ಮಣ್ಣು ಪರೀಕ್ಷೆ ಏಕೆ ಮಾಡಬೇಕು? ಯಾವ ರೀತಿ ಮಾಡಬೇಕು? ಮಣ್ಣಿನ ಗುಣಧರ್ಮಗಳು ಏನೇನು ಮಾಡಬೇಕು? ಮಾದರಿ ಪಡೆಯಲು, ಜಮೀನಿನಲ್ಲಿ ಜಿಗ್-ಜಾಗ್ ಮಾದರಿಯಲ್ಲಿ 5-10 ಸ್ಥಳಗಳನ್ನು ಆಯ್ಕೆ ಮಾಡಿ, ಪ್ರತಿ ಸ್ಥಳದಲ್ಲಿ 15-20 ಸೆಂ.ಮೀ ಆಳದ ‘ವಿ’ ಆಕಾರದ ಮಣ್ಣನ್ನು ಸಲಿಕೆ ಅಥವಾ ಕೊಳವೆಯಿಂದ ತೆಗೆದು, ಕಸ-ಕಡ್ಡಿ ತೆಗೆದು, 10-12 ಮಾದರಿಗಳನ್ನು ಮಿಶ್ರಣ ಮಾಡಿ, ಅದರಿಂದ ಸುಮಾರು ಅರ್ಧ ಕೆ.ಜಿ. ಮಾದರಿ ಸಂಗ್ರಹಿಸಿ, ಚೀಲದಲ್ಲಿಟ್ಟು, ವಿವರಗಳೊಂದಿಗೆ ಗುರುತಿಸಿ ಪರೀಕ್ಷೆಗೆ ಕಳುಹಿಸಬೇಕು, ಇದು ಬೆಳೆ ಬಿತ್ತನೆಗೂ ಮುನ್ನ ಉತ್ತಮ.
ಮಣ್ಣು ಪರೀಕ್ಷೆ ಎಂದರೇನು? ಇದನ್ನು ಮಾಡುವುದು ಹೇಗೆ? ಇದರಿಂದಾಗುವ ಉಪಯೋಗಗಳೇನು?
ಮನುಷ್ಯನ ಬದುಕು ನಿಂತಿರುವುದೇ ಮಣ್ಣಿನ ಮೇಲೆ, ಪ್ರತಿ ಮನುಕುಲದ ಆಹಾರದ ಅಗತ್ಯವನ್ನು ನೀಗಿಸುತ್ತಿರುವುದು ಮಣ್ಣು. ಮಣ್ಣು ಜೀವ ವೈವಿಧ್ಯದಲ್ಲಿ ವಹಿಸಿದ ಮಹತ್ತರ ಪಾತ್ರವನ್ನು ಗಮನಿಸಿ, ನಾವೆಲ್ಲರೂ ಸಹ ಮಣ್ಣಿನ ಸಂರಕ್ಷನೆಯತ್ತ ಹೆಜ್ಜೆ ಹಾಕಬೇಕು. ಸಸ್ಯಗಳ ಸರ್ವತೋಮುಖ ಬೆಳವಣಿಗೆಗಾಗಿ ಸಮತೋಲನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒದಗಿಸುವುದು ಅತಿ ಅವಶ್ಯಕವಾಗಿದೆ. ಮುಖ್ಯ ಸಸ್ಯ ಪೋಷಕಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವುದರ ಜೊತೆಗೆ ಲಘು ಪೋಷಕಾಂಶಗಳನ್ನು ಕೂಡ ಬೆಳೆಗಳಿಗೆ ಪೂರೈಸುವದು ಅತೀ ಮಹತ್ವದ್ದಾಗಿದೆ.
ಭೂಮಿಯ ಮೇಲೆ ನಿರಂತರವಾಗಿ ಹಲವಾರು ಬೆಳೆಗಳನ್ನು ಬೆಳೆಯುವುದರಿಂದ ಬೆಳೆಯ ಅವಧಿಯ ಕಾಲದಲ್ಲಿ ಕೈಗೊಂಡ ಕೃಷಿ ಚಟುವಟಿಕೆಗಳಿಂದ ಭೂಮಿಯ ಮೇಲ್ಪದರು ಗಟ್ಟಿಯಾಗಿ ಭೂಮಿಯ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಕ್ರಿಯೆಗಳಲ್ಲಿ ವ್ಯತ್ಯಾಸವಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಮಣ್ಣಿನ ಪರೀಕ್ಷೆ ಮಾಡಿಸದೆ, ರಾಸಾಯನಿಕ ಗೊಬ್ಬರಗಳನ್ನು ಹಾಕುವುದರಿಂದ ಅವಶ್ಯಕತೆಗಿಂತ ಹೆಚ್ಚಿಗೆ ಖರ್ಚು ಮಾಡುವುದರೊಂದಿಗೆ ಭೂಮಿಯ ಗುಣಮಟ್ಟವನ್ನು ಹಾಳು ಮಾಡಲಾಗುತ್ತಿದೆ. ರಾಸಾಯನಿಕ ಗೊಬ್ಬರಗಳ ಬೆಲೆ ಅಧಿಕವಾಗಿರುವ ಈ ದಿನಗಳಲ್ಲಿ ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಅವಶ್ಯವಿದ್ದಷ್ಟು ಗೊಬ್ಬರಗಳನ್ನು ಕೊಡುವುದು.
ಮಾದರಿ ಸಂಗ್ರಹಿಸುವ ವಿಧಾನ
1) ಸರಿಯಾದ ಸಮಯ ಬೆಳೆ ಬಿತ್ತನೆಗೆ ಮುಂಚೆ ಮತ್ತು ಮಾಗಿ ಉಳುಮೆ ಮಾಡುವ ಮೊದಲು.
2)ಜಮೀನಿನ ವಿಂಗಡಣೆ ಜಮೀನಿನ ಮಣ್ಣಿನ ಗುಣಲಕ್ಷಣಗಳ ಆಧಾರದ ಮೇಲೆ ಚಿಕ್ಕ ಭಾಗಗಳಾಗಿ ವಿಂಗಡಿಸಿ, ಪ್ರತಿ ಭಾಗದಿಂದ ಪ್ರತ್ಯೇಕ ಮಾದರಿ ತೆಗೆದುಕೊಳ್ಳಬೇಕು. ದೊಡ್ಡ ಜಮೀನಿನಾದರೆ, ಪ್ರತಿ 5 ಎಕರೆಗೆ ಒಂದು ಮಾದರಿ (ಅವಶ್ಯಕತೆಗನುಗುಣವಾಗಿ)
3)ಸ್ಥಳಗಳ ಆಯ್ಕೆಜಮೀನಿನ ಎಲ್ಲ ಭಾಗಗಳಿಂದಲೂ ಸಮನಾಗಿ ಮಾದರಿ ತೆಗೆದುಕೊಳ್ಳಲು ಜಾಗ್ (Z) ಮಾದರಿಯಲ್ಲಿ 5-10 ಸ್ಥಳಗಳನ್ನು ಆರಿಸಿ.
ಮಣ್ಣು ತೆಗೆಯುವ ವಿಧಾನ
ಆಯ್ಕೆ ಮಾಡಿದ ಸ್ಥಳಗಳಲ್ಲಿ ಸಲಿಕೆ ಅಥವಾ ವಿಶೇಷ ಕೊಳವೆಯ ಸಹಾಯದಿಂದ ‘ವಿ’ ಆಕಾರದಲ್ಲಿ ಮಣ್ಣನ್ನು 15-20 ಸೆ.ಮೀ. ಆಳದವರೆಗೆ ತೆಗೆಯಿರಿ. ಬೆಳೆಯ ಸಾಲುಗಳ ಮಧ್ಯದಿಂದಲೂ ತೆಗೆದುಕೊಳ್ಳಬಹುದು.
ಮಾದರಿ ಶುದ್ಧೀಕರಣ ತೆಗೆದ ಮಣ್ಣಿನಿಂದ ಕಸ-ಕಡ್ಡಿ, ಸಣ್ಣ ಕಲ್ಲುಗಳನ್ನು ತೆಗೆದುಹಾಕಿ.
ಮಿಶ್ರಣ ಬೇರೆ ಬೇರೆ ಸ್ಥಳಗಳಿಂದ ತೆಗೆದ 10-12 ಮಣ್ಣಿನ ಮಾದರಿಗಳನ್ನು ಒಂದು ಪ್ಲಾಸ್ಟಿಕ್ ಬಕೆಟ್‌ನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ, ಮಿಶ್ರಣವನ್ನು ವೃತ್ತಾಕಾರವಾಗಿ ಹರಡಿ, ನಾಲ್ಕು ಭಾಗ ಮಾಡಿ, ಎದುರು-ಬದುರಿನ ಎರಡು ಭಾಗಗಳನ್ನು ತೆಗೆದುಹಾಕಿ, ಉಳಿದ ಎರಡು ಭಾಗಗಳನ್ನು ಮತ್ತೆ ಮಿಶ್ರಣ ಮಾಡಿ, ಅರ್ಧ ಕೆ.ಜಿ.ಯಷ್ಟು ಮಾದರಿ ದೊರೆಯುವವರೆಗೆ ಪುನರಾವರ್ತಿಸಿ.
ಸಂಗ್ರಹಣೆ ಸಂಗ್ರಹಿಸಿದ ಅರ್ಧ ಕೆ.ಜಿ. ಮಣ್ಣನ್ನು ಶುದ್ಧವಾದ ಬಟ್ಟೆ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ.
ಗುರುತಿನ ಚೀಟಿ ಚೀಲದೊಳಗೆ ಒಂದು ಕಾಗದದಲ್ಲಿ ರೈತರ ಹೆಸರು, ವಿಳಾಸ, ಫೋನ್ ನಂಬರ್, ಸರ್ವೆ ನಂಬರ್, ಮಾದರಿ ತೆಗೆದ ಆಳ, ಬೆಳೆಯುತ್ತಿರುವ ಬೆಳೆ, ಇತ್ಯಾದಿ ವಿವರಗಳನ್ನು ಬರೆದು ಹಾಕಿ. ಕಳುಹಿಸುವುದು ಮಾದರಿಯನ್ನು ಮಣ್ಣು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿ.

