ಭಾರತದ ಉತ್ತರ ಪ್ರದೇಶ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರಮುಖವಾಗಿ ಈ ಬೆಳೆಯನ್ನು ಬೆಳೆಯಲಾಗುತ್ತದೆ. ಉತ್ತರ ಪ್ರದೇಶ ಅತಿ ಹೆಚ್ಚು ಕ್ಷೇತ್ರವನ್ನು ಹೊಂದಿದ್ದು, ಪ್ರತಿ ಹೆಕ್ಟೇರ ಇಳುವರಿಯು ಕಡಿಮೆ ಇರುತ್ತದೆ. ಉತ್ತರ ಪ್ರದೇಶಕ್ಕೆ ಹೊಲಿಸಿದರೆ ಇಳುವರಿ ಮತ್ತು ಸರಾಸರಿ ಸಕ್ಕರೆ ಅಂಶದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಮಂಚೂಣಿಯಲ್ಲಿವೆ.
ಕಬ್ಬು ಬೆಳೆಯುವ ಎಲ್ಲಾ ರಾಜ್ಯಗಳಲ್ಲಿ ಕುಳೆ ಬೆಳೆಯುವುದು ಸಾಮಾನ್ಯವಾಗಿದೆ. ಆದರೆ, ಕುಳೆ ಬೆಳೆಯ ಸಂಖ್ಯೆ ಪ್ರಮಾಣ ಮತ್ತು ಇಳುವರಿಯಲ್ಲಿ ವಿಭಿನ್ನವಾಗಿರುತ್ತದೆ. ಕೆಲವೊಂದು ರಾಜ್ಯಗಳಲ್ಲಿ ನಾಟಿ ಕಬ್ಬು ಮತ್ತು ಒಂದೇ ಕುಳೆ ಬೆಳೆಯನ್ನು ತೆಗೆದುಕೊಳ್ಳುತ್ತಿದ್ದರೆ ಕೆಲವೊಂದು ಪ್ರದೇಶಗಳಲ್ಲಿ 3 ರಿಂದ 5 ಕುಳೆ ಬೆಳೆಗಳನ್ನು ತೆಗೆದುಕೊಂಡ ಉದಾಹಾರಣೆಗಳಿವೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ 1 ರಿಂದ 2 ಕುಳೆ ಬೆಳೆಯುತ್ತಾರೆ. ಕುಳೆ ಬೆಳೆಯು ನಮ್ಮ ರಾಜ್ಯದ ಕುಳೆ ಬೆಳೆಯುವ ಪ್ರದೇಶದಲ್ಲಿ ಪ್ರತಿಶತಃ 50 ರಷ್ಟು ಪ್ರದೇಶವನ್ನು ವ್ಯಾಪಿಸಿದೆ, ಕುಳೆ ಬೆಳೆಯುವ ಪ್ರದೇಶದಲ್ಲಿ ಹೆಚ್ಚು ಸಂಖ್ಯೆ ಕುಳೆ ಬೆಳೆದಂತೆಲ್ಲಾ ಇಳುವರಿ ಕಡಿಮೆಯಾಗುವುದು ಸಾಮಾನ್ಯವಾಗಿದೆ. ಸರಿಯಾದ ಕುಳೆ ಬೆಳೆ ನಿರ್ವಹಣೆ ಮಾಡಿದರೆ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ರೈತರು ಪುಕ್ಕಟೆ ಬೆಲೆ ಎಂದು ತಿಳಿದು ಅಷ್ಟೊಂದು ನಿರ್ವಹಣೆ ಸರಿಯಾಗಿ ಮಾಡುವುದಿಲ್ಲ. ಇದರಿಂದ ಕುಳೆ ಬೆಳೆಯಲ್ಲಿ ಸಸಿ ಸುಳಿ ಕೊರಕದ ಹಾವಳಿ ಹೆಚ್ಚಾಗಿ ಇದೊಂದು ಉತ್ಪಾದನೆಯನ್ನು ಕಡಿಮೆಗೊಳಿಸುತ್ತದೆ.
ಈ ಬೆಳೆಯು 9 ರಿಂದ 14 ತಿಂಗಳು ಬೆಳೆಯುವ ಬೆಳೆಯಾಗಿದ್ದು, ಹೆಚ್ಚಾಗಿ ನೀರಾವರಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಕಬ್ಬಿನ ಮತ್ತು ಸಕ್ಕರೆ ಇಳುವರಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಕಬ್ಬು ಸಂಶೋಧನಾ ಕೇಂದ್ರಗಳು ಹಲವಾರು ಹೊಸ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸಿ ಕಬ್ಬು ಮತ್ತು ಸಕ್ಕರೆ ಇಳುವರಿಯ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ. ಸಂಶೋಧನಾ ಕೇಂದ್ರಗಳಿಂದ ಅಭಿವೃದ್ಧಿ ಪಡಿಸಿದ ಹೊಸ ತಾಂತ್ರಿಕತೆಗಳನ್ನು ರೈತರ ಹೊಲಗಳಿಗೆ ತಲುಪಿಸುವ ಮತ್ತು ಅನುಷ್ಠಾನಗೊಳಿಸುವ ಕಾರ್ಯವು ಇನ್ನೂ ಹೆಚ್ಚಿಗೆ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯು ಸಕ್ಕರೆ ಕಾರ್ಖಾನೆಗಳ ಸಹಯೋಗದೊಂದಿಗೆ ಹಾಗೂ ನೇರವಾಗಿ ಕಬ್ಬು ಬೆಳೆಗಾರರಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ಅಧಿಕ ಕಬ್ಬಿನ ಇಳುವರಿಗಾಗಿ ನಿರ್ವಹಿಸಬೇಕಾದ ಬೇರೆ ಬೇರೆ ಬೇಸಾಯ ನಿರ್ವಹಣಾ ಕ್ರಮಗಳಂತೆ, ಕೀಟಗಳ ಸಮಗ್ರ ನಿರ್ವಹಣೆಯು ಅತಿ ಮುಖ್ಯವಾಗಿದೆ. ಕಬ್ಬಿಗೆ ತಗಲುವ ಸುಮಾರು 298 ಕೀಟಗಳು ಪತ್ತೆಯಾಗಿವೆ. ಈ ನಿಟ್ಟಿನಲ್ಲಿ ಕೀಟಗಳ ಬಾಧೆಯಿಂದ ಸಾಮಾನ್ಯವಾಗಿ ಕಬ್ಬಿನ ಇಳುವರಿ ಶೇ. 20-25 ರಷ್ಟು ಕಡಿಮೆಯಾಗುವುದಲ್ಲದೆ, ಕಬ್ಬಿನ ಸಕ್ಕರೆ ಅಂಶ ಹಾಗೂ ಬೆಲ್ಲದ ಗುಣಮಟ್ಟವು ಕೂಡಾ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಇದಕ್ಕೆ ಪೂರಕವಾಗಿ ಕಬ್ಬನ್ನು ಪದೇ ಪದೇ ಒಂದೇ ಪರಿಸರದಲ್ಲಿ ಬೆಳೆಯುವುದರಿಂದ ಕೀಟ ಬಾಧೆಗೆ ಅನುಕೂಲಕರ ವಾತಾವರಣ ನಿರ್ಮಿಸಿದಂತಾಗುತ್ತದೆ.
ಸುಳಿ ಕೊರೆಯುವ ಕೀಟ
ಮೊಟ್ಟೆಗಳು ಬಣ್ಣ ಹೊ೦ದಿದ್ದು, ಚಪ್ಪಟೆಯಾಕರವಾಗಿದ್ದು, ಮೂರು ಅಥವಾ ಹೆಚ್ಚು ಸಾಲುಗಳಲ್ಲಿ ಪಕ್ಷ ಎಲೆಗಳ ಮಧ್ಯನಾಳ ಅಡಿಯಲ್ಲಿ ಒಂದರ ಮೇಲೊಂದು ಹಂತ ಹಂತವಾಗಿ ಮೊಟ್ಟೆಗಳನ್ನು ಇಡುತ್ತವೆ. ಪ್ರೌಢ ಕೀಟವು ಒಂದೇ ಸಲ 200 ಮೊಟ್ಟೆಗಳನ್ನು ಇಡುತ್ತವೆ ಮತ್ತು ಪ್ರತಿ ಗುಂಪಿನಲ್ಲಿ 8 ರಿಂದ 60 ಮೊಟ್ಟೆಗಳನ್ನು ಕಾಣಬಹುದು. ಮಾರ್ಚ್ದಿಂದ ಏಪ್ರಿಲ್ ತಿಂಗಳಲ್ಲಿ ಕಟಾವು ಮಾಡಿದ ಬೆಳೆಗೆ ಮೇ ತಿಂಗಳಲ್ಲಿ ಹುಳುಗಳು ಅತಿ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ಮರಿಗಳು 3 ರಿಂದ 4 ದಿನಗಳಲ್ಲಿ ಹೊರ ಬರುತ್ತವೆ. ಮರಿಗಳು ಕಂದು ಬಣ್ಣ ತಲೆ, ಬಿಳಿ ಆಕಾರವಾಗಿದ್ದು ದೇಹದ ಬೆನ್ನಿನ ಭಾಗದಲ್ಲಿ 5 ನೇರಳೆ ಪಟ್ಟೆಗಳಿರುತ್ತವೆ. ಮರಿಗಳ ಮುಂದಿನ ಕಾಲುಗಳಲ್ಲಿ ಅರ್ಧ ಚಂದ್ರಾಕಾರದ ಅಥವಾ ಅರೆ ವೃತ್ತಾಕಾರದ ಕೊಕ್ಕೆಗಳಿರುತ್ತವೆ. ಸುಮಾರು 35 ದಿನಗಳ ಕಾಲ ಮರಿ ಹಂತವಿರುತ್ತದೆ ಮತ್ತು ಕಾಂಡದ ಒಳಗೆ ಕೋಶಗಳನ್ನಿಡುತ್ತವೆ. ಕೋಶವು ತೆಳು ಕಂದು ಬಣ್ಣದ್ದಾಗಿದ್ದು, 10 ದಿನಗಳವರೆಗೆ ಕೋಶಾವಸ್ಥೆಯಲ್ಲಿರುತ್ತವೆ. ಚಿಟ್ಟೆಯು ಚಿಕ್ಕದಾಗಿದ್ದು, ತಿಳಿ ಕಂದು ಬಣ್ಣದಿಂದ ಕೂಡಿರುತ್ತದೆ. ಮುಂದಿನ ರೆಕ್ಕೆಗಳಲ್ಲಿ ವಿಶೇಷವಾಗಿ ಹೊರ ಅಂಚಿನಲ್ಲಿ ಗಾಢವಾದ ಗುರುತುಗಳಿರುತ್ತವೆ ಮತ್ತು ಹಿಂದಿನ ರೆಕ್ಕೆಗಳು ಬಿಳಿ ಬಣ್ಣದಾಗಿರುತ್ತವೆ. ಒಟ್ಟಾರೆ ಜೀವನ ಚಕ್ರವು 44 ರಿಂದ 49 ದಿನಗಳವರೆಗೆ ಇರುತ್ತದೆ ಹಾಗೂ ವಾತಾವರಣದ ಮೇಲೆ ಅವಲಂಬಿತವಾಗಿರುತ್ತದೆ.
ರೈತರೇ ಪಿಎಂ ಕಿಸಾನ್ ಖಾತೆಯಲ್ಲಿ ಈ ತಪ್ಪುಗಳಿದ್ದರೆ ಮೊಬೈಲ್ ನಿಂದಲೇ ತಿದ್ದುಪಡಿ
ಬಾಧೆಯ ಪ್ರಮುಖ ಲಕ್ಷಣಗಳು
> ತಡವಾಗಿ ಕಟಾವು ಮಾಡಿದ (ಜನವರಿ ನಂತರ) ಕಬ್ಬಿನಲ್ಲಿ ಈ ಕೀಟದ ಹಾವಳಿ ಹೆಚ್ಚಾಗಿ ಕಂಡು ಬರುತ್ತದೆ.
ಕುಳೆ ಕಬ್ಬಿನಲ್ಲಿ ಸಮಗ್ರ ಬೇಸಾಯ ಕ್ರಮಗಳನ್ನು ನಿರ್ವಹಿಸದಿದ್ದರೆ ಕೀಟದ ಬಾಧೆಯ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತದೆ.
ಕಟಾವು ಮಾಡಿದ 30 ರಿಂದ 45 ದಿನದ ಬೆಳೆಯಲ್ಲಿ ಸಸಿ ಸುಳಿಯನ್ನು ಕೊರೆಯುವುದರಿಂದ ಸುಳಿ ಒಣಗುವುದು/ ಸಾಯುವುದು.
ಬಾಧೆ ತೀವ್ರವಾದಲ್ಲಿ ಸಸಿಗಳ ಸಂಖ್ಯೆ ಕಡಿಮೆಯಾಗಿ ಹುಸಿ ಹೋಗಿ, ಬೆಳವಣಿಗೆ ಮತ್ತು ಇಳುವರಿಯಲ್ಲಿ ಗಣನೀ
ಯ ಪ್ರಮಾಣದ ಕುಂಠಿತವಾಗುವುದು,
ಪಿಎಂ ಕಿಸಾನ್ ಅನರ್ಹರ ಪಟ್ಟಿ ಬಿಡುಗಡೆ: ರೈತರಿಗೆ ಶಾಕ್?
WhatsApನಲ್ಲೇ ನಿಮ್ಮ ಆಧಾರ್, ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಿ
ಸಮಗ್ರ ಕೀಟ ನಿರ್ವಹಣೆ
ಸೂಕ್ತ ಸಮಯದಲ್ಲಿ (ಜನವರಿಯೊಳಗಾಗಿ ನಾಟಿ ಕಬ್ಬನ್ನು ಕಟಾವು ಮಾಡುವುದು,
– ಸರಿಯಾದ ಸಮಯದಲ್ಲಿ ಎಡೆ ಕುಂಟೆ ಹೊಡೆಯುವುದು ಮತ್ತು ಕಳೆ ನಿಯಂತ್ರಣ ಮಾಡುವುದರಿಂದ ಕೀಟದ ಬಾಧೆಯನ್ನು ಕಡಿಮೆ ಮಾಡಬಹುದು.
ಸರಿಯಾದ ಸಮಯದಲ್ಲಿ ನೀರು ಹಾಯಿಸಿ ತೇವಾಂಶ ಕಾಪಾಡುವುದರಿಂದ ಬಾಧೆ ಕಡಿಮೆ ಮಾಡಬಹುದು.
* ಕಬ್ಬಿನ ಬೆಳೆಯನ್ನು ನೆಲಮಟ್ಟದಲ್ಲಿ ಕಟಾವು ಮಾಡಬೇಕು. ಹನಿ ನೀರಾವರಿ ಪದ್ಧತಿಯಲ್ಲಿ ಪ್ರತಿ 30 ದಿನಗಳಿಂದ 45 ದಿನಗಳ ಅಂತರದಲ್ಲಿ ಹಾಯ್ ನೀರು ಹಾಯಿಸುವುದರಿಂದ ಬಾಧೆ ಕಡಿಮೆ ಮಾಡಬಹುದು.
> ಕುಳೆ ಕಬ್ಬಿನಲ್ಲಿ ರವದೆ ಹೊದಿಕೆ ಮಾಡುವುದರಿಂದ ಹಾನಿಯ ಪ್ರಮಾಣ ಕಡಿಮೆ ಮಾಡಬಹುದು,
45 ದಿನದ ಪೈರಿಗೆ ಹಗುರವಾಗಿ ಮಣ್ಣು ಏರಿಸುವುದು,
* 90 ದಿನದ ಪೈರಿಗೆ ಭಾರವಾಗಿ ಮಣ್ಣು ಏರಿಸುವುದು.
A ಒಂದು ಸಾಲು ಬಿಟ್ಟು ಒಂದು ಸಾಲು ರವದ ಹೊದಿಕೆ ಮಾಡಿ ಖಾಲಿ ಇರುವ ಸಾಲಿನಲ್ಲಿ ಅಂತರ ಬೆಳೆಯಾಗಿ
ಸೆಣಬು, ಡೈಂಚಾ, ಉಳ್ಳಾಗಡ್ಡಿ, ಬೆಳ್ಳುಳ್ಳಿ ಮತ್ತು ಕೋತ್ತಂಬರಿ ಬೆಳೆಗಳನ್ನು ಬೆಳೆಯುವುದರಿಂದ ಬಾಧೆ ಕಡಿಮೆಯಾಗುತ್ತದೆ.
ಕಟಾವು ಮಾಡಿದ 30 ದಿನಗಳ ನಂತರ ಹೆಕ್ಟೇರಿಗೆ 50 ಸಾವಿರದಂತೆ ಟ್ರೈಕೊಗ್ರಾಮ್ ಪರತಂತ್ರ ಜೀವಿಯನ್ನು 5 ಬಾರಿ ವಾರದ ಅಂತರದಲ್ಲಿ ಬಿಡುಗಡೆ ಮಾಡುವುದು,
ಕಟಾವು ಮಾಡಿದ 30 ರಿಂದ 60 ದಿನಗಳ ಒಳಗಾಗಿ ಶಿಫಾರಸ್ಸು ಮಾಡಿದ ಕೀಟನಾಶಕಗಳನ್ನು ಬಳಸಬೇಕು.
* ಪ್ರತಿ ಎಕರೆಗೆ 7 ರಿಂದ 8 ಕಿ. ಗ್ರಾಂ ಪಿಪ್ರೋನಿಲ್ 0.3 ಜಿ.ಆರ್. ನ್ನು ಕಬ್ಬಿನ ಸಾಲಿನಲ್ಲಿ ಗೊಬ್ಬರದ ಜೊತೆ ಮಿಶ್ರಣ ಮಾಡಿ ಹಾಕಬೇಕು. ನಂತರ ನೀರು ಹಾಯಿಸುವುದರಿಂದ ಸುಲಭವಾಗಿ ನಿಯಂತ್ರಿಸಬಹುದು.
ಪ್ರತಿ ಲೀಟರ್ ನೀರಿಗೆ 2.50 ಮಿ.ಲೀ. ಕ್ಲೋರೋಪೈರಿಫಾಸ್ 20 ಇ.ಸಿ. ನ್ನು ಬೆರೆಸಿ ಸಿಂಪಡಿಸಬೇಕು. ಪ್ರತಿ ಎಕರೆಗೆ 200 ರಿಂದ 400 ಲೀಟರ ನೀರು ಬೇಕಾಗುತ್ತದೆ.
ಪ್ರತಿ ಎಕರೆಗೆ 150 ಮಿ.ಲೀ. ಕ್ಲೋರಾಂಟಾಲಿಸೋಲ್ 400 ಲೀಟರ್ ನೀರಿಗೆ ಬೆರೆಸಿ ಕಬ್ಬಿನ ಬೆಳೆಯ ಬುಡಕ್ಕೆ ಉಣಿಸಬೇಕು.
* ಪ್ರತಿ ಎಕರೆಗೆ 7.5 ಕಿ. ಗ್ರಾಂ ಕ್ಲೋರಾಂಟಾಲಿಸ್ಕೋಲ್ 0.40 ಜಿ.ಆರ್. ನ್ನು ಕಬ್ಬಿನ ಸಾಲಿನಲ್ಲಿ ಗೊಬ್ಬರದ ಜೊತೆ ಮಿಶ್ರಣ ಮಾಡಿ ಹಾಕಬೇಕು. ನಂತರ ನೀರು ಹಾಯಿಸುವುರಿಂದ ಬಾಧೆಯನ್ನು ನಿಯಂತ್ರಿಸಬಹುದು.
ಪ್ರತಿ ಎಕರೆಗೆ 64 ಗ್ರಾಂ, ಥಯಾಮಿಥೋಕ್ಸಾಮ್ 75 ಎಸ್.ಜಿ. ನ್ನು 200 ರಿಂದ 400 ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಬೇಕು.
> ಪ್ರತಿ ಎಕರೆಗೆ 260 ರಿಂದ 304 ಮಿ.ಲೀ. ಸೈಪ ಮೆತ್ತಿನ್ 10 ಇ.ಸಿ. ನ್ನು 200 ರಿಂದ 280 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.