ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಹಣದಲ್ಲಿ 8,000 ರೂ.ಗೆ ಹೆಚ್ಚಳ?
ಹೌದು ಇದು ನಿಜವಾದ ಸಂಗತಿ. ಈಗಾಗಲೇ 15 ಕಂತು ಮುಗಿದಿದ್ದು ಈಗ 16 ನೇ ಕಾಂತಿಗೆ ರೈತರು ಕಾಯುತ್ತಿದ್ದಾರೆ. ಅದೇ ರೀತಿ ಕೇಂದ್ರ ಸರಕಾರವು ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಕಿಸಾನ್ ನಿಧಿ’ ಯೋಜನೆಯಡಿ ರೈತರಿಗೆ ನೀಡುವ ವಾರ್ಷಿಕ ಮೊತ್ತವನ್ನು ಈಗಿನ 6,000 ರಿಂದ 8,000 ರೂಪಾಯಿ ಹೆಚ್ಚಿಸುವ ಸಾಧ್ಯತೆಯಿದೆ. ಏಪ್ರಿಲ್-ಮೇ ಅವಧಿಯಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ಬಡವರಿಗೆ ಉಚಿತ ಪಡಿತರ ಯೋಜನೆಯಾದ ‘ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ’ಯ ಪ್ರಯೋಜನಗಳನ್ನೂ ಹೆಚ್ಚಿಸಲು ಸರಕಾರ ಚಿಂತನೆ ನಡೆಸಿದೆ. ಈ ಎರಡರ ಬಗ್ಗೆ ಶೀಘ್ರದಲ್ಲೇ ಅಂತಿಮ ತೀರ್ಮಾನೆ’ ಹೊರಬೀಳುವ ಸಾಧ್ಯತೆಯಿದೆ. ಸಮ್ಮಾನ್ ಯೋಜನೆಯಡಿ ಪ್ರಸ್ತುತ ಅರ್ಹ ರೈತರಿಗೆ ವಾರ್ಷಿಕ 6,000 ರೂ.ಗಳನ್ನು ತಲಾ 2,000 ರೂ.ಗಳ ಮೂರು ಕಂತುಗಳಲ್ಲಿ ನೀಡಲಾಗುತ್ತಿದೆ. ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ, ಅರ್ಹರಿಗೆ ಮಾಸಿಕ ಪ್ರತಿ ವ್ಯಕ್ತಿಗೆ 5 ಕೆ.ಜಿ. ಆಹಾರಧಾನ್ಯ ವಿತರಿಸಲಾಗುತ್ತಿದೆ.
ಫಲಾನುಭವಿ ಸ್ಥಿತಿ ಲಿಂಕ್:
https://pmkisan.gov.in/BeneficiaryStatus New.aspx
ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಸಹ ನೀವು ಸಂಪೂರ್ಣ ಡೀಟೇಲ್ಸ್ ಪಡೆಯಬಹುದು. ಶ್ರೀ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರೊಂದಿಗೆ ಮಾತನಾಡುವುದನ್ನು ನೋಡಲು ಇಲ್ಲಿ ಕಿಳಗಡೆ ನೀಡಿರುವ ಆ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನೀವು ನೇರವಾಗಿ ಅವರು ಮಾತನಾಡುವುದನ್ನು ನೋಡಬಹುದು.
ಈ ಬಾರಿ ಅಂತಹ ಹೆಚ್ಚಿನ ಸಂಖ್ಯೆಯ ಜನರನ್ನು ಕೇಂದ್ರ ಸರ್ಕಾರವು ಗುರುತಿಸಿದೆ, ಅವರು ಈ ಯೋಜನೆಯ ಲಾಭವನ್ನು ಅನ್ಯಾಯದ ರೀತಿಯಲ್ಲಿ ಪಡೆಯುತ್ತಿದ್ದಾರೆ. ಅವರಿಗೆ ಭೂ ಪರಿಶೀಲನೆ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಯೋಜನೆಯ ಪ್ರಯೋಜನವನ್ನು ಪಡೆಯಲು, ಮೊದಲನೆಯದಾಗಿ, ಭೂ ಪರಿಶೀಲನೆ ಅಂದರೆ ಭೂಮಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಅವಶ್ಯಕ. ಅದೇ ರೀತಿ ಇನ್ನೂ ಹಣ ಬರದೆ ಇರುವವರಿಗೆ ಇ-ಕೆವೈಸಿ ಮಾಡಲು ಅವಕಾಶ ನೀಡಲಾಗಿದ್ದು ರೈತರು ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಕೆವೈಸಿ ಮಾಡಿಸಿಕೊಳ್ಳಿ.