ಪಿಎಂ ಕಿಸಾನ್ : ಪ್ರೀಯ ರೈತರೇ ನಿಮಗೊಂದು ಸಂತಸದ ಸುದ್ದಿ. ತರನ್ನು (Farmers) ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (PM Kisan Samman Scheme) ಕೂಡಾ ಒಂದು. ಈಗಾಗಲೇ 2025 ರ ಎರಡು ಕಂತಿನ ಹಣ ರೈತರ ಖಾತೆಗೆ ಜಮಾ ಆಗಿದೆ.
ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರಿಗೆ ನೇರವಾಗಿ ಪಿಎಂ ಕಿಸಾನ್ 21 ನೇ ಕಂತು ಹಣವನ್ನು ಬಿಡುಗಡೆ ಮಾಡಲಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ ಪೈಕಿ ಕಳೆದ ಏಳು ವರ್ಷಗಳಲ್ಲಿ ₹4 ಲಕ್ಷ ಕೋಟಿ ಹಣ ರೈತರಿಗೆ ಸಂದಾಯವಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ₹538 ಕೋಟಿ ರೈತರ ಖಾತೆಗೆ ಜಮಾ ಆಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದರು.
ಯಾವಾಗ ಪಿಎಂ ಕಿಸಾನ್ ಹಣ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 21ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 19, 2025 ರಂದು ಬಿಡುಗಡೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ದೇಶದ ಲಕ್ಷಾಂತರ ರೈತ ಕುಟುಂಬಗಳಿಗೆ ನವೆಂಬರ್ 19 ರಂದು ಹಣ ಜಮಾ ಆಗಲಿದೆ. ಈ ಕಂತಿನ ಅಡಿಯಲ್ಲಿ, ಅರ್ಹ ರೈತರು ₹2,000 ಪಡೆಯಲಿದ್ದಾರೆ. ಈ ಮೂಲಕ ವರ್ಷಾಂತ್ಯದಲ್ಲಿ 21ನೇ ಕಂತಿನ ಹಣ ಜಮಾ ಆಗಲಿದ್ದು, ಇದನ್ನು ಪ್ರತಿ ವರ್ಷ ಮೂರು ಸಮಾನ ಕಂತುಗಳಲ್ಲಿ ಫಲಾನುಭವಿಗಳಿಗೆ ನೀಡಲಾಗುತ್ತದೆ.
ಪಿಎಂ ಕಿಸಾನ್ ಯೋಜನೆಯಲ್ಲಿ ಒಂದು ವರ್ಷದಲ್ಲಿ 6,000 ರೂ ಹಣವನ್ನು ರೈತರಿಗೆ ನೀಡಲಾಗುತ್ತಿದೆ. ಅಂದರೆ, ತಲಾ 2,000 ರೂಗಳಂತೆ ಮೂರು ಕಂತುಗಳಲ್ಲಿ ಈ ಹಣವನ್ನು ನೀಡಲಾಗುತ್ತಿದೆ. ಈಗ ಒಂದು ಕಂತು ಹೆಚ್ಚು ಮಾಡಬಹುದು. 2,000 ರೂಗಳ ನಾಲ್ಕು ಕಂತುಗಳನ್ನು ರೈತರ ಖಾತೆಗಳಿಗೆ ಹಾಕಬಹುದು. ಒಟ್ಟು ಒಂದು ವರ್ಷದಲ್ಲಿ 8,000 ರೂ ಹಣವು ರೈತರಿಗೆ ಸಿಗಲಿದೆ.
20 ನೇ ಕಂತು ಅಕ್ಟೋಬರ್ 2025 ರಲ್ಲಿ ಬಿಡುಗಡೆಯಾಯಿತು. ಪಿಎಂ ಕಿಸಾನ್ ಕಂತುಗಳನ್ನು ಸಾಮಾನ್ಯವಾಗಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಬಿಡುಗಡೆ ಮಾಡಲಾಗುತ್ತದೆ. 20 ನೇ ಕಂತು ಆರಂಭದಲ್ಲಿ ಜೂನ್/ಜುಲೈನಲ್ಲಿ ನಿರೀಕ್ಷಿಸಲಾಗಿತ್ತು ಆದರೆ ವಿಳಂಬವಾಗಿದೆ. ಈ ವಿಳಂಬಕ್ಕೆ ಸರ್ಕಾರ ಅಧಿಕೃತ ಕಾರಣವನ್ನು ಒದಗಿಸಿಲ್ಲ.
2019 ರಲ್ಲಿ ಪ್ರಾರಂಭವಾದ PM-KISAN ಯೋಜನೆಯಿಂದ ಈಗಾಗಲೇ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಬಹಳಷ್ಟು ಅನುಕೂಲವಾಗಿದೆ. ವಾರ್ಷಿಕವಾಗಿ ₹6,000 ಧನಸಹಾಯ ಸರ್ಕಾರದಿಂದ ಪಡೆಯಬಹುದು. ಇದನ್ನು ತಲಾ ₹2,000 ದಂತೆ ಮೂರು ಕಂತುಗಳಲ್ಲಿ ಪ್ರತೀ ಬಾರಿ ನೀಡಲಾಗುತ್ತದೆ. ಈ ಯೋಜನೆಯು ಕೃಷಿಗೆ ಹೆಚ್ಚು ಪ್ರೋತ್ಸಾಹ, ಬೆಳೆ-ಸಂಬಂಧಿತ ವೆಚ್ಚಗಳಿಗೆ ಆರ್ಥಿಕ ಬಲ ನೀಡುವ ಉದ್ದೇಶದಿಂದ ಆರಂಭ ಮಾಡಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಪ್ರಯೋಜನವನ್ನು ನೀಡಲಾಗುತ್ತದೆ. ರೈತ ಮತ್ತು ಅವನ ಮಗ ಇಬ್ಬರೂ ಕೃಷಿ ಮಾಡುತ್ತಿದ್ದರೂ ಸಹ, ಇಬ್ಬರೂ ಒಟ್ಟಿಗೆ ಈ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ಈ ಯೋಜನೆಯ ಪ್ರಯೋಜನವನ್ನು ಕೃಷಿ ಭೂಮಿಯನ್ನು ಯಾರ ಹೆಸರಿನಲ್ಲಿ ನೋಂದಾಯಿಸಲಾಗಿದೆಯೋ ಆ ಸದಸ್ಯರಿಗೆ ಮಾತ್ರ ನೀಡಲಾಗುತ್ತದೆ, ಅಂದರೆ, ಭೂಮಿಯನ್ನು ಯಾರ ಹೆಸರಿನಲ್ಲಿ ನೋಂದಾಯಿಸಲಾಗಿದೆಯೋ ಅವರನ್ನು ಅರ್ಹರೆಂದು ಪರಿಗಣಿಸಲಾಗುತ್ತದೆ.
ಇದು ರೈತರ ಕಲ್ಯಾಣ ಮತ್ತು ಕೃಷಿ ಸಮೃದ್ಧಿಗೆ ಸರ್ಕಾರದ ಬದ್ಧತೆಯನ್ನು ಬಲಪಡಿಸುತ್ತದೆ. ಈ ಕಂತಿನೊಂದಿಗೆ, ಈ ಯೋಜನೆಯು ದೇಶಾದ್ಯಂತ ರೈತರಿಗೆ ಬೆಂಬಲ ನೀಡಲಿದೆ ಮತ್ತು ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿ ಸಮೃದ್ಧಿಗೆ ಸರ್ಕಾರದ ಬದ್ಧತೆಯನ್ನು ಮತ್ತಷ್ಟು ದೃಢೀಕರಿಸಲಿದೆ.
ಪಿಎಂ ಕಿಸಾನ್ ಕೇಂದ್ರ ಸರ್ಕಾರದ PM-KISAN Portal ನಲ್ಲಿ ಹಾಗೂ ಮೊಬೈಲ್ (https://pmkisan.gov.in)ಈ ಲಿಂಕ್ ಮೂಲಕ ಸಹ ನೀವು ನಿಮ್ಮ ಪಿಎಂ ಕಿಸಾನ್ ಹಣ ಹೊಸ ಅಪ್ಡೇಟ್ ಹಾಗೂ ಈ ಕೆವೈಸಿ ಮಾಡಬಹುದು. ಪಿ.ಎಂ.ಕಿಸಾನ್ ಯೋಜನೆಯಡಿ ರೈತ ಬಂಧುಗಳು ಆರ್ಥಿಕ ನೆರವು ಪಡೆಯಲು e-KYC ಕಡ್ಡಾಯಗೊಳಿಸಲಾಗಿದೆ. e-KYC ಮಾಡಿಸಲು ಬಾಕಿ ಇರುವ ರೈತರು ಕೂಡಲೇ e-KYC ಮಾಡಿಸಿಕೊಳ್ಳಲು ಕೋರಿದೆ.

