ರೇಷನ್ ಅಕ್ಕಿ : ಸಾರ್ವಜನಿಕರೇ ನಿಮಗೊಂದು ಸಂತಸದ ಸುದ್ದಿ ಕೊಡುತ್ತೇನೆ. ಈಗಾಗಲೇ ಸರ್ಕಾರವು ಬಹಳ ಒಳ್ಳೆ ಕಾರ್ಯಕ್ರಮ ಹಮ್ಮಿಕೊಂಡು ರೈತರ ಸೇವೆಯಲ್ಲಿ ನಿರತವಾಗಿದೆ. ಮತ್ತೊಂದು ಸಾರ್ವಜನಿಕರ ಪರವಾಗಿ ಮಾಡಿದ ಈ ಕಾರ್ಯಕ್ರಮ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ (Senior Citizens) ಸರ್ಕಾರ (Government) ಗುಡ್ ನ್ಯೂಸ್ ಒಂದನ್ನು ಕೊಟ್ಟಿದೆ. ʼಅನ್ನ ಸುವಿಧಾʼ ಯೋಜನೆಯಡಿ (Anna Suvidha Scheme) ಮನೆಗಳಿಗೆ ಉಚಿತವಾಗಿ ಪಡಿತರ (Ration) ಆಹಾರ ಪದಾರ್ಥಗಳನ್ನು ಪೂರೈಸಲು ಸಿದ್ಧತೆ ನಡೆಸಿದೆ.
ಹೌದು.. ಒಂಟಿಯಾಗಿರೋ ಹಿರಿಯ ನಾಗರಿಕರ ಸಮಸ್ಯೆ ಅರಿತ ಸರ್ಕಾರ, ಪಡಿತರ ಆಹಾರ ವಿತರಣೆಗೆ ಅನ್ನ ಸುವಿಧಾ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಒಂಟಿಯಾಗಿರುವ 75 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರ ಮನೆ ಬಾಗಿಲಿಗೆ ಉಚಿತವಾಗಿ ಪಡಿತರ ಆಹಾರ ಪದಾರ್ಥ ಪೂರೈಕೆ ಆಗಲಿದೆ.
ಏನಿದು ಅನ್ನಸುವಿಧಾ ಯೋಜನೆ?
ಅನ್ನ ಸುವಿಧಾ ಯೋಜನೆ ಕರ್ನಾಟಕ ಸರ್ಕಾರದ ಒಂದು ಉಪಕ್ರಮವಾಗಿದ್ದು, 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ದೈಹಿಕವಾಗಿ ಅಶಕ್ತರು ಮನೆಯಿಂದ ಹೊರ ಹೋಗಲು ಕಷ್ಟಪಡುವವರಿಗೆ ಅನ್ನಭಾಗ್ಯ ಯೋಜನೆಯ ಪಡಿತರವನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಮನೆ ಬಾಗಿಲಿಗೆ ತಲುಪಿಸುತ್ತದೆ. ಈ ಯೋಜನೆಯಡಿ, ನ್ಯಾಯಬೆಲೆ ಅಂಗಡಿಯವರು ಮನೆಗೆ ಪಡಿತರ ತಲುಪಿಸಿದರೆ, ಸರ್ಕಾರ ಅವರಿಗೆ ಪ್ರತಿ ಕುಟುಂಬಕ್ಕೆ ₹50 ಪ್ರೋತ್ಸಾಹಧನ ನೀಡುತ್ತದೆ, ಇದರಿಂದ ವೃದ್ಧರಿಗೆ ಅನುಕೂಲವಾಗುತ್ತದೆ.
ಯೋಜನೆಯ ಮುಖ್ಯ ಅಂಶಗಳು:
ಉದ್ದೇಶ: ವಯಸ್ಸಾದವರು ಮತ್ತು ಅಶಕ್ತರು ಪಡಿತರಕ್ಕಾಗಿ ಅಂಗಡಿಗಳಿಗೆ ಹೋಗುವುದನ್ನು ತಪ್ಪಿಸುವುದು.
ಅರ್ಹತೆ: 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮಾತ್ರ ವಾಸಿಸುವ ಕುಟುಂಬಗಳು (ಅನ್ನಭಾಗ್ಯ ಯೋಜನೆಯಡಿ).
ಸೌಲಭ್ಯ: ಆದ್ಯತಾ ಕುಟುಂಬಕ್ಕೆ ಪ್ರತಿ ವ್ಯಕ್ತಿಗೆ 5 ಕೆಜಿ, ಅಂತ್ಯೋದಯ ಅನ್ನ ಯೋಜನೆ ಕುಟುಂಬಕ್ಕೆ 35 ಕೆಜಿ ಪಡಿತರ ಮನೆ ಬಾಗಿಲಿಗೆ ತಲುಪುತ್ತದೆ.
ಅನುಷ್ಠಾನ: ಹೋಮ್ ಡೆಲಿವರಿಗಾಗಿ ಮೊಬೈಲ್ ಅಪ್ಲಿಕೇಶನ್ ಬಳಸಲಾಗುತ್ತದೆ.
ನೋಂದಣಿ: ಈ ಸೌಲಭ್ಯ ಪಡೆಯಲು ನೋಂದಣಿ ಕಡ್ಡಾಯವಾಗಿದೆ.
ಸಹಾಯವಾಣಿ: ದೂರುಗಳಿಗಾಗಿ ಟೋಲ್-ಫ್ರೀ ಸಂಖ್ಯೆ 1967.
ಇನ್ನು ಯೋಜನೆಯಡಿ ಸವಲತ್ತು ಪಡೆಯಲು ಮಂಡ್ಯ ಜಿಲ್ಲೆಯಲ್ಲಿ ಅರ್ಹರಿರುವ 14,788 ಫಲಾನುಭವಿಗಳನ್ನು ಈವರೆಗೆ ಗುರುತಿಸಲಾಗಿದೆ. ಅನ್ನಸುವಿಧಾ ಅನುಷ್ಠಾನಕ್ಕಾಗಿ ಆಹಾರ ತಂತ್ರಾಂಶದಲ್ಲಿ ಅನ್ನ ಸುವಿಧಾ ಮಾಡ್ಯೂಲ್ನ್ನು ರಾಷ್ಟ್ರೀಯ ಮಾಹಿತಿ ಕೇಂದ್ರವು (ಎನ್ಐಸಿ) ಅಭಿವೃದ್ಧಿ ಪಡಿಸಿದೆ. ಯೂಸರ್ ಅಕ್ಸೆಪ್ಟೆನ್ಸ್ ಟೆಸ್ಟಿಂಗ್ (ಯುಎಟಿ) ಪೂರ್ಣಗೊಳಿಸಿದೆ. ಅನ್ನ ಸುವಿಧಾ ಮಾಡ್ಯೂಲ್ ಬಗ್ಗೆ ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲೂ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.
ರಾಜ್ಯ ಸರ್ಕಾರವು 2025–26ನೇ ಸಾಲಿನ ಬಜೆಟ್ನಲ್ಲಿ 75 ವರ್ಷ ದಾಟಿದ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವ ಪಡಿತರ ಚೀಟಿದಾರರ ಮನೆ ಬಾಗಲಿಗೆ ಆಹಾರ ಧಾನ್ಯ ವಿತರಿಸುವ ‘ಅನ್ನ ಸುವಿಧಾ’ ಯೋಜನೆಯನ್ನು ಘೋಷಣೆ ಮಾಡಿತ್ತು. ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿ ಈಗ ಅದನ್ನು ಅನುಷ್ಠಾನಕ್ಕೆ ತರುತ್ತಿದೆ.
ಅಂತ್ಯೋದಯ ಅನ್ನ ಯೋಜನೆ (ಎಎವೈ) ಅಡಿ 270 ಹಾಗೂ ಆದ್ಯತಾ ಕುಟುಂಬಗಳ ಪಡಿತರ ಚೀಟಿ (ಪಿಎಚ್ಎಚ್) ಅಡಿ 1,815 ಸೇರಿ ಒಟ್ಟು 2,085 ಪಡಿತರ ಚೀಟಿಗಳು ‘ಅನ್ನ ಸುವಿಧಾ’ ಯೋಜನೆಯಡಿ ಆಹಾರ ಧಾನ್ಯ ಪಡೆಯಲು ಅರ್ಹರಿರುತ್ತಾರೆ.

