ಪ್ರೀಯ ಸಾರ್ವಜನಿಕರೇ ಭಾರತ ಗ್ರಾಮೀಣ ಪ್ರಧಾನ ದೇಶ. ಆದರೆ, ಗ್ರಾಮೀಣ ಪ್ರದೇಶದ ಅದೆಷ್ಟೋ ಮನೆಗಳಲ್ಲಿ ಶೌಚಾಲಯಗಳು ಇಲ್ಲ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರವು ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಹಂತ-II ಅನ್ನು ಅನುಷ್ಠಾನಗೊಳಿಸುತ್ತಿದೆ. ಯೋಜನೆಯಡಿ ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ಲಭ್ಯವಾಗಲಿದೆ. ಈ ಹಿನ್ನೆಯೆಯಲ್ಲಿ ಏನಿದು ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆ? ಶೌಚಾಲಯ ನಿರ್ಮಾಣ ಸಹಾಯಧನ ಪಡೆಯುವುದು ಹೇಗೆ? ಯಾರೆಲ್ಲ ಅರ್ಹರು ಎಂಬುದನ್ನು ತಿಳಿಯೋಣ.
ಪಂಚಾಯಿತಿ ವತಿಯಿಂದ ನಿಮಗೊಂದು ಸಂತಸದ ಸುದ್ದಿ. ಏನೆಂದರೆ ಸ್ವಚ್ಛತೆಯೇ ದೈವತ್ವ” ಎಂಬ ಮಾತಿನಂತೆ, ಪ್ರತಿಯೊಂದು ಮನೆಯಲ್ಲೂ ಶೌಚಾಲಯ ಇರಬೇಕೆಂಬುದು ಸರ್ಕಾರದ ಆಶಯ. ಆದರೆ, ಇಂದಿಗೂ ಅನೇಕ ಬಡ ಕುಟುಂಬಗಳು ಹಣದ ಕೊರತೆಯಿಂದ ಬಯಲು ಶೌಚಾಲಯವನ್ನೇ ಅವಲಂಬಿಸಿವೆ. ಇಂತಹ ಕುಟುಂಬಗಳ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ‘ಸ್ವಚ್ಛ ಭಾರತ ಮಿಷನ್’ ಅಡಿಯಲ್ಲಿ ಆರ್ಥಿಕ ಸಹಾಯ ಹಸ್ತ ಚಾಚಿವೆ.
ಶೌಚಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ಎಷ್ಟು?
ಶೌಚಾಲಯ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಈ ಕೆಳಗಿನಂತೆ ಆರ್ಥಿಕ ನೆರವು ಮತ್ತು ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಶೌಚಾಲಯ ನಿರ್ಮಾಣಕ್ಕಾಗಿ ಅರ್ಜಿದಾರರಿಗೆ 12,000 ರೂ.ವರೆಗೆ ಆರ್ಥಿಕ ಮೊತ್ತವನ್ನು ಅನುಮೋದಿಸಲಾಗುತ್ತದೆ. ಈ ಮೊತ್ತವನ್ನು ಸಾಮಾನ್ಯವಾಗಿ ಎರಡು ಕಂತುಗಳಲ್ಲಿ (ಪ್ರತಿ ಕಂತಿಗೆ 6000 ರೂ. ರಂತೆ) ಅರ್ಜಿದಾರರ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
ಶೌಚಾಲಯ ಸಹಾಯಧನ ಹೇಗೆ ಸಿಗುತ್ತದೆ?
- ಯೋಜನೆ: ಸ್ವಚ್ಛ ಭಾರತ ಮಿಷನ್ (ಗ್ರಾಮೀಣ ಮತ್ತು ನಗರ).
- ಸಹಾಯಧನ (Subsidy): ಎಸ್ಸಿ/ಎಸ್ಟಿ ವರ್ಗಕ್ಕೆ ₹20,000 ಹಾಗೂ ಸಾಮಾನ್ಯ ವರ್ಗಕ್ಕೆ ₹12,000.
- ಅರ್ಹತೆ: ಬಿಪಿಎಲ್ (BPL) ಕಾರ್ಡ್ ಇರುವವರು ಮತ್ತು ಮನೆಯಲ್ಲಿ ಶೌಚಾಲಯ ಇಲ್ಲದವರು.
- ಅರ್ಜಿ ಸಲ್ಲಿಕೆ: ನಿಮ್ಮ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ PDO ಅವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಸಾಮಾನ್ಯವಾಗಿ ಈ ಕೆಳಗಿನ ದಾಖಲೆಗಳು ಬೇಕಾಗುತ್ತವೆ:
- ಭಾವಚಿತ್ರ
- ಬ್ಯಾಂಕ್ ಖಾತೆ ವಿವರಗಳು
- ಬ್ಯಾಂಕ್ ಪಾಸ್ಬುಕ್ನ ಮೊದಲ ಪುಟದ ಸ್ಕ್ಯಾನ್ ಪ್ರತಿ
- ನಿರ್ಮಾಣ ಹಂತದಲ್ಲಿರುವ ಶೌಚಾಲಯದ ಚಿತ್ರ
- ಅರ್ಜಿದಾರರು ಆಧಾರ್ ಸಂಖ್ಯೆ ಹೊಂದಿಲ್ಲದಿದ್ದರೆ, ಆಧಾರ್ ನೋಂದಣಿ ಚೀಟಿ.
- ಅರ್ಜಿ ಸಲ್ಲಿಸಲು ಯಾರು ಅರ್ಹರು?
- ಅರ್ಜಿದಾರರು ಕಡ್ಡಾಯವಾಗಿ ಕರ್ನಾಟಕದ ನಿವಾಸಿಯಾಗಿರಬೇಕು.
- ಬಿಪಿಎಲ್ (BPL) ರೇಷನ್ ಕಾರ್ಡ್ ಹೊಂದಿರಬೇಕು ಅಥವಾ ಸಣ್ಣ ರೈತರಾಗಿರಬೇಕು.
- ಮನೆಯಲ್ಲಿ ಈ ಮೊದಲು ಶೌಚಾಲಯ ಇರಬಾರದು ಅಥವಾ ಸರ್ಕಾರದ ಯಾವುದೇ ಯೋಜನೆಯಡಿ ಈ ಸೌಲಭ್ಯ ಪಡೆದಿರಬಾರದು.
- ಅಂಗವಿಕಲರು, ವಿಧವೆಯರು ಮತ್ತು ವೃದ್ಧರು ಇರುವ ಕುಟುಂಬಗಳಿಗೆ ಮೊದಲ ಆದ್ಯತೆ.

