ಏನಿದು ಭೂಚೇತನ ಕಾರ್ಯಕ್ರಮ? ಇದರಿಂದ ರೈತರಿಗೆ ಆಗುವ ಲಾಭವೇನು? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

ಏನಿದು ಭೂಚೇತನ ಕಾರ್ಯಕ್ರಮ? ಇದರಿಂದ ರೈತರಿಗೆ ಆಗುವ ಲಾಭವೇನು? ಬನ್ನಿ ರೈತರಿಗೆ ನೆರವಾಗುವ ಮುಖ್ಯವಾದ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ. ರಾಜ್ಯದಲ್ಲಿ ಖುಷ್ಕಿ, ನೀರಾವರಿ ಭತ್ತ ಮತ್ತು ಕಬ್ಬು ಪ್ರದೇಶದ ರೈತರ ಜೀವನ ಮಟ್ಟ ಉತ್ತಮಗೊಳಿಸಲು ಹಾಗೂ ರೈತರ ಆರ್ಥಿಕ ಮಟ್ಟವನ್ನು ಸುಧಾರಿಸಲು ಕೃಷಿ ಇಲಾಖೆಯು ಇಕ್ರಿಸ್ಯಾಟ್ ಸಂಸ್ಥೆ, ಹೈದ್ರಾಬಾದ್ ಹಾಗೂ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಬೇಸಾಯ ತಾಂತ್ರಿಕತೆ ಅಳವಡಿಕೆ ಹಾಗೂ ತ್ಪಾದನೆ ವರ್ಧಿಸುವ ಭೂಚೇತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಯೋಜನೆಯ ಮುಖ್ಯ ಉದ್ದೇಶ ಏನು?

ರೈತರಿಗೆ ಇದರಿಂದ ಆರ್ಥಿಕ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಗೂ ರೈತರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಉತ್ತಮ ತಾಂತ್ರಿಕತೆಗಳನ್ನು ಅಳವಡಿಸಿ. ರಾಜ್ಯದ ಆಯ್ದ ಪ್ರಮುಖ ಖುಷಿ ಬೆಳೆಗಳಲ್ಲಿ ಮತ್ತು ನೀರಾವರಿ ಭತ್ತ ಮತ್ತು ಕಬ್ಬಿನಲ್ಲಿ ಉತ್ಪಾಕತೆಯನ್ನು ಶೇ.20 ರಷ್ಟು ಹೆಚ್ಚಿಸುವುದು.

ರೈತರಿಗೆ ದೊರೆಯುವ ಸೌಲಭ್ಯಗಳು – 

* ಉತ್ತಮ ತಾಂತ್ರಿಕತೆಗಳಾದ ಮಣ್ಣು ಪರೀಕ್ಷೆ ಆಧಾರಿತ ಸಮಗ್ರ ಹಾಗೂ ಸಮತೋಲನ ಮೋಷಕಾಂಶ ನಿರ್ವಹಣೆ. ಮಣ್ಣು ಮತ್ತು ಮಳೆ ನೀರು ಸಂರಕ್ಷಣೆ, ಸುಧಾರಿತ ಭೂಮಿ ಮತ್ತು ನೀರಿನ ನಿರ್ವಹಣೆ, ಸುಧಾರಿತ ತಳಿಗಳು, ಬೀಜೋಪಚಾರ ಮತ್ತು ಸಮಗ್ರ ಪೀಡೆ ನಿರ್ವಹಣೆಗಳ ಅಳವಡಿಕೆ ಬಗ್ಗೆ ರೈತರಿಗೆ ಮಾಹಿತಿ.

* ರೈತರಿಗೆ ತಮ್ಮ ಜಮೀನಿನಲ್ಲಿ ಕೊರತೆಯಿರುವ ಪೋಷಕಾಂಶಗಳ ಕುರಿತು ಅರಿವು ಮೂಡಿಸುವುದು ಮತ್ತು ಮಣ್ಣು ಪರೀಕ್ಷೆ ಆಧಾರಿತ ಪೋಷಕಾಂಶಗಳ ಶಿಫಾರಸ್ಸು ಮಾಡುವುದು.

* ಆಯ್ದ ಪ್ರದೇಶದಲ್ಲಿ ಬರುವ ಎಲ್ಲಾ ರೈತರಿಗೆ ತಾಂತ್ರಿಕತೆಗಳನ್ನು ನೀಡಿ ಪೂರಕವಾಗಿ ತರಬೇತಿಯನ್ನು ನೀಡುವುದು ಮತ್ತು ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು ಬೇಕಾಗುವಂತಹ ಪರಿಕರಗಳನ್ನು ವಿವಿಧ ಸಹಾಯಧನದಲ್ಲಿ ಸರಬರಾಜು ಮಾಡುವುದು.

* ಗ್ರಾಮ ಮಟ್ಟದಲ್ಲಿ ರೈತರಿಗೆ ತಾಂತ್ರಿಕ ಸಲಹೆ ನೀಡಲು ತರಬೇತಿ ಪಡೆದ ರೈತ ಅನುವುಗಾರರ ಬಳಕೆ.

* ರೈತರ ಕೌಶಲ್ಯ ಮತ್ತು ಸಾಮರ್ಥ್ಯ ವೃದ್ಧಿಗೆ ಗ್ರಾಮ ಮಟ್ಟದಲ್ಲಿ ತರಬೇತಿ ನೀಡುವುದು.

ಬರಗಾಲದಿಂದ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಕೃಷಿ ಲಾಭದಾಯಕವಾದರೆ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ. ಸರಕಾರಗಳು ರೈತರ ಸಂಕಷ್ಟಗಳಿಗೆ ಸ್ಪಂದಿಸಿದಾಗ ಮಾತ್ರ ರೈತರ ಜೀವನ ಸುಧಾರಿಸುವುದು. ಸರಕಾರದ ಹಲವಾರು ಯೋಜನೆಗಳು ಗ್ರಾಮಾಂತರ ಪ್ರದೇಶದ ರೈತರಿಗೆ ತಲುಪುತ್ತಿಲ್ಲ. ಯೋಜನೆಗಳ ಬಗ್ಗೆ ರೈತರಿಗೆ ಅರಿವಿಲ್ಲದಿರುವುದರಿಂದ ಸರಕಾರದ ಯೋಜನೆಗಳು ಸಫಲವಾಗುತ್ತಿಲ್ಲ. ರೈತರಿಗೆ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಭೂ ಚೇತನ ಯೋಜನೆಯಲ್ಲಿ ಕೃಷಿ ಅಧಿಕಾರಿಗಳಿಂದ ತಾಂತ್ರಿಕ ಸಲಹೆ ಗಳನ್ನು ಪಡೆಯುವ ಮೂಲಕ ರೈತರು ವ್ಯವಸಾಯವನ್ನು ಕೈಗೊಂಡರೆ ಉತ್ತಮ ಲಾಭ ಪಡೆಯಲು ಸಾಧ್ಯ ಎಂದರು.

Spread positive news

Leave a Reply

Your email address will not be published. Required fields are marked *