Aadhaar : ಆಧಾರ್‌ ಕಾರ್ಡ್‌ ಆನ್‌ಲೈನ್‌ನಲ್ಲಿ ಅಪ್ಡೇಟ್ ಮಾಡುವುದು ಹೇಗೆ?

ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಯು ಭಾರತದ ನಾಗರಿಕರಿಗೆ 12 ಅಂಕಿಗಳ ವಿಶಿಷ್ಟ ಗುರುತಿನ ಚೀಟಿಯನ್ನು ನೀಡುತ್ತದೆ. ಇದನ್ನು ಆಧಾರ್‌ ಕಾರ್ಡ್‌ ಎಂದು ಕರೆಯಲಾಗುತ್ತದೆ ಎಂದು ಎಲ್ಲರಿಗೂ ಗೊತ್ತು. ಚಾಲನಾ ಪರವಾನಿಗೆ, ಪಾಸ್‌ಪೋರ್ಟ್‌, ಮತದಾರರ7l ಗುರುತಿನ ಚೀಟಿ ಮತ್ತು ಕೇಂದ್ರ ಸರಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಇದು ಅತ್ಯಂತ ಅಗತ್ಯವಿರುವ ದಾಖಲೆಯಾಗಿದೆ.
ಕೆಲವೊಂದು ಸಂದರ್ಭದಲ್ಲಿ ಆಧಾರ್‌ ಕಾರ್ಡ್‌ನಲ್ಲಿರುವ ತಪ್ಪು ಮಾಹಿತಿಗಳಿಂದಾಗಿ ಬಹುತೇಕರಿಗೆ ಕೇಂದ್ರ ಅಥವಾ ರಾಜ್ಯ ಸರಕಾರದ ಕೆಲವೊಂದು ಯೋಜನೆಗಳನ್ನು ಮತ್ತು ಸೇವೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಒಂದೊಂದು ದಾಖಲೆಗಳಲ್ಲಿ ಒಂದೊಂದು ರೀತಿಯ ಹೆಸರು ಇರುವುದು, ಇನಿಶಿಯಲ್‌ ಇಲ್ಲದೆ ಇರುವುದು ಇತ್ಯಾದಿ ಕಾರಣಗಳಿಂದ ಇಂತಹ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಇರಬಹುದು. ಆಧಾರ್‌ ಕಾರ್ಡ್‌ನಲ್ಲಿರುವ ದೋಷಗಳನ್ನು ನಾವೇ ಆನ್‌ಲೈನ್‌ನಲ್ಲಿ ಸರಿಪಡಿಸಿಕೊಳ್ಳಬಹುದು. ಈ ಮೂಲಕ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಗಳು ಎದುರಾಗದಂತೆ ನೋಡಿಕೊಳ್ಳಬಹುದು.
ಭಾರತೀಯ ನಾಗರಿಕರು ತಾವಿರುವ ಸ್ಥಳ ಮತ್ತು ತಮ್ಮ ಹೆಸರು, ವಿಳಾಸ ಇತ್ಯಾದಿಗಳ ಕುರಿತು ಸ್ಪಷ್ಟವಾಗಿ ಮಾಹಿತಿಯನ್ನು ಆಧಾರ್‌ ಕಾರ್ಡ್‌ನಲ್ಲಿ ಹೊಂದಿರಬೇಕು. ಆಧಾರ್‌ ಕಾರ್ಡ್‌ ಮಾಡುವ ಸಮಯದಲ್ಲಿ ಆಗಿರುವ ದೋಷಗಳಿಂದ ಇಂತಹ ತಪ್ಪುಗಳು ಕಂಡುಬಂದರೆ ಅದನ್ನು ಸರಿಪಡಿಸಿಕೊಳ್ಳಬೇಕು. ಹತ್ತು ವರ್ಷದ ಹಿಂದೆ ಆಧಾರ್‌ ಕಾರ್ಡ್‌ ಮಾಡಿರುವವರು ತಪ್ಪದೇ ತಮ್ಮ ದಾಖಲೆಗಳನ್ನು ಅಪ್‌ಡೇಟ್‌ ಮಾಡಿ ಎಂದು ಯುಐಡಿಎಐ ತಿಳಿಸಿತ್ತು. ಆನ್‌ಲೈನ್‌ನಲ್ಲಿ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡುವುದು ಹೇಗೆಂದು ಇಲ್ಲಿ ತಿಳಿಸಲಾಗಿದೆ.

ಆನ್‌ಲೈನ್‌ನಲ್ಲಿ ಆಧಾರ್‌ ಅಪ್‌ಡೇಟ್‌ ಹೇಗೆ?

ಭಾರತೀಯ ನಾಗರಿಕರು ತಮ್ಮ ವಾಸದ ದಾಖಲೆಗಳನ್ನು ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಅಪ್ಲೋಡ್‌ ಮಾಡುವ ಮೂಲಕ ಹಾಗೂ ಕೊಂಚ ಶುಲ್ಕ ಪಾವತಿಸಿ ಈ ರೀತಿ ಅಪ್‌ಡೇಟ್‌ ಮಾಡುವ ಅವಕಾಶವನ್ನು myaadhaar.uidai.gov.in ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಆದರೆ, ಯುಐಡಿಎಐಯು ಸದ್ಯ ಆಧಾರ್‌ ವಿವರವನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್‌ಡೇಟ್‌ ಮಾಡಲು ಅವಕಾಶ ನೀಡಿದೆ. ಈ ರೀತಿ ಉಚಿತವಾಗಿ ಅಪ್‌ಡೇಟ್‌ ಮಾಡಲು ಇಂದು ಕೊನೆಯ ದಿನವಾಗಿದೆ. ಯಾರು ಅಪ್‌ಡೇಟ್‌ ಮಾಡಿಲ್ಲವೋ ಇಂದು ಸಂಜೆಯೊಳಗೆ ಅಪ್‌ಡೇಟ್‌ ಮಾಡಿ. ನಿಮ್ಮ ಮನೆಯ ಸಮೀಪವಿರುವ ಆಧಾರ್‌ ಸೇವಾ ಕೇಂದ್ರದಲ್ಲಿಯೂ ಅಪ್‌ಡೇಟ್‌ ಮಾಡಬಹುದು, ಆದರೆ, ಅಲ್ಲಿ ಶುಲ್ಕ ಪಾವತಿಸಬೇಕು.
  • ಮೊದಲಿಗೆ https://uidai.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಅಲ್ಲಿ ಮೈ ಆಧಾರ್‌ (My Aadhaar) ಟ್ಯಾಬ್‌ ಕ್ಲಿಕ್‌ ಮಾಡಿ.
  • ಅಲ್ಲಿರುವ ಅಪ್‌ಡೇಟ್‌ ಯುವರ್‌ ಆಧಾರ್‌ ಅನ್ನು ಕ್ಲಿಕ್‌ ಮಾಡಿ.
  • Update Demographics Data Online ಕ್ಲಿಕ್‌ ಮಾಡಿ.
  • ಹೊಸ ಪುಟ ತೆರೆದುಕೊಳ್ಳುತ್ತದೆ. ಬಳಿಕ Proceed to Aadhaar Update ಅನ್ನು ಕ್ಲಿಕ್‌ ಮಾಡಿ.
  • ನೀವು ನಿಮ್ಮ ಆಧಾರ್‌ ಸಂಖ್ಯೆ ನಮೂದಿಸಬೇಕು ಮತ್ತು ಕ್ಯಾಪ್ಚಾ ವೇರಿಫಿಕೇಷನ್‌ ಮಾಡಬೇಕು.
  • ಸಂಬಂಧಪಟ್ಟ ವಿವರ ನೀಡಿ, ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರುತ್ತದೆ. ಒಟಿಪಿ ನೀಡಿ ಲಾಗಿನ್‌ ಕ್ಲಿಕ್‌ ಮಾಡಿ
  • ನೀವು ಆಧಾರ್‌ ಕಾರ್ಡ್‌ನಲ್ಲಿ ಯಾವುದೆಲ್ಲ ಬದಲಾಯಿಸಲು ಬಯಸುವಿರೋ ಅದನ್ನು ಬದಲಾಯಿಸಿ. ರೇಷನ್‌ ಕಾರ್ಡ್‌, ವೋಟರ್‌ ಐಡಿ, ಡ್ರೈವಿಂಗ್‌ ಲೈಸನ್ಸ್‌ ಇತ್ಯಾದಿ ಸಂಬಂಧಪಟ್ಟ ದಾಖಲೆಗಳನ್ನು ಅಪ್ಲೋಡ್‌ ಮಾಡಿ.
  • ಬಳಿಕ ಶುಲ್ಕ ಪಾವತಿಗೆ ತಿಳಿಸಲಾಗುತ್ತದೆ. ಜೂನ್‌ 14ರವರೆಗೆ ಯಾವುದೇ ಶುಲ್ಕ ಪಾವತಿಯ ಅವಶ್ಯಕತೆಯಿಲ್ಲ. ಬಳಿಕ ಶುಲ್ಕ ಪಾವತಿಸಬೇಕು.
  • ಬದಲಾವಣೆಗಳು ಅಪ್‌ಡೇಟ್‌ ಆಗುತ್ತವೆ. ಈ ಬದಲಾವಣೆ ಅಪ್‌ಡೇಟ್‌ ಆಗಲು ಕೊಂಚ ಸಮಯ ತೆಗೆದುಕೊಳ್ಳಬಹುದು.

ಕೇಂದ್ರ ಬಜೆಟ್ ಅಲ್ಲಿ ಕೃಷಿ ಕ್ಷೇತ್ರಕ್ಕೆ ಹೊಸ ಕ್ರಾಂತಿ.

ಯುವ ರೈತನ ಹೊಸ ಕೃಷಿ ಪದ್ಧತಿಯ ಕಥೆ.

ಕೇಂದ್ರ ಬಜೆಟ್ ಮಂಡನೆ 2026 : ಪ್ರಮುಖ ಅಂಶಗಳು

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ!

Spread positive news

Leave a Reply

Your email address will not be published. Required fields are marked *