ವಂಶಾವಳಿ ಪ್ರಮಾಣ ಪತ್ರ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

  1. ವಂಶಾವಳಿ ಪ್ರಮಾಣ ಪತ್ರ ಎಂದರೇನು? ಅದು ಜನರಿಗೆ ಏಕೆ ಬೇಕು? ಈ ವಿಷಯದ ಕುರಿತು ನಿಮಗೆ ಸಂಪೂರ್ಣ ಮಾಹಿತಿ ಒದಗಿಸುತ್ತೇವೆ. ಬನ್ನಿ ಈ ವಿಷಯದ ಬಗ್ಗೆ ಹಂತ ಹಂತವಾಗಿ ತಿಳಿಯುತ್ತಾ ಹೋಗೋಣ. ಸರ್ಕಾರವು ಪ್ರಮಾಣ ಪತ್ರಗಳನ್ನು ಪಡೆಯಲು ಸರಳೀಕರಣಗೊಳಿಸಿ, ಕಾಗದರಹಿತ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕಾಗಿ ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಆನ್ಲೈನ್ ನಲ್ಲಿಯೇ ನೆಟ್ ಬ್ಯಾಂಕಿಂಗ್ ಮೂಲಕ ಪ್ರಮಾಣ ಪತ್ರಗಳಿಗೆ ನಿಗದಿಪಡಿಸಿದ ಶುಲ್ಕ ಪಾವತಿ ನಿರ್ಧಷ್ಟ ಅವಧಿಯಲ್ಲಿ ಪ್ರಮಾಣ ಪತ್ರ ಪಡೆಯಬಹುದಾಗಿದೆ.
  2. ವಂಶಾವಳಿ ಪ್ರಮಾಣ ಪತ್ರ (Vamshavali Certificate) ಎಂದರೆ ಕುಟುಂಬದ ವಿವರವನ್ನು ತಿಳಿಸುವ ದಾಖಲಾತಿ ಪತ್ರ ಎನ್ನಬಹುದು. ಅಂದರೆ ಅಪ್ಪ, ಅಮ್ಮ, ತಾತಾ, ಅಜ್ಜಿ, ಚಿಕ್ಕಪ್ಪ- ಚಿಕ್ಕಮ್ಮ ಹೀಗೆ ರಕ್ತ ಹಂಚಿಕೊಂಡಿರುವ ಎಲ್ಲರಿಗೆ ಈ ಪ್ರಮಾಣ ಪತ್ರ ಸೇರಿರುತ್ತದೆ. ಕರ್ನಾಟಕದಲ್ಲಿ ಇದನ್ನು ಕಂದಾಯ ಇಲಾಖೆಯ ಮೂಲಕ ನೀಡಲಾಗುವುದು. ಇದನ್ನು ಆಯಾ ಗ್ರಾಮ ಪಂಚಾಯತ್ ನ ಗ್ರಾಮ ಲೆಕ್ಕಿಗರು ನೀಡುತ್ತಾರೆ. ಇದನ್ನು ನೀವು ಪಡೆಯಲು ನಾಡ ಕಚೇರಿಗೆ ಹೋಗಿ ಅರ್ಜಿ ಹಾಕಬೇಕು ಇಲ್ಲವೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
  3. ಅದೇ ರೀತಿ ಕುಟುಂಬದ ಆಸ್ತಿ ವ್ಯಾಜ್ಯ ಇದ್ದರೆ ಆಗ ಕೂಡ ವಂಶಾವಳಿ ಪ್ರಮಾಣ ಪತ್ರ ಅಗತ್ಯವಾಗಿ ಬೇಕಾಗುತ್ತದೆ. ಕುಟುಂಬದ ಗುರುತಿಗಾಗಿ ಸರಕಾರದ ಸೌಲಭ್ಯ ಪಡೆಯಲು ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ. ವಂಶಾವಳಿ ಪಡೆಯಯವಾಗ ಆಧಾರ್ ಕಾರ್ಡ್ ಅನ್ನು ನೀಡಬೇಕು ಇಲ್ಲವಾದರೆ ಆಗ ಮತದಾರರ ಗುರುತು ಚೀಟಿ ನೀಡಿ ಕೂಡ ನೀವು ವಂಶಾವಳಿ ಪ್ರಮಾಣ ಪತ್ರ ಪಡೆಯಬಹುದು. ಎಲ್ಲ ದಾಖಲಾತಿ ಸರಿ ಇದ್ದರೆ 7 ದಿನದೊಳಗೆ ವಂಶಾವಳಿ ಪ್ರಮಾಣ ಪತ್ರ ದೊರೆಯಲಿದೆ. ಸರಕಾರದ ಸೌಲಭ್ಯ , ಬ್ಯಾಂಕಿನ ಸಾಲ, ಅನುಕಂಪದ ಆಧಾರದ ಮೇಲೆ ನೀಡಲಾಗುವ ಕೆಲಸ ಎಲ್ಲದಕ್ಕೂ ವಂಶಾವಳಿ ಪ್ರಮಾಣ ಪತ್ರ ಕಡ್ಡಾಯವಾಗಿದೆ.

ವಂಶಾವಳಿ ಪತ್ರದ ಅವಶ್ಯಕತೆ ಎಲ್ಲೇಲ್ಲಿ? 

* ಮನೆ & ಜಮೀನು ಭಾಗ ಸಮಯದಲ್ಲಿ ವಂಶಾವಳಿ ಪತ್ರ ಕಡ್ಡಾಯ.

* ಕುಟುಂಬದ ಆಸ್ತಿ ತಕರಾರಿಗೆ ಹಕ್ಕು ಸಾಧಿಸಲು.

* ಕುಟುಂಬ ಗುರುತಿಗಾಗಿ & ಸರ್ಕಾರದhesha Vani ಸೌಲಭ್ಯಕ್ಕಾಗಿ.

* ಜಮೀನು / ಮನೆ ಪಾಲು ಆಗಲು ವಂಶಾವಳಿ ಪತ್ರ ಕಡ್ಡಾಯ.

ವಂಶಾವಳಿ ಪತ್ರದ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

* ಆಧಾರ ಕಾರ್ಡ್ ಬೇಕು. ಇಲ್ಲದಿದ್ದ ಪಕ್ಷದಲ್ಲಿ Vishesha Vani ವೋಟರ್ ಐಡಿ ಕಾರ್ಡ್.

* ಜನನ ಪತ್ರ.

* ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

* ಕಡ್ಡಾಯವಾಗಿ ನೀವು ಮೂಲ ನಿವಾಸಿಗಳು ಆಗಿರಬೇಕು.

* ರಹವಾಸಿ ಪತ್ರ ಹೊಂದಿರಬೇಕು.

ಇದರ ಉಪಯೋಗ ಏನು? 

ಬ್ಯಾಂಕ ಸಾಲ, ಸರಕಾರದ ಸೌಲಭ್ಯಗಳು, ಅನುಕಂಪದ ನೌಕರಿ & ಯೋಜನಾ ನಿರಾಶ್ರಿತರ ಪರಿಹಾರ ಪಡೆಯಲು ಅವಶ್ಯಕತೆ ಇದೆ. ಅರ್ಜಿ ಸಲ್ಲಿಸಿದ ಕೇವಲ 7 ದಿನದಲ್ಲಿ ಈ ಪತ್ರವು ನಿಮಗೆ ದೊರೆಯುತ್ತದೆ.

ಮನೆಯಲ್ಲಿಯೇ ವಂಶಾವಳಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬಯಸುವವರು https://nadakacheri.karnataka.gov.in/ajsk

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಾಡ ಕಚೇರಿಯ ವೆಬ್ಸ್ಟೈಟ್ ಓಪನ್ ಆಗುತ್ತದೆ. ಅಲ್ಲಿ ಆನ್ಲೈನ್ ಅಪ್ಲಿಕೇಷನ್ ಮೇಲೆ ಕ್ಲಿಕ್ ಮಾಡಬೇಕು. ಅಪ್ಲೈ ಆನ್ಲೈನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಿದ ನಂತರ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಬೇಕು. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಪೂರ್ಣಗೊಂಡನಂತರ ವಂಶಾವಳಿ ಅರ್ಜಿಯನ್ನು ಗ್ರಾಮಲೇಖಪಾಲಕರಿಗೆ ನಂತರ ಕಂದಾಯ ನಿರೀಕ್ಷಕರಿಗೆ ಸಲ್ಲಿಸಲಾಗುತ್ತದೆ. ಅರ್ಜಿ ಪರಿಶೀಲಿಸಿದ ನಂತರ ಅವರು ಉಪ ತಹಸೀಲ್ದಾರರಿಗೆ ಸಲ್ಲಿಸುತ್ತಾರೆ. ಎಲ್ಲಾ ಹಂತಗಳು ಪೂರ್ಣಗೊಂಡನಂತರ 7 ದಿನಗಳೊಳಗೆ ಅರ್ಜಿ ಪಡೆಯಬಹುದು.

 

Spread positive news

Leave a Reply

Your email address will not be published. Required fields are marked *