ಆಗಸ್ಟ್ 21ರಿಂದ ಮುಂದಿನ ಮೂರು ದಿನಗಳ ಕಾಲ ಮಳೆರಾಯನ ಆರ್ಭಟ ಹೆಚ್ಚಾಗುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂದು (ಆಗಷ್ಟ್ 20) ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೊಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇಂದು ದಕ್ಷಿಣ ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಆಗಷ್ಟ್ 21ರಿಂದ ಮೂರು ದಿನ ಕರಾವಳಿ ಜಿಲ್ಲೆಗಳಲ್ಲಿ ಮಳೆ ಆರ್ಭಟ ಹೆಚ್ಚಾಗಲಿದ್ದು, ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಗಸ್ಟ್ 20ರಂದು ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ, ಆಗಸ್ಟ್ 21 ರಿಂದ 23ರವರೆಗೆ ಅತೀ ಸಾಧಾರಣ ಮಳೆ ಬೀಳಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಶನಿವಾರದಿಂದಲೇ ರಾಜ್ಯದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಆರಂಭಗೊಂಡಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಶನಿವಾರ ಜೋರು ಮಳೆಯಾಗಿದೆ. ಮೋಡ ಕವಿದ ವಾತಾವರಣವಿದ್ದು, ಸುರಿದ ಹಗುರ ಮಳೆಗೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ.ಉತ್ತರ ಒಳನಾಡಿನ ವಿಜಯಪುರ, ಯಾದಗಿರಿ, ಬಾಗಲಕೋಟೆ, ಕೊಪ್ಪಳ ಭಾಗದಲ್ಲಿ ಮಳೆಯಾಗಿರುವ ವರದಿಗಳು ಬಂದಿದೆ.ಇಂದಿನಿಂದ ಮುಂದಿನ ಐದು ದಿನಗಳ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕಬ್ಬಿನಲ್ಲಿ ಸಸಿ ಸುಳಿ ಕೊರಕದ ನಿಯಂತ್ರಣ ಹೇಗೆ?
ಪಿಎಂ ಕಿಸಾನ್ ಅನರ್ಹರ ಪಟ್ಟಿ ಬಿಡುಗಡೆ: ರೈತರಿಗೆ ಶಾಕ್?
ಮೋಡ ಕವಿದ ವಾತಾವರಣವಿದ್ದು, ಸುರಿದ ಹಗುರ ಮಳೆಗೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ.ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಎಚ್ಚರಿಕೆ ನೀಡಲಾಗಿದ್ದು, ಮುಂಜಾಗ್ರತ ಕ್ರಮವಾಗಿ ಅಪಾಯದ ಸ್ಥಳದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಕೆಲಸ ನಡೆದಿದೆ.
ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಈ ಮಧ್ಯೆ ಮುಂದಿನ 24 ಗಂಟೆಯಲ್ಲಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಇನ್ನು ದಕ್ಷಿಣ ಕನ್ನಡ, ಉತ್ತಕನ್ನಡ, ಹಾಗೂ ಉಡುಪಿ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ಗಳಲ್ಲಿ)
ಇನ್ಮುಂದೆ ನಿಮ್ಮ ಮೊಬೈಲ್ ನಲ್ಲಿ ಸಿಗುತ್ತೆ ಪ್ರವಾಹ ಮುನ್ಸೂಚನೆ
ಸಾಧಾರಣ ಮಳೆ
ಕಳೆದ ಎರಡ್ಮೂರು ವಾರಗಳಿಂದ ರಾಜ್ಯಾದ್ಯಂತ ಮಳೆ ನಾಪತ್ತೆಯಾಗಿದ್ದು ರೈತರಲ್ಲಿ ಆತಂಕ ಮನೆ ಮಾಡಿತ್ತು. ಈ ನಡುವೆಯೇ ಈಗ ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾದ್ರೆ ಕೊಪ್ಪಳ, ಬೆಂಗಳೂರು ಮತ್ತು ದಾವಣಗೆರೆಯಲ್ಲಿ ಸಾಧಾರಣ ಮಳೆ ಸುರಿದಿದೆ.
WhatsApನಲ್ಲೇ ನಿಮ್ಮ ಆಧಾರ್, ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಿ
ವಾಟ್ಸಾಪ್ ಚಾಟ್ಬಾಟ್ ಬಳಸಿ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಬೆಂಗಳೂರು: 30-20, ಚಿಕ್ಕಬಳ್ಳಾಪುರ: 27-19, ಕೋಲಾರ: 30-21, ಬೆಂಗಳೂರು ಗ್ರಾಮಾಂತರ: 30-20, ತುಮಕೂರು: 27-20, ಚಿತ್ರದುರ್ಗ: 27-21, ದಾವಣಗೆರೆ: 28-22, ಧಾರವಾಡ: 28-21, ಹುಬ್ಬಳ್ಳಿ: 27-21, ಹಾವೇರಿ: 27-22, ರಾಮನಗರ: 29-21, ಹಾಸನ: 25-19, ಮಡಿಕೇರಿ: 22-17, ಮಂಡ್ಯ: 30-21, ಚಾಮರಾಜನಗರ: 30-21, ಮೈಸೂರು: 29-21
ಬೆಳಗಾವಿ: 25-21, ಶಿವಮೊಗ್ಗ: 28-21, ದಕ್ಷಿಣ ಕನ್ನಡ: 29-24, ಉಡುಪಿ: 28-24, ಚಿಕ್ಕಮಗಳೂರು: 23-18, ಉತ್ತರ ಕನ್ನಡ: 28-25, ಕೊಪ್ಪಳ: 30-23, ಬಳ್ಳಾರಿ: 32-23, ಗದಗ: 28-22, ಬಾಗಲಕೋಟೆ: 29-23, ವಿಜಯಪುರ: 28-22, ಯಾದಗಿರಿ: 28-23, ರಾಯಚೂರು: 30-23, ಕಲಬುರಗಿ: 27-22 ಮತ್ತು ಬೀದರ್: 24-21
ರೈತರೇ ಪಿಎಂ ಕಿಸಾನ್ ಖಾತೆಯಲ್ಲಿ ಈ ತಪ್ಪುಗಳಿದ್ದರೆ ಮೊಬೈಲ್ ನಿಂದಲೇ ತಿದ್ದುಪಡಿ