60 ವರ್ಷ ಮೇಲ್ಪಟ್ಟವರಿಗೆ ಹೊಸ ಯೋಜನೆ ಆರಂಭ.

ಪ್ರೀಯ ಸಾರ್ವಜನಿಕರೇ ನಿಮಗೊಂದು ಸಂತಸದ ಸುದ್ದಿ. ಕೇಂದ್ರ ಸರ್ಕಾರದ ಜನರ ಪರಿಚಿತ ಮತ್ತೊಂದು ಹೊಸ ಯೋಜನೆ. ಹಿರಿಯ ನಾಗರಿಕರಿಗೆ ಉಚಿತ ಮೆಡಿಕಲ್ ಸಹಾಯಧನ ಸಿಗಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಮಹತ್ವ ಪಾತ್ರ ವಹಿಸುತ್ತದೆ. ಏನಿದು ಆಯುಷ್ಮಾನ್ ಭಾರತ್? ಏನಿದು ವಯೋ ವಯ ವಂದನಾ ಯೋಜನೆ?

ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (PMVVY) 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ LIC ಆಫ್ ಇಂಡಿಯಾ ಮೂಲಕ ಸರ್ಕಾರ ಒದಗಿಸುವ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಾಗಿದೆ. ಇದು 10 ವರ್ಷಗಳವರೆಗೆ ಖಾತರಿಪಡಿಸಿದ ಪಿಂಚಣಿ (ರಿಂದ ವರೆಗೆ ಬಡ್ಡಿ) ಮತ್ತು ಮೆಚುರಿಟಿಯ ನಂತರ ಹೂಡಿಕೆ ಮಾಡಿದ ಹಣವನ್ನು ಹಿಂತಿರುಗಿಸುವ ಸೌಲಭ್ಯವನ್ನು ಹೊಂದಿದೆ

ಆಯುಷ್ಮಾನ್ ಭಾರತ್: ಈಗ ಪ್ರತಿಯೊಬ್ಬ ಹಿರಿಯರಿಗೂ ಉಚಿತ ಚಿಕಿತ್ಸೆ!

ಹಿರಿಯ ವಯಸ್ಸಿನಲ್ಲಿ ಅತಿ ದೊಡ್ಡ ಚಿಂತೆಯೆಂದರೆ ಅದು ಆರೋಗ್ಯ. ಈ ಸಮಸ್ಯೆಗೆ ಪರಿಹಾರವಾಗಿ ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆ ಹಿರಿಯ ನಾಗರಿಕರಿಗೆ ಹೊಸ ಆಯಾಮ ನೀಡಿದೆ. ಈ ಮೊದಲು ಕೇವಲ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸೀಮಿತವಾಗಿದ್ದ ಈ ಯೋಜನೆ, ಈಗ 60 ವರ್ಷ ಮೇಲ್ಪಟ್ಟ ಎಲ್ಲಾ ವರ್ಗದವರಿಗೂ ಅನ್ವಯವಾಗುತ್ತಿದೆ.
ಇದರಡಿ ವಾರ್ಷಿಕ 5 ಲಕ್ಷ ರೂಪಾಯಿಗಳವರೆಗೆ ಉಚಿತ ವೈದ್ಯಕೀಯ ವಿಮೆ ದೊರೆಯಲಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಗುಣಮಟ್ಟದ ಚಿಕಿತ್ಸೆ ಪಡೆಯಲು ಇದು ಸಹಕಾರಿ. ಕುಟುಂಬದ ಆದಾಯ ಎಷ್ಟೇ ಇರಲಿ, ಹಿರಿಯ ನಾಗರಿಕರು ಈ ‘ವಿಶೇಷ ಕಾರ್ಡ್’ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

ಪ್ರಧಾನ ಮಂತ್ರಿ ವಯ ವಂದನಾ ಯೋಜನೆ: ಆರ್ಥಿಕ ಭದ್ರತೆಯ ಅಸ್ತ್ರ

ನಿವೃತ್ತಿಯ ನಂತರ ಕೈಯಲ್ಲಿ ಹಣವಿಲ್ಲದೆ ಪರದಾಡುವ ಪರಿಸ್ಥಿತಿ ಬರಬಾರದು ಎಂಬುದು ಸರ್ಕಾರದ ಆಶಯ. ಇದಕ್ಕಾಗಿ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (PMVVY) ಅತ್ಯಂತ ಜನಪ್ರಿಯವಾಗಿದೆ. ಇದು ಹಿರಿಯ ನಾಗರಿಕರಿಗೆ ಒಂದು ಸುಭದ್ರ ಹೂಡಿಕೆ ಯೋಜನೆಯಾಗಿದ್ದು, ಬ್ಯಾಂಕ್ ಎಫ್‌ಡಿಗಿಂತಲೂ ಹೆಚ್ಚಿನ ಲಾಭ ನೀಡುತ್ತದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಪ್ರತಿ ತಿಂಗಳು ಪೆನ್ಷನ್ ರೂಪದಲ್ಲಿ ಹಣ ದೊರೆಯುತ್ತದೆ. ಮಾರುಕಟ್ಟೆಯ ಏರಿಳಿತಗಳು ಈ ಯೋಜನೆಯ ಮೇಲೆ ಪ್ರಭಾವ ಬೀರುವುದಿಲ್ಲ. ಹೀಗಾಗಿ, ತಮ್ಮ ಉಳಿತಾಯದ ಹಣವನ್ನು ಸುರಕ್ಷಿತವಾಗಿಟ್ಟುಕೊಂಡು ಪ್ರತಿ ತಿಂಗಳು ಕೈತುಂಬಾ ಹಣ ಪಡೆಯಲು ಇದು ಅತ್ಯುತ್ತಮ ಮಾರ್ಗವಾಗಿದೆ.

Spread positive news

Leave a Reply

Your email address will not be published. Required fields are marked *