ಸೇಬು ಬೆಳೆದು ಮೋದಿ ಮನಗೆದ್ದ ಮುಧೋಳ ರೈತ

ರೈತರೇ ನಮ್ಮ ದೇಶ ಕೃಷಿ ವಲಯ ದೇಶ. ರೈತನಿಲ್ಲದೆ ಈ ಜಗತ್ತಿಲ್ಲ ಎಂಬಂತೆ ನಮ್ಮ ಕರ್ನಾಟಕದ ರೈತರು ಸಹ ಹೊಸ ಹೊಸ ಪದ್ದತಿ. ಬಳಸಿ ಯಾರೂ ಮಾಡಿರದ ಸಾಹಸ ಮಾಡೀತ್ತಿದ್ದಾರೆ. ಅದೇ ರೀತಿ ಇವತ್ತು ನಮ್ಮ ಕರ್ನಾಟಕದ ಮುಧೋಳ ರೈತ ಸೇಬು ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ.

ಕೃಷಿ ಹಿಮದ ಪ್ರದೇಶದಲ್ಲಷ್ಟೇ ಭರಪೂರ ಸೇಬು ಬೆಳೆಬಹುದು (Apple cultivation) ಎಂಬ ಕಲ್ಪನೆಯಿದೆ. ಆದರೆ, ಬಿಸಿಲ ನಾಡಿನಲ್ಲಿ ಸೇಬು ಬೆಳೆಯುವ ಮೂಲಕ ಅಚ್ಚರಿ ಮೂಡಿಸಿರುವ ಶ್ರೀಶೈಲ ತೇಲಿ ಅವರು. ಕಳೆದ ಎರಡೂವರೆ ವರ್ಷದಲ್ಲಿ ಸೇಬು ಬೆಳೆದು 15 ಲಕ್ಷ ರೂ.ಗಳ ಲಾಭ ಮಾಡಿದ್ದಾರೆ.

ಕುಳಲಿ ಗ್ರಾಮದಲ್ಲಿ ಸೇಬು ಬೆಳೆದು ಸಾಧನೆ ಮಾಡಿರುವ ರೈತ ಶ್ರೀಶೈಲ್ ತೇಲಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಪ್ರಧಾನಿ. ಮೋದಿ, ಮುಧೋಳ ತಾಲೂಕಿನ ಕುಳಲಿ ಗ್ರಾಮದ ರೈತ ತೇಲಿ ಅವರು ಬಯಲು ಸೀಮೆ ಪ್ರದೇಶದಲ್ಲಿ. ಸೇಬು ಬೆಳೆದು ಸಾಧನೆ ಮಾಡಿರುವ ರೀತಿ ಮೆಚ್ಚುವಂತದ್ದು. ಸೇಬನ್ನು ಅತಿ ಹೆಚ್ಚಾಗಿ ಬೆಟ್ಟಗುಡ್ಡದಲ್ಲಿ ಬೆಳೆಯುತ್ತಾರೆ. ಆದರೆ, ಶ್ರೀಶೈಲ್ ಅವರು ಸೇಬು ಬೆಳೆಯಲು ಯೋಗ್ಯವಲ್ಲದ ಪ್ರದೇಶದಲ್ಲಿ ಬೆಳೆದು, ಸಾಧಿಸಿ, ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ಈ ರೈತ ಸೇಬು ಬೆಳೆದಿರುವುದನ್ನು ನೋಡಿದರೆ ನೀವೆಲ್ಲರೂ ಒಮ್ಮೆ ಅಚ್ಚರಿ ಪಡುತ್ತೀರಿ. 35 ಡಿಗ್ರಿ ತಾಪಮಾನಕ್ಕಿಂತಲೂ ಅಧಿಕವಿರುವ ಏಳು ಎಕರೆ ಪ್ರದೇಶದಲ್ಲಿ ಶ್ರೀಶೈಲ್ ಸೇಬು ಬೆಳೆದಿದ್ದಾರೆ. ಮೊದಲಿಂದಲೂ ಕೃಷಿ ಬಗ್ಗೆ ಅವರಿಗೆ ಆಸಕ್ತಿಯಿತ್ತು. ಸೇಬು ಬೆಳೆಯುವುದರ ಜೊತೆ ಜೊತೆಯಲ್ಲೇ ಒಳ್ಳೆಯ ಆದಾಯ ಕೂಡ ಪಡೆಯುತ್ತಿದ್ದಾರೆ. ಎಕರೆಗೆ ಖರ್ಚುವೆಚ್ಚ ತೆಗೆದು ಮೂರು ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ ಎಂದು ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೇಬು ಸಮಶೀತೋಷ್ಣ ಬೆಳೆಯಾಗಿದ್ದು ಅದು 21 ರಿಂದ 24 ಸಿ ನಡುವಿನ ತಾಪಮಾನದಲ್ಲಿ ಬೆಳೆಯುತ್ತದೆ. ಅವುಗಳನ್ನು ಹೆಚ್ಚಿನ ಎತ್ತರದಲ್ಲಿ (ಸಮುದ್ರ ಮಟ್ಟದಿಂದ 1500-2700 ಮೀ) ಕೂಡ ಬೆಳೆಯಬಹುದು. ಬೆಳೆಯುವ ಋತುವಿನ ಉದ್ದಕ್ಕೂ ಸಮವಾಗಿ ಹಂಚಿಕೆಯಾಗುವ ಮಳೆ, ಸೇಬಿನ ಬೆಳವಣಿಗೆಗೆ ಉತ್ತಮವಾಗಿದೆ. ಜೋರಾದ ಗಾಳಿ ಬೀಸುವ ಪರಿಸ್ಥಿತಿಗಳು ಸೇಬು ಮರಗಳಿಗೆ ಹಾನಿಕಾರಕವಾಗಿದೆ.

ಸೇಬಿನಲ್ಲಿ ಅನುಸರಿಸಬೇಕಾದ ಕ್ರಮಗಳು:

  • ಸೂಕ್ತ ಮಣ್ಣು.
  • ಮಣ್ಣಿನ pH 5.5 – 6.5 ಇರಬೇಕು.
  • ಗೋಡು ಮಿಶ್ರಿತ ಮಣ್ಣಿನಲ್ಲಿ ಸೇಬು ಉತ್ತಮವಾಗಿ ಬೆಳೆಯುತ್ತದೆ.

ಕಸಿ ಮಾಡುವಿಕೆ :

ಸೇಬುಗಳನ್ನು ಹಲವಾರು ವಿಧಾನಗಳಿಂದ ಪ್ರಸರಣ ಮಾಡಲಾಗುತ್ತದೆ. ಸಸಿಯ ಸೀಳನ್ನು ಮತ್ತು ಸಸಿ ಬೇರುಗಳನ್ನು ಉಪಯೋಗಿಸಿ ಕಸಿಮಾಡಬಹುದು. ಫೆಬ್ರುವರಿ-ಮಾರ್ಚ್ ತಿಂಗಳಲ್ಲಿ ಕಾಂಡದಿಂದ 10-15 ಸೆಂ.ಮೀ ಎತ್ತರದಲ್ಲಿ ಕಡ್ಡಿಯನ್ನು ಸೀಳಿ ಕಸಿ ಮಾಡಿದರೆ. ಉತ್ತಮ ಫಲಿತಾಂಶವನ್ನು ನೀಡುತ್ತದೆ, ಸಾಮಾನ್ಯವಾಗಿ ಕಸಿಯನ್ನು ಚಳಿಗಾಲದ ಕೊನೆಯಲ್ಲಿ ಮಾಡಲಾಗುತ್ತದೆ.

ನೆಡುವ ಸಮಯ ಮತ್ತು ವಿಧಾನ:

ನಾಟಿಯನ್ನು ಸಾಮಾನ್ಯವಾಗಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಮಾಡಲಾಗುತ್ತದೆ.

ನಾಟಿ ಮಾಡುವ ಎರಡು ವಾರಗಳ ಮೊದಲು 60 ಸೆಂ.ಮೀ ಅಳತೆಯ ಹೊಂಡಗಳನ್ನು ಅಗೆದು. ಉತ್ತಮ ಲೋಮಿ ಮಣ್ಣು ಮತ್ತು ಸಾವಯವ ಪದಾರ್ಥಗಳಿಂದ ಹೊಂಡದಲ್ಲಿ ತುಂಬಬೇಕು. ಮಣ್ಣನ್ನು ಅಗೆದು ಬೇರುಗಳನ್ನುಹಾನಿಯಾಗದ ಹಾಗೆ ನೆಡಲಾಗುತ್ತದೆ. ಹಾಗೂ ಉಳಿದ ಮಣ್ಣನ್ನು ಹೊಂಡಕ್ಕೆ ತುಂಬಲಾಗುತ್ತದೆ.

ನಾನು ಪ್ರಾಥಮಿಕವಾಗಿ ದ್ರಾಕ್ಷಿಯನ್ನು ಬೆಳೆಸುತ್ತಿದ್ದೆ. ಅವುಗಳಿಂದ ಉತ್ತಮ ಯಶಸ್ಸನ್ನು ಕಂಡೆ, ಹೀಗಿರುವಾಗ ಹೊಸದನ್ನು ಪ್ರಯತ್ನಿಸಲು ಬಯಸಿದ್ದೆ. ಎಂದು ಕೃಷಿ ಕ್ಷೇತ್ರದಲ್ಲಿ ಸವಾಲುಗಳನ್ನು ತೆಗೆದುಕೊಳ್ಳಲು ಉತ್ಸುಕನಾಗಿರುವ ತೇಲಿ ಹೇಳಿದರು. ನನ್ನ ಹುಡುಕಾಟದ ಸಮಯದಲ್ಲಿ, ಉತ್ತರ ಕರ್ನಾಟಕದಲ್ಲಿ ಸೇಬು ಕೃಷಿಯ ಬಗ್ಗೆ ನನಗೆ ತಿಳಿದುಬಂದಿತು. ಅಪಾಯ ತೆಗೆದುಕೊಂಡು ಬೆಳೆ ಬೆಳೆಯಲು ಪ್ರಯತ್ನಿಸಿದೆ.

ಶಿಮ್ಲಾ ಅಥವಾ ಕಾಶ್ಮೀರದಂತಹ ಸಾಂಪ್ರದಾಯಿಕ ಸೇಬು ಬೆಳೆಯುವ ಪ್ರದೇಶಗಳಿಗೆ ಒಮ್ಮೆಯೂ ತೇಲಿ ಭೇಟಿ ನೀಡಲಿಲ್ಲ. ಬದಲಿಗೆ ತಮ್ಮದೇ ಆದ ಸಂಶೋಧನೆ ಮತ್ತು ದೃಢಸಂಕಲ್ಪವನ್ನು ಅವಲಂಬಿಸಿದ್ದರು. ಅವರು 42 ಡಿಗ್ರಿ ಸೆಲ್ಸಿಯಸ್‌ವರೆಗಿನ ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳುವ ‘ಅಣ್ಣಾ’ ವಿಧದ 2,600 ಸಸಿಗಳನ್ನು ನೆಟ್ಟರು. ಬಿಸಿ ವಾತಾವರಣಕ್ಕೆ ಸೂಕ್ತವಾದ ಇತರ ಪ್ರಭೇದಗಳಲ್ಲಿ ಗೋಲ್ಡನ್ ಡಾರ್ಸೆಟ್ ಮತ್ತು HRMN-99 ಕೂಡ ಬೆಳೆಸಿದ್ದೇನೆ ಎನ್ನುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ಮಾತು ಹಿನ್ನಲೆ ಸೇಬು ಬೆಳೆಗಾರ ಶ್ರೀಶೈಲ್ ತೇಲಿ ಮುಖದಲ್ಲಿ ಸಂಭ್ರಮ ಮನೆ ಮಾಡಿದೆ. ಈ ವೇಳೆ ಟಿವಿ9 ಜೊತೆಗೆ ಮಾತನಾಡಿ ಅವರು, ನಾನು ಸೇಬು ನೆಟ್ಟು ಎರಡು ವರ್ಷ ಆಯ್ತು. ಸೇಬು ಬೆಳೆದು ಯಶಸ್ವಿಯಾಗಿದ್ದಕ್ಕೆ. ಇಂದು ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನನ್ನ ಬಗ್ಗೆ ಮಾತಾಡಿದ್ದು ನೋಡಿ ಬಹಳ ಖುಷಿಯಾಗಿದೆ. ಎಷ್ಟು ಖುಷಿಯಾಗಿದೆ ಅಂದರೆ ಅದನ್ನು ವರ್ಣಿಸುವುದಕ್ಕೆ ಪದಗಳಿಲ್ಲ. ಅಷ್ಟು ಖುಷಿಯಾಗಿದೆ ಎಂದು ಹೇಳಿದ್ದಾರೆ.

ಇದು ನಮಗೆ ಹಾಗೂ ಇತರೆ ರೈತರಿಗೆ ಪ್ರೇರಣೆಯಾಗಿದೆ. ಎರಡು ವರ್ಷ ಸೇಬು ಬೆಳೆಯಲು ಬಹಳ ಶ್ರಮ ಪಟ್ಟಿದ್ದೆ. ಈಗ‌ ಮೋದಿ ಅವರು ಮಾತಾಡಿದ್ದನ್ನು ನೋಡಿ ಎಲ್ಲಾ ಭಾರ ಇಳಿದ ಹಾಗಾಯ್ತು. ಎಲ್ಲಿ ದೆಹಲಿ, ಎಲ್ಲಿ ಕುಳಲಿಗೆ ಬಂದು ಟಚ್ ಆಗಿದೆ. ಇದು ದೇವರ ಆಶೀರ್ವಾದ, ಕುಳಲಿಗೆ ದೊಡ್ಡ ಹೆಮ್ಮೆಯ ಸಂಗತಿ ಎಂದಿದ್ದಾರೆ.‌ ಪ್ರಧಾನಿ ‌ಮೋದಿ ಅವರು ತನ್ನ ಬಗ್ಗೆ ಮಾತಾಡಿದ್ದಕ್ಕೆ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ.

Spread positive news

Leave a Reply

Your email address will not be published. Required fields are marked *