ನಗರ ಬಿಟ್ಟು ಹಳ್ಳಿಗೆ ಬಂದು ಕೃಷಿಯಲ್ಲಿ 15 ಲಕ್ಷ ಸಂಪಾದಿಸುತ್ತಿರುವ ಡಿಗ್ರಿಹೋಲ್ಡರ್: success story

ಗ್ರಾಮೀಣ ಪ್ರದೇಶಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ದೊಡ್ಡ ನಗರಗಳಿಗೆ ಕಳುಹಿಸುತ್ತಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ

ಆದರೆ ಡಿಗ್ರಿ ಪಡೆದ ಎಲ್ಲರಿಗೂ ಇಂದು ಕೆಲಸ ಸಿಗುತ್ತಿಲ್ಲ. ದೇಶದೆಲ್ಲೆಡೆ ನಿರುದ್ಯೋಗ ತಾಂಡವವಾಡುತ್ತಿದೆ. ಉನ್ನತ ಶಿಕ್ಷಣ ಪಡೆದ ಯುವಕರು ನಿರುದ್ಯೋಗದಿಂದ ನಿರುತ್ಸಾಹಗೊಂಡಿದ್ದಾರೆ. ಕೆಲವರು ನಗರಗಳಲ್ಲಿ ಸಿಕ್ಕಂತಹ ಸಣ್ಣ ಉದ್ಯೋಗಗಳನ್ನು ಮಾಡಿದರೆ, ಇನ್ನೂ ಕೆಲವರು ನೇರವಾಗಿ ಹಳ್ಳಿಗಳಿಗೆ ಹೋಗಿ ಜೀವನ ಸಾಗಿಸುತ್ತಾರೆ.

ಆದರೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕಾಡಾ ಗ್ರಾಮದ ರೈತನ ಮಗ ವಿಭಿನ್ನವಾಗಿದ್ದಾನೆ. ಪಂಕಜ್ ಪಾಟೀಲ್ ಉನ್ನತ ಶಿಕ್ಷಣ ಪಡೆದರೂ, ಹಳ್ಳಿಗೆ ಆಗಮಿಸಿ ಅಪ್ಪನ ಜೊತೆ ಕೃಷಿ ಜೊತೆಗೆ, ಡೈರಿ ಫಾರ್ಮ್ ನಡೆಸುವ ಮೂಲಕ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.

ಪಂಕಜ್ ಪಾಟೀಲ್ ವಿಜ್ಞಾನದಲ್ಲಿ ಪದವಿ ಮಾಡಿದ್ದಾರೆ. ನಂತರ ಛತ್ರಪತಿ ಸಂಭಾಜಿನಗರದ ಜಾಹೀರಾತು ಕಂಪನಿಯಲ್ಲಿ 2007 ರಿಂದ 2009 ರವರೆಗೆ ಎರಡು ವರ್ಷಗಳ ಕಾಲ ಕೆಲಸ ಮಾಡಿದರು. ಆದರೆ ಅಲ್ಲಿ ವರ್ಷಕ್ಕೆ ಎರಡು ಲಕ್ಷ ರೂಪಾಯಿ ಮಾತ್ರ ಸಿಗುತ್ತಿತ್ತು. ಪಂಕಜ್ಗೆ ಆ ಕೆಲಸ ತೃಪ್ತಿ ನೀಡದ ಕಾರಣ ರಾಜೀನಾಮೆ ಕೊಟ್ಟು ಹಳ್ಳಿಗೆ ವಾಪಸ್ ಆದ.

ಪಂಕಜ್ ಪಾಟೀಲ್ ತಂದೆ 24 ಎಕರೆ ಜಮೀನನ್ನು ಹೊಂದಿದ್ದಾರೆ. ಹೀಗಾಗಿ ಗ್ರಾಮಕ್ಕೆ ಬಂದಾಗ ಕೃಷಿ ಮಾಡಲು ನಿರ್ಧರಿಸಿದರು. ಅವರು ಕೃಷಿಯಿಂದಲೂ ಉತ್ತಮ ಆದಾಯವನ್ನು ಗಳಿಸಲು ಆಗಲಿಲ್ಲ. ಸಾಂಪ್ರದಾಯಿಕ ಕೃಷಿಗೆ ಪೂರಕವಾಗಿ ಪಶುಸಂಗೋಪನೆ ಆರಂಭಿಸಿದರು

ಪಂಕಜ್ ಆರಂಭದಲ್ಲಿ ಐದು ಹಸುಗಳು ಮತ್ತು ಐದು ಎಮ್ಮೆಗಳನ್ನು ಖರೀದಿಸಿ ಡೈರಿ ವ್ಯಾಪಾರವನ್ನು ಪ್ರಾರಂಭಿಸಿದರು. ಇದರಿಂದ ಪ್ರತಿದಿನ ಉತ್ತಮ ಆದಾಯ ಬರತೊಡಗಿತು. ಅದಕ್ಕಾಗಿಯೇ ಅವರು ಈ ವ್ಯವಹಾರವನ್ನು ವಿಸ್ತರಿಸಲು ನಿರ್ಧರಿಸಿದರು.

ಪಂಕಜ್ ಬಳಿ ಪ್ರಸ್ತುತ 40 ಹಸುಗಳು ಮತ್ತು 60 ಎಮ್ಮೆಗಳಿವೆ. ದಿನಕ್ಕೆ 400ರಿಂದ 425 ಲೀಟರ್ ಹಾಲು ಮಾರಾಟ ಮಾಡುತ್ತಾರೆ. ಎಲ್ಲಾ ಹಾಲನ್ನು ನಗರಗಳಲ್ಲಿ ಮಾರಲಾಗುತ್ತದೆ. ಇದರಿಂದ ಅವರಿಗೆ ತಿಂಗಳಿಗೆ ಒಂದು ಲಕ್ಷದಿಂದ 1.2 ಲಕ್ಷ ರೂಪಾಯಿ ಆದಾಯ ಬರುತ್ತದೆ.

ಹಾಲಿನ ವ್ಯಾಪಾರ ಬೆಳೆಯುತ್ತಿರುವಾಗಲೇ ಪಂಕಜ್ ಡೈರಿ ಉತ್ಪನ್ನ ಮಾಡಲು ನಿರ್ಧರಿಸಿದರು. ಅವರು ಶ್ರೀಖಂಡ್ ಮತ್ತು ಪನೀರ್ ತಯಾರಿಸಲು ಪ್ರಾರಂಭಿಸಿದರು ಮತ್ತು ಅವರು ದಿನಕ್ಕೆ 30 ರಿಂದ 35 ಕೆಜಿ ಪನೀರ್ ಮತ್ತು 40 ರಿಂದ 50 ಕೆಜಿ ಶ್ರೀಖಂಡ್ ತಯಾರಿಸುತ್ತಿದ್ದಾರೆ.

ಬೇಸಾಯದ ಜೊತೆಗೆ ಹಾಲಿನ ವ್ಯಾಪಾರವನ್ನೂ ಆರಂಭಿಸಿ, ಕ್ರಮೇಣ ಪ್ರಗತಿ ಸಾಧಿಸಿದ ಪಂಕಜ್, ಈಗ ನಿತ್ಯ 400ರಿಂದ 425 ಲೀಟರ್ ಹಾಲು ಮಾರಾಟ ಮಾಡುತ್ತಿದ್ದಾರೆ. ಪ್ರತಿ ವರ್ಷ 13 ರಿಂದ 15 ಲಕ್ಷ ರೂಪಾಯಿ ಆದಾಯ ಬರುತ್ತಿದೆ ಎಂದು ಪಂಕಜ್ ತಿಳಿಸಿದ್ದಾರೆ.

Spread positive news

Leave a Reply

Your email address will not be published. Required fields are marked *