ಪ್ರೀಯ ರೈತರೇ ರಾಜ್ಯದಲ್ಲಿ ಹಲವು ಸಂಸ್ಥೆಗಳು ರೈತರ ಪರವಾಗಿ ನಿಂತು ಕೆಲಸ ಮಾಡುತ್ತಿವೆ. ಅದೇ ರೀತಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹ ರೈತರ ನೆರವಿಗೆ ಹೊಸ ಹೊಸ ಪ್ರಯೋಗಗಳನ್ನು ಹಮ್ಮಿಕೊಳ್ಳುತ್ತಿದೆ. ರಾಜ್ಯದಲ್ಲಿ ಇರುವ ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಪರಿಹಾರ ಹಾಗೂ ರೈತರ ಹಿತ ಕಾಪಾಡಲು ಸುಸ್ಥಿರ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದೆ. ಅದೇ ರೀತಿ ಈಗ ರಾಜ್ಯದಲ್ಲಿ ಇರುವ ಕೃಷಿ ವಿಜ್ಞಾನ ಕೇಂದ್ರ ವಿ.ಸಿ ಫಾರಂ ಮಂಡ್ಯದಲ್ಲಿ ದೊರೆಯುವ ಪರಿಕರ ಮತ್ತು ಸೌಲಭ್ಯಗಳು ಹಾಗೂ ಅದರ ಬೆಲೆ ಎಷ್ಟು ಅಂತ ನೋಡೋಣ ಬನ್ನಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: IHR
ಪರಿಕರ ಮತ್ತು ಸೌಲಭ್ಯಗಳು ದರ (ರೂ.)
• ಅಡಿಕೆ ಸಸಿ – 30/-
• ಮಾವಿನ ಸಸಿ – 60/-
• ಸೀಬೆ ವೈಟ್ ಸಸಿ – 60/-
• ಬೆಣ್ಣೆ ಹಣ್ಣಿನ ಸಸಿ – 40/-
• ನಿಂಬೆ ಸಸಿ – 30/-
• ನುಗ್ಗೆ ಸಸಿ (PKM -1) – 15/-
• ಅಗಸೆ ಸಸಿ – 10/-
• ಬೆಟ್ಟದನಲ್ಲಿಕಾಯಿ ಸಸಿ – 60/-
• ಟ್ರೈಕೋಡರ್ಮ (ಕೆ.ಜಿ) – 100/-
• ಸುಡೋಮೋನಸ್ (ಕೆ.ಜಿ) – 100/-
• ತರಕಾರಿ ಸ್ಪೆಷಲ್ (ಕೆ.ಜಿ) – 200/-
• ಬಾಳೆ ಸ್ಪೆಷಲ್ (ಕೆ.ಜಿ) – 200/-
• ಬೇವಿನ ಸೋಪ(ಕೆ.ಜಿ) – 280/-
• ಹೊಂಗೆ ಸೋಪ(ಕೆ.ಜಿ) – 280/-
• ರಾಗಿ ಮಾಲ್ಟ್(ಕೆ.ಜಿ) – 200/-
• ಉದ್ದು (LBG-791) (ಕೆ.ಜಿ) – 142/-
• ಮಣ್ಣು ಪರೀಕ್ಷೆ – 200/-
• ನೀರು ಪರೀಕ್ಷೆ – 200/-
ರೈತರೇ ಇಲ್ಲಿ ಸಿಗುವ ಕೃಷಿ ಪರಿಕರಗಳು ಸಂಶೋಧನೆ ಸಹಿತ ಸಂಪೂರ್ಣ ಗುಣಮಟ್ಟದ ವಸ್ತುಗಳಾಗಿವೆ. ಹಾಗೂ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಏಕೆಂದರೆ ವಿಜ್ಞಾನಿಗಳು ತಮ್ಮ ಅನುಭವಗಳನ್ನು ಉಪಯೋಗಿಸಿ ಕೃಷಿ ಪರಿಕರಗಳನ್ನು ತಯಾರಿಸಿರುತ್ತಾರೆ. ಅದೇ ರೀತಿ ರೈತರು ಸಹ ಇದರ ಮೇಲೆ ನಂಬಿಕೆ ಇಟ್ಟು ಇವುಗಳನ್ನು ಉಪಯೋಗಿಸಬೇಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು 08232-277456 ನಂಬರ್ ಕಾಲ್ ಮಾಡಿ. ವಿಜ್ಞಾನಿಗಳ ಜೊತೆ ನಿಮ್ಮ ತೊಂದರೆ ಹಾಗೂ ಪರಿಹಾರ ಕಂಡುಕೊಳ್ಳಿ.