ಸಣ್ಣ ರೈತರಿಗೆ ಮಾಸಿಕ 3 ಸಾವಿರ ರೂ. ಪಿಂಚಣಿ – ಕಿಸಾನ್‌ ಮಾನ್‌ ಧನ್‌

ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸಲು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ (PM-KMY) ಅನ್ನು ಆರಂಭಿಸಿದೆ. ಈ ಯೋಜನೆಯಡಿ ಅರ್ಹ ರೈತರಿಗೆ 60 ವರ್ಷಗಳ ನಂತರ ಪ್ರತಿ ತಿಂಗಳು ₹3,000 ಪಿಂಚಣಿ ಪಡೆಯುವ ಅವಕಾಶವಿದ್ದು, ಈ ಕುರಿತು ಮಾಹಿತಿ ಇಲ್ಲಿದೆ.

ವೃದ್ಧಾಪ್ಯದಲ್ಲಿ ರೈತರಿಗೆ ಸಾಮಾಜಿಕ ಭದ್ರತೆ ಒದಗಿಸುವುದು, ಆದಾಯವಿಲ್ಲದ ಸಮಯದಲ್ಲಿ ಆರ್ಥಿಕ ನೆರವು ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
60 ವರ್ಷ ತುಂಬಿದ ನಂತರ ಪ್ರತಿ ತಿಂಗಳು ₹3,000 ಪಿಂಚಣಿ ನೀಡಲಾಗುತ್ತಿದ್ದು, ವರ್ಷಕ್ಕೆ ಒಟ್ಟು ₹36,000 ವರೆಗೆ ಆರ್ಥಿಕ ಸಹಾಯ ನೀಡಲಾಗುವುದು.

ಅರ್ಹತಾ ಮಾನದಂಡಗಳು
18 ರಿಂದ 40 ವರ್ಷದೊಳಗಿನ ಸಣ್ಣ ಮತ್ತು ಅತಿ ಸಣ್ಣ ರೈತರು
ಗರಿಷ್ಠ 2 ಹೆಕ್ಟೇರ್ ವರೆಗೆ ಕೃಷಿ ಭೂಮಿ ಹೊಂದಿರಬೇಕು

ಮಾಸಿಕ ಕೊಡುಗೆ
ರೈತರು ವಯಸ್ಸಿನ ಆಧಾರದ ಮೇಲೆ ಪ್ರತಿ ತಿಂಗಳು ₹55 ರಿಂದ ₹200 ವರೆಗೆ ಕೊಡುಗೆ ನೀಡಬೇಕು
ಸರ್ಕಾರವು ಸಮಾನ ಮೊತ್ತವನ್ನು ಪಿಂಚಣಿ ನಿಧಿಗೆ ಸೇರಿಸುತ್ತದೆ

ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್
ಬ್ಯಾಂಕ್ ಖಾತೆ
ಭೂ ದಾಖಲೆ ವಿವರಗಳು
ಈ ಯೋಜನೆ ಸ್ವಯಂಪ್ರೇರಿತ ಪಿಂಚಣಿ ಯೋಜನೆಯಾಗಿದ್ದು, ರೈತರು ತಮ್ಮ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಪಡೆಯಲು ಸಹಾಯಕವಾಗಿದೆ.

Spread positive news

Leave a Reply

Your email address will not be published. Required fields are marked *