ಕೃಷಿ ಇಲಾಖೆಯಿಂದ ಪಂಪ್ ಸೆಟ್ ವಿತರಣೆಗೆ ಅರ್ಜಿ ಆಹ್ವಾನ

ಪಂಪ್ ಸೆಟ್ : ಪ್ರೀಯ ರೈತರೇ ನಿಮಗೊಂದು ಗುಡ್ ನ್ಯೂಸ್! ಕರ್ನಾಟಕ ರಾಜ್ಯದ ಕೃಷಿ ಕ್ಷೇತ್ರಕ್ಕೆ ರಾಜ್ಯ ಸರ್ಕಾರವು ಒಂದು ಅತ್ಯುತ್ತಮ ಯೋಜನೆಯನ್ನು ಜಾರಿಗೆ ತಂದಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ರೈತರಿಗೆ ನೀರಾವರಿ ಸೌಲಭ್ಯವನ್ನು ಸುಲಭಗೊಳಿಸಲು ಪೆಟ್ರೋಲ್ ಮತ್ತು ಡೀಸೆಲ್ ಪಂಪ್ ಸೆಟ್‌ಗಳನ್ನು ಖರೀದಿಸಲು ಬರೋಬ್ಬರಿ 90 ರಷ್ಟು ರಿಯಾಯಿತಿ ಅಥವಾ ಸಹಾಯಧನವನ್ನು ಘೋಷಿಸಲಾಗಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.

ಯೋಜನೆಯ ಮುಖ್ಯ ಉದ್ದೇಶಗಳು –
ಹಳ್ಳಿ ರೈತರಿಗೆ ಕರೆಂಟ್ ಕೊರತೆಯಿಂದ ಪಾರು ಮಾಡುವುದು.
ಮಳೆಗಾಲದಲ್ಲಿ ನಿರಂತರ ವಿದ್ಯುತ್ ತೊಂದರೆಯಿಂದ ಪಾರು ಮಾಡುವುದು.
ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಪರ್ಯಾಯ ಇಂಧನ ಚಾಲಿತ ಪಂಪ್‌ಗಳಿಗೆ ಉತ್ತೇಜನ ನೀಡುವುದು.
ಸಣ್ಣ ಮತ್ತು ಅತಿ ಸಣ್ಣ ರೈತರ ಆರ್ಥಿಕ ಹೊರೆಯನ್ನು ತಗ್ಗಿಸುವುದು.
ಒಣ ಭೂಮಿ ಬೇಸಾಯ ಮಾಡುವ ರೈತರಿಗೆ ರಕ್ಷಣಾತ್ಮಕ ನೀರಾವರಿ ಒದಗಿಸುವುದು.
ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದು.

ಯೋಜನೆಗೆ ಎಷ್ಟು ಸಬ್ಸಿಡಿ ಸಿಗುತ್ತಿದೆ?

ಎಸಿ, ಎಸ್ಟಿ ರೈತರಿಗೆ 90% ಸಬ್ಸಿಡಿ ಸಿಗುತ್ತಿದೆ.
ಇತರರಿಗೆ 50 -80% ಸಬ್ಸಿಡಿ ಸಿಗುತ್ತಿದೆ.

ಅರ್ಜಿ ಸಲ್ಲಿಕೆ ಎಲ್ಲಿ?
ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬೇಕು.

ಯಾವೆಲ್ಲಾ ದಾಖಲೆಗಳು ಬೇಕು?
ಆಧಾರ್ ಕಾರ್ಡ್
ಫ್ಯಾನ್ ಕಾರ್ಡ್
ನಿಮ್ಮ ಜಮೀನಿನ ಪಹಣಿ
ಬ್ಯಾಂಕ್ ಖಾತೆ
ಚಿಕ್ಕ ಹಿಡುವಳಿ/ ಸಣ್ಣ ಹಿಡುವಳಿ
ಗ್ರಾಮ ಪಂಚಾಯಿತಿ ವತಿಯಿಂದ NOC ಸರ್ಟಿಫಿಕೇಟ್.
2 ಪಾಸ್ ಪೋರ್ಟ್ ಸೈಜ್ ಪೋಟೋ
ಫ್ರೂಟ್ಸ್ ಐಡಿ (FRUITS ID)

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಸಣ್ಣ ರೈತರು, ಅತಿ ಸಣ್ಣ ರೈತರು ಅರ್ಜಿ ಸಲ್ಲಿಸಬಹುದು.
ಹಿಂದೆ 5 ವರ್ಷ ಯಾವುದೇ ಸರ್ಕಾರಿ ಸವಲತ್ತುಗಳನ್ನು ಪಡೆದಿರಬಾರದು.
5 ಎಕರೆಗಿಂತ ಜಾಸ್ತಿ ಜಮೀನು ಹೊಂದಿರುವವರು ಈ ಯೋಜನೆಗೆ ಅರ್ಹರಲ್ಲ.

ಈ ಯೋಜನೆ ನಿಮಗೆ ಯಾಕೆ ಬೇಕು?

ಈ ಯೋಜನೆ ಬಂದರೆ ಕರೆಂಟ್ ಚಿಂತೆ ಇಲ್ಲ: ಡೀಸೆಲ್/ಪೆಟ್ರೋಲ್ ಇಂಜಿನ್ ಆಗಿರುವುದರಿಂದ ವಿದ್ಯುತ್ ಗಾಗಿ ಕಾಯಬೇಕಿಲ್ಲ.
ಯಾವಾಗ ಬೇಕಾದರೂ ಕೃಷಿ ಹೊಂಡದ ನೀರು ಬಳಕೆ: ನಿಮ್ಮ ಜಮೀನಿನಲ್ಲಿ ಕೃಷಿ ಹೊಂಡವಿದ್ದರೆ, ಅದರಲ್ಲಿನ ನೀರನ್ನು ಎತ್ತಲು ಇದು ಅತ್ಯುತ್ತಮ.
ಕರೆಂಟ್ ಕೊರತೆಯಿಂದ ಆರ್ಥಿಕ ಹೊರೆ ಕಡಿಮೆ: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇದು ದೊಡ್ಡ ಆರ್ಥಿಕ ನೆರವು.

Spread positive news

Leave a Reply

Your email address will not be published. Required fields are marked *