ಮೀನುಗಾರರಿಗೆ ಮೀನು ಸಾಕಾಣಿಕೆ ಮಾಡಲು ಸಾಲ ವಿತರಣೆ.

ಮೀನುಗಾರರಿಗೆ ಮೀನು ಸಾಕಾಣಿಕೆ ಮಾಡಲು ಸಾಲ ವಿತರಣೆ ಮೀನುಗಾರರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ. ಹೌದು ಬನ್ನಿ ರೈತರೇ ಸ್ವಾವಲಂಬಿ ಕೃಷಿ ಜೀವನ ನಡೆಸಲು ಸರ್ಕಾರವು ರೈತರಿಗೆ ಯಾವೆಲ್ಲಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಯೋಣ.

ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನಿಂದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಹಿತ್ತಲಿನ ಅಲಂಕಾರಿಕ ಮೀನು ಸಾಕಾಣಿಕೆ ಘಟಕ. 2. ಬ್ಯಾಕ್ಯಾರ್ಡ್ ಮಿನಿ ಆರ್‍ಎಎಸ್ ಘಟಕಗಳ ಸ್ಥಾಪನೆ. ಹೊಸಮೀನು ಕೃಷಿ ಕೊಳ ನಿರ್ಮಾಣ(ಪ.ಜಾತಿ). ಸಿಹಿ ನೀರಿನ ಪ್ರದೇಶಗಳಿಗೆ ಕೊಳಗಳನಿರ್ಮಾಣ, (ಹೆಕ್ಟೇರಿಗೆ 4 ಲಕ್ಷರೂ ಹೂಡಿಕೆ ವೆಚ್ಚ ಸೇರಿದಂತೆ). ಮತ್ತು ಸಾಂಪ್ರದಾಯಿಕ ಮೀನುಗಾರರಿಗೆ ಯಾಂತ್ರಿಕೃತ ಎಫ್‍ಆರ್‍ಪಿ ದೋಣಿಗಳು ಖರೀದಿಗೆ ಸಹಾಯಧನ. ಯೋಜನೆಗಳನ್ನು ಅನುಷ್ಠಾನಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.

ಈ  ಉಪ ಯೋಜನೆ ಪ್ರಾರಂಭಿಸಲು ಶೇ.40 ರಷ್ಟು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಮತ್ತು ಶೇ.60 ರಷ್ಟು ಪ.ಜಾತಿ/ ಪ.ಪಂಗಡ/ ಮಹಿಳಾ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮಡಿಕೇರಿ, ಪೆÇನ್ನಂಪೇಟೆ ಮತ್ತು ಸೋಮವಾರಪೇಟೆ ಅವರನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

 

ಪಿ.ಎಂ.ಎಂ.ಎಸ್ ಯೋಜನೆಯ ಗುರಿಗಳು ಮತ್ತು ಉದ್ದೇಶಗಳು –

• ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆ (PMMSY)ಯ ಗುರಿ ಮತ್ತು ಉದ್ದೇಶಗಳು ಈ ಕೆಳಗಿನಂತಿರುತ್ತವೆ:

• ಮೀನುಗಾರಿಕಾ ಸಾಮರ್ಥ್ಯವನ್ನು ಸುಸ್ಥಿರ, ಜವಾಬ್ದಾರಿಯುತ ಮತ್ತು ನ್ಯಾಯ ಸಮ್ಮತ ರೀತಿಯಲ್ಲಿ ಹೆಚ್ಚಿಸುವುದು.

• ನೆಲ ಮತ್ತು ಜಲದ ಸಮಗ್ರ ಬಳಕೆಯ ಮೂಲಕ ಮೀನು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ವಿಸ್ತರಣೆ, ತೀರ್ವತೆ ಮತ್ತು ವಿವಿಧತೆಯ ಮೂಲಕ ಹೆಚ್ಚಿಸುವುದು.

• ಮೀನು ಮಾರಾಟದ ಮೌಲ್ಯ ಸರಪಳಿಯನ್ನು ಆಧುನೀಕರಿಸುವುದು ಮತ್ತು ಬಲಪಡಿಸುವುದು – ಹಿಡುವಳಿ ನಂತರದ ನಿರ್ವಹಣೆ ಮತ್ತು ಗುಣಮಟ್ಟದ ಸುಧಾರಣೆ.

• ಮೀನುಗಾರರ ಮತ್ತು ಮೀನು ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವುದು ಹಾಗೂ ಮೀನುಗಾರಿಕೆಯಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಜಿಸುವುದು.

• ಕೃಷಿ ಜಿ.ಡಿ.ಪಿ ಮತ್ತು ರಸ್ತೆಗೆ ಮೀನುಗಾರಿಕೆ ಕೊಡುಗೆಯನ್ನು ಹೆಚ್ಚಿಸುವುದು.

• ಮೀನುಗಾರರಿಗೆ ಮತ್ತು ಮೀನು ಕೃಷಿಕರಿಗೆ ಸಾಮಾಜಿಕ, ಭೌತಿಕ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುವುದು. ಸದೃಡ ಮೀನುಗಾರಿಕೆ ನಿರ್ವಹಣೆ ಮತ್ತು ನಿಯಂತ್ರಣ ಚೌಕಟ್ಟಿನ ನಿರ್ಮಾಣ.

Spread positive news

Leave a Reply

Your email address will not be published. Required fields are marked *