LPG ಬುಕ್ ಮಾಡುವ ಸಾರ್ವಜನಿಕರೇ ಗಮನಿಸಿ : ಗ್ಯಾಸ್ ಕಂಪನಿಗಳಿಂದ ನಿಮಗಿದೆ ಎಚ್ಚರಿಕೆ!
ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ LPG ಸಿಲಿಂಡರ್ ಕೊರತೆಯಾಗಿದೆ. ಈಗಾಗಲೇ, ವಾಣಿಜ್ಯ ಬಳಕೆ ಸಿಲಿಂಡರ್ ಕೊರತೆಯಿಂದಾಗಿ ಹೋಟೆಲ್ಗಳು ಮುಚ್ಚಿವೆ. ಗೃಹಬಳಕೆ ಸಿಲಿಂಡರ್ ಕೊರತೆಯೂ ಉಂಟಾಗುತ್ತಿದೆ. ಇದರ ಬೆನ್ನಲ್ಲೇ, ಎಲ್ಪಿಜಿ ಬುಕ್ ಮಾಡುವ ಗ್ರಾಹಕರಿಗೆ ಪೆಟ್ರೋಲಿಯಂ ಕಂಪನಿಗಳು ಎಚ್ಚರಿಕೆ ನೀಡಿವೆ. ನಿಮ್ಮ ಮನೆಗೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಮಾಡಿದ ನಂತರವಷ್ಟೇ Delivery Authentication Code (DAC) ಅಥವಾ OTP ನೀಡಬೇಕು ಎಂದು ತಿಳಿಸಿವೆ. ಹೌದು.. ಅಡುಗೆ ಅನಿಲ ಪೂರೈಕೆಗೆ ಡಿಎಸಿ ಅಥವಾ ಒಟಿಪಿಯನ್ನು ಈಗ ಕಡ್ಡಾಯಗೊಳಿಸಲಾಗಿದೆ. ಆದರೂ,…

