2025-26 ನೇ ಸಾಲಿನ ಬೆಳೆವಿಮೆ ಅರ್ಜಿ ಆರಂಭ, ಹೊಸ ನಿಯಮಗಳು ಇಲ್ಲಿವೆ

2025-26 ನೇ ಸಾಳಿನ ಮುಂಗಾರು ಬೆಳೆ ವಿಮೆ ಆರಂಭ. ರೈತರೇ ಕೂಡಲೇ ಬೆಳೆವಿಮೆ ಅರ್ಜಿ ಸಲ್ಲಿಸಿ ಬೆಳೆವಿಮೆ ಪಡೆಯಿರಿ. ಸೂಚನೆಗಳುಪ್ರತಿ ವರ್ಷದಂತೆ ಈ ವರ್ಷವು ಮುಂಗಾರು ಬೆಳೆ ವಿಮೆ ಆರಂಭವಾಗಲಿದ್ದು ಸುರಕ್ಷತೆ ಮತ್ತು ರೈತರಿಗೆ ಯಾವುದೆ ಅನ್ಯಾಯವಾಗದಿರಲು ವಿಮಾ ಹಣ ನೇರವಾಗಿ ನಿಮ್ಮ ಖಾತೆಗೆ ಜಮೆ ಆಗಲು ಸರಕಾರ ಕೆಲವು ಮಹತ್ವ ಬದಲಾವಣೆ ತಂದಿರುತ್ತದೆ.

ಕಳೆದ ವರ್ಷ ಮಳೆಯ ಚೆಲ್ಲಾಟದಿಂದಾಗಿ ರಾಜ್ಯಾದ್ಯಂತ ಭೀಕರ ಬರದ ಛಾಯೆ ಆವರಿಸಿತ್ತು. ರಾಜ್ಯದ ಬಹುತೇಕ ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರಿದ್ದವು. ಈ ವರ್ಷ ಮುಂಗಾರು ಮಳೆ ಸಮೃದ್ಧವಾಗಿದೆ ಎಂಬ ಮಾಹಿತಿ ಇದೆಯಾದರೂ ಪ್ರಕೃತಿ ವಿಕೋಪಗಳನ್ನು ನಿಖರವಾಗಿ ಅಂದಾಜಿಸುವುದು ಕಷ್ಟಕರ. ಹೀಗಾಗಿ ರೈತರು ಕನಿಷ್ಟ ಮೊತ್ತ ಪಾವತಿಸಿ ಬೆಳೆವಿಮೆ ನೋಂದಣಿ ಮಾಡಿದರೆ ಮುಂಗಾರು ಬೆಳೆನಷ್ಟ ಪರಿಹಾರ ಪಡೆಯಲು ಅನುಕೂಲವಾಗಲಿದೆ.

ತುಮಕೂರು ತಾಲೂಕಿನಲ್ಲಿ 2025ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಗೊಳಿಸಲಾಗಿದೆ. ತಾಲೂಕಿನ ರೈತರು ಬೆಳೆ ವಿಮೆ ಮಾಡಿಸಿ ಅದರ ಸದುಪಯೋಗ ಮಾಡಿ ಕೊಳ್ಳುವಂತೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ದಿವಾಕರ್ ತಿಳಿಸಿದ್ದಾರೆ.

ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ ಇವುಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮೆ ನಷ್ಟ ಪರಿಹಾರ ನೀಡಲಾಗುವುದು. ತುಮ ಕೂರು ತಾಲೂಕಿನಲ್ಲಿ ಓರಿಯಂಟಲ್ ಜನರಲ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ಸಂಸ್ಥೆಯನ್ನು ಈ ಯೋಜನೆ ಅನುಷ್ಠಾನಕ್ಕಾಗಿ ನಿಗದಿ ಪಡಿಸಲಾಗಿದೆ. ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕೆಳಕಂಡ ಕೋಷ್ಟಕದಂತೆ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ನಿಗದಿಪಡಿಸಲಾಗಿರುವ ವಿಮಾ ಕಂತಿನ ವಿವರಗಳನ್ನಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹತ್ತಿರದ ಬ್ಯಾಂಕ್‌ ಗಳಲ್ಲಿ ನಿಗದಿತ ದಿನಾಂಕದೊಳಗೆ ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರತಿನಿಧಿಯಾದ ನರೇಶ್ ಕುಮಾರ್ ಟಿ.ಎನ್. (ದೂರವಾಣಿ ಸಂಖ್ಯೆ: 6361359656) ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ (ಕೃಷಿ ಇಲಾಖೆ) ಕಚೇರಿಯನ್ನು, ಕಂದಾಯ ಇಲಾಖೆ, ಸಹಕಾರ ಇಲಾಖೆ ಮತ್ತು ಬೆಳೆ ಸಾಲ ನೀಡುವ ವಾಣಿಜ್ಯ ಬ್ಯಾಂಕುಗಳ ಸಿಬ್ಬಂದಿ ಹಾಗೂ ಎಸ್ ಕೆಡಿಆರ್‌ಡಿಪಿ ಸಂಸ್ಥೆಯ ಬಸವ ಪ್ರಸಾದ್‌ ರವರನ್ನು (ದೂರವಾಣಿ ಸಂಖ್ಯೆ: 7795497247) ಅಥವಾ ::SAMRAKSHANE-KARNATAKA :: Crop Insurance Application – NIC-Bangalore https://share.google/7YR78c5j5XivPVOqM ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.

ಮುಂಗಾರು ಹಂಗಾಮು ಕೃಷಿ ಚಟುವಟಿಕೆ ಗರಿಗೆದರುತ್ತಿದೆ. ಮುಂಗಾರು ಕೃಷಿಗೆ ರೈತರು ಬೆಳೆ ವಿಮೆ ಭದ್ರತೆ ಮಾಡಿಸಿಕೊಳ್ಳಲು ಸರಕಾರ ಕರೆ ನೀಡಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಬೆಳೆ ವಿಮೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಬೇರೆ ಬೇರೆ ಬೆಳೆಗಳಿಗೆ ಬೇರೆ ಬೇರೆ ದಿನಾಂಕ ನೋಂದಣಿಗೆ ಕೊನೆಯ ದಿನವಾಗಿದೆ.

ಮುಂಗಾರು ಕೃಷಿ ಖುಷಿಯಲ್ಲಿರುವ ರೈತರು ಮುಂಗಾರು ಹಂಗಾಮಿನ ವಿಮೆಗೆ ನೋಂದಣಿ ಮಾಡಿಸಿಕೊಂಡು ಬೆಳೆಗಳಿಗೆ ಭದ್ರತೆ ನೀಡಬೇಕು. ಅತಿವೃಷ್ಟಿ, ಅನಾವೃಷ್ಟಿ ಮೊದಲಾದ ಕಾರಣದಿಂದ ಬೆಳೆ ಕೈಕೊಟ್ಟರೆ, ಕೈಗೆ ಬಂದ ಫಸಲು ನಷ್ಟ ಅನುಭವಿಸಿದರೆ ವಿಮೆ ಶ್ರೀರಕ್ಷೆಯಾಗಲಿದೆ.

ವಿಮಾ ಕಂತು: ಭತ್ತಕ್ಕೆ ಎಕರೆಗೆ 754.77 ರೂ.. ಮಳೆಯಾಶ್ರಿತ ಶೇಂಗಾಕ್ಕೆ ಎಕರೆಗೆ 441.12 ರೂ., ನೀರಾವರಿ ಮುಸುಕಿನ ಜೋಳಕ್ಕೆ 522.06 ರೂ., ಅಲಸಂದೆಗೆ ಎಕರೆಗೆ 3067.09 ರೂ.. ಹೆಸರಿಗೆ 209.13 ರೂ., ನೀರಾವರಿ ಶೇಂಗಾಕ್ಕೆ 532.18 ರೂ., ಹುರುಳಿಗೆ 165.93 ರೂ.

Spread positive news

Leave a Reply

Your email address will not be published. Required fields are marked *