ಪ್ರೀಯ ರೈತರೇ ಸರ್ಕಾರವು ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ರೈತರಿಗೆ ಅಲ್ಪಾವಧಿ, ಮಧ್ಯಮಾವಧಿ, ಹಾಗೂ ದೀರ್ಘಾವಧಿ ಸಾಲ ನೀಡಲು ಜುಲೈ 1ರಿಂದ ನೀಡಲು ಮುಂದಾಗಿತ್ತು ಆದರೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಈ ಯೋಜನೆಯ ಬಗ್ಗೆ ಎಲ್ಲಿಯೂ ಧ್ವನಿ ಎತ್ತಲಿಲ್ಲ ಹೀಗಾಗಿ ಸರ್ಕಾರಕ್ಕೂ ಇದರ ಬಗ್ಗೆ ಗಮನ ಹರಿಸಲು ಸ್ವತಹ ಸಚಿವರು ಮುಂದೆ ಬರಬೇಕಾಗಿದೆ. ಅದೇ ರೀತಿ ಕಡಿಮೆ ಜಮೀನು ಹೊಂದಿರುವ ರೈತರಿಗೆ ಕಳೆದ ಸಾಲಿನಲ್ಲಿ ಶಿಫಾರಸ್ಸು ಮಾಡಲಾಗಿರುವ ಅಲ್ಪಾವಧಿ ಬೆಳೆಸಾಲದ ಪ್ರಮಾಣವನ್ನು 2023-24 ನೇ ಸಾಲಿಗಾಗಿ ಪ್ರತಿಯೊಂದು ಬೆಳೆಗೆ ಶೇ .10 ರಷ್ಟು ಹೆಚ್ಚಿಸಲು ಶಿಫಾರಸ್ಸು ಮಾಡಲಾಗುವುದು. ಹಾಗೂ ರೈತರಿಗೆ ಆರ್ಥಿಕ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಅಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ 13 ಸಾವಿರ ರೈತರಷ್ಟೇ ಸಾಲಸೌಲಭ್ಯ ಪಡೆಯುತ್ತಿದ್ದಾರೆ. ಮುಂದಿನ ವರ್ಷ ಹೆಚ್ಚಿನ ರೈತರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಸಾಲದ ಪ್ರಮಾಣ ಹೆಚ್ಚಳ ಮಾಡಲು ಬ್ಯಾಂಕ್ ಪೂರ್ವತಯಾರಿ ನಡೆಸುತ್ತಿದೆ. ರೈತರಿಗೆ ನೀಡುವ ಸಾಲದ ಮೊತ್ತವನ್ನು ಹೆಚ್ಚಳ ಮಾಡಿರುವುದರಿಂದ ಹೆಚ್ಚಿನ ರೈತರಿಂದ ಸಾಲಕ್ಕಾಗಿ ಬೇಡಿಕೆ ಬರುತ್ತಿದೆ. ಈ ಬಾರಿ 1,600 ಕೋಟಿ ಸಾಲ ನೀಡಲಾಗಿದೆ. ಮುಂದಿನ ವರ್ಷ ಈ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರಕ್ಕೆ ಪಸಾವನೆ ಸಲ್ಲಿಸಲಾಗುವುದು.
ಏನಿದು ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ? ಯಾವ ರೈತರಿಗೆ ನೀಡಲಾಗುತ್ತದೆ?
ಮುಖ್ಯವಾಗಿ ಇದು ಒಂದು ಸರ್ಕಾರದ ಮಹತ್ವಾಕಾಂಕ್ಷಿ ನಿರ್ಧಾರ ಆಗಿದೆ. ರೈತರು ಕೃಷಿಯಲ್ಲಿ ಯಾವುದೇ ಆರ್ಥಿಕ ತೊಂದರೆಯಾಗದಂತೆ ಬೆಳೆಸಾಲ ನೀಡಲು ನೂತನ ಕೃಷಿ ಸಚಿವರು ಚೆಲುವನಾರಾಯಣ ಸ್ವಾಮಿ ಅವರು ಹೇಳಿದ್ದಾರೆ. ಅದೇ ರೀತಿ ಸರ್ಕಾರವು ಮುಂಬರುವ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಅಲ್ಪಾವಧಿ ಬೆಳೆ ಸಾಲದ ಮೊತ್ತವನ್ನು ಏರಿಕೆ ಮಾಡಿ ರೈತರಿಗೆ ಆರ್ಥಿಕ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.
ಯಾವ ರೈತರಿಗೆ ಎಷ್ಟು ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡುತ್ತಾರೆ?
ಸರ್ಕಾರವು ರೈತರಿಗೆ ಈಗ ಶೂನ್ಯ ಬಡ್ಡಿ ದರದ ಅಲ್ಪಾವಧಿ ಬೆಳೆ ಸಾಲದ ಗರಿಷ್ಠ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸುವ ಮಹತ್ವದ ನಿರ್ಧಾರವನ್ನು 2023-24ರ ಬಜೆಟ್ನಲ್ಲಿ ಘೋಷಿಸಿದ್ದಾರೆ. ಇದು ಹೊಸ ಆರ್ಥಿಕ ವರ್ಷದಿಂದ ಜಾರಿಗೆ ಬರಲಿದೆ. ಮುಖ್ಯಮಂತ್ರಿಯವರ ಈ ಘೋಷಣೆಯಿಂದ 30 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ. ಈ ಅಲ್ಪಾವಧಿ ಬೆಳೆ ಸಾಲ ವಿತರಣೆಗೆ 25 ಸಾವಿರ ಕೋಟಿ ರೂ. ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಶೂನ್ಯ ಬಡ್ಡಿ ದರದ ಸಾಲ ವಿತರಣೆ ಕಾರ್ಯಕ್ರಮ ಲಕ್ಷಾಂತರ ರೈತರ ಬದುಕಿನಲ್ಲಿ ಈಗಾಗಲೇ ಬೆಳಕು ಮೂಡಿಸಿದೆ. ಪ್ರತಿ ವರ್ಷವೂ ಮುಂಗಾರು ಹಂಗಾಮಿನಲ್ಲಿ ದೊರಕುವ ಈ ಸಾಲವು ರೈತರಿಗೆ ಆತ್ಮಸ್ಥೆರ್ಯ ತುಂಬುತ್ತಿದೆ. ನಿಶ್ಚಿಂತೆಯಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ಅನುವು ಮಾಡಿಕೊಡುತ್ತಿದೆ. ಇದರ ಮೊತ್ತವನ್ನು 5 ಲಕ್ಷ ರೂ. ವರೆಗೆ ಹೆಚ್ಚಿಸುವ ಮೂಲಕ ನೂತನ ಕೃಷಿ ಸಚಿವರು ಇದರ ಬಗ್ಗೆ ಸಂಪೂರ್ಣ ಒಲವು ತೋರಿದ್ದಾರೆ.
5 ಲಕ್ಷ ಬಡ್ಡಿರಹಿತ ಸಾಲ ಎಲ್ಲಿ ದೊರೆಯುತ್ತದೆ? ಹೇಗೆ ಪಡೆಯಬೇಕು?
ರೈತರೇ ಸರ್ಕಾರವು ಈ 5 ಲಕ್ಷ ಬಡ್ಡಿರಹಿತ ಅಲ್ಪಾವಧಿ ಬೆಳೆ ಸಾಲವನ್ನು ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಸಹಕಾರಿ ಸಂಘ ಸಂಸ್ಥೆ ( ಸೊಸೈಟಿ) ಗಳಲ್ಲಿ ಫಾರ್ಮ್ ಅನ್ನು ತುಂಬಿ ಈ ಸಾಲವನ್ನು ಪಡೆಯಬಹುದು. ಹೊಲದ ಪಹಣಿ ಆಧಾರದ ಮೇಲೆ ಈ ಸಾಲವನ್ನು ನೀಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಸೊಸೈಟಿ ಗಳಲ್ಲಿ ಸಂಪರ್ಕಿಸಿ. ಪ್ರತಿಯೊಬ್ಬ ರೈತರೂ ಸಹ ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಾಗೂ ಇದನ್ನು ಉಪಯೋಗಿಸಿ ಕೃಷಿಯಲ್ಲಿ ಮುಂದೆ ಸಾಗಬೇಕು.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ರೈತರು ತಾವು ತೆಗೆದುಕೊಂಡ ಸಾಲವನ್ನು
ಫಲಾನುಭವಿಯು 36 ತಿಂಗಳೊಳಗೆ 50% ಸಾಲವನ್ನು ಮರುಪಾವತಿಸಿದರೆ, ಉಳಿದ 50% ಸಾಲವನ್ನು ಬ್ಯಾಕ್-ಎಂಡ್ ಸಬ್ಸಿಡಿ ಎಂದು ಪರಿಗಣಿಸಲಾಗುತ್ತದೆ.
ಆದರೆ ಅದೇ ವೇಳೆಗೆ ಫಲಾನುಭವಿಯು 36 ತಿಂಗಳೊಳಗೆ ಸಾಲವನ್ನು ಮರುಪಾವತಿಸಲು ವಿಫಲವಾದರೆ, ಬ್ಯಾಕೆಂಡ್ ಸಬ್ಸಿಡಿಯಲ್ಲಿ 50% ಅನ್ನು ಸಾಲವಾಗಿ ಪರಿಗಣಿಸಲಾಗುತ್ತದೆ. ಇದು ಈ ಯೋಜನೆಯ ಒಂದು ಮುಖ್ಯ ನಿಯಮವಾಗಿದೆ.
ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೃಷಿ ಇಲಾಖೆಯಿಂದ ಹೊಸ ಯೋಜನೆ ಜಾರಿ
ಕೃಷಿ ಸಾಲಕ್ಕೆ ಬೇಕಾಗುವ ಕಾಗದಪತ್ರಗಳು –
1. ಚಾಲ್ತಿ ಉತಾರ (RTC)
2. ಬ್ಯಾಂಕ ಸೆಟ್’ (ತಲಾಟಿ ಸೆಟ್) ಗ್ರಾಮ ಲೆಕ್ಕಾಧಿಕಾರಿಗಳಿಂದ ( ಖಾತೆ ಉತಾರ, ಹಾಥ ನಕಾಶ, ಪಂಚಮತಿ ಕಿಮ್ಮತ್ತು ಮತ್ತು ಬೇಬಾಕಿ ಪ್ರಮಾಣ ಪತ್ರಗಳು)
3. ಕೈಬರಹ ಉತಾರ 1990-91 ರಿಂದ 2000-01 ರವರೆಗೆ
4. ಕೈಬರಹ ಉತಾರದಲ್ಲಿರುವ ಎಲ್ಲ ಡೈರಿಗಳು
5. ಕಂಪ್ಯೂಟರ ಉತಾರ 2002-03 ರಿಂದ 2022-23 (ಇಲ್ಲಿಯವರೆಗೆ )
6. ಕಂಪ್ಯೂಟರ ಉತಾಗದಲ್ಲಿರುವ ಎಲ್ಲ ಎಮ್.ಆರ್.ಗಳು (M.R) ತಹಶೀಲ್ದಾರ ಆಫೀಸದಿಂದ
7. ಋಣಭಾರ ಪ್ರಮಾಣ ಪತ್ರ E.C (Encumbrance Certificate) 01-04-1990 ರಿಂದ 31-03-2004 ರವರೆಗೆ Sub-Registrar office ಮತ್ತು 01-04-2004 ರಿಂದ 2022-23( ಇಲ್ಲಿಯವರೆಗೆ) ONLINE
8. PKPS ಮತ್ತು ಇತರ ಬ್ಯಾಂಕ್ಗಳಿಂದ ಯಾವುದೇ ಬಾಕಿ ಪ್ರಮಾಣಪತ್ರಗಳಿಲ್ಲ.
9, ಖರೀದಿ’ ಪತ್ರ ಮತ್ತು ಅದರ ದೃಢೀಕರಣ ಪತ್ರ (Sale deed and certified copy ) ಅನ್ವಯಿಸಿದರೆ ಮಾತ್ರ
10. Reconveyance deed ಸಾಲ ಫೇಡಿ ಪತ್ರ ಅನ್ವಯಿಸಿದರೆ ಮಾತ್ರ.
ಪಹಣಿಗೆ ಆಧಾರ್ ಜೊತೆ ಮಾಲೀಕನ ಫೋಟೋ ಕಡ್ಡಾಯ! ಡೈರೆಕ್ಟ ಲಿಂಕ್ ಇಲ್ಲಿದೆ
ರಾಜ್ಯ ಸರ್ಕಾರದ ಕಂದಾಯ ಇಲಾಖೆಯು ರೈತರ ಮಾಹಿತಿ ದಾಖಲೆ ಜೊತೆಗೆ ಫೋಟೋದೊಂದಿಗೆ ಪಹಣಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ. ಭೂ ಸಂಬಂಧಿತ ವಂಚನೆ ತಡೆಯುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತಂದಿದ್ದಾರೆ. ಕಂದಾಯ ಇಲಾಖೆಯು ‘ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ’ ಆರಂಭಿಸಿದೆ. ಈ ಯೋಜನೆಯ ನಿಯಮಗಳು ಹಾಗೂ ಮಾಹಿತಿಗಾಗಿ ಸಂಪೂರ್ಣವಾಗಿ ಓದಿ.
ಪಿಎಂ ಕಿಸಾನ್ 17ನೇ ಕಂತು ಜೂನ್ 18ಕ್ಕೆ ಪಕ್ಕಾ | ಫಲಾನುಭವಿಗಳ ಪಟ್ಟಿ ಚೆಕ್ ಮಾಡಿ
ಇದುವರೆಗೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಡಿಯಲ್ಲಿ 15 ಲಕ್ಷ ಆಧಾರ್ ಜೋಡಣೆ ಪೂರ್ಣಗೊಳಿಸಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಎಷ್ಟು ಮಂದಿ ಇದ್ದಾರೆ. ಸರ್ಕಾರದ ಸೌಲಭ್ಯ ಪಡೆಯಲು ಅರ್ಹತೆ ಇರುವವರು ಎಷ್ಟು ಮಂದಿ ಎನ್ನುವ ಮಾಹಿತಿ ಸಂಗ್ರಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಸಕ್ರಮದ ಬಗ್ಗೆಯೂ ಇಲ್ಲಿ ಗಮನ ಹರಿಸಿಲಾಗಿದೆ.
ಒಬ್ಬ ರೈತ ಬೇರೆ ಬೇರೆ ಸರ್ವೆ ನಂಬರ್ ಗಳಲ್ಲಿ ಭೂಮಿ ಹೊಂದಿದ್ದರೆ ಆಧಾರ್ ಜೋಡಣೆಯಿಂದ ಎಲ್ಲಾ ಮಾಹಿತಿಗಳು ಒಂದೇ ಕಡೆ ಸಿಗುತ್ತವೆ. ಒಟಿಪಿ ಆಧಾರಿತ ಇ-ಕೆವೈಸಿ, ಕೃಷಿ ಜಮೀನು ಮಾಲೀಕರ ಭಾವಚಿತ್ರವನ್ನು ಹಳ್ಳಿಹಳ್ಳಿಗೂ ತೆರಳಿ ಕಂದಾಯ ವೃತ್ತದ ಗ್ರಾಮ ಆಡಳಿತ ಅಧಿಕಾರಿಗಳು ಸೆರೆ ಹಿಡಿಯುತ್ತಾರೆ. ಆದ್ದರಿಂದ ಯೋಜನೆಗಳು ಸರಳವಾಗಿ ಅನುಷ್ಠಾನಗೊಳ್ಳುತ್ತವೆ. ಮತ್ತು ಕಾನೂನು ಅಡಿಯಲ್ಲಿ ದಾಖಲೆಗಳು ಸಿಗುತ್ತವೆ.
ಇಂದು ಖಾತೆಗೆ 2000ರೂ, ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಹೀಗೆ ಮಾಡಿ
ಪಹಣಿಯಲ್ಲಿ ಈಗಾಗಲೇ ರಾಜ್ಯ ಸರ್ಕಾರ ನಿಯಮ ಜಾರಿಗೊಳಿಸಿದ ಹಾಗೇ ಆಧಾರ್ ಸಂಖ್ಯೆ ನಮೂದಾಗಿರುತ್ತದೆ. ಈಗ ಪಡೆಯುವ ಫೋಟೋ ಮಾಲೀಕರ ಆಸ್ತಿ ವಿವರಗಳೊಂದಿಗೆ ಸಂಗ್ರಹವಾಗಿರುತ್ತದೆ. ಒಂದೇ ಸರ್ವೇ ನಂಬರ್ ನ ಭೂಮಿಯನ್ನು ಅಣ್ಣಾ, ತಂಗಿಯರು ಹಂಚಿಕೊಂಡಿದ್ದು, ಜಂಟಿ ಖಾತೆ ಹೊಂದಿದ್ದರೆ ಎಷ್ಟು ಜನ ವಾರಸುದಾರರು ಇರುತ್ತಾರೇ ಅಷ್ಟು ಮಂದಿ ಪ್ರತ್ಯೇಕವಾಗಿ ಆಧಾರ್ ಮತ್ತು ಫೋಟೋ ನೀಡುವುದು ಕಡ್ಡಾಯ. ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ಬರುವ ದಿನಗಳಲ್ಲಿ ಸರ್ಕಾರದಿಂದ ಪ್ರತಿ ಗ್ರಾಮ ಆಡಳಿತ ಅಧಿಕಾರಿಗೆ ವಾರಕ್ಕೆ 250 ರೈತರ ನೋಂದಣಿ ಗುರಿ ನಿಡಲಾಗಿದೆ. ನೋಂದಣಿ ಮಾಡುವಾಗ ರೈತರ ಖುದ್ದು ಫೋಟೋ ಕೇಳುತ್ತದೆ. ನಿಧನರಾಗಿದ್ದವರ ಮಾಹಿತಿ ಸಂಗ್ರಹಿಸುವುದಿಲ್ಲ. ಬೇರೆ ಉದ್ದೇಶಕ್ಕೆ ಕೃಷಿ ಭೂಮಿ ಬಳಕೆಯಾಗಿದ್ದಲ್ಲಿ ಅದನ್ನು ಪರಿಗಣಿಸುವುದಿಲ್ಲ. ಕೃಷಿ ಭೂಮಿ ಮಾತ್ರ ಈ ಯೋಜನೆ ಅಡಿ ಪರಿಗಣಿಸಲಾಗುತ್ತದೆ. ಪಹಣಿಯಲ್ಲಿ ಜಮೀನು ಮಾಲೀಕರ ಮಾಹಿತಿ, ಪ್ರದೇಶ, ಮಣ್ಣಿನ ಪ್ರಕಾರ, ಭೂಮಿಯ ಸ್ವರೂಪ, ಬೆಳೆ ಮೊದಲಾದ ಮಾಹಿತಿ ಇರುತ್ತದೆ. ಆಧಾರ್ ಸಂಖ್ಯೆ ಕೂಡ ಇಲ್ಲಿ ನಮೂದಿಸಲಾಗಿರುತ್ತದೆ.
ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ವಾ.? ತಕ್ಷಣ ಈ ಕೆಲಸ ಮಾಡಿ.!
ಪಹಣಿ ತಿದ್ದುಪಡಿಯನ್ನು ಹೇಗೆ ಮಾಡಬೇಕು?
ಅದರ ಪ್ರಕ್ರಿಯೆ ಏನು?
• ಭೂಮಿ ಕೇಂದ್ರದಲ್ಲಿರುವ ಅಧಿಕಾರಿಗಳು ನಿಮ್ಮ ಸದರಿ ದಾಖಲೆಗಳನ್ನು ನಿಮಗೆ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಳುಹಿಸುತ್ತಾರೆ.
• ಗ್ರಾಮ ಲೆಕ್ಕಾಧಿಕಾರಿಗಳು ತಮಗೆ ಬಂದಿರುವ ಅರ್ಜಿಯನ್ನು ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ.
• ದಾಖಲೆಗಳು ತಪ್ಪಾಗಿದ್ದಲ್ಲಿ ಅದನ್ನು ತಿರಸ್ಕರಿಸುವ ಹಕ್ಕನ್ನು ಹೊಂದಿರುತ್ತಾರೆ. ಒಂದು ವೇಳೆ ಎಲ್ಲಾ ದಾಖಲೆಗಳು ಸರಿಯಾಗಿದ್ದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಪಹಣಿ ತಿದ್ದುಪಡಿ ಮಾಡಲು ಭೂಮಿ ಕೇಂದ್ರಕ್ಕೆ ಆದೇಶಿಸುವ ಹಕ್ಕನ್ನು ಹೊಂದಿರುತ್ತಾರೆ.
• ಗ್ರಾಮ ಲೆಕ್ಕಾಧಿಕಾರಿಗಳ ಆದೇಶದ ಮೇಲೆ ಭೂಮಿ ಕೇಂದ್ರದ ಅಧಿಕಾರಿಗಳು ನಿಮ್ಮ ಪಹಣಿಯಲ್ಲಿರುವ ಹೆಸರನ್ನು ತಿದ್ದುಪಡಿ ಮಾಡುತ್ತಾರೆ. ಸುಮಾರು ದಿನಗಳ ನಂತರ ತಿದ್ದುಪಡಿ ಆಗಿರುವ ಹೊಸ ಪಹಣಿ ನಿಮ್ಮ ಕೈ ಸೇರುತ್ತದೆ.
ಈ ರೀತಿಯಾಗಿ ನೀವು ಪಹಣಿಯಲ್ಲಿರುವ ಹೆಸರನ್ನು ತಿದ್ದುಪಡಿ ಮಾಡಬಹುದು.