ಮನೆಯಲ್ಲೇ ಜೈವಿಕ ಗೊಬ್ಬರ ತಯಾರಿಕೆ ವಿಧಾನ.

ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ ವಿದ್ಯಾರ್ಥಿಗಳಿಂದ ತಯಾರಿಸಲಾದ ಟ್ರೈಕೋಡರ್ಮಾ ಹಾಗೂ ಸ್ಯೂಡೋಮೊನಾಸ್ ಮತ್ತು ಬ್ಯಾಸಿಲಸ್ ದೊರೆಯುತ್ತದೆ.
ಟ್ರೈಕೋಡರ್ಮ ಒಂದು ಶಿಲೀಂದ್ರ, ಸುಡೊಮೊನಸ್ ಮತ್ತು ಬ್ಯಾಸಿಲಸ್ ದುಂಡಾಣು ವಾಗಿದ್ದು ಮಣ್ಣಿನಲ್ಲಿ ವಾಸಿಸುವಂತ ಮತ್ತು ಮಣ್ಣಿನಿಂದ ಹರಡುವಂತ ಹಾನಿಕಾರಕ ಶಿಲೀಂದ್ರ ಮತ್ತು ದುಂಡಾಣುಗಳಿಂದ 🌱ಅಡಿಕೆಯಲ್ಲಿ ಬರುವಂತಹ ಎಲೆಚುಕ್ಕೆ ರೋಗ, ಅಣಬೆ ರೋಗ, ಹಿಂಗಾರು ಒಣಗುವ ರೋಗ, ಸುಳಿ ಕೊಳೆ ರೋಗ, ಬೇರು ಕೊಳೆ ರೋಗ ಹಾಗೂ ಶುಂಠಿಯಲ್ಲಿ ಬರುವಂತಹ ಎಲೆಚುಕ್ಕೆ ರೋಗ, ಗಡ್ಡೆ ಕೊಳೆ ರೋಗ ಹಾಗೂ ಬಾಳೆಯಲ್ಲಿ ಬರುವಂತಹ ಪನಾಮ ಮತ್ತು ಮೋಕೋ ಸೊರಗು ರೋಗ ಇತ್ಯಾದಿ ರೋಗಗಳನ್ನು ತಡೆಗಟ್ಟಲು ಇತರ ರೋಗಕಾರಕ ಶಿಲೀಂದ್ರ ಗಿಂತ ವೇಗವಾಗಿ ಬೆಳೆದು ಅವುಗಳಿಗೆ ಆಹಾರ ಮತ್ತು ಸ್ಥಳ ಸಿಗದ ಹಾಗೆ ಮಾಡಿ ಅವುಗಳಿಂದ ಹಾಗುವಂತ ತೊಂದರೆಗಳನ್ನು ನಿಯಂತ್ರಿಸುತ್ತವೆ. 🌱

ಟ್ರೈಕೋಡರ್ಮ, ಸುಡೊಮೊನಸ್ ಮತ್ತು ಬ್ಯಾಸಿಲಸ್ ಪೌಡರ್ ಮತ್ತು ಲಿಕ್ವಿಡ್ ರೂಪದಲ್ಲಿ ದೊರೆಯುತ್ತದೆ.

⏺️ ಪೌಡರ್ ಬಳಸುವ ವಿಧಾನ⏺️
▪️ ಒಂದು ಟನ್ (1000 kg) ಕೊಟ್ಟಿಗೆ ಗೊಬ್ಬರಕ್ಕೆ 2kg ಟ್ರೈಕೋಡರ್ಮ, 2kg ಸುಡೊಮೊನಸ್ ಹಾಕಿ 15 ದಿನ ನೆರಳಿನಲ್ಲಿ ಹರಡಿ ನಂತರ ಬಳಸುವುದು.
ಒಂದು ಟ್ರ್ಯಾಕ್ಟರ್ ಲೋಡ್ ಕೊಟ್ಟಿಗೆ ಗೊಬ್ಬರಕ್ಕೆ 4kg ಟ್ರೈಕೋಡರ್ಮ, 4kg ಸೂಡೊಮೊನುಸ್ ಬೇಕಾಗುತ್ತದೆ.

⏺️ ಲಿಕ್ವಿಡ್ ಬಳಸುವ ವಿಧಾನ ⏺️
▫️200 ಲೀಟರ್ ನೀರಿನ ಡ್ರಂನಲ್ಲಿ 1.5 ಲೀ ಟ್ರೈಕೋಡರ್ಮ್, 1.5 ಲೀ ಸುಡೊಮೊನಸ್, 1.5ಲೀ ಬ್ಯಾಸಿಲಸ್ ಮತ್ತು 500g ಬೆಲ್ಲ ಮತ್ತು 1kg ದ್ವಿದಳ ಧಾನ್ಯದ ಹಿಟ್ಟು ಸೇರಿಸಿ ಎರೆಡು, ಮೂರು ದಿನದ ನಂತರ ಒಂದು ಗಿಡಕ್ಕೆ 2, 3 ಲೀಟರ್ ನಂತೆ ಹಾಕುವುದು.
ಪೌಡರ್ ಪ್ರತಿ ಕೆಜಿಗೆ 110₹
ಲಿಕ್ವಿಡ್ ಪ್ರತಿ ಲೀಟರ್ ಗೆ 250₹
ಶಿವರಾಜ :9380649978

Spread positive news

Leave a Reply

Your email address will not be published. Required fields are marked *