ಬಿ ಖಾತಾ : ರೈತರೇ ಇವತ್ತು ಸರ್ಕಾರವು ಒಂದು ಗಡುವು ನೀಡಿದೆ. ಏನೆಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಒಟ್ಟು 25 ಲಕ್ಷ ಕರಡು ಇ-ಖಾತಾಗಳಿವೆ. ಇದನ್ನು ಬಿ ಖಾತಾದಿಂದ ಎ ಖಾತಾಗೆ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ನಿರ್ಧರಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಬೆಂಗಳೂರು ಮಹಾನಗರದಲ್ಲಿ ಬಿ ಖಾತಾವನ್ನು ಎ ಖಾತಾವಾಗಿ ಪರಿವರ್ತಿಸಲು 100 ದಿನಗಳ ವಿಶೇಷ ಅಭಿಯಾನ ಆರಂಭವಾಗಿದೆ. ನವೆಂಬರ್ 1 ರಿಂದ ಫೆಬ್ರವರಿ ಮೊದಲ ವಾರದವರೆಗೆ ಈ ಅವಕಾಶ ಲಭ್ಯವಿದೆ. ಸೂಕ್ತ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಖಾತಾ ಬದಲಾವಣೆ ಮಾಡಿಕೊಳ್ಳಬಹುದು. ಕನಿಷ್ಠ ಶುಲ್ಕದಲ್ಲಿ ಈ ಸೌಲಭ್ಯ ಲಭ್ಯವಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಸದ್ಯ ಐದು ಲಕ್ಷದಷ್ಟು ಇ-ಖಾತಾವನ್ನು ಆಸ್ತಿ ಮಾಲೀಕರಿಗೆ ವಿತರಣೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸುವವರಿಗೆ ಇ- ಖಾತಾ ಕಡ್ಡಾಯಗೊಳಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಮುಂದಿನ ತಿಂಗಳ ಜುಲೈ 1ರಿಂದ ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ತಮ್ಮ ಕಟ್ಟಡ ನಕ್ಷೆ, ಮಂಜೂರಾತಿ ಮಾಡಿಕೊಡಲು ಪಾಲಿಕೆಗೆ ಅರ್ಜಿ ಸಲ್ಲಿಸಿದರೆ ಅಂತವರು ಇ-ಖಾತಾ ಹೊಂದಿರಬೇಕು. ಇಲ್ಲವಾದಲ್ಲಿ ಸೂಕ್ತ ದಾಖಲೆಗಳ ಸಮೇತ ಇ-ಖಾತಾ ಪಡೆಯುವಂತೆ ಡಿಕೆ ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಇ-ಖಾತೆ ಪಡೆಯುವಂತೆ ಜನರಿಗೆ ಕರೆ ನೀಡಿದ್ದಾರೆ. ಇಲ್ಲವಾದರೆ ಮಂಜೂರಾತಿ ಸಿಗುವುದು ಅನುಮಾನ ಎನ್ನಲಾಗಿದೆ.
ಅಭಿಯಾನ ಆರಂಭ ಯಾವಾಗ?
ಬಿ ಖಾತಾದಿಂದ ಎ ಖಾತಾ ಬದಲಾವಣೆ ಅಭಿಯಾನ ನವೆಂಬರ್ 1 ಕ್ಕೆ ಆರಂಭವಾಗಲಿದೆ. ಅಲ್ಲಿಂದ ಫೆಬ್ರವರಿ ಮೊದಲ ವಾರದವರೆಗೂ ನಡೆಯಲಿದೆ.
ನಿಮ್ಮಲ್ಲಿ ಇ-ಖಾತಾ ಇಲ್ಲದಿದ್ದರೆ ಚಿಂತೆ ಬೇಡಿ. ಅದನ್ನು ಪಡೆಯುವುದು ಮತ್ತಷ್ಟು ಸರಳ, ಸುಲಭವಾಗಿದೆ. ಕಟ್ಟಡ ಮಾಲೀಕರು ಸೂಕ್ತ ದಾಖಲೆಗಳೊಂದಿಗೆ ಆನ್ಲೈನ್ನಲ್ಲಿ https://bbmp.karnataka.gov.in/newkhata ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿಬೇಕು. ನಿಗದಿತ ಶುಲ್ಕ ಪಾವತಿಸಿದರೆ ಎರಡನೇ ದಿನದಲ್ಲಿ ನೀವು ಅಂತಿಮ ಇ- ಖಾತಾವನ್ನು ಪಡೆದುಕೊಳ್ಳುತ್ತೀರಿ ಎಂದು ಅವರು ಡಿಕೆ ಶಿವಕುಮಾರ್ ವಿವರಿಸಿದ್ದಾರೆ.
ಮೊದಲು ಇ-ಖಾತಾವನ್ನು ಬೆಂಗಳೂರು ಒನ್, ಬಿಬಿಎಂಪಿ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ಪಡೆಯಬೇಕಿತ್ತು. ಇದೀಗ ನೀವು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಪಡೆಯಬಹದು. ಸಾಲದೆಂಬಂತೆ ಇತ್ತೀಚೆಗೆ ಬಿಬಿಎಂಪಿಯು ‘ಜನಸೇವಕ’ ವ್ಯವಸ್ಥೆ ಜಾರಿಗೆ ತಂದಿದೆ. ನೀವು
ಇಲ್ಲವೇ ಜನಸೇವಕ ಸಹಾಯವಾಣಿಗೆ ಕರೆ ಮಾಡಿದರೆ ಮನೆಗೆ ಬಾಗಲಿಗೆ ಬಂದು ಎರಡೇ ದಿನದಲ್ಲಿ ನಿಮಗೆ ಅಂತಿಮ ಇ-ಖಾತಾ ನೀಡುತ್ತಾರೆ.
ಇ-ಖಾತೆಗೆ ಈ ದಾಖಲೆಗಳಿದ್ದರೆ ಸಾಕು –
ಇನ್ನು ಯಾರೆಲ್ಲ ಈ ಖಾತಾ ಪಡೆದಿಲ್ಲವೋ ಅಂತಹ ಕಟ್ಟಡ ಮಾಲೀಕರು ‘ಆಧಾರ್ ಕಾರ್ಡ್, ಆಸ್ತಿ ತೆರಿಗೆ ಎಸ್.ಎ.ಎಸ್ ಸಂಖ್ಯೆ, ಮಾರಾಟ ಅಥವಾ ನೋಂದಾಯಿತ ಪತ್ರ, ಸ್ವತ್ತಿನ ಛಾಯಾಚಿತ್ರ” ಈ ಎಲ್ಲ ದಾಖಲೆಗಳ ಮೂಲಕ https://bbmp.karnataka.gov.in/newkhata/ ಈ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಇಲ್ಲವೇ 080-4920-3888 ಗೆ ಕರೆ ಮಾಡಿ (ಜನಸೇವಕ) ಮನೆಯಲ್ಲಿಯೇ ಕುಳಿತ ಇ-ಖಾತಾ ಪಡೆಯಬಹುದು.
ಬಿಬಿಎಂಪಿ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿದೆ. ಆದರೆ ಅದನ್ನು ಪರಿಣಾಮಕಾರಿಯಾಗಿ ವಿತರಣೆ ಗುರಿ ಹೊಂದಿದರೂ ಸಹಿತ, ನಿರಂತರ ಜಾಗೃತಿ ಕಾರ್ಯಕ್ರಮಗಳ ಮಧ್ಯೆ ಇ-ಖಾತಾ ಕೇವಲ ಐದು ಲಕ್ಷ ವಿತರಣೆ ಆಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವಂತೆ ಬಿಬಿಎಂಪಿ ಕರೆ ನೀಡಿದೆ.
2000 ಚ. ಮೀ ಒಳಗಿನ ಸೈಟ್ಗಳಿಗೆ ಬಿ ಖಾತಾವನ್ನು ಎ ಖಾತಾ ಆಗಿ ಪರಿವರ್ತಿಸುವ ವಿಧಾನ ಹೇಗೆ?
* ಆನ್ಲೈನ್ ಮೊಬೈಲ್ ಮತ್ತು ಒಟಿಪಿ ಆಧಾರಿತ ಲಾಗಿನ್ ಮಾಡಬೇಕು. @ https://BBMP.karnataka.gov.in/BtoAKhata
ಎ- ಖಾತಾ ಆಗಿ ಪರಿವರ್ತಿಸಬೇಕಾದ ಅಂತಿಮ. *ಬಿ-ಖಾಟಾದ ePID ನಮೂದು ಮಾಡಬೇಕು.
* ಎಲ್ಲಾ ಮಾಲೀಕರ ಆಧಾರ್ ದೃಢೀಕರಣ ಮಾಡಬೇಕು.
ಸೈಟ್ನ ಮುಂಭಾಗದ ರಸ್ತೆ “ಸಾರ್ವಜನಿಕ ರಸ್ತೆ” ಆಗಿರಬೇಕು ಮತ್ತು ಅದು “ಖಾಸಗಿ ರಸ್ತೆ” ಆಗಿದ್ದರೆ ನಾಗರಿಕರು “ಸಾರ್ವಜನಿಕ ರಸ್ತೆ” ಗೆ ಪರಿವರ್ತಿಸಲು ಒಪ್ಪಿಗೆ ನೀಡಬೇಕು.
* ಪರಿವರ್ತಿತ ಮತ್ತು ಪರಿವರ್ತಿಸದ (ಆದಾಯ ಸೈಟ್ಗಳು) ಎರಡೂ ರೀತಿಯ ಸೈಟ್ಗಳು ಅರ್ಜಿ ಸಲ್ಲಿಸಬಹುದು. (ಫ್ಲಾಟ್ಗಳು ಅರ್ಹವಲ್ಲ)
* ಸ್ಥಳ ಮತ್ತು ಇತರ ವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ.
* ನಗರ ಪಾಲಿಕೆದಿಂದ ಸ್ಥಳ ಭೇಟಿ ಮತ್ತು ದೃಢೀಕರಣ ಮಾಡಿಕೊಳ್ಳಬೇಕು.
* ಅರ್ಹತೆ ಇದ್ದರೆ ಸೈಟ್ನ ಮಾರ್ಗದರ್ಶನ ಮೌಲ್ಯದ 5% ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಬೇಕು.
* ನಗರ, ನಿಗಮ ಆಯುಕ್ತರ ಅನುಮೋದನೆಯ ನಂತರ ಸಾಫ್ಟ್ವೇರ್ ವ್ಯವಸ್ಥೆಯಿಂದ ಸ್ವಯಂಚಾಲಿತ ಅನುಮೋದನೆ.
* ಬಳಿಕ ಬಿ-ಖಾತಾದಿಂದ ಎ-ಖಾತಾಗೆ ಸ್ವಯಂಚಾಲಿತ ಪರಿವರ್ತನೆಯಾಗಲಿದೆ.

