ಎಕರೆಗೆ ಕಬ್ಬು 100 ಟನ್ ಬೆಳೆಯುವುದು ಹೇಗೆ ಎಂದು ಇಲ್ಲಿದೆ ನೋಡಿ.

ಕಬ್ಬಿನ ಬಗ್ಗೆ ಸಂಪೂರ್ಣ ಮಾಹಿತಿ ಬೇಕೆ? ಬನ್ನಿ ಸಂಪೂರ್ಣ ಕಬ್ಬಿನ ಬೇಸಾಯ ಪದ್ಧತಿ ತಿಳಿಯೋಣ.

ಜಗತ್ತಿನ ಕಬ್ಬು ಬೆಳೆಯುವ ಎಲ್ಲಾ ದೇಶಗಳಲ್ಲಿ ಕುಳೆ ಕಬ್ಬು ಬೆಳೆಯುವುದು ಸಾಮಾನ್ಯವಾಗಿದೆ. ಆದರೆ ಕುಳೆ ಬೆಳೆಯ ಸಂಖ್ಯೆ ಪ್ರಮಾಣ ಮತ್ತು ಇಳುವರಿ ಬೇರೆ ಬೇರೆ ದೇಶಗಳಲ್ಲಿ ವಿಭಿನ್ನವಾಗಿರುತ್ತದೆ. ಹವಾಯಿ ಮತ್ತು ಜಾವಾ ದೇಶಗಳಲ್ಲಿ ಕೆಲವು ಭಾಗಗಳಲ್ಲಿ ಕುಳೆ ಕಬ್ಬು ಬೆಳೆಯುವುದಿಲ್ಲ. ಆದರೆ ಐದು ಕುಳೆ ಬೆಳೆಯನ್ನು ಮಾರಿಷಸ್ ಮತ್ತು ಎಂಟು ಕುಳೆ ಬೆಳೆಯನ್ನು ಥೈವಾನ್ ದೇಶಗಳಲ್ಲಿ ಬೆಳೆಯುತ್ತಾರೆ. ಭಾರತದಲ್ಲಿ ಸಾಮಾನ್ಯವಾಗಿ 1-2 ಕುಳೆ ಬೆಳೆ ಬೆಳೆಯುತ್ತಾರೆ. ಕುಳೆ ಬೆಳೆಯು ನಮ್ಮ ದೇಶದ ಕಬ್ಬು ಬೆಳೆಯುವ ಪ್ರದೇಶದಲ್ಲಿ ಪ್ರತಿಶತಃ 50 ರಷ್ಟು ಪ್ರದೇಶವನ್ನು ವ್ಯಾಪಿಸಿದೆ. ಆದರೆ ಒಟ್ಟು ಕಬ್ಬಿನ ಉತ್ಪಾದನೆ ಈ ಬೆಳೆಯ ಕಬ್ಬಿನ ಉತ್ಪಾದನೆ ಕೇವಲ ಶೇ. 30-35 ರಷ್ಟು.

ಕುಳೆ ಬೆಳೆಯುವ ಪ್ರದೇಶದಲ್ಲಿ ಹೆಚ್ಚು ಸಂಖ್ಯೆ ಕುಳೆ ಬೆಳೆದಂತೆಲ್ಲಾ ಇಳುವರಿ ಕಡಿಮೆಯಾಗುವುದು ಸಾಮಾನ್ಯವಾಗಿದೆ. ಸರಿಯಾಗಿ ಕುಳೆ ಬೆಳೆ ನಿರ್ವಹಣೆ ಮಾಡಿದರೆ ನಾಟಿ ಕಬ್ಬಿನಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ರೈತರು ಕುಳೆ ಬೆಳೆಯನ್ನು ಪುಕ್ಕಟೆ ಬೆಳೆ ಅಥವಾ ಕಾಣಿಕೆ ಬೆಳೆ ಎಂದು ತಿಳಿದುಕೊಂಡು ಕುಳೆ ವ್ಯವಸಾಯದಲ್ಲಿ ಅಷ್ಟೊಂದು ಕಾಳಜಿ ವಹಿಸುವುದಿಲ್ಲ. ನಮ್ಮ ದೇಶದಲ್ಲಿ ಇಳುವರಿಯಲ್ಲಿ ನಾಟಿ ಕಬ್ಬಿಗೂ ಮತ್ತು ಕುಳೆ ಕಬ್ಬಿಗೂ ಪ್ರತಿಶತ 20 ರಷ್ಟು ಅಂತರವಿದೆ. ಸಮಶೀತೋಷ್ಣ ವಲಯದ ರಾಜ್ಯಗಳಲ್ಲಿ ಇದರ ಅಂತರ ಪ್ರತಿಶತ 40 ರಷ್ಟು ಇದೆ. ಪ್ರತಿಶತ 50 ರಷ್ಟು ಪ್ರದೇಶವನ್ನು ಕುಳೆ ಬೆಳೆ ಆವರಿಸಿದ್ದರೂ ಕೇವಲ ಪ್ರತಿಶತ 30 ರಷ್ಟು ಕಬ್ಬು ಉತ್ಪಾದನೆಯನ್ನು ಕುಳೆ ಬೆಳೆಯಿಂದ ಪಡೆಯುತ್ತೇವೆ. ಕುಳೆ ಬೆಳೆಯ ಕಡಿಮೆ ಇಳುವರಿಯಿಂದ ನಮ್ಮ ದೇಶದ ಸರಾಸರಿ ಕಬ್ಬು ಉತ್ಪಾದನೆ ಕಡಿಮೆಯಾಗಲು ಮುಖ್ಯ ಕಾರಣವಾಗಿದೆ.

ಕುಳೆ ಬೆಳೆಯ ಇಳುವರಿ ಕಡಿಮೆಯಾಗಲು ಕಾರಣಗಳು:

1. ಕುಳೆ ಬೆಳೆ ನಾಟುವುದು ಕಡಿಮೆ ಇರುವುದರಿಂದ ಕಬ್ಬಿನ

ಸಂಖ್ಯೆ ಕಡಿಮೆ ಇರುವುದು.

2. ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿರುವುದು.

3. ಮಣ್ಣು ಗಟ್ಟಿಯಾಗಿ ಅದರ ಭೌತಿಕ ಮಟ್ಟ ಕಡಿಮೆಯಾಗುವುದು.

4. ಹೆಚ್ಚು ಪ್ರಮಾಣದಲ್ಲಿ ಕೀಟ ರೋಗಗಳ ಬಾಧೆಗೆ

ತುತ್ತಾಗುವುದು.

ಕರ್ನಾಟಕದಲ್ಲಿ ಹೆಚ್ಚಾಗಿ ಈ ತರಹದ ತಳಿಗಳನ್ನು ಉಪಯೋಗಿಸಿ ಹೆಚ್ಚಿನ ಇಳುವರಿ ತೆಗೆಯುತ್ತಾರೆ. ಕೆಲವು ಮುಖ್ಯ ತಳಿಗಳು ಈ ಕೆಳಗಿನಂತಿವೆ.

Co 6415, Co 7704, CoC 671,

Co 85002

Co 62175, Co 740, Co 8014,

Co 8021, Co 8011, Co 8371,

Co 7804, Co 86032

ಮಹಾರಾಷ್ಟ್ರದಲ್ಲಿ ಉಪಯೋಗಿಸುವ ತಳಿಗಳು

Co 419, Co 775, Co 7219,

CoC 671

Co 740, Co 7219, CoM 7125,

Co 7527, Co 86032

ಹೀಗೆ ರೈತರು ತಮ್ಮ ಹವಾಗುಣಕ್ಕೆ ತಕ್ಕಂತೆ ಕಬ್ಬಿನ ತಳಿಗಳನ್ನು ಉಪಯೋಗಿಸಿ ಹೆಚ್ಚಿನ ಬೆಳೆಯ ಉತ್ಪನ್ನವನ್ನು ಪಡೆಯಬಹುದು. ಹೀಗೆ ರೈತರು ಹೆಚ್ಚಾಗಿ ಕೃಷಿಯನ್ನೇ ನಂಬಿ ಜೀವನ ನಡೆಸುವವರು ಹಲವಾರು ತಂತ್ರಜ್ಞಾನಗಳನ್ನು ಬಳಸಿಕೊಂಡು ಹೆಚ್ಚಿನ ಉತ್ಪಾದನೆ ಮಾಡಬಹುದು.

ಕೋಲಿ ಸವರುವುದು – ಹರಿತವಾದ ಸಲಿಕೆ ಅಥವಾ ಕೊಯ್ದ ( ಕುಡಗೋಲು ) ದಿಂದ ಕಬ್ಬು ಕಡಿದ ನಂತರ ಉಳಿದಿರುವ ಉದ್ದ ಕೋಲಿಗಳನ್ನು ನೆಲಸಮನಾಗಿ ಕತ್ತರಿಸಬೇಕು. ಇದರಿಂದ ಒಂದೇ ಸಮನಾದ ಮೊಳಕೆ ಬರುತ್ತವೆ, ಬೇರುಗಳ ಆಳವಾಗಿ ನೆಲದಲ್ಲಿ ಪಸರಿಸಿ ಪೋಷಕಾಂಶ ಮತ್ತು ನೀರನ್ನು ಹೀರಿಕೊಳ್ಳುತ್ತವೆ

ಕುಳೆ ಕಬ್ಬಿನಲ್ಲಿ ರವದಿಯ ನಿರ್ವಹಣೆ ಒಂದು ಟನ್ ಹಾಕದಲ್ಲಿ ಮಣ್ಣಿನ ಬೆಳೆಯಲ್ಲಿ ವ್ಯವಸ್ಥಿತವಾಗಿ ಶೇ.0. 35 ಸಾರಜನಕ ,0.13 ರವದಿಯನ್ನು AD CONST ಮಧ್ಯೆ ಬರವು ಸಿಗುವುದು ಇದನ್ನು ಸುಡದೆ ಕುಳೆ ಪೋಷಕಾಂಶಗಳ ಮಟ್ಟ ಹೆಚ್ಚುತ್ತದೆ. ರವದಿಯಲ್ಲಿ ಪೆಟ್ಯಾಷ್ ಇರುವುದು.

ಕುಳೆಕಟ್ಟಿನಲ್ಲಿ ಯುರಿಯಾ ಮತ್ತು 50 ಕಿ. ಗ್ರಾಂ ಸುಪರ ಫಾಸ್ಫೇಟ್ ಕೊಳಿಸುವ ಸೂಕ್ಷ್ಮಾಣುಜೀವಿ ರವದಿ ಮೇಲೆ ಸಿಂಪರಿಸಬೇಕು. ಇದರಿಂದ ರವದಿ ಹೊದಿಸುವದರಿಂದ ಮಣ್ಣಿನಲ್ಲಿ ತೇವಾಂಶ ನಿಯಂತ್ರಣವನ್ನು ಮಾಡಬಹುದು. ಹೆಕ್ಟೇರಿಗೆ ಸಾವಯವದ ಗೊಬ್ಬರ ಶೇ೧.೧೯ ಹಾಕಬೇಕು ಹಾಗೂ ರಂಜಕ ಇದಕ್ಕೆ 50ಕಿ ಗ್ರಾಂ ಹಾಕಬೇಕು.ರವದಿ ಮಿಶ್ರಣ ಮಾಡಿ ಸಾಲಿನಲ್ಲಿ ಮೇಲೆ ನೀರಿನಲ್ಲಿ ಫಾಸ್ಟೆಟ್ ಗೊಬ್ಬರವನ್ನು ರವದಿಯ (ಟ್ರೈಕೊಡರ್ಮಾ ವಿರಿಡೆ) ಸಗಣಿ ಕಲಿಸಿದ ರವದಿ ಬೇಗನೆ ಕಳೆಯುವುದು ಸಾಲ ಕಾಪಾಡುವುದರ ಜೊತೆಗೆ ಕಳೆಗಳ MOD ಪರಿಸುವುದು ಬಿಟ್ಟು ಮತ್ತು ಬಾಲಿ ಇರುವ ಸಾಲುಗಳಲ್ಲಿ ಬೋದು ಏರಿಸಿ ಸೂಕ್ತ.

ಕೆಳಗಿನ ಸ್ಥಿತಿಗಳಲ್ಲಿ ರವದಿ ಸುಡುವದು ಮಹತ್ವದ್ದು . ನಾಟಿ ಕಬ್ಬು ಕೀಟ ಮತ್ತು ರೋಗಗಳ ಬಾಧೆಗೆ ತುತ್ತಾದರೆ, (ಉದಾ: – ಸ್ವಲ್ಪ ,ಹಿಟ್ಟುತಿಗಣೆ) ಗೆದ್ದಲು ಹುಳದ ಬಾಧೆ ಕಂಡು ಬಂದಲ್ಲಿ ಅಥವಾ ಇಲಿಗಳ ಮತ್ತು ಹೆಗ್ಗಣಗಳ ಕಾಟ ಇದ್ದಲ್ಲಿ, ನೀರು ಬಸಿಯುವ ಕೊರತೆ, ಹೆಚ್ಚುವ ತೇವಾಂಶದಿಂದ ನಾಟಿ ಮಾಡಲು ಸಾಧ್ಯವಾಗದಿದ್ದಲ್ಲಿ ಬಿಸಿಲಿಗೆ ನೆಲವನ್ನು ಕಾಯಲು ಬಿಡಬೇಕು ನಂತರ ನಾಟಿ ಮಾಡಬೇಕು.

ಉತ್ತಮ ನಾಟಿ ಪದ್ಧತಿಗಳು ಆಳವಾಗಿ ಭೂಮಿಯಲ್ಲಿ 9.ಸೆಂ.ಮೀ. ಅಂತರದ ಬೋದು ಮತ್ತು ಸಾಲುಗಳನ್ನು ಮಾಡಬೇಕು. ಮದ್ಯದ ಆಳದ ಕಪ್ಪು ಭೂಮಿ ( ಅಥವಾ 90 ಸೆಂ. ಮೀ. ಸಾಲುಗಳನ್ನು ಮಾಡಿ, ಎರಡು ಸಾಲು ನಾಟಿ ಮಾಡಿ ಒಂದು ಸಾಲು ಹಾಸಿ ಬಿಡಬೇಕು. ಅದರಲ್ಲಿ ಅಂತರ ಬೆಳೆಗಳನ್ನು ಲಾಭದಾಯಕವಾಗಿ ಬೆಳೆಯ, ಕಾಲುಗೈ ಪದ್ಧತಿಯಲ್ಲಿ ಬೆಳೆಯಬೇಕು. ಒಂದು ಸಾಲನ್ನು ಸಾಲುಗಳ ಮಧ್ಯ ಅಂತರದಲ್ಲಿ ನಾಟಿ ಮಾಡಬೇಕು. ಕೆಂಪು ಭೂಮಿ ಮತ್ತು ನೀರಿನ ಕೊರತೆಯಿದ್ದಲ್ಲಿ ಒಂದು ಪೂಟ್ ಅಗಲ ಮತ್ತು 45cm. ಹಾಗೂ ಕುಣಿ ನಾಟಿ ಪದ್ಧತಿ ಲಾಭದಾಯಕ. ಒಂದು ಮೀಟರ್ ಉದ್ದ ಆಳದ ಕಣಿಗಳನ್ನು ತೆಗೆಯಬೇಕು. ಕುಣಿಗಳು ಸಾಲಿನಿಂದ ಸಾಲಿಗೆ 45 ಸೆಂ ಮೀ. ಅಂತರ ಇರುವಂತೆ ನೋಡಿಕೊಳ್ಳಬೇಕು. ಕುಣಿಯ ತಳ ಭಾಗದಲ್ಲಿ 15 ಸೆಂ ಮೀ. ಮಣ್ಣನ್ನು ಹಾಕಿ ನಂತರ 15 ಸೆಂ.ಮೀ ದಪ್ಪ 4 ಸೆಂ.ಮೀ. ಕಾಂಪೊಸ್ಟ್ ಗೊಬ್ಬರ ಮತ್ತು ಹಸಿರ ಗೊಬ್ಬರ ಹಾಕಬೇಕು. ಹಾಗೂ ಇನ್ನುಳಿದ 15cm ಸ್ಥಳದಲ್ಲಿ ಉಳಿದ ಮಣ್ಣು , 150 ಗ್ರಾಂ ಯೂರಿಯಾ, 132gm ಬಸರ್ ಪಾಟ್ ಮತ್ತು 85 gm ಮುರೆಟ್ ಆಫ್ ಪೋಟ್ಯಾಷ್ಗಳನ್ನು ಸೇರಿಸಬೇಕು, ಇಂತಹ ಪ್ರತಿಯೊಂದು ಕುಣಿಯಲ್ಲಿ ನಾಟಿ ಮಾಡಲು ಎರಡು ಕಣ್ಣುಗಳುಳ್ಳ 20 ಬೀಜದ ತುಂಡುಗಳನ್ನು ಉಪಯೋಗಿಸಬೇಕು. ಸಾಲಿನಿಂದ ಸಾಲಿಗೆ ಇರುವ 90 ಇರುವ 90 ಸೆಂ.ಮೀ, ಸ್ಥಳವನ್ನು ನೀರು ಬಿಡಲು ಕಾಲುವೆಯನ್ನಾಗಿ ೨ ಬಸವಕಲ ಎರಡು ಕುಡ ಸಾಲುಗಳ ನಂತರ ಕಾಲುವೆಯನ್ನು ಮಾಡಿ ನಂತರ ನೀರು ಒದಗಿಸುವುದು.

ಏಕರೆಗೆ ನಾಟಿ ಮಾಡಿದ ಮೇಲೆ 10 ದಿನಕ್ಕೆ ಮಳೆ ನೀರಾಗಿ ತೆಳುವಾಗಿ ನೀರು. ಕೊಡಬೇಕು ಹವಾಗುಣಕ್ಕೆ ಅನುಗುಣವಾಗಿ ಭೂಮಿಯ ಗುಣಮಟ್ಟಕ್ಕೆ ಅನುಸರಿಸಿ ಈ ಕ ತಿಳಿಸಿದಂತೆ ನೀರು ಕೊಡುವರು. ಮೊಳಕೆ ಒಡೆಯುವಾಗ (8-15 ದಿನಗಳವರೆಗೆ) 7 ದಿನಕ್ಕೊಮ್ಮೆ . ಮರಿ ಒಡೆಯುವಾಗ (-100 ದಿನಗಳವರೆಗೆ) ಏನಕ್ಕೊಳ್ಳು ಬೆಳವಣಿಗೆ ಹಂತದಲ್ಲಿ (101 – 270 ದಿನಗಳವರೆಗೆ) 7 ದಿನಕ್ಕೊಮ್ಮೆ ಮಾಗುವಾಗ (271 – 365 ದಿನಗಳವ) 15 ದಿನಕ್ಕೊಮ್ಮೆ ಸಂಗ್ರಹ ಕಡಿಮೆಯಿದ್ದಲ್ಲಿ ಸಾಲು ಬಿಟ್ಟು ಸಾಲು ಕೊಡಬೇಕು.

ರವದಿ ನಿರ್ವಹಣೆ: ಒಂದು ಹೆಕ್ಟರಿಗೆ 10-12 ಟನ್ ಒಣ ರವದಿ ಸಿಗುವುದು ಇದನ್ನು ಸುಡದೆ ಕುಳೆ ಬೆಳೆಯಲ್ಲಿ ವ್ಯವಸ್ಥಿತವಾಗಿ ಹಾಕಿದಲ್ಲಿ ಮಣ್ಣಿನ ಸಾವಯವದ ಹಾಗೂ ಪೋಷಕಾಂಶಗಳ ಮಟ್ಟ ಹೆಚ್ಚುತ್ತದೆ. ರವದಿಯಲ್ಲಿ ಶೇ. 0.35 ಸಾರಜನಕ, ಶೇ. 0.13 ರಂಜಕ ಮತ್ತು ಶೇ 0.65 ಪೋಟ್ಯಾಶ್ ಇರುವುದು. ಅದಲ್ಲದೆ ಕ್ಯಾಲ್ಸಿಯಂ ಶೇ. 1.0 ಮಾಗ್ನಿಷಿಯಂ ಶೇ. 0.6 ಸಲ್ಪರ ಶೇ. 0.48 ಅಂದರೆ 160 ಕೆಜಿ ಸಾರಜನಕ 110 ಕೆಜಿ ರಂಜಕ 50 ಕೆಜಿ ಪೋಟ್ಯಾಷ 100 ಕೆಜಿ ಕ್ಯಾಲಿಸಿಯಂ 60 ಕೆಜಿ ಮಾಗ್ನಿಷಿಯಂ ಮತ್ತು 48 ಕೆಜಿ ಸಲ್ಪರ ಕೊಟ್ಟಂತ್ತಾಗುತ್ತದೆ. ಕುಳೆ ಕಬ್ಬಿನಲ್ಲಿ ರವದಿಯನ್ನು ಎರಡು ಸಾಲುಗಳ ಮದ್ಯ ಹಾಕಬೇಕು. ಇಲ್ಲವಾದರೆ ಒಂದು ಸಾಲು ಬಿಟ್ಟು ಒಂದು ಸಾಲಿಗೆ ಹಾಕಬೇಕು. ಇದಕ್ಕೆ 50 ಕೆಜಿ ಯುರಿಯಾ ಮತ್ತು 50 ಕೆಜಿ ಸುಪರ ಪಾಸ್ಪೆಟ್ ಗೊಬ್ಬರವನ್ನು ರವದಿಯ ಮೇಲೆ ಹಾಕಬೇಕು. ನಂತರ 5-6 ಕೆಜಿ ರವದಿ ಕೊಳಿಸುವ ಸೂಕ್ಷ್ಮಾಣು ಜೀವಿ (ಟ್ರೈಕೊಡರ್ಮಾ ವಿರಡೆ ಅಸ್ಪರಜಿಲಸ್, ಪ್ಲುರೋಟಸ್ ಮತ್ತು ಫೆನಿಕೀಟ ಶೀಲಿಂಧ್ರಗಳು) ಸಗಣಿ ಕಲಿಸಿದ ನೀರಿನಲ್ಲಿ ಮಿಶ್ರಣ ಮಾಡಿ ರವದಿಯ ಮೇಲೆ ಸಿಂಪರಿಸಿ ಬೇಕು (2 ಕೆಜಿ ಟನ್ ರವದಿಯ ಮೇಲೆ). ಇದರಿಂದ ರವದಿ ಬೆಗನೆ ಕಳಿಯುವುದು ಸಾಲು ಬಿಟ್ಟು ಸಾಲಿನಲ್ಲಿ ರವದಿ ಹೊದಿಸುವದರಿಂದ ಮಣ್ಣಿನಲ್ಲಿ ತೇವಾಂಶ ಕಾಪಾಡುವುದರ ಜೊತೆಗೆ ಕಳೆಗಳ ನಿಯಂತ್ರಣವನ್ನು ಮಾಡಬಹುದು. ಮತ್ತು ಖುಲ್ಲಾ ಇರುವ ಸಾಲುಗಳಲ್ಲಿ ಬೋದು ಏರಿಸಿ ನೀರು ಹಾಯಿಸುವದು ಸೂಕ್ತ ನೀರಿನ ಕೊರತೆ ಇರುವ ಸಂದರ್ಭದಲ್ಲಿ ರವದಿ ಹೊದಿಕೆ ಮಾಡುವುದರಿಂದ ತೇವಾಂಶ ಆವಿಯಾಗಿ ಹೋಗುವುದನ್ನು ತಡೆಗಟ್ಟಿ ಕಬ್ಬಿಗೆ ನೀರು ಕೊಡುವ ಸಂಖ್ಯೆಯನ್ನು ಕಡಿಮೆ ಮಾಡಿ ನೀರಿನ ಉಳಿತಾಯವನ್ನು ಮಾಡಲಾಗುತ್ತದೆ. ಪ್ರಯೋಗಗಳ ಪ್ರಕಾರ ರವದಿ ಹೊದಿಕೆ ಮಾಡುವುದರಿಂದ 8-10 ದಿವಸಗಳಿಗೊಮ್ಮೆ ನೀರು ಕೊಡುವ ಬದಲು 15-20 ದಿವಸಗಳಿಗೊಮ್ಮೆ ನೀರು ಕೊಟ್ಟರೆ ಸಾಕು.

ಕಬ್ಬಿನ ಬಿಳಿ ಉಣ್ಣೆ ಜೇನು ಅದರ ಸಮಗ್ರ ನಿರ್ವಹಣೆ. ಬೆಳಗಾವಿ ಜಿಲ್ಲೆಯಲ್ಲಿ 2002 ರಲ್ಲಿ ತಿಂಗಳಲ್ಲಿ ಮೊಟ್ಟ ಮೊದಲ ಕಾಣಿಸಿಕೊಂಡಿದ್ದು , ಈಗ ದಕ್ಷಿಣ ಪ್ರಸ್ತಭೂಮಿಯ ಎಲ್ಲಾ ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ವ್ಯಾಪಿಸಿಕೊಂಡಿದೆ. ಈ ಕೀಟದ ವೈಜ್ಞಾನಿಕ ಹೆಸರು ಸಿರಾಟೊವಾಕ್ಯುಲ್ಯಾನಿ ಎಂಬುದಾಗಿದೆ. ಈ ಕೀಟವು ಈ ಜರಾಯುಜತ್ವದಿಂದ ಸಂತಾನೊತ್ಪತ್ತಿ ಮಾಡುವುದು ಒಂದು ಮುಖ್ಯವಾದ ಲಕ್ಷಣವಾಗಿದೆ. ಮರಿಗಳು ಹಸಿರುಯುಕ್ತ ಹಳದಿ ಬಣ್ಣದಾಗಿದ್ದು , ಬಹು ಚುರುಕಾಗಿರುತ್ತದೆ. ಪ್ರೌಢಾವಸ್ಥೆಯನ್ನು ಹೊಂದಿದ ಹೊರಬಂದ ಮೂರು ದಿನಗಳ ಪ್ರಾಯದ ಹೆಣ್ಣು ಕೀಟ ಪ್ರತಿದಿನವೊಂದಕ್ಕೆ 15-35 ಮರಿಗಳಿಗೆ ಜನ್ಮ ನೀಡುತ್ತದೆ. ಬಾಲ್ಯಾವಸ್ಥೆಯ 20 ನಿಂದ 37 ದಿನಗಳವರೆಗೆ ಇರುತ್ತದೆ ದಿನಗಳವರೆಗೆ ಇರುತ್ತದೆ. ಒಂದು ಕೀಟವು 32 ರಿಂದ 50 ದಿನಗಳವರೆಗೆ ಬದುಕಬಲ್ಲದು ಮೋಡ ಕವಿದ ವಾತಾವರಣ, ತಂಪಾದ ಹವೆ ಮತ್ತು ಹೆಚ್ಚಿನ ಆರ್ದತೆ ಇರುವ ವಾತಾವರಣವು ಈ ಕೀಟದ ವೃದ್ಧಿಗೆ ಮತ್ತು ಪಸರಿಸಲು ಸಹಾಯವಾಗುತ್ತದೆ. ಕೀಟದ ಎಲೆಗಳ ಅಂಚುಗಳಲ್ಲಿ ಹಳದಿ ಮೇಳಾಗದಲ್ಲಿ ಕಪ್ಪು ಬೂಸ್ಟ್ ಬೆಳೆದು ಎಳೆಗಳ ಕೆಳಭಾಗದಲ್ಲಿದ್ದು ರಸಹಿಸುವರು. ಇಂತಹ ಎಲೆಗಳ ಪ್ರದೇಶವು ವರ್ಣಕ್ಕೆ ತಿರುಗಿದ ನಂತರ ಕೆಳಗಿನ ಎಳೆಯ ದ್ಯುತಿಸಂಶ್ಲೇಷಕಿಯೆಗೆ ತೊಂದರೆಯಾಗುವುದು. ಕಬ್ಬಿನ ಇಳುವರಿಯು ಶೇ 22 ರಿಂದ 25 ರಷ್ಟು ಹಾಗೂ ಸಕ್ಕರೆಯ ಇಳುವರಿಯು ಶೇ. 24.71 ರಷ್ಟು ಕಡಿಮೆಯಾಗುತ್ತದೆ.

ತಾತ್ಕಾಲಿಕ ಶಿಫಾರಸು ಕ್ರಮಗಳು – ಈ ಕೀಟದ ಹತೋಟಿಯನ್ನು ಸಾಮೂಹಿಕವಾಗಿ ಎಲ್ಲ ರೈತರು ಕೈಗೊಳ್ಳುವುದು ಅತ್ಯವಶ್ಯಕ ಬಾಧೆಗೊಳಗಾದ ಕಟ್ಟನ್ನು ಬಿತ್ತನೆಗೆ ಉಪಯೋಗಿಸಬಾರದು.

• ಪಟ್ಟಾ ಪದ್ಧತಿಯನ್ನು ಅನುಸರಿಸಿ ಬೆಳೆದ ಬೆಳೆಯಲ್ಲಿ ನಿರ್ವಹಣೆಗಳನ್ನು ಕೈಗೊಳ್ಳುವುದು ಅತಿ ಸುಲಭ.

• ಕಬ್ಬಿನ ಗದ್ದೆಗಳಲ್ಲಿ ನೀರು ಬಸಿದು ಹೋಗುವಂತೆ ನೋಡಿಕೊಳ್ಳಬೇಕು.

• ಸಾರಜನಕಯುಕ್ತ ಗೊಬ್ಬರವನ್ನು ಹೆಚ್ಚಾಗಿ ಬಳಸದೆ, ಪೋಷಕಾಂಶಗಳೊಂದಿಗೆ ಸಮತೋಲನವನ್ನು ಬಳಸಬೇಕು.

Spread positive news

Leave a Reply

Your email address will not be published. Required fields are marked *