ಪ್ರೀಯ ಸಾರ್ವಜನಿಕರೇ ನಿಮಗೊಂದು ಸಂತಸದ ಸುದ್ದಿ. ಡಿ .ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ವತಿಯಿಂದ 2025-26 ನೇ ಸಾಲಿಗೆ ಆಹಾರ ವಾಹಿನಿ ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇವಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಾಗಿದ್ದು, ನಿಗಮದಿಂದ ವಾಹನ ಖರೀದಿಗೆ ರೂ. 3.00 ಲಕ್ಷಗಳ ಸಹಾಯಧನವನ್ನು ಪಡೆಯಲು ಸೇವಾಸಿಂಧು ತಂತ್ರಾಂಶದ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯು ವಿಶ್ವಕರ್ಮ, ಉಪ್ಪಾರ, ಅಂಬಿಗ, ಮಡಿವಾಳ, ಅಲೆಮಾರಿ/ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಮರಾಠ ಮತ್ತು ಇತರ ಉಪ ಸಮುದಾಯಗಳನ್ನು ಹೊರತುಪಡಿಸಿ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ನಲ್ಲಿ ಉಳಿದ ಸಮುದಾಯಗಳಿಗೆ ಅನ್ವಯವಾಗುತ್ತದೆ.
ಏನಿದು ಯೋಜನೆ?
EV ಗೂಡ್ಸ್ ವಾಹನಗಳು (Electric Goods Vehicles) ಪರಿಸರ ಸ್ನೇಹಿ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ ವಾಣಿಜ್ಯ ವಾಹನಗಳಾಗಿವೆ. ಇವು ಇಂಧನ ಉಳಿತಾಯ ಮತ್ತು ಶೂನ್ಯ-ಹೊರಸೂಸುವಿಕೆಗೆ (Zero-emission) ಹೆಸರುವಾಸಿಯಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರಮುಖ ಮಾದರಿಗಳೆಂದರೆ ಮಹೀಂದ್ರ ಇ-ಆಲ್ಫಾ ಕಾರ್ಗೋ, ಯೂಲರ್ ಟರ್ಬೊ (Euler Turbo EV 1000) ಮತ್ತು ಟಾಟಾ ಮೋಟರ್ಸ್ನ ಸಣ್ಣ ವಾಣಿಜ್ಯ ವಾಹನಗಳು, ಇವು ನಗರದ ಸರಕು ಸಾಗಣೆಗೆ (Last-mile delivery) ಅತ್ಯುತ್ತಮವಾಗಿವೆ.
ಆಸಕ್ತರು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ಮೂಲಕ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಮಾ. 06 ರೊಳಗಾಗಿ ಸಲ್ಲಿಸುವಂತೆ ಡಿ.ಬಿ.ಸಿ.ಡಿ.ಸಿ. ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ನಿಗಮದ ಜಾಲತಾಣ www.dbcdc.karnataka.gov.in ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಾಲರಾಜ್ ಅರಸ್ ರಸ್ತೆ, ಕೆ,ಇ.ಬಿ. ಸರ್ಕಲ್ ಹತ್ತಿರ, ಶಿವಮೊಗ್ಗ, ದೂ.ಸಂ: 08182-229634 ನ್ನು ಸಂಪರ್ಕಿಸುವುದು.
ಸರಕು ಸಾಗಾಣಿಕೆ ವಾಹನ ಯೋಜನೆ ಮುಖ್ಯಾಂಶಗಳು:
ಸಹಾಯಧನ: ಯೋಜನಾ ವೆಚ್ಚದ ಶೇ.75 ಅಥವಾ ಗರಿಷ್ಠ ₹4.00 ಲಕ್ಷ ಸಹಾಯಧನ.
ಅರ್ಹತೆ: ಪರಿಶಿಷ್ಟ ಜಾತಿ/ಪಂಗಡದ ನಿರುದ್ಯೋಗಿ ಯುವಕರು, ಬಡತನ ರೇಖೆಗಿಂತ ಕೆಳಗಿರುವವರು.
ವಾಹನಗಳು: ಟಾಟಾ ಏಸ್, ಟ್ರ್ಯಾಕ್ಟರ್, ಇತರ ಹಳದಿ ಬೋರ್ಡ್ ಸರಕು ವಾಹನಗಳು.
ಉದ್ದೇಶ: ಸ್ವಾವಲಂಬಿ ಬದುಕು ಮತ್ತು ಉದ್ಯೋಗ ಸೃಷ್ಟಿ.

