ರಾಜ್ಯ ಸರ್ಕಾರದ ಕಂದಾಯ ಇಲಾಖೆಯು ರೈತರ ಮಾಹಿತಿ ದಾಖಲೆ ಜೊತೆಗೆ ಫೋಟೋದೊಂದಿಗೆ ಪಹಣಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ. ಭೂ ಸಂಬಂಧಿತ ವಂಚನೆ ತಡೆಯುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತಂದಿದ್ದಾರೆ. ಕಂದಾಯ ಇಲಾಖೆಯು ‘ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ’ ಆರಂಭಿಸಿದೆ. ಈ ಯೋಜನೆಯ ನಿಯಮಗಳು ಹಾಗೂ ಮಾಹಿತಿಗಾಗಿ ಸಂಪೂರ್ಣವಾಗಿ ಓದಿ.
ಇದುವರೆಗೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಡಿಯಲ್ಲಿ 15 ಲಕ್ಷ ಆಧಾರ್ ಜೋಡಣೆ ಪೂರ್ಣಗೊಳಿಸಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಎಷ್ಟು ಮಂದಿ ಇದ್ದಾರೆ. ಸರ್ಕಾರದ ಸೌಲಭ್ಯ ಪಡೆಯಲು ಅರ್ಹತೆ ಇರುವವರು ಎಷ್ಟು ಮಂದಿ ಎನ್ನುವ ಮಾಹಿತಿ ಸಂಗ್ರಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಸಕ್ರಮದ ಬಗ್ಗೆಯೂ ಇಲ್ಲಿ ಗಮನ ಹರಿಸಿಲಾಗಿದೆ.
ಒಬ್ಬ ರೈತ ಬೇರೆ ಬೇರೆ ಸರ್ವೆ ನಂಬರ್ ಗಳಲ್ಲಿ ಭೂಮಿ ಹೊಂದಿದ್ದರೆ ಆಧಾರ್ ಜೋಡಣೆಯಿಂದ ಎಲ್ಲಾ ಮಾಹಿತಿಗಳು ಒಂದೇ ಕಡೆ ಸಿಗುತ್ತವೆ. ಒಟಿಪಿ ಆಧಾರಿತ ಇ-ಕೆವೈಸಿ, ಕೃಷಿ ಜಮೀನು ಮಾಲೀಕರ ಭಾವಚಿತ್ರವನ್ನು ಹಳ್ಳಿಹಳ್ಳಿಗೂ ತೆರಳಿ ಕಂದಾಯ ವೃತ್ತದ ಗ್ರಾಮ ಆಡಳಿತ ಅಧಿಕಾರಿಗಳು ಸೆರೆ ಹಿಡಿಯುತ್ತಾರೆ. ಆದ್ದರಿಂದ ಯೋಜನೆಗಳು ಸರಳವಾಗಿ ಅನುಷ್ಠಾನಗೊಳ್ಳುತ್ತವೆ. ಮತ್ತು ಕಾನೂನು ಅಡಿಯಲ್ಲಿ ದಾಖಲೆಗಳು ಸಿಗುತ್ತವೆ.
Pm kissan: ಪಿಎಂ ಕಿಸಾನ್ 17ನೇ ಕಂತಿನ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಚೆಕ್ ಮಾಡಿ
ಪಹಣಿಯಲ್ಲಿ ಈಗಾಗಲೇ ರಾಜ್ಯ ಸರ್ಕಾರ ನಿಯಮ ಜಾರಿಗೊಳಿಸಿದ ಹಾಗೇ ಆಧಾರ್ ಸಂಖ್ಯೆ ನಮೂದಾಗಿರುತ್ತದೆ. ಈಗ ಪಡೆಯುವ ಫೋಟೋ ಮಾಲೀಕರ ಆಸ್ತಿ ವಿವರಗಳೊಂದಿಗೆ ಸಂಗ್ರಹವಾಗಿರುತ್ತದೆ. ಒಂದೇ ಸರ್ವೇ ನಂಬರ್ ನ ಭೂಮಿಯನ್ನು ಅಣ್ಣಾ, ತಂಗಿಯರು ಹಂಚಿಕೊಂಡಿದ್ದು, ಜಂಟಿ ಖಾತೆ ಹೊಂದಿದ್ದರೆ ಎಷ್ಟು ಜನ ವಾರಸುದಾರರು ಇರುತ್ತಾರೇ ಅಷ್ಟು ಮಂದಿ ಪ್ರತ್ಯೇಕವಾಗಿ ಆಧಾರ್ ಮತ್ತು ಫೋಟೋ ನೀಡುವುದು ಕಡ್ಡಾಯ. ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ಬರುವ ದಿನಗಳಲ್ಲಿ ಸರ್ಕಾರದಿಂದ ಪ್ರತಿ ಗ್ರಾಮ ಆಡಳಿತ ಅಧಿಕಾರಿಗೆ ವಾರಕ್ಕೆ 250 ರೈತರ ನೋಂದಣಿ ಗುರಿ ನಿಡಲಾಗಿದೆ. ನೋಂದಣಿ ಮಾಡುವಾಗ ರೈತರ ಖುದ್ದು ಫೋಟೋ ಕೇಳುತ್ತದೆ. ನಿಧನರಾಗಿದ್ದವರ ಮಾಹಿತಿ ಸಂಗ್ರಹಿಸುವುದಿಲ್ಲ. ಬೇರೆ ಉದ್ದೇಶಕ್ಕೆ ಕೃಷಿ ಭೂಮಿ ಬಳಕೆಯಾಗಿದ್ದಲ್ಲಿ ಅದನ್ನು ಪರಿಗಣಿಸುವುದಿಲ್ಲ. ಕೃಷಿ ಭೂಮಿ ಮಾತ್ರ ಈ ಯೋಜನೆ ಅಡಿ ಪರಿಗಣಿಸಲಾಗುತ್ತದೆ. ಪಹಣಿಯಲ್ಲಿ ಜಮೀನು ಮಾಲೀಕರ ಮಾಹಿತಿ, ಪ್ರದೇಶ, ಮಣ್ಣಿನ ಪ್ರಕಾರ, ಭೂಮಿಯ ಸ್ವರೂಪ, ಬೆಳೆ ಮೊದಲಾದ ಮಾಹಿತಿ ಇರುತ್ತದೆ. ಆಧಾರ್ ಸಂಖ್ಯೆ ಕೂಡ ಇಲ್ಲಿ ನಮೂದಿಸಲಾಗಿರುತ್ತದೆ.
ಇನ್ನೂ 3 ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ : IMD ವರದಿ
ಪಹಣಿ ತಿದ್ದುಪಡಿಯನ್ನು ಹೇಗೆ ಮಾಡಬೇಕು?
ಅದರ ಪ್ರಕ್ರಿಯೆ ಏನು?
• ಭೂಮಿ ಕೇಂದ್ರದಲ್ಲಿರುವ ಅಧಿಕಾರಿಗಳು ನಿಮ್ಮ ಸದರಿ ದಾಖಲೆಗಳನ್ನು ನಿಮಗೆ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಳುಹಿಸುತ್ತಾರೆ.
• ಗ್ರಾಮ ಲೆಕ್ಕಾಧಿಕಾರಿಗಳು ತಮಗೆ ಬಂದಿರುವ ಅರ್ಜಿಯನ್ನು ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ.
• ದಾಖಲೆಗಳು ತಪ್ಪಾಗಿದ್ದಲ್ಲಿ ಅದನ್ನು ತಿರಸ್ಕರಿಸುವ ಹಕ್ಕನ್ನು ಹೊಂದಿರುತ್ತಾರೆ. ಒಂದು ವೇಳೆ ಎಲ್ಲಾ ದಾಖಲೆಗಳು ಸರಿಯಾಗಿದ್ದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಪಹಣಿ ತಿದ್ದುಪಡಿ ಮಾಡಲು ಭೂಮಿ ಕೇಂದ್ರಕ್ಕೆ ಆದೇಶಿಸುವ ಹಕ್ಕನ್ನು ಹೊಂದಿರುತ್ತಾರೆ.
• ಗ್ರಾಮ ಲೆಕ್ಕಾಧಿಕಾರಿಗಳ ಆದೇಶದ ಮೇಲೆ ಭೂಮಿ ಕೇಂದ್ರದ ಅಧಿಕಾರಿಗಳು ನಿಮ್ಮ ಪಹಣಿಯಲ್ಲಿರುವ ಹೆಸರನ್ನು ತಿದ್ದುಪಡಿ ಮಾಡುತ್ತಾರೆ. ಸುಮಾರು ದಿನಗಳ ನಂತರ ತಿದ್ದುಪಡಿ ಆಗಿರುವ ಹೊಸ ಪಹಣಿ ನಿಮ್ಮ ಕೈ ಸೇರುತ್ತದೆ.
ಈ ರೀತಿಯಾಗಿ ನೀವು ಪಹಣಿಯಲ್ಲಿರುವ ಹೆಸರನ್ನು ತಿದ್ದುಪಡಿ ಮಾಡಬಹುದು.
Cyclone effect: ಚಂಡಮಾರುತ ಎಫೇಕ್ಟ! ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಭಾರಿ ಮಳೆ