ಪ್ರೀಯ ರೈತರೇ ಇವತ್ತು ನಾವು ಒಂದು ರೈತರಿಗೆ ನೆರವಾಗುವ ಮುಖ್ಯವಾದ ವಿಷಯದ ಬಗ್ಗೆ ಮಾಹಿತಿ ತಿಳಿಯೋಣ. ಅದೇ ರೀತಿ ರೈತರು ಯಾವುದೇ ಕಷ್ಟಕ್ಕೆ ಹಾಗೂ ಯಾವುದೇ ಅರ್ಥಿಕ ಸಂಕಷ್ಟಕ್ಕೆ ಸಿಲುಕಿ ತೊಂದರೆ ಆಗದಂತೆ ರೈತರ ಆತ್ಮಹತ್ಯೆಗೆ ಪರಿಹಾರ ಸರ್ಕಾರ ಸ್ವಾಮ್ಯದ ಅಥವಾ ಮಾನ್ಯತೆ ಪಡೆದ ಅಧಿಕೃತ ಸಾಲ ನೀಡುವ ಸಂಸ್ಥೆಗಳಿಂದ ಪಡೆದ ಸಾಲವನ್ನು ತೀರಿಸಲಾಗದೆ ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ಅರ್ಹ ಪ್ರಕರಣಗಳ ಕಾನೂನುಬದ್ದ ವಾರಸುದಾರರಿಗೆ ಪರಿಹಾರ ಒದಗಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ.
ರೈತರು ಯಾವ ರೀತಿ ಮರಣ ಹೊಂದಿದರೆ ಮಾತ್ರ ಸರ್ಕಾರದಿಂದ ಪರಿಹಾರ ದೊರೆಯುತ್ತದೆ?
* ರೈತರ ಬೆಳೆಯು ಅತಿವೃಷ್ಟಿ, ಅನಾವೃಷ್ಟಿ, ಕೀಟಬಾಧೆ, ರೋಗಬಾಧೆ ಇತ್ಯಾದಿ ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿ ನಷ್ಟ ಸಂಭವಿಸುವುದು ಇಲ್ಲವೇ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆ- ಯದೆ ನಷ್ಟ ಅನುಭವಿಸುವುದು,
* ಕೃಷಿ ಭೂಮಿ ಹಾಗು ವ್ಯವಸಾಯ ಅಭಿವೃದ್ಧಿಗಾಗಿ ಕೈಗೊಂಡ ಚಟುವಟಿಕೆಗಳು ವಿಫಲವಾಗಿ ನಷ್ಟ ಸಂಭವಿಸಿದ ಸಂದರ್ಭಗಳಲ್ಲಿ ಸದರಿ ರೈತರು ಸರ್ಕಾರಿ ಸ್ವಾಮ್ಯದ ಅಥವಾ ಮಾನ್ಯತೆ ಪಡೆದ ಅಧಿಕೃತ ಸಾಲ ನೀಡುವ ಸಂಸ್ಥೆಗಳಿಂದ ಪಡೆದ ಸಾಲವನ್ನು ತಿರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವು ಉದ್ಭವಿಸಿದಾಗ ಅಂತಹ ಮೃತ ರೈತನ ಕುಟುಂಬಕ್ಕೆ 1 ಲಕ್ಷ ರೂ ಸಹಾಯಧನವನ್ನು ಒದಗಿಸಲಾಗುವುದು.
* ಕೃಷಿ ಕಾರ್ಮಿಕರು ರೈತರಿಂದ ಜಮೀನನ್ನು ಒಪ್ಪಂದದ ಮೇಲೆ ಪಡೆದು ಕೃಷಿ ಉತ್ಪಾದನೆಯಲ್ಲಿ ತೊಡಗಿದ್ದರೆ ಅಂತಹವರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಪರಿಗಣಿಸುವುದು.
ಪರಿಹಾರ ಧನವನ್ನು ಪಡೆಯಲು ಈ ಕೆಳಕಂಡ ಷರತ್ತುಗಳನ್ನು ವಿಧಿಸಲಾಗಿದೆ.
1. ರೈತರ ಆತ್ಮಹತ್ಯೆ ಪ್ರಕರಣ ಸಂಭವಿಸಿದ ದಿನದಿಂದ 3 ತಿಂಗಳೊಳಗಾಗಿ ಅರ್ಜಿಯನ್ನು ಸಂಬಂಧಪಟ್ಟ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆ ಇವರಿಗೆ ಸಲ್ಲಿಸುವುದು.
2. ರೈತರ ಆತ್ಮಹತ್ಯೆ ಪ್ರಕರಣ ಸಂಭವಿಸಿದ ದಿನದಿಂದ 3 ತಿಂಗಳಿಗೆ ಮೇಲ್ಪಟ್ಟು ಮತ್ತು 6 ತಿಂಗಳೊಳಗಾಗಿ ಅರ್ಜಿಯನ್ನು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದು.
3. ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸ್ವೀಕೃತವಾಗುವ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ 15 ದಿನದೊಳಗಾಗಿ ಸಂಬಂಧಪಟ್ಟ ಉಪ ವಿಭಾಗಾಧಿಕಾರಿಗಳ ಸಮಿತಿಗೆ ಕಳುಹಿಸುವುದು.
4. ರೈತರ ಆತ್ಮಹತ್ಯೆ ಪ್ರಕರಣ ಸಂಭವಿಸಿ 6 ತಿಂಗಳು ಮೀರಿದಲ್ಲಿ ಅಂತಹ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಪರಿಗಣಿಸತಕ್ಕದ್ದಲ್ಲ.
ಅದೇ ರೀತಿ ರೈತರು ಈ ವರ್ಷ ಬರದಿಂದ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ರೈತರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ, ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ ಹಿನ್ನೆಲೆ ರಾಜ್ಯ ಸರ್ಕಾರದಿಂದ ರೈತರಿಗೆ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ. ಎನ್ ಡಿ ಆರ್ ಎಫ್ ಪರಿಹಾರ ನಿಧಿ ಅಡಿಯಲ್ಲಿ ಸರ್ಕಾರದಿಂದ 105 ಕೋಟಿ ರೂ. ಅನುದಾನ ನೀಡಲಾಗಿದ್ದು, ರೈತರಿಗೆ 2 ಸಾವಿರ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗಿದೆ. ಬೆಳೆಹಾನಿಗೆ ಇನಪುಟ್ ಸಬ್ಸಿಡಿ ದರ ನಿಗದಿ ಮಾಡಲಾಗಿದೆ. ಹೇಗೆಂದರೆ ಮಳೆಯಾಶ್ರಿತ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ಗೆ 8500 ರೂ. ನೀರಾವರಿ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ಗೆ 17,500 ರೂ. ಬಹುವಾರ್ಷಿಕ ಬೆಳೆ ಹಾನಿಗೆ ಹೆಕ್ಟೇರ್ಗೆ 22,500 ರೂ. ಅನುದಾನ ಬಿಡುಗಡೆ ಮಾಡಲಾಗಿದೆ.