ಹೊಸ ರೇಷನ್ ಕಾರ್ಡ್ ಹಾಗೂ ಹೆಸರು ಸೇರ್ಪಡೆಗೆ ಮತ್ತೊಮ್ಮೆ ಅವಕಾಶ.

ಪ್ರೀಯ ಸಾರ್ವಜನಿಕರೇ ಇವತ್ತು ನಾವು ಒಂದು ಮುಖ್ಯವಾದ ವಿಷಯ ಬಗ್ಗೆ ಚರ್ಚಿಸೋಣ.

ಕೆಲವು ದಿನಗಳಿಂದ ಹೊಸ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಕಾರ್ಡುಗಳಿಗಾಗಿ ಅರ್ಜಿ ಸ್ವೀಕಾರವನ್ನು ನಿಲ್ಲಿಸಲಾಗಿದೆ. ಏನಿದು ಹೊಸ ರೇಷನ್ ಕಾರ್ಡ್ ಅರ್ಜಿ? ಏನು ಮಾಡಬೇಕು? ಹೇಗೆ ಅರ್ಜಿ ಸಲ್ಲಿಸಬೇಕು?

ಹೌದು ಈಗಾಗಲೇ ಸರ್ಕಾರವು ಗೃಹ ಲಕ್ಷ್ಮಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು, ಈ ಯೋಜನೆಯನ್ನು ಸದುಪಯೋಗ ಪಡೆಯಲು ರೇಷನ್ ಕಾರ್ಡ್ ಅಲ್ಲಿ ಮನೆಯ ಒಡತಿ ಹೆಸರು ಮುಖ್ಯವಾಗಿ ಇರಬೇಕಾಗುತ್ತದೆ. ಇದರಲ್ಲಿ ಕೆಲವೊಂದು ರೇಷನ್ ಕಾರ್ಡ್ ಅಲ್ಲಿ ಮನೆಯ ಒಡತಿ ಹಾಗೂ ಮನೆಯ ಸದಸ್ಯರ ಹೆಸರು ಸೇರಿಸುವ ಕೆಲಸ ಮಾಡಬೇಕಾಗಿದೆ. ಇನ್ನೂ ಯಾರೂ ಹೆಸರು ಸೇರಿಸಿಲ್ಲ ಕೂಡಲೇ ನಿಮ್ಮ ಸದಸ್ಯರ ಹೆಸರು ಸೇರಿಸಿ. ಅದೇ ರೀತಿ ಈಗ ರಾಜ್ಯದಲ್ಲಿ ಹೊಸ‌ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಸರ್ಕಾರವು ಮುಂದಾಗಿದೆ.

 

ಅರ್ಜಿ ಸಲ್ಲಿಕೆ ಎಲ್ಲಿ? 👇

ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದಾದ್ರೆ ಹತ್ತಿರದ ಆಹಾರ ಪೂರೈಕೆ ಕೇಂದ್ರಕ್ಕೆ ಹೋಗಬೇಕು. ಗ್ರಾಮ್ ಒನ್ ಅಥವಾ ‌ನಾಗರಿಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಎಲ್ಲಾ ಅಗತ್ಯ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಬೇಕು. ಹೊಸ ಸದಸ್ಯರ ಹೆಸರನ್ನು ಸೇರಿಸುವ ಅರ್ಜಿ ಭರ್ತಿ ಮಾಡಬೇಕು. ಅರ್ಜಿ ಶುಲ್ಕವನ್ನು ಜಮಾ ಮಾಡಬೇಕು. ನಮೂನೆಯನ್ನು ಸಲ್ಲಿಸಿದ ನಂತರ, ಅಧಿಕಾರಿಗಳು ರಶೀದಿಯನ್ನು ನೀಡುತ್ತಾರೆ. ರಶೀದಿಯ ಮೂಲಕ, ಆನ್ಲೈನ್ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು.

 

ಈಗಾಗಲೇ ಈ ಕಾರ್ಡುಗಳಿಗೆ ಅರ್ಜಿ ಹಾಕಿರುವವರಿಗೆ ಕಾರ್ಡುಗಳು ಸಿಗದೇ, ಹೊಸದಾಗಿ ಅರ್ಜಿ ಹಾಕಲೂ ಆಗದೇ ಜನರು ಪರದಾಡುವಂತಾಗಿದೆ. ಇದರ ನಡುವೆಯೇ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಈ ಬಗ್ಗೆ ಒಂದು ಮಾಹಿತಿ ಹೊರಬಿದ್ದಿದೆ. ಅದೇನೆಂದರೆ, ಅತಿ ಶೀಘ್ರದಲ್ಲೇ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುಗಳಿಗಾಗಿ ಹೊಸದಾಗಿ ಅರ್ಜಿ ಸ್ವೀಕಾರ ಆರಂಭಿಸುವುದಾಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

 

ಹೊಸ ಸದಸ್ಯರ ಹೆಸರು ಸೇರಿಸುವುದು ಹೇಗೆ? ತಿದ್ದುಪಡಿ ಮಾಡುವುದು ಹೇಗೆ?

ಹೊಸ ಸದಸ್ಯರ ಹೆಸರು ಸೇರ್ಪಡೆ : ಮದುವೆಯಾದ ನಂತ್ರ ಮನೆಗೆ ಬರುವ ಸೊಸೆಯ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸಬೇಕಾಗುತ್ತದೆ. ಮಹಿಳೆಯ ಆಧಾರ್ ಕಾರ್ಡ್, ಮದುವೆ ಪ್ರಮಾಣಪತ್ರ, ಗಂಡನ ಪಡಿತರ ಚೀಟಿಯ ಫೋಟೋ ಕಾಪಿ ನೀಡಬೇಕು. ಹಾಗೆ ಆಕೆಯ ತಂದೆ ಮನೆಯ ರೇಷನ್ ಕಾರ್ಡ್ ನಲ್ಲಿರುವ ಹೆಸರನ್ನು ತೆಗೆಯಬೇಕು.

ಆನ್ಲೈನ್ ಮೂಲಕ ಹೆಸರು ಸೇರಿಸುವ ವಿಧಾನ –

• ಮೊದಲು ಆಹಾರ ಪೂರೈಕೆ ಅಧಿಕೃತ ವೆಬ್ಸೈಟ್ ಗೆ ಹೋಗಬೇಕು. ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ವೆಬ್ಸೈಟ್ ಹೊಂದಿವೆ.👇 https://ahara.kar.nic.in/Home/EServices

• ವೆಬ್ಸೈಟ್ ಗೆ ಲಾಗಿನ್ ಆದ ನಂತ್ರ ಐಡಿ ರಚಿಸಬೇಕು. ಈಗಾಗಲೇ ಐಡಿ ರಚಿಸಿದ್ದರೆ ಲಾಗಿನ್ ಆಗಬೇಕು.

• ಲಾಗಿನ್ ಆದ್ಮೇಲೆ ಹೊಸ ಸದಸ್ಯರ ಆಯ್ಕೆ ಕಾಣಿಸುತ್ತದೆ. ಅದ್ರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಹೊಸ ಫಾರ್ಮ್ ಕಾಣಿಸುತ್ತದೆ.

• ಅಲ್ಲಿ ಕುಟುಂಬಸ್ಥರ ಎಲ್ಲ ಮಾಹಿತಿ ಭರ್ತಿ ಮಾಡಬೇಕು. ಫಾರ್ಮ್ ಜೊತೆಗೆ ಅಗತ್ಯ ದಾಖಲೆಗಳ ಸಾಫ್ಟ್ ಕಾಪಿಯನ್ನು ಅಪ್‌ಲೋಡ್ ಮಾಡಬೇಕು. ನಂತ್ರ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

• ನಂತರ ನಮೂನೆ ಸಲ್ಲಿಕೆಯ ನಂತರ ನೋಂದಣಿ ಸಂಖ್ಯೆಯನ್ನು ನೀಡಲಾಗುತ್ತದೆ. ಫಾರ್ಮ್ ಅನ್ನು ಈ ಪೋರ್ಟಲ್ ನಲ್ಲಿ ಟ್ರ್ಯಾಕ್ ಮಾಡಬಹುದು. ಅಧಿಕಾರಿಗಳು ನಮೂನೆ ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ. ಎಲ್ಲವೂ ಸರಿಯಾಗಿದ್ದರೆ ನಮೂನೆಯನ್ನು ಸ್ವೀಕರಿಸಲಾಗುತ್ತದೆ ಮತ್ತು ಪಡಿತರ ಚೀಟಿಯನ್ನು ಅಂಚೆ ಮೂಲಕ ಮನೆಗೆ ತಲುಪಿಸಲಾಗುತ್ತದೆ.

Spread positive news

Leave a Reply

Your email address will not be published. Required fields are marked *