ಕಡಲೆಯು ಉತ್ತರ ಕರ್ನಾಟಕದ ಮುಖ್ಯವಾದ ಹಿಂಗಾರು ದ್ವಿದಳ ಧಾನ್ಯದ ಬೆಳೆಯಾಗಿದೆ. ಇದನ್ನು ಹೆಚ್ಚಾಗಿ ಆಳವಾದ ಕಪ್ಪು ಮಣ್ಣಿನಲ್ಲಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಈ ಬೆಳೆಯನ್ನು (ನೀರಾವರಿ ಮತ್ತು ಖುಷಿ) 13.75 ಲಕ್ಷ ಹೆ. ಕ್ಷೇತ್ರದಲ್ಲಿ ಬೆಳೆಯುತ್ತಿದ್ದು, ಅಂದಾಜು 8.25 ಲಕ್ಷ ಟನ್ ಉತ್ಪಾದನೆಯಾಗುತ್ತಿದ್ದು, ಸರಾಸರಿ ಉತ್ಪಾದನೆ ಪ್ರತಿ ಎಕರೆಗೆ 2.40 ಕ್ವಿಂಟಾಲ್ ಇರುವುದು.
ಬೀಜೋಪಚಾರ : ಬಿತ್ತನೆಗೆ ಮೊದಲು ಬರ ನಿರೋಧಕತೆ ಹೆಚ್ಚಿಸಲು ಬೀಜವನ್ನು ಶೇ. 2 ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ 30 ನಿಮಿಷ ಅಥವಾ ಶೇ. 25 ರ ಗೋಮೂತ್ರದಲ್ಲಿ 8 ಗಂಟೆಗಳ ಕಾಲ ನೆನೆಸಿ, ಕನಿಷ್ಟ -7 ಗಂಟೆ ನೆರಳಿನಲ್ಲಿ ಒಣಗಿಸಬೇಕು. ಈ ರೀತಿ ಕಠಿಣಗೊಳಿಸಿದ ಬೀಜವನ್ನು “ಪಾಲಿಮರ್ (6. ಮಿ.ಲೀ. ಪ್ರತಿ ಕಿ. ಗ್ರಾಂ ಬೀಜಕ್ಕೆ) ಮೂಲಕ ಲಘು ಪೋಷಕಾಂಶಗಳಾದ ಸತುವಿನ ಸಲ್ವೇಟ್, ಕಬ್ಬಿಣದ ಸಲ್ವೇಟ್, ಬೋರಾಕ್ಸ್ ಮತ್ತು ಅಮೋನಿಯಂ ಮಾಲಿಬೈಟ್ಗಳನ್ನು ಪ್ರತಿ ಒಂದು ಕಿ. ಗ್ರಾಂ ಬೀಜಕ್ಕೆ 2.0 ಗ್ರಾಂ. ನಂತೆ ಲೇಪನ ಮಾಡಿದ ನಂತರ ರೈಜೋಬಿಯಂ ಹಾಗೂ ರಂಜಕ ಕರಗಿಸುವ ಅಣುಜೀವಿಯಿಂದ ಉಪಚರಿಸಬೇಕು.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರ ಬೆಳೆದ ಕಡಲೆ ಬೆಳೆಗೆ ಸಿಡಿ ರೋಗ ಹೆಚ್ಚ ನೂ, ಹೆಚ್ಚು ಕಂಡುಬಂದಿದ್ದು ರೈತರು ಆತಂಕದಲ್ಲಿ ಇದ್ದಾರೆ ಹೌದು ಕಳೆದ ವರ್ಷ ಅನಾವೃಷ್ಟಿ ಯಿಂದ ಬೆಳೆ ಬಾರದೆ ಕಂಗಟ್ಟಿರುವ ರೈತರು ಈ ವರ್ಷ ಅತಿ ಹೆಚ್ಚು ಕಡಲೆ ಬೆಳೆ ಬೆಳೆದಿದ್ದು ಬೆಳೆಗೆ ಸಿಡಿರೋಗ ಕಂಡುಬಂದಿದ್ದು ಔಷಧಿ ಸಿಂಪರಣೆ ಮಾಡಿದರು ಹತೋಟಿಗೆ ಬಾರದೆ ದಿನ ದಿನ ಕಾಯಿ ಕಚ್ಚುವ ಗಿಡ ಸಮೇತ ಒಣಗುತ್ತಿದೆ.
ಇದರಿಂದ ಆತಂಕಗೊಂಡ ರೈತರು ಬೆಳೆ ಉಳಿಸಿಕೊಳ್ಳಲು ಧಾರವಾಡ ಕೃಷಿ ಇಲಾಖೆಯ ವಿಜ್ಞಾನಿಗಳು ಹಾಗೂ ಕೃಷಿ ನಿರ್ದೇಶಕರು ಕುಂದಗೋಳ ತಾಲೂಕ ಕೃಷಿ ನಿರ್ದೇಶಕರು ಸೇರಿದಂತೆ ಹಲವಾರು ಅಧಿಕಾರಿಗಳು ಈಗಾಗಲೇ ಬೆಳೆಯನ್ನು ವೀಕ್ಷಿಸಿದ್ದರು ಆದರೆ ಅವರು ಇದಕ್ಕೆ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು ಇದೀಗ ಮತ್ತೆ ಹೆಚ್ಚು ಸಿಡಿರೋಗ ಕಾಣುತ್ತಿದೆ ಸರಕಾರವು ಕಣ್ಣ ಮುಚ್ಚಿ ಕುಳಿತಿದೆ ಹಿಂಗಾರು ಮುಂಗಾರಿನ ಬೆಳೆ ವಿಮೆ ಬಿಡುಗಡೆ ಮಾಡಬೇಕು ಅತಿವೃಷ್ಟಿಯಿಂದ ಮುಂಗಾರು ಬೆಳೆ ಹಾಳಾಗಿದ್ದು,
ಸೋರಗು ರೋಗದ ಲಕ್ಷಣಗಳು –
ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರಗುತ್ತವೆ. ಗಿಡಗಳು ಹೆಚ್ಚಾಗಿ ಹೂವಿನ ಹಂತದಿಂದ ಕಾಳು ಕಟ್ಟುವವರೆಗೆ ಸಾಯುತ್ತಿರುತ್ತವೆ.
ರೋಗನಾಶಕಗಳು –
ಕಾರ್ಬೆಂಡಜಿಂ 50 ಡಬ್ಲ್ಯೂ.ಪಿ – 2gm
ಟ್ರೈಕೋಡರ್ಮ ವಿರಿಡೆ – 5gm
ತೆಂಗು ಕೃಷಿಯಲ್ಲಿ ಎಚ್ಚರಿಕೆ ಅಗತ್ಯ!
ಬೆಳೆಗಾರರು ಗಿಡಗಳನ್ನು ನೆಡುವಲ್ಲಿಂದ ಆರಂಭವಾಗಿ ಮರವಾದ ಮೇಲೂ ಅದರತ್ತ ಹೆಚ್ಚಿನ ಆಸಕ್ತಿ ವಹಿಸಿ ಜೋಪಾನವಾಗಿ ನೋಡಿಕೊಳ್ಳಬೇಕಾಗುತ್ತದೆ. ಬರಗಾಲದಲ್ಲೂ ಗಿಡಗಳು ಸದೃಢವಾಗಿರಲು ತೆಂಗಿನ ಸಸಿಗಳನ್ನು ಎರಡು ಅಡಿಗಿಂತಲೂ ಹೆಚ್ಚು ಆಳದ ಗುಂಡಿಗಳಲ್ಲಿ ನೆಡಬೇಕು. ಇದರಿಂದ ಬೇರುಗಳ ಸಂಖ್ಯೆ ಹೆಚ್ಚಾಗುವುದಲ್ಲದೆ. ಮಣ್ಣಿನಲ್ಲಿ ಆಳಕ್ಕೆ ಇಳಿಯುತ್ತದೆ. ಇದಕ್ಕೆ ತದ್ವಿರುದ್ಧವಾಗಿ ತೇಲಿಸಿ ನೆಟ್ಟು ಸಸಿಗಳಲ್ಲಿ ಬೇರುಗಳು ಸರಿಯಾಗಿ ವೃದ್ಧಿಸದೇ, ಭೂಮಿಯ ಮೇಲ್ಮಟ್ಟದಲ್ಲಿ ಕಾಣಿಸಿಕೊಂಡು ಬಿಸಿಲಿನ ಹೊಡೆತಕ್ಕೆ ಸಿಕ್ಕಿ ಸಾಯುವ ಸಾಧ್ಯತೆ ಇರುತ್ತದೆ.
ಕೆಂಪು ಕಪ್ಪು ಮಿಶ್ರಿತ ರಸ ಸೋರುತ್ತಿದೆಯಾ?
ಗಿಡಗಳಿಗೆ ಗೊಬ್ಬರ ನೀಡುವುದರ ಜತೆಗೆ ಗಿಡವೊಂದಕ್ಕೆ ಇನ್ನೂರೈವತ್ತು ಗ್ರಾಂ ಬೇವಿನ ಹಿಂಡಿ ಕೊಟ್ಟಲ್ಲಿ ಕೀಟಗಳ ಬಾಧೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದರ ಜತೆಗೆ ಕೊಂಬಿನ ದುಂಬಿಯ ನಿವಾರಣೆಗೆ ಇಪ್ಪತೈದು ಗ್ರಾಂ ಸೆವೆಡಾಲ್ 8(ಜಿ) ಮತ್ತು ಇನ್ನೂರು ಗ್ರಾಂ ನುಣ್ಣನೆಯ ಮರಳನ್ನು ಮಿಶ್ರ ಮಾಡಿ ಸುಳಿಭಾಗದ ಕಂಕುಳದಲ್ಲಿ ಸುರಿಯಬೇಕು. ಇದೇ ಕೀಟನಾಶಕವನ್ನು ಮಣ್ಣಿಗೆ ಬೆರೆಸಿದರೆ ಗೆದ್ದಲು ನಾಶಗೊಳ್ಳುತ್ತದೆ. ಎಲೆ ಚುಕ್ಕೆ ರೋಗ, ಸುಳಿ ಕೊಳೆಯುವುದು ಮುಂತಾದವುಗಳ ಹತೋಟಿಗೆ ಶೇಕಡಾ 1 ರ ಬೋರ್ಡೊ ಅಥವಾ ಮತ್ತಾವುದಾದರೂ ತಾಮ್ರಯುಕ್ತ ಶಿಲೀಂದ್ರ ನಾಶಕದ ದ್ರಾವಣವನ್ನು ಸಿಂಪಡಿಸುವುದು ಒಳ್ಳೆಯದು.