ಪ್ರೀಯ ರೈತರೇ ಈಗಿನ ಕಾಲದಲ್ಲಿ ಅತಿ ಹೆಚ್ಚಾಗಿ ತಂತ್ರಜ್ಞಾನ ಬಳಕೆ ಆಗುತ್ತಿದೆ. ಅದೇ ರೀತಿ ಕಾಲಕಾಲಕ್ಕೆ ಮಳೆ ಆಗುತ್ತಿಲ್ಲ. ಹೀಗಾಗಿ ರೈತರು ಹವಾಮಾನ ಏರಿಳಿತದ ಪರಿಣಾಮವಾಗಿ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಅದೇ ರೀತಿ ಕೆಲವು ರೈತರು ತಮ್ಮ ಧೈರ್ಯ ಸಾಹಸದಿಂದ ಸುಸ್ಥಿರ ಕೃಷಿಯಲ್ಲಿ ಮುನ್ನಡೆ ಸಾಧಿಸಿದ್ದು ಅದರಲ್ಲಿ ಒಂದು ಎಕರೆಯಲ್ಲಿ ಐದು ಲಕ್ಷ ಗಳಿಕೆ
ಈ ಜಯತೀರ್ಥ ಪಾಟೀಲ ಕಲಬುರಗಿ ಹತ್ತಾರು ಎಕರೆ ಜಮೀನಿದ್ದರೂ ಅತಿಯಾದ ಮಳೆ, ಬರದಿಂದ ಹಾಳು ಎಂದು ಗೋಳಾಡುವ ಈ ದಿನಗಳಲ್ಲಿ ಒಂದು ಎಕರೆ ಜಮೀನಿನಲ್ಲಿ 3ಲಕ್ಷ ಆದಾಯ ಪಡೆಯುತ್ತಿದ್ದಾರೆ ರೈತರೊಬ್ಬರು ಹುಬ್ಬೇರಿಸುವಂತೆ ಮಾಡಿದ್ದು, ಇಲ್ಲ ಎನ್ನುವುದಕ್ಕಿಂತ ಇದ್ದುದರಲ್ಲಿ ಹೇಗೆ ಆದಾಯ ಬರುತ್ತದೆ ಎಂದು ಸಂಗೋಳಗಿ(ಸಿ) ಗ್ರಾಮದ ವೆಂಕಟರಾವ್ ಒಂದೇ ಎಕರೆ ಜಮೀನು ಇದ್ದುದರಲ್ಲಿ ಬಹುದೆಂದು ಯೋಚಿಸಿ ಕೃಷಿಯಲ್ಲಿ ಮುಂದಡಿ ಇಡುತ್ತಿದ್ದಾರೆ.
ಕೃಷಿ ಕೆಲಸ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಡಿಪ್ಲೊಮಾ ಇನ್ ಮೆಕ್ಯಾನಿಕಲ್ ತಾಂತ್ರಿಕ ಶಿಕ್ಷಣ ಪೂರೈಸಿ ಕೈತುಂಬಾ ಸಂಬಳ ಬರುವ ನೌಕರಿ ತೊರೆದ ಯುವಕ ಕೃಷಿಯಲ್ಲಿ ತೊಡಗಿ ಯಶಸ್ವಿ ರೈತನಾಗಿದ್ದಾನೆ. ಒಂದು ಎಕರೆಯಲ್ಲಿ 20 ಗುಂಟೆ ಅಂಧ್ರದ ಬಾಲನಗರ ಶಳೆಯ 125 ಸೀತಾಫಲ ಬೆಳೆದಿದ್ದಾರೆ. ಬದು (ವೇಸ್ಟ್ ಜಾಗ)ವಿನಲ್ಲಿ ಕರಿಬೇವು, ಆಕಳಿಗೆ ಮೇವು, ತೊಂಡಲಕಾಯಿ, ನುಗ್ಗಿ, ತೆಂಗು ಬೆಳೆದಿದ್ದಾರೆ. ಮೂರು ತೆಂಗಿನ ಗಿಡ, ಐದು ಲಿಂಬೆ, ಎರಡು ಪೇರು, ಮೂರು ದಾಳಿಂಬೆ, ಹಾಕಿದ್ದಾರೆ. ಇದರ ಮಧ್ಯೆ ಮೆಂತೆ, ಪಾಲಕ್, ಕೊತ್ತಂಬರಿ, ಪುದಿನ, ಬಜ್ಜಿ ಪಲ್ಲೆ, ಚಿಲಕಿ ಪಲ್ಲೆ, ಮೂಲಂಗಿ, ತಪ್ಪಲು ಉಳ್ಳಾಗಡ್ಡಿ ಬೆಳೆದಿದ್ದಾರೆ.
ಸಣ್ಣ, ಪ್ರಗತಿಪರ ರೈತನ ಯಶೋಗಾಥೆ ಸಂಗೋಳಗಿ ವೆಂಕಟ್ ಮಾದರಿ ಕೃಷಿ ಇರುವ ಒಂದು ಎಕರೆ ಜಮೀನು, ವರ್ಷವಿಡೀ ಒದ್ದಾಡಿದರೂ ಏನೂ ಲಾಭ ಸಿಗಲ್ಲ. ಬದುಕುವುದೇ ಕಷ್ಟ. ಹೀಗಾಗಿ ಮಲ್ಲಿಪಲ್ ಕೃಷಿ ಮೂಲಕ ಏನಾದರೂ ಸಾಧನೆ ಮಾಡಬಹುದು ಎಂದು ಯೋಚಿಸಿ, ಕೃಷಿ ವಿಜ್ಞಾನಿಗಳ ಸಲಹೆ ಪಡೆದು ದುಡಿಯುತ್ತಿದ್ದೇನೆ. ಪ್ರತಿವರ್ಷ ಎಲ್ಲ ಖರ್ಚು ಹೋಗಿ 4 -5 ಲಕ್ಷ ಹಂತ-ಹಂತವಾಗಿ ಆದಾಯ ಬರುವಂತೆ ಯೋಜನೆ ಮಾಡಿಕೊಂಡಿದ್ದಾರೆ. ನಿತ್ಯದ ಆದಾಯಕ್ಕೆ ತರಕಾರಿ ಮಾರಾಟ, ಕುರಿ ವ್ಯವ ಲಕ್ಷ ರೂ.ಗೂ (ಉರ್ಚು ವೆಚ್ಚ ತೆಗೆದು) ಅಧಿಕ ಲಾಭ ಗಳಿಸಿದ್ದಾರೆ. ಮಾದರಿಯಲ್ಲಿ ಪುಟ್ಟ ವ್ಯವಸಾಯ ಮಾಡುತ್ತಿರುವುದು ವಿಶೇಷ. 2019ರಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ಶ್ರೇಷ್ಠ ಕೃಷಿಕ ಎಂಬ ಪ್ರಶಸ್ತಿ ದೊರೆತಿದೆ.
ಕಷ್ಟಪಟ್ಟರೆ ಎಲ್ಲ ರೈತರೂ ಸಾಧಕರಾಗುತ್ತಾರೆ. ಬಹಳಷ್ಟು ರೈತರು ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ಕೈಗೊಂಡು ಕೆಲ ಸಂದರ್ಭದಲ್ಲಿ ಎಡವುತ್ತಾರೆ. ಅಂತಹವರು ಎದೆಗುಂದದೆ ಕೃಷಿ ಇಲಾಖೆ ಸಹಾಯ ಪಡೆದು ಮೇಲೇಳಬೇಕು. ಬಹಳಷ್ಟು ಸಾಧಕ ರೈತರು ಎಲೆಮರೆ ಕಾಯಿಯಂತಿದ್ದಾರೆ. ಅಂತಹವರನ್ನೂ ಕೃಷಿ ಇಲಾಖೆ ಗುರುತಿಸಿ ಪ್ರೋತ್ಸಾಹಿಸಬೇಕು.