ಭಾರತ ಸರ್ಕಾರ ಮತ್ತು ವಿವಿಧ ರಾಜ್ಯಗಳು ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಸ್ಥಿರತೆ ಹೆಚ್ಚಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಇದರ ಭಾಗವಾಗಿ, “ಕುರಿ ಸಾಕಾಣಿಕೆ ಯೋಜನೆ 2025” (Sheep and Goat Farming Scheme) ಪ್ರಾರಂಭಿಸಲಾಗಿದೆ. ಈ ಯೋಜನೆಯು ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಪ್ರೋತ್ಸಾಹಿಸುವ ಮೂಲಕ ಗ್ರಾಮೀಣರಿಗೆ ಹೆಚ್ಚುವರಿ ಆದಾಯದ ಮಾರ್ಗವನ್ನು ಸೃಷ್ಟಿಸುತ್ತದೆ.
ಆಯ್ಕೆ ಪ್ರಕ್ರಿಯೆ ಮತ್ತು ತರಬೇತಿ :
ಅರ್ಜಿಗಳನ್ನು ಸ್ಥಳೀಯ ಲಭ್ಯತೆ, ಆರ್ಥಿಕ ಸ್ಥಿತಿ ಮತ್ತು ಅರ್ಹತೆಯ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ.
ಆಯ್ಕೆಯಾದವರಿಗೆ ಕುರಿ ಸಾಕಾಣಿಕೆ, ಆರೋಗ್ಯ ರಕ್ಷಣೆ ಮತ್ತು ಮಾರುಕಟ್ಟೆ ತಂತ್ರಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.
ಅನುಗ್ರಹ ಯೋಜನೆ :
ಮರಣಿಸಿದ ಕುರಿ/ಮೇಕೆಗಳ ಶವ ಪರೀಕ್ಷೆಗೆ ಮೊದಲು ಮತ್ತು ಶವ ಪರೀಕ್ಷೆ ನಂತರೆ ಭಾವಚಿತ್ರಗಳಲ್ಲಿ ಫಲಾನುಭವಿ ಮತ್ತು ಶವ ಪರೀಕ್ಷೆ ನಡೆಸಿದ ಪಶುವೈದ್ಯರು ಇರುವ ಜಿ.ಪಿ.ಆರ್.ಎಸ್ ಭಾವಚಿತ್ರಗಳನ್ನು ತೆಗೆದು ಶವ ಪರೀಕ್ಷೆ ನಡೆಸಿದ ಪಶುವೈದ್ಯರು ದೃಢೀಕರಿಸುವುದು.
ಮರಣಿಸಿದ ಕುರಿ/ಮೇಕೆಗಳ ಭಾವಚಿತ್ರಗಳನ್ನು ಸಂಬಂಧಪಟ್ಟ ಪಶುವೈದ್ಯರು, ಸಹಾಯಕ ನಿರ್ದೇಶಕರು ಪರಿಶೀಲಿಸಿ ಸಲ್ಲಿಸುವುದು ಹಾಗೂ ಮರಣೀಸಿದ ಕುರಿ/ಮೇಕೆಗಳ ಭಾವಚಿತ್ರ ಗಳಿಗೆ ಸಂಬಂಧಿಸಿದಂತೆ ಶವ ಪರೀಕ್ಷೆ ನಡೆಸಿದ ಪಶುವೈದ್ಯರೇ ವೈಯುಕ್ತಿಕ ಜವಾಬ್ದಾರರಾಗಿರುತ್ತಾರೆ.
ಮರಣೋತ್ತರ ವರದಿ, ಫೋಟೋಗಳು, ಫಲಾನುಭವಿ ಅರ್ಜಿ, ಆಧಾರ್ ಲಿಂಕ್‌ಆಗಿರುವ ಬ್ಯಾಂಕ್ ಖಾತೆ ಮತ್ತು ಮುಂಗಡ ಹಣ ಸಂದಾಯ ರಶೀದಿಯಲ್ಲಿ ಫಲಾನುಭವಿಗಳ ಸಹಿ, ಪೂರ್ಣ ವಿಳಾಸ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ತಪ್ಪದೇ ವೋಚರಳನ್ನು ದೃಢೀಕರಿಸಿ ಸಲ್ಲಿಸುವುದು.
ರಾಜ್ಯದ 28 ಮಾರುಕಟ್ಟೆಗಳಿಗೆ ತಲಾ ರೂ 50 ಲಕ್ಷಗಳಂತೆ ಮತ್ತು ರಾಜ್ಯದ 25 ಮಾರುಕಟ್ಟೆಗಳಿಗೆ ತಲಾ ರೂ.20.00ಲಕ್ಷಗಳ ಅನುದಾನವನ್ನು ಸರ್ಕಾರವು ಸ್ಥಳೀಯ ಎ.ಪಿ.ಎಂ.ಸಿಗಳಿಗೆ ಬಿಡುಗಡೆ ಮಾಡಿದೆ.
ಈ ಮಾರುಕಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ನೀರು, ನೆರಳು, ತೂಕದ ವ್ಯವಸ್ಥೆ, ಕುರಿ:ಮೇಕೆಗಳನ್ನು ನಿಲ್ಲಿಸಿಕೊಳ್ಳಲು ವಿವಿಧ ಅಳತೆಯ ಬ್ಯಾರಕ್‌ಗಳು, ವೈದ್ಯಕೀಯ ಸೌಲಭ್ಯ-ಮುಂತಾದವುಗಳನ್ನು ಒದಗಿಸಲಾಗಿದೆ. ಈ ಮಾರುಕಟ್ಟೆಗಳ ನಿರ್ವಹಣೆಯನ್ನು ಹತ್ತಿರದ ಸಮರ್ಪಕವಾಗಿ ನಡೆಯುತ್ತಿರುವ ಸಹಕಾರ ಸಂಘಗಳಿಗೆ ವಹಿಸಲಾಗಿದೆ. ಇದರಿಂದ ಕುರಿ:ಮೇಕೆಸಾಕಾಣಿಕೆದಾರರಿಗೆ ವೈಜ್ಞಾನಿಕ ಬೆಲೆ ಸಿಗುವಂತಾಗಿದೆ.
ಸಂಪರ್ಕ ವಿಳಾಸ –
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಕುರಿ ಭವನ, ಹೆಬ್ಬಾಳ, ಬೆಂಗಳೂರು-24
charmankswdcl@gmail.com : 8277 100 200
ಸಾಕಾಣಿಕೆ ಉದ್ಯಮ ಆಕರ್ಷಕವಾಗಿದ್ದರೂ ಅದರಲ್ಲಿರುವ ಅದರದ್ದೇ ಆದ ಸವಾಲು ಇರುವುದು ಸಹಜ. ಕರ್ನಾಟಕದಲ್ಲಿ ಕುರಿ ಸಾಕಾಣಿಕೆಗೆ ಸಂಬಂಧಿಸಿದಂತೆ ಇರುವ ಮುಖ್ಯ ಸವಾಲು ಎಂದರೆ ಸಾಕಲು ಯೋಗ್ಯವಾದ ಕುರಿ ತಳಿಯನ್ನು ಹುಡುಕುವುದು ಕಷ್ಟ. ಈ ಉದ್ಯಮದಲ್ಲಿ ಯಶಸ್ಸು ಪಡೆಯಲು ಉದ್ಯಮಿಗಳು ಆರೋಗ್ಯಕರವಾದ ಹಾಗೂ ಗುಣಮಟ್ಟದ ಕುರಿ ತಳಿಗಳನ್ನು ಗುರುತಿಸಬಹುದಾಗಿದೆ. ಈ ಅಂಶವನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಸರ್ಕಾರವು ತಳಿ ಅಭಿವೃದ್ಧಿ ಕೇಂದ್ರಗಳು ಹಾಗೂ ಗುಣಮಟ್ಟದ ಕುರಿ ಫಾರ್ಮ್ ಗಳನ್ನು ಸ್ಥಾಪಿಸಿದೆ.
ಇದರ ಜೊತೆಗೆ ಸರ್ಕಾರವು ಕುರಿ ಸಾಕಾಣಿಕೆಯಲ್ಲಿ ತೊಡಗುವ ರೈತರಿಗೆ ವಿವಿಧ ಬಗೆಯ ಪ್ರೋತ್ಸಾಹದ ಬೆಂಬಲಗಳನ್ನೂ ಸಹ ಒದಗಿಸುತ್ತದೆ. ಇದು ತರಬೇತಿ ಕಾರ್ಯಕ್ರಮಗಳು, ಸಾಕಣೆ ತಂತ್ರಗಾರಿಕೆಗಳು, ಆರ್ಥಿಕ ಹಾಗೂ ತಾಂತ್ರಿಕ ನೆರವುಗಳನ್ನು ಒಳಗೊಂಡಿದೆ. ಜೊತೆಗೆ ಸರ್ಕಾರವು ರೈತರಿಗೆ ಪ್ರೋತ್ಸಾಹ ಧನ ಹಾಗೂ ಸಬ್ಸಿಡಿಗಳನ್ನು ಸಹ ನೀಡಲಾಗುತ್ತದೆ ಎಂದು ಹೆಬ್ಬಾಳದ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಿಇ ಪದವೀಧರರೊಬ್ಬರು ಕುರಿ ಸಾಕಾಣಿಕೆಯಲ್ಲಿ ಯಶಸ್ಸು ಕಂಡಿದ್ದಾರೆ. ಕೆಲಸ ಸಿಗದೇ ಕುರಿ ಸಾಕಾಣಿಕೆ ದಾರಿ ಹಿಡಿದ ಇಂಜಿನಿಯರ್ ಸಾಹೇಬರು ಇದೀಗ ಲಕ್ಷ ಲಕ್ಷ ಲಾಭ ಗಳಿಸುತ್ತಿದ್ದಾರೆ. ಇದು ಅಚ್ಚರಿ ಅನ್ನಿಸಿದರೂ ಸತ್ಯ!
ದಾವಣಗೆರೆಯ ನಿವಾಸಿ ನಾಗರಾಜಪ್ಪ ಟಿಆರ್ ಕುರಿ ಸಾಕಾಣಿಕೆಯಲ್ಲಿ ಯಶಸ್ಸು ಕಂಡ ಇಂಜಿನಿಯರ್. ಸರ್ಕಾರಿ ಕೆಲಸ ಸಿಗದಿದ್ದರಿಂದ ಎದೆಗುಂದದ ನಾಗರಾಜಪ್ಪ, ಗುತ್ತಿಗೆದಾರನಾಗಿ ವೃತ್ತಿ ಜೀವನ ಆರಂಭಿಸಿದ್ದರು. ಕುರಿ ಸಾಕಣೆಯನ್ನು ತಮ್ಮ ಪ್ರವೃತ್ತಿಯಾಗಿ ಮೈಗೂಡಿಸಿಕೊಳ್ಳುವ ಮೂಲಕ ಇದೀಗ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದು ಇತರರಿಗೂ ಮಾದರಿಯಾಗಿದ್ದಾರೆ.