ಹೀಗೆ ಮಾಡಿ : ಮನೆಯಲ್ಲೇ ಕೂತು ಇ-ಸ್ವತ್ತು ಪಡೆಯಿರಿ

ಇ-ಸ್ವತ್ತು : ಪ್ರೀಯ ಸಾರ್ವಜನಿಕರೇ ಮತ್ತೊಂದು ಹೊಸ ಯೋಜನೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚತಂತ್ರ ಸಾಫ್ಟ್‌ವೇರ್‌ನ ನವೀಕರಿಸಿದ ಆವೃತ್ತಿಯಾದ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿದೆ. ಈ ಉಪಕ್ರಮದ ಮುಖ್ಯ ಉದ್ದೇಶವು ಗ್ರಾಮೀಣ ಕರ್ನಾಟಕದ 97 ಲಕ್ಷಕ್ಕೂ ಹೆಚ್ಚು ಕೃಷಿಯೇತರ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಿ, ಅವುಗಳನ್ನು ಅಧಿಕೃತ ತೆರಿಗೆ ವ್ಯಾಪ್ತಿಗೆ ತರುವುದು ಮತ್ತು ಆಸ್ತಿ ವಹಿವಾಟುಗಳಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವುದಾಗಿದೆ. ಈ ವ್ಯವಸ್ಥೆಯು ಕಾವೇರಿ 2.0 ಸಾಫ್ಟ್‌ವೇರ್‌ನೊಂದಿಗೆ ಸಂಯೋಜನೆಗೊಂಡಿದ್ದು, ನೋಂದಣಿಯನ್ನು ಸರಳಗೊಳಿಸುತ್ತದೆ.

ಮನೆಯಲ್ಲೇ ಕುಳಿತು ಜಮೀನಿಗೆ ಇ-ಖಾತಾ ಪಡೆಯುವುದು ಈಗ ಬಹಳ ಸುಲಭ. ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಕೃಷಿಯೇತರ ಜಮೀನಿನ ಇ-ಖಾತಾ ಪಡೆದುಕೊಳ್ಳಿ. https://eswathu.karnataka.gov.in/ ಪೋರ್ಟಲ್‌ನಲ್ಲಿ ನಮೂನೆ 9 ಮತ್ತು ನಮೂನೆ 11 ಸಿಗಲಿದೆ.

ಏನಿದು ಇ- ಇ-ಸ್ವತ್ತು 2.0 ತಂತ್ರಾಂಶ ?

ಇ-ಸ್ವತ್ತು ಎಂಬುದು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನಿರ್ವಹಿಸುವ ಒಂದು ಆನ್‌ಲೈನ್ ಪೋರ್ಟಲ್ ಆಗಿದ್ದು, ಗ್ರಾಮೀಣ ಪ್ರದೇಶದ ಆಸ್ತಿ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ ನಿರ್ವಹಿಸಲು ಸಹಕಾರಿಯಾಗಿದೆ. ಇದರ ಪ್ರಮುಖ ಉದ್ದೇಶ ಆಸ್ತಿ ವಹಿವಾಟುಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರುವುದು, ವಂಚನೆ ಮತ್ತು ಅನಧಿಕೃತ ನಿವೇಶನಗಳ ನೋಂದಣಿಯನ್ನು ನಿಯಂತ್ರಿಸುವುದಾಗಿದೆ.

ಇ-ಸ್ವತ್ತು ಸಹಾಯವಾಣಿ ಸಂಖ್ಯೆ9483476000 ಗೆ ಕರೆ ಮಾಡಿ ನೀವು ನಿಮ್ಮ ಗೊಂದಲಕ್ಕೆ ಉತ್ತರ ಪಡೆಯಬಹುದು. ಗ್ರಾಮೀಣ ಜನರು ದಾಖಲೆಗಾಗಿ ಅಲೆದಾಡುವ ಅಗತ್ಯ ಇನ್ನಿಲ್ಲ

* ಇ ಸ್ವತ್ತು ಪಡೆಯಲು ಬೇಕಾದ ದಾಖಲಾತಿಗಳು –
1. ಮಾಲೀಕರ ಭಾವಚಿತ್ರ ಮತ್ತು ಆಧಾರ್
2. ಆಸ್ತಿ ತೆರಿಗೆ ಎಸ್.ಎ.ಎಸ್ ಚಲನ್ ಸಂಖ್ಯೆ
3. ಸ್ವತ್ತಿನ ಕ್ರಯ/ ನೋಂದಾಯಿತ ಪತ್ರ ಸಂಖ್ಯೆ ಕಾವೇರಿ ತಂತ್ರಾಶದಿಂದ ವಿದ್ಯುನ್ಮಾನವಾಗಿ ಪಡೆದುಕೊಳ್ಳುವುದು!
4. ವಿದ್ಯುತ್ ಆರ್ ಆರ್ ಸಂಖ್ಯೆ (ಖಾಲಿ ನಿವೇಶನಗಳಿಗೆ ಆಗತ್ಯವಿಲ್ಲ)
5. ಸ್ವತ್ತಿನ ಛಾಯಾಚಿತ್ರ
6. EC: 15/16
7. ಸ್ವತ್ತಿಗೆ ಸಂಬಂಧಿಸಿದ ಇತರೆ ಪೂರಕ ಅಗತ್ಯ ದಾಖಲೆಗಳು.

Spread positive news

Leave a Reply

Your email address will not be published. Required fields are marked *