರೀಕರಣ ಸೇರಿದಂತೆ 35 ಲಕ್ಷ ಗ್ರಿಡ್ ಸಂಪರ್ಕಿತ ಕೃಷಿ ಪಂಪ್‌ಗಳ ಸೋಲಾರೈಸೇಶನ್.

ಯೋಜನೆ ಪಡೆಯಲು ಅರ್ಜಿ ಹಾಕಬೇಕೇ?

ಹೌದು ಮುಖ್ಯವಾಗಿ ಹೇಳಬೇಕೆಂದರೆ ಈ ಯೋಜನೆ ಪಡೆಯಲು ಸರ್ಕಾರವು ರೈತರಿಂದ ಅರ್ಜಿ ಆಹ್ವಾನ ಕರೆದಿದ್ದು ಈಗಾಗಲೇ ಆನ್‌ಲೈನ್ ಅರ್ಜಿನೊಂದಣಿ ಪ್ರಕ್ರಿಯೆಯು ಚಾಲನೆಯಲ್ಲಿರುತ್ತದೆ. ಆಸಕ್ತಿಯುಳ್ಳ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದ ರೈತರು ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಕೆ.ಆರ್.ಇ.ಡಿ.ಎಲ್. 35636 www.kredlinfo.in De ನೋಂದಾಯಿಸಿಕೊಳ್ಳಬಹುದು. ಕೇಂದ್ರ ಸರ್ಕಾರದ ಯೋಜನೆ ಆಗಿರುವುದರಿಂದ ನಿಯಮಗಳ ಮಾದರಿಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕು.

Spread positive news

Leave a Reply

Your email address will not be published. Required fields are marked *