ಪ್ರೀಯ ರೈತರೇ ಸರ್ಕಾರವು ರೈತರಿಗೆ ಮತ್ತೊಂದು ಸಂತಸದ ಸುದ್ದಿ ನೀಡುತ್ತಿದೆ. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬರದ ಛಾಯೆಯಿಂದ ರೈತರ ಬೆಳೆ ಹಾನಿಗೊಳಗಾಗಿದ್ದು ಹಾನಿಗೊಳಗಾದ 27 ಲಕ್ಷ ರೈತರಿಗೆ ಒಟ್ಟು 25.29 ಕೋಟಿ ರೂ.ಗಳ ಬರ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವರು ಬರದಿಂದ ಕೃಷಿ ಹಾಗೂ ತೋಟಗಾರಿಕೆ ಸೇರಿ ಒಟ್ಟು 193805 ಹೆಕ್ಟರ್ ಕ್ಷೇತ್ರದ ಬೆಳೆ ಹಾನಿಯಿಂದ 199776 ಲಕ್ಷ ರೂ.ಗಳ ನಷ್ಟ ಉಂಟಾಗಿದೆ ಎಂದು ಅಂದಾಜಿಸಿ ನಿಯಮಾವಳಿಗಳನ್ವಯ 26469 ಲಕ್ಷ ರೂ.ಗಳ ಇನ್ಪುಟ್ ಸಬ್ಸಿಡಿ, ಬೆಳೆ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ. ಬೆಳೆ ಹಾನಿಯಾದ ರೈತರ ಮಾಹಿತಿಯನ್ನು ಪುಟ್ಟ ತಂತ್ರಾಂಶ ಹಾಗೂ ಬೆಳೆ. ಸಮೀಕ್ಷೆ ವರದಿ ಆಧಾರದ ಮೇಲೆ ಪರಿಹಾರ ಪಾವತಿಸಲು ಕ್ರಮ ವಹಿಸಲಾಗಿರುತ್ತದೆ.
ಪ್ರಸ್ತುತ ಸರ್ಕಾರದಿಂದ 1 ರಿಂದ 4ನೇ ಹಂತದವರೆಗೆ ಜಿಲ್ಲೆಯ ಒಟ್ಟು 163184 ರೈತರಿಗೆ ತಲಾ 2 ಸಾವಿರ ರೂ.ಗಳಂತೆ ಒಟ್ಟು ರೂ 32.35 ಕೋಟಿ ಪರಿಹಾರ ಹಣ ಪಾವತಿಸಲು ಅನುಮೋದನೆ ನೀಡಲಾಗಿದ್ದು ಈ ಪೈಕಿ ಪ್ರಸ್ತುತ 1 ರಿಂದ 4 ನೇ ಹಂತದವರೆಗೆ ಜಿಲ್ಲೆಯ ಒಟ್ಟು 127532 ರೈತರಿಗೆ ತಲಾ 2 ಸಾವಿರ ರೂ.ಗಳಂತೆ ಒಟ್ಟು 25.29 ಕೋಟಿ ರೂ.ಗಳ ಪರಿಹಾರ ಹಣ ನೇರವಾಗಿ ರೈತರ ಖಾತೆಗಳಿಗೆ ಜಮೆಯಾಗಿರುತ್ತದೆ ಎಂದು ತಿಳಿಸಿದ್ದಾರೆ.
ಬರಗಾಲ ಬಾಧಿತ ಪ್ರದೇಶದ ರೈತರಿಗೆ ಮೊದಲ ಕಂತಿನಲ್ಲಿ ತಲಾ ಎರಡು ಸಾವಿರ ರೂ. ಪರಿಹಾರ ವಿತರಣೆಗೆ ತಾಂತ್ರಿಕ ವಿಘ್ನ ಎದುರಾಗಿದ್ದು, ರಾಜ್ಯ ಸರ್ಕಾರ ಸಂದಿಗ್ಧಕ್ಕೆ ಸಿಲುಕಿದೆ. ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಹರಿಹಾಯುತ್ತಿವೆ, ಪರಿಹಾರಕ್ಕೆ ರೈತ ಸಂಘಟನೆಗಳು ಒತ್ತಡ ಹೇರಿದ್ದು, ಹಲವೆಡೆ ನೋಂದ ರೈತರು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದ ನೆರವಿಗೆ ಕಾಯದೆ ರಾಜ್ಯದ ಬೊಕ್ಕಸದಿಂದಲೇ ಸಂತ್ರಸ್ತರಿಗೆ ನೆರವಾಗುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ ಘೋಷಣೆ ಕಣ್ಮರೆಸುವ ತಂತ್ರವೆಂದು ಪ್ರತಿಪಕ್ಷಗಳು ಶಂಕಿಸಿದ್ದವು. ತ್ವರಿತವಾಗಿ ಪರಿಹಾರ ವಿತರಿಸುವ ಮೂಲಕ ಪ್ರತಿಪಕ್ಷಗಳಿಗೆ ಪ್ರತ್ಯುತ್ತರಿಸಬೇಕೆಂಬ ಸರ್ಕಾರದ ಉತ್ಸಾಹಕ್ಕೆ ತಾಂತ್ರಿಕ ಅಡಚಣೆ ತಣ್ಣೀರೆರಚಿದೆ.
ಸರ್ಕಾರಕ್ಕೆ ಪೇಚು ಎನ್ಡಿಆರ್ಎಫ್ ನಿಯಮಾವಳಿ ಪ್ರಕಾರ ಬೆಳೆ ನಷ್ಟಕ್ಕೆ ಇನ್ಸುಟ್ ಸಬ್ಸಿಡಿ ವಿತರಿಸಲು 18,171 ಕೋಟಿ ರೂ. ನೆರವು ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮೊರೆಯಿಟ್ಟಿದೆ. ಹಲವು ಪತ್ರ ಬರೆದು ಬಳಿಕ ಸಿಎಂ ಸಿದ್ದರಾಮಯ್ಯ, ಸಚಿವರ ನಿಯೋಗವು ಪ್ರಧಾನಿ, ಗೃಹ, ಕೃಷಿ ಸಚಿವರನ್ನೂ ಭೇಟಿಯಾಗಿ ಮನವಿ ಸಲ್ಲಿಸಿದೆ. ಜತೆಗೆ, ಕೇಂದ್ರ ಸರ್ಕಾರದ ವಿಳಂಬ ಧೋರಣೆ ವಿರುದ್ಧ ಹರಿಹಾಯ್ದಿದೆ. ರೈತರು ದೊಡ್ಡ ಪ್ರಮಾಣದಲ್ಲಿ ಬೆಳೆ ನಷ್ಟ ಅನುಭವಿಸಿದ್ದಾರೆ. ತಾತ್ಸರ್ತಿಕ ಪರಿಹಾರ ಯಾವುದಕ್ಕೂ ಸಾಲದು, ಘೋಷಿಸಿದಂತೆ ನಡೆದುಕೊಂಡಿಲ್ಲವೆಂದು ಪ್ರತಿಪಕ್ಷಗಳು ವಾಗ್ದಾಳಿ ಮಾಡುತ್ತಿದ್ದರೆ, ನೊಂದ ರೈತರ ಅಸಹನೆಯೂ ಹೆಚ್ಚುತ್ತಿದೆ.