ಬೆಳೆ‌ಸಾಲ10 ರಿಂದ 15 ಲಕ್ಷ ರೂ.ಗೆ ದೀರ್ಘಾವಧಿ ಸಾಲ ಏರಿಕೆ ನಿಜಾನಾ?

ಪ್ರೀಯ ರೈತರೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೃಷಿ ಇಲಾಖೆ ಹಾಗೂ ಇತರೆ ಇಲಾಖೆಗಳಿಗೆ ಸಂಬಂಧಿಸಿದ ಕೆಲಸಗಳು ನಡೆದಿವೆ. ಅದೇ ರೀತಿ ಈಗ ರಾಜ್ಯದಲ್ಲಿ ಸರ್ಕಾರವು ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಹಾಗಾಗಿ ಕರ್ನಾಟಕ ರಾಜ್ಯ ಸಹಕಾರ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಲ್ಲಿ (ಕೆಎಸ್ಬಿಎಆರ್‌ಡಿಬಿ) ದೀರ್ಘಾವಧಿ ಸಾಲದ ಮೊತ್ತವನ್ನು ಸರ್ಕಾರ 10ರಿಂದ 15 ಲಕ್ಷ ರೂ.ಗೆ ಏರಿಕೆ ಮಾಡಿದೆ. ಗರಿಷ್ಠ 10 ಲಕ್ಷ ರೂ.ತನಕ ಒಬ್ಬ ರೈತರಿಗೆ ಸಾಲ ನೀಡಲು ಮಾತ್ರ ಅವಕಾಶವಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ 5 ಲಕ್ಷ ರೂ. ಏರಿಕೆ ಮಾಡಲಾಗಿದೆ.

ಸಾಲದ ಮಿತಿ ಹೆಚ್ಚಳವಾದ ಮೇಲೆ ಬ್ಯಾಂಕ್‌ಗಳಿಗೆ ಸಾಲ ಪಡೆಯಬಯಸುವವರ ಪ್ರಮಾಣವೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಪ್ರತಿ ವರ್ಷ ಸರ್ಕಾರದ ಗ್ಯಾರಂಟಿ ಮೇಲೆ ನಬಾರ್ಡ್ನಿಂದ ಸಾಲ ಪಡೆದು ತಾಲೂಕು ರಾಜ್ಯದಲ್ಲಿರುವ ಮಟ್ಟದಲ್ಲಿರುವ 181 ಪಿಎಲ್‌ಡಿ ಬ್ಯಾಂಕ್‌ಗಳಿಗೆ ಕಡಿಮೆ ಬಡ್ಡಿದರದಲ್ಲಿ ನೀಡಲಿದೆ. ಬೆಳೆಸಾಲ ಹೊರತಾಗಿ, ಭೂಅಭಿವೃದ್ಧಿ, ಟ್ರ್ಯಾಕ್ಟರ್ ಸೇರಿ ಕೃಷಿ ಯಂತ್ರೋಪಕರಣಗಳಿಗೆ

ರೈತರಿಗೆ 1,600 ಏರಿಕೆಯಾಗಿರುವುದು ವಿಶೇಷ. ಕೋಟಿ ಸಾಲ ನೀಡಿದ ಕರ್ನಾಟಕ ರಾಜ್ಯ ಸಹಕಾರ ಕೃಷಿ ಕೆಎಸ್ಸಿಎಆರ್‌ಡಿಬಿ ಸಾಲವನ್ನು ಪಿಎಲ್‌ಡಿ ಬ್ಯಾಂಕ್‌ ನೀಡಲಿದೆ. 1,600 ಕೋಟಿ ರೂ. ಗುರಿ: ಪ್ರತಿವರ್ಷ ರೈತರಿಗೆ 1,500 ಕೋಟಿ ರೂ. ಮಾತ್ರ ಸಾಲ ನೀಡಲಾಗುತ್ತಿತ್ತು. ಈ ವರ್ಷ 100 ಕೋಟಿ ರೂ. ಹೆಚ್ಚುವರಿಯಾಗಿ ಗ್ಯಾರಂಟಿ ನೀಡುವಂತೆ ಬ್ಯಾಂಕ್‌ ಅಧ್ಯಕ್ಷ ಮತ್ತು ಶಾಸಕ ಷಡಾಕ್ಷರಿ ಸಿಎಂ ಮನವೊಲಿಕೆ ಮಾಡಿದ್ದರಿಂದ 1,600 ಕೋಟಿ ರೂ. ನೀಡಲಾಗಿದೆ.

ರಾಜ್ಯದಲ್ಲಿ 13 ಸಾವಿರ ರೈತರಷ್ಟೇ ಸಾಲಸೌಲಭ್ಯ ಪಡೆಯುತ್ತಿದ್ದಾರೆ. ಮುಂದಿನ ವರ್ಷ ಹೆಚ್ಚಿನ ರೈತರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಸಾಲದ ಪ್ರಮಾಣ ಹೆಚ್ಚಳ ಮಾಡಲು ಬ್ಯಾಂಕ್ ಪೂರ್ವತಯಾರಿ ನಡೆಸುತ್ತಿದೆ. ರೈತರಿಗೆ ನೀಡುವ ಸಾಲದ ಮೊತ್ತವನ್ನು ಹೆಚ್ಚಳ ಮಾಡಿರುವುದರಿಂದ ಹೆಚ್ಚಿನ ರೈತರಿಂದ ಸಾಲಕ್ಕಾಗಿ ಬೇಡಿಕೆ ಬರುತ್ತಿದೆ. ಈ ಬಾರಿ 1,600 ಕೋಟಿ ಸಾಲ ನೀಡಲಾಗಿದೆ. ಮುಂದಿನ ವರ್ಷ ಈ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರಕ್ಕೆ ಪಸಾವನೆ ಸಲ್ಲಿಸಲಾಗುವುದು.

ರೈತರಿಗೆ 5 ಲಕ್ಷದವರೆಗೆ ಬಡ್ಡಿರಹಿತ ಸಾಲವನ್ನು ಯಾವಾಗ ನೀಡಲು ಪ್ರಾರಂಭಿಸುತ್ತದೆ? ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

ಪ್ರೀಯ ರೈತರೇ ಸರ್ಕಾರವು ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ರೈತರಿಗೆ ಅಲ್ಪಾವಧಿ, ಮಧ್ಯಮಾವಧಿ, ಹಾಗೂ ದೀರ್ಘಾವಧಿ ಸಾಲ ನೀಡಲು ಜುಲೈ 1ರಿಂದ ನೀಡಲು ಮುಂದಾಗಿತ್ತು ಆದರೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಈ ಯೋಜನೆಯ ಬಗ್ಗೆ ಎಲ್ಲಿಯೂ ಧ್ವನಿ ಎತ್ತಲಿಲ್ಲ ಹೀಗಾಗಿ ಸರ್ಕಾರಕ್ಕೂ ಇದರ ಬಗ್ಗೆ ಗಮನ ಹರಿಸಲು ಸ್ವತಹ ಸಚಿವರು ಮುಂದೆ ಬರಬೇಕಾಗಿದೆ. ಅದೇ ರೀತಿ ಕಡಿಮೆ ಜಮೀನು ಹೊಂದಿರುವ ರೈತರಿಗೆ ಕಳೆದ ಸಾಲಿನಲ್ಲಿ ಶಿಫಾರಸ್ಸು ಮಾಡಲಾಗಿರುವ ಅಲ್ಪಾವಧಿ ಬೆಳೆಸಾಲದ ಪ್ರಮಾಣವನ್ನು 2023-24 ನೇ ಸಾಲಿಗಾಗಿ ಪ್ರತಿಯೊಂದು ಬೆಳೆಗೆ ಶೇ .10 ರಷ್ಟು ಹೆಚ್ಚಿಸಲು ಶಿಫಾರಸ್ಸು ಮಾಡಲಾಗುವುದು. ಹಾಗೂ ರೈತರಿಗೆ ಆರ್ಥಿಕ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಅಲ್ಲಿ ಸ್ಪಷ್ಟಪಡಿಸಿದ್ದಾರೆ.

ರೈತರಿಗೆ ಸಹಕಾರ ಸಂಘಗಳ ಮೂಲಕ ನೀಡುವ ಶೂನ್ಯ ಬಡ್ಡಿ ಬೆಳೆಸಾಲದ ಮಿತಿಯನ್ನು 3-5ಲಕ್ಷ ಏರಿಸುವ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದ್ದರೂ ಅನುದಾನ ಕೊರತೆಯಿಂದ ಹೆಚ್ಚುವರಿ ಸಾಲದ ಮೊತ್ತ ವಿತರಣೆಯಲ್ಲಿ ಗೊಂದಲ ಏರ್ಪಟ್ಟಿದೆ. ಶೇ.3ರ ಬಡ್ಡಿ ದರದಲ್ಲಿ ನೀಡುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿಯನ್ನು 10 ಲಕ್ಷದಿಂದ 15 ಲಕ್ಷ ರೂ.ಗ ಹೆಚ್ಚಿಸಲಾಗಿದೆ.

ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡದಿದ್ದರೆ, ಬಡ್ಡಿ ವರ ಹೆಚ್ಚುತ್ತದೆ. ಸೆ.12ರಂದು ಸಹಕಾರ ಇಲಾಖೆಯ ಮೂಲಕ ಸಾಲಮಿತಿ ಏರಿಕೆ ಆದೇಶ ಪಕಟಿಸಲಾಗಿದೆ. ಈ ಸಾಲ 365 ದಿನಗಳ ಅವಧಿ ಹೊಂದಿದ್ದು, ಪ್ರಸಕ್ತ 2023ರ ಏ.1ರಿಂದ ಮುಂದಿನ ವರ್ಷದ ಮಾ. 31ರ ಅವಧಿಯಲ್ಲಿ ಸಾಲ ಪಡೆದವರಿಗೆ ಮಾತ್ರ ಬಡ್ಡಿದರಗಳು ಅನ್ವಯವಾಗುತ್ತವೆ. ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ, ಏರಿಕೆಯಾದ ಸಾಲದ ಮೊತ್ತವನ್ನು ಅಥವಾ ಜಿಲ್ಲಾ ಸಹಕಾರಿ ಬ್ಯಾಂಕ್ ವಿತರಿಸುವ ಬಗ್ಗೆ ಆದೇಶದಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಸಾಲ ಯೋಜನೆ ಇನ್ನೂ ಗೊಂದಲದಿಂದ ಕೂಡಿದೆ.

Spread positive news

Leave a Reply

Your email address will not be published. Required fields are marked *