ದನಗಳ ಶೆಡ್ : ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯ ನಂತರ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಜಾನುವಾರು ಸಾಕಾಣಿಕೆ ಪ್ರಮುಖ ಜೀವನಾಧಾರವಾಗಿದೆ. ರೈತರ ಆದಾಯ ಹೆಚ್ಚಿಸಲು, ಸುರಕ್ಷಿತ ಹಾಗೂ ಸ್ವಚ್ಛ ಪರಿಸರದಲ್ಲಿ ಜಾನುವಾರುಗಳ ಆರೋಗ್ಯಕರ ಬೆಳವಣಿಗೆಗೆ ನೆರವಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಸಬ್ಸಿಡಿ ಮತ್ತು ಸಹಾಯಧನ ಯೋಜನೆಗಳನ್ನು ಜಾರಿಗೆ ತಂದಿವೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾನುವಾರುಗಳ ಶೆಡ್‌ಗಳ ನಿರ್ಮಾಣಕ್ಕೆ 57 ಸಾವಿರ ರೂ.ಗಳ ಸಾಯಧನವನ್ನು ಪಡೆಯಬಹುದಾಗಿದೆ. ಜೊತೆಗೆ ವೈಯಕ್ತಿಕ ಕಾಮಗಾರಿಗೆ ಸರ್ಕಾರದಿಂದ ಸಹಾಯಧನ ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಶೆಡ್‌ಗಳ ನಿರ್ಮಾಣಕ್ಕೆ ಸಹಾಯಧನ ಪಡೆಯುವುದು ಹೇಗೆ ಎಂಬುದನ್ನು ತಿಳಿಯೋಣ.
ಕುರಿ, ಆಡು ಸಾಕಾಣಿಕೆ ಮಾಡುವವರಿಗೆ ಸಂತಸದ ಸುದ್ದಿ. ನಿಮ್ಮ ಆಡುಗಳಿಗೆ ಶೆಡ್ ಇಲ್ಲವೇ. ಮನೆಯ ಹೊರಗಡೆ ಬಯಲಲ್ಲೇ ಕಟ್ಟುತ್ತಿದ್ದೀರಾ. ಹಾಗಾದರೆ ಇನ್ನೂ ಮುಂದೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ. ನಿಮ್ಮ ಕುರಿ, ಮೇಕೆಗಳನ್ನು ಕಾಡುಪ್ರಾಣಿಗಳಿಂದ ಹಾಗೂ ಕಳ್ಳರಿಂದ ರಕ್ಷಿಸಿಕೊಳ್ಳಲು ಸರ್ಕಾರ ನರೇಗಾ ಯೋಜನೆಯಡಿ ಸಹಾಯಧನ ನೀಡುತ್ತಿದೆ. ಇಂದೇ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಿರಿ.
ಜಾನುವಾರು ಸಾಕಾಣೆಯೊಂದಿಗೆ ಅವುಗಳ ಲಾಲನೆ ಪಾಲನೆ ಅತೀ ಅವಶ್ಯಕ ಹಾಗಾಗಿ ಇವುಗಳ ಪಾಲನೆ ಸುಗಮವಾಗಿ ನಡೆದಲ್ಲಿ ಜನರ ಜೀವನೋಪಾಯಕ್ಕೆ ದಾರಿಯಾಗುವುದು. ಈ ಸದುದ್ದೇಶದಿಂದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಆಡು ಸಾಕಾಣಿಕೆಗೆ ನೆರವು ನೀಡಲು ಹೆಚ್ಚು ಒತ್ತು ನೀಡಲಾಗುತ್ತಿದೆ.
ನರೇಗಾ ಯೋಜನೆಯಡಿ ಸಹಾಯಧನ(MGNREGA)
ಆಡು ಶೆಡ್ ನಿರ್ಮಾಣಕ್ಕೆ ಈ ಹಿಂದೆ 43 ಸಾವಿರ ರೂಪಾಯಿ ಅನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ, ಸಾಮಾನ್ಯ ವರ್ಗದವರಿಗೆ 19,500 ರೂಪಾಯಿ ಆರ್ಥಿಕ ನೆರವನ್ನು ಒದಗಿಸಲಾಗುತ್ತಿತ್ತು. ಈಗ 68ಸಾವಿರ ರೂಪಾಯಿ ನೀಡಲಾಗುತ್ತಿದೆ. 10 ಆಡುಗಳು ವಾಸಿಸುವಂತೆ ಹೊಸ ಮಾದರಿಯ ಶೆಡ್ ನಿರ್ಮಾಣಕ್ಕೆ ಕೂಲಿ ರೂಪಾಯಲ್ಲಿ 1613 ರೂಪಾಯಿ ಹಾಗೂ ಸಾಮಗ್ರಿ ರೂಪದಲ್ಲಿ 66387 ರೂಪಾಯಿ ಫಲಾನುಭವಿಗಳಿಗೆ ಪಾವತಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಪಂಚಾಯತಿಗೆ ಸಂಪರ್ಕಿಸಿ.
ಜಾನುವಾರು ಶೆಡ್‌ಗೆ ಭಾರೀ ಬೇಡಿಕೆ –
ನರೇಗಾ ಯೋಜನೆಯಡಿ ನಿರ್ಮಿಸುವ ಜಾನುವಾರು ಶೆಡ್‌ಗೆ ರೈತರಿಂದ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ವರ್ಷದಿಂದ ವರ್ಷಕ್ಕೆ ಶೆಡ್ ನಿರ್ಮಿಸಿಕೊಳ್ಳುವ ರೈತರ ಸಂಖ್ಯೆ ದ್ವಿಗುಣವಾಗುತ್ತಿದೆ. ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 2,868 ಶೆಡ್‌ಗಳನ್ನು ನಿರ್ಮಿಸಿಕೊಳ್ಳಲಾಗಿದೆ. 2024-25ನೇ ಸಾಲಿನಲ್ಲಿ ಶೆಡ್‌ಗಳ ಸಂಖ್ಯೆ 3,098ಕ್ಕೆ ಏರಿಕೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ 5,600 ಶೆಡ್‌ಗಳ ನಿರ್ಮಾಣಕ್ಕೆ ರೈತರಿಂದ ಬೇಡಿಕೆ ಬಂದಿರುವುದು ಆಶಾದಾಯಕ ಸಂಗತಿಯಾಗಿದೆ.
MNREGA ಅಡಿಯಲ್ಲಿ ಶೆಡ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವ ವಿಧಾನ –
ನರೇಗಾ ಯೋಜನೆಯಡಿ ಜಾನುವಾರು ಶೆಡ್ ನಿರ್ಮಾಣಕ್ಕೆ ಸಹಾಯಧನ ಪಡೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
* ಜಾಬ್ ಕಾರ್ಡ್ ಪಡೆಯುವುದು: ನರೇಗಾ ಯೋಜನೆಯ ಲಾಭ ಪಡೆಯಲು ಮೊದಲು ಪ್ರತಿ ಕುಟುಂಬವು ಜಾಬ್ ಕಾರ್ಡ್ ಹೊಂದಿರಬೇಕು. ಜಾಬ್ ಕಾರ್ಡ್ ಇಲ್ಲದಿದ್ದಲ್ಲಿ, ನಿಮ್ಮ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
* ಪಶು ವೈದ್ಯಾಧಿಕಾರಿಗಳ ದೃಢೀಕರಣ: ನೀವು ಜಾನುವಾರುಗಳನ್ನು ಸಾಕುತ್ತಿದ್ದೀರಿ ಮತ್ತು ಅವರಿಗೆ ಸುರಕ್ಷಿತ ಶೆಡ್ ಅಗತ್ಯವಿದೆ ಎಂಬುದನ್ನು ದೃಢೀಕರಿಸಲು ಸ್ಥಳೀಯ ಪಶು ಚಿಕಿತ್ಸಾಲಯಕ್ಕೆ ಭೇಟಿ ನೀಡಿ, ಅಧಿಕೃತ ದೃಢೀಕರಣ ಪತ್ರ ಪಡೆಯಬೇಕು.
* ಅರ್ಜಿ ಸಲ್ಲಿಕೆ: ಮೇಲೆ ತಿಳಿಸಿದ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ, ಜಾನುವಾರು ಶೆಡ್ ನಿರ್ಮಾಣದ ವೈಯಕ್ತಿಕ ಕಾಮಗಾರಿಗೆ ಅರ್ಜಿ ಸಲ್ಲಿಸಬೇಕು.
* ಪರಿಶೀಲನೆ ಮತ್ತು ಅನುಮೋದನೆ: ಗ್ರಾಮ ಪಂಚಾಯತ್‌ನ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸಿ, ಸ್ಥಳ ಪರಿಶೀಲನೆ ನಡೆಸುತ್ತಾರೆ. ಎಲ್ಲವೂ ಸೂಕ್ತವಾಗಿದ್ದರೆ, ಕಾಮಗಾರಿ ಆರಂಭಕ್ಕೆ ಅನುಮತಿ (Technical and Administrative Sanction) ನೀಡಲಾಗುತ್ತದೆ.
* ಕಾಮಗಾರಿ ಆರಂಭ ಮತ್ತು ಅನುದಾನ ಬಿಡುಗಡೆ: ಅನುಮತಿ ದೊರೆತ ನಂತರ ಶೆಡ್ ನಿರ್ಮಾಣ ಕಾಮಗಾರಿಯನ್ನು ಆರಂಭಿಸಬಹುದು. ಕಾಮಗಾರಿಯ ಹಂತ ಹಂತವಾಗಿ (ಉದಾ: ಅಡಿಪಾಯ, ಗೋಡೆ, ಸೂರಿನ ಹಂತದಲ್ಲಿ) ಪರಿಶೀಲನೆ ನಡೆಸಿ, ನಿಗದಿತ ಮೊತ್ತವನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
ನರೇಗಾ ಯೋಜನೆಯಡಿ ಕೃಷಿಹೊಂಡ ನಿರ್ಮಾಣ –
ನರೇಗಾ ಯೋಜನೆ ಅಡಿ ಅರ್ಹ ಫಲಾನುಭವಿಯು ಯೋಜನೆ ಅಡಿ ನಿರ್ಮಿಸಿಕೊಂಡ ಕೃಷಿಹೊಂಡ ಕಾಮಗಾರಿಯನ್ನು ಮುಂದಿನ ಐದು ವರ್ಷಗಳವರೆಗೆ ಮುಚ್ಚತಕ್ಕದ್ದಲ್ಲ. ಒಂದು ವೇಳೆ ಫಲಾನುಭವಿಯು ಕೃಷಿ ಹೊಂಡವನ್ನು ಮುಚ್ಚಿದ್ದಲ್ಲಿ ಕೃಷಿಹೊಂಡ ನಿರ್ಮಾಣಕ್ಕಾಗಿ ತಗಲಿದ ವೆಚ್ಚ ಹಾಗೂ ಶೇಕಡ 18ರಷ್ಟು ಬಡ್ಡಿ ಸೇರಿ ಸರ್ಕಾರಕ್ಕೆ ಬರಣ ಮಾಡತಕ್ಕದ್ದು.
ಕೃಷಿ ಹೊಂಡ ನಿರ್ಮಾಣ ಕಾಮಗಾರಿಯನ್ನು ಅನುಷ್ಠಾನಗೊಳಿಸುವ ಮುಂಚೆ ಫಲಾನುಭವಿಗಳಿಂದ ಮುಚ್ಚಳಿಕೆ ಪತ್ರವನ್ನು ಕಡ್ಡಾಯವಾಗಿ ಪಡೆಯತಕ್ಕದ್ದು ಕೃಷಿ ಹೊಂಡ ಕಾಮಗಾರಿಗಳ ಕ್ರಿಯಾಯೋಜನೆಯನ್ನು ಅನುಮೋದನೆಗಾಗಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸುವಾಗ ಮುತ್ತಳಿಕೆ ಪತ್ರದ ಪ್ರತಿಯನ್ನು ಲಗತ್ತಿಸುವುದು ಕಾಮಗಾರಿಗಳ ಆಯ್ಕೆ ಮಾಡುವಾಗ ತಾಂತ್ರಿಕವಾಗಿ ಸೈಟ್ ಫೀಸಿಬಿಲಿಟಿ ಇರುವುದನ್ನ ಖಚಿತಪಡಿಸಿಕೊಳ್ಳುವುದು ಕೃಷಿಹೊಂಡ ಕಾಮಗಾರಿಯ ಅನುಮೋದನೆಯಾದ ಆರ್ಥಿಕ ವರ್ಷದಲ್ಲಿಯೇ ಕಡ್ಡಾಯವಾಗಿ ಪೂರ್ಣಗೊಳಿಸುವುದು.

