ಕುರಿ / ಮೇಕೆಗಳಲ್ಲಿ ಕಂಡು ಬರುವ ರೋಗಗಳು ಮತ್ತು ನಿಯಂತ್ರಣ
1. ನೀಲಿ ನಾಲಗೆ ರೋಗ
ಕುರಿಗಳಲ್ಲಿ ನೀಲಿ ನಾಲಗೆ ರೋಗವು ರಿಯೋವೈರಸ್ ಎಂಬ ವಿಷಾಣುವಿನಿಂದ ಬರುತ್ತದೆ ನೂಣಗಳ ಮೂಲಕ ರೋಗಾಣು ಪ್ರಾಣಿಗಳ ದೇಹವನ್ನು ಸೇರುತ್ತದೆ. ನಮ್ಮ ದೇಶದಲ್ಲಿ 18 ವಿವಿಧ ಬಗೆಯ ರೋಗಾಣು ಪ್ರಭೇಧಗಳು ಇದ್ದು, ಕರ್ನಾಟಕದಲ್ಲಿ ನಾಲ್ಕು ಬಗೆಯ ಪ್ರಭೇಧಗಳು ಇವೆ. ಈ ಕಾಯಿಲೆಯು ಅಂಟುಜಾಡ್ಯವಾಗಿದ್ದು ಕುರಿಗಳಲ್ಲಿ ಕಂಡುಬರುತ್ತದೆ.
ರೋಗದ ಲಕ್ಷಣಗಳು –
• ಈ ರೋಗ ತಗುಲಿದ ಕುರಿಗಳು/ಮೇಕೆಗಳು ಮೇಯುವುದಿಲ್ಲ.
• ಮಂಕಾಗಿ ನಿಲ್ಲುವುದು, ಜ್ವರ ಬರುವುದು, ಕಿವಿ, ಮೂಗು, ಕಣ್ಣುರೆಪ್ಪೆ ಮತ್ತು ಗಂಟಲು ಭಾಗಗಳಲ್ಲಿ ಊತ ಕಾಣಿಸಿಕೊಳ್ಳುವುದು.
• ಇದರಿಂದಾಗಿ ಕುರಿ/ಮೇಕೆಗಳು ನಡೆಯಲಾಗದೆ ಕುರಿ/ಮೇಕೆಗಳು ಸಾಯುತ್ತವೆ.
* ಮೊದಲ ಬಾರಿ ಈ ರೋಗವು ಮಂದೆಯಲ್ಲಿ ಕಂಡುಬಂದಲ್ಲಿ ಶೇ 20 50 ರಷ್ಟು ಕುರಿಗಳು ಸಾಯುವಂತಹ ಸಂಭವವಿದೆ.
ರೋಗ ನಿಯಂತ್ರಣ –
* ನೋಣಗಳ ನಿಯಂತ್ರಣ ನೋಣಗಳನ್ನು ದೂರ ಮಾಡುವ ದ್ರಾವಣಗಳ ಸಿಂಪಡಿಕೆ, ರಾತ್ರಿ ಹೊತ್ತು ನೋಣಗಳು ಬರದಂತೆ ಕುರಿಗಳ ಮನೆಗೆ ಚಾಲರಿ ಅಳವಡಿಕೆ, ಬೇವಿನ ಸೊಪ್ಪಿನ ಹೊಗೆ ಹಾಕುವುದು, ನೀರು ನಿಲ್ಲದಂತೆ ನೋಡಿಕೊಳ್ಳುವುದು ಇತ್ಯಾದಿ ಕ್ರಮಗಳನ್ನು ಕೈಗೊಳ್ಳಬೇಕು.
* ದನ, ಎಮ್ಮೆ, ಕೆಲವು ವನ್ಯಜೀವಿಗಳು ಈ ರೋಗಾಣುವಿಗೆ ಆಶ್ರಯ ಕೊಡುವುದರಿಂದ ಕುರಿಗಳನ್ನು ಇವುಗಳಿಂದ ದೂರ ಇಡಲು ಪ್ರಯತ್ನಿಸಬೇಕು.
* ಲಸಿಕೆಗಳು ಸಂಪೂರ್ಣವಾಗಿ ರಕ್ಷಣೆ ಕೊಡಲು ಸಾಧ್ಯವಿಲ್ಲದಿದ್ದರೂ ಲಸಿಕೆ ಕೊಡುವುದರಿಂದ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಬಹುದು.
ಕಾಲು ಮತ್ತು ಬಾಯಿಬೇನೆ –
ಇದು ವೈರಾಣುವಿನಿಂದ ಹರಡಲ್ಪಡುವ ಸಾಂಕ್ರಾಮಿಕರೋಗವಾಗಿದ್ದು, ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಣಬರುತ್ತದೆ. ಎಲ್ಲಾ ವಯಸ್ಸಿನ, ಎಲ್ಲಾ ಜಾತಿಯ ಕುರಿ/ಮೇಕೆಗಲ್ಲಿ ಕಂಡು ಬರುತ್ತದೆ ರೋಗಗ್ರಸ್ಥ ಕುರಿ/ಮೇಕೆಗಳ ಸಂಪರ್ಕ, ಅವುಗಳ ಜೊಲ್ಲು, ಸಿಂಬಳ, ಸೊಂಕಿತ ಹುಲ್ಲು ಇವುಗಳ ಮುಖಾಂತರ ಹರಡಲ್ಪಡುತ್ತದೆ.
ರೋಗಲಕ್ಷಣಗಳು –
• ರೋಗಗ್ರಸ್ಥ ಆಡುಗಳಲ್ಲಿ ಜ್ವರ ಕಾಣಿಸಿಕೊಳ್ಳುವುದು ಹಾಗೂ ಜೊಲ್ಲು ಸೋರುವುದು,
* ಕಾಲಿನ ಗೊರಸುಗಳ ಮಧ್ಯೆ ದ್ರವ ತುಂಬಿದ ಗುಳ್ಳೆಗಳು ಕಾಣಿಸಿಕೊಂಡು ನೋವಿನಿಂದ ಕುಂಟುವುದು ಗುಳ್ಳೆಗಳು ಬಾಯಿಯಲ್ಲಿ ಹಾಗೂ ಹೆಚ್ಚಲು ಮೇಲೆ ಕೂಡ ಕಾಣಿಸಿಕೊಳ್ಳಬಹುದು
ರೋಗ ನಿಯಂತ್ರಣ –
ಈ ರೋಗವು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವ ದೇಶಗಳಲ್ಲಿ ರೋಗ ನಿರ್ಮೂಲನೆ ಕಷ್ಟಕರವಾಗಿರುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ನಮ್ಮ ದೇಶದಲ್ಲಿ ನೈರ್ಮಲ್ಯತೆ, ಲಸಿಕೆಗಳನ್ನು ಉಪಯೋಗಿಸಿ ನಿಯಂತ್ರಣ ಕ್ರಮಗಳನ್ನು ಪಾಲಿಸಬಹುದು
ಗಂಟಲು ಬೇನೆ (ಗಳಲೆ ರೋಗ) –
ಈ ರೋಗವು ಬ್ಯಾಕ್ಟಿರಿಯಾಗಳಿಂದ ಹರಡಲ್ಪಡುವ ಒಂದು ಸಾಂಕ್ರಾಮಿಕ ರೋಗ ಕಲುಪಿತ ನೀರು, ಆಹಾರ, ರೋಗಗ್ರಸ್ಥ ಅಡುಗಳ ಸಂಪರ್ಕದಿಂದ ಒಂದು ಕುರಿ/ಮೇಕೆಯಿಂದ ಇನ್ನೊಂದಕ್ಕೆ ಕುರಿ/ಮೇಕೆಗೆ ಹರಡುವುದು, ಮಳೆಗಾಲದ ಪ್ರಾರಂಭದಲ್ಲಿ ಅಥವಾ ತಂಪು ಹವೆಯಲ್ಲಿ ಕುರಿ/ಮೇಕೆಗಳನ್ನು ಸ್ಥಳದಿಂದ ಸ್ಥಳಕ್ಕೆ ಸಾಗಾಣಿಕೆ ಮಾಡುವುದರಿಂದ ಪ್ರಯಾಸಕ್ಕೆ ಸಿಕ್ಕಿ ಈ ರೋಗದಿಂದ ನರಳುವುದು.
ರೋಗಲಕ್ಷಣಗಳು –
* ರೋಗಗ್ರಸ್ಥ ಕುರಿ/ಮೇಕೆಗಳು ಮೇಯುವುದನ್ನು ಬಿಡುತ್ತವೆ ಒಮೊಮ್ಮೆ ಬೇಧಿ ಅಥವಾ ರಕ್ತ ಮಿಶ್ರಿತ ಬೇಧಿ ಕಾಣಬಹುದು ಗರ್ಭಸ್ಥ ಕುರಿ/ಮೇಕೆಗಳು ಕಂದು ಹಾಕಬಹುದು ಜ್ವರವಿರುವುದಲ್ಲದೆ ಉಸಿರಾಟಕ್ಕೆ ತೊಂದರೆ ಹೆಚ್ಚಾಗಿರುತ್ತದೆ.
• ಆಹಾರವಿಲ್ಲದೆ 2-3
ದಿನಗಳಲ್ಲಿ ಕುರಿ/ಮೇಕೆಗಳು ಸಾವನ್ನಪ್ಪುವವು
ರೋಗ ನಿಯಂತ್ರಣ –
ರೋಗವಿರುವ ಕುರಿಗಳನ್ನು ಬೇರ್ಪಡಿಸಿ ಚಿಕಿತ್ಸೆ ನೀಡಬೇಕು. ಬೇರೆ ಕುರಿಗಳಿಗೆ ಹರಡದಂತೆ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಮುಂಜಾಗ್ರತವಾಗಿ ಲಸಿಕೆ ಹಾಕುವುದರಿಂದ ಈ ರೋಗ ಬರದಂತೆ ತಡೆಗಟ್ಟಬಹುದು
ಕರುಳು ಬೇನೆ (ಎಂಟೆರೋಟೊಕ್ಷೀಮಿಯ) –
ಈ ರೋಗವು ಕ್ಲಾಸ್ಥಿಡಿಯಂ ಜಾತಿಗೆ ಸೇರಿದ ಬ್ಯಾಕ್ಟಿರಿಯಾದಿಂದ ಹರಡುತ್ತದೆ. ಆರೋಗ್ಯವಂತ ಮತ್ತು ಚೆನ್ನಾಗಿ ಮೇಯುತ್ತಿರುವ ವಯಸ್ಥ ಹಾಗೂ ಮರಿಗಳು ಈ ರೋಗಕ್ಕೆ ಬೇಗ ತುತ್ತಾಗುತ್ತವೆ. ಈ ರೋಗವು ಸಾಧಾರಣವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ.
ರೋಗಲಕ್ಷಣಗಳು –
* ಚೆನ್ನಾಗಿ ಮೇಯುತ್ತಿರುವ ಆರೋಗ್ಯವಂತ ಕುರಿ/ಮೇಕೆಗಳು ಒಮ್ಮೆಲೇ ಸುತ್ತ ತಿರುಗಿ ಬಿದ್ದು ಸಾಯುವುವು.
* ತೀವ್ರವಾದಲ್ಲಿ ಈ ರೋಗಕ್ಕೆ ಚಿಕಿತ್ಸೆ ಮಾಡುವಷ್ಟು ಸಮಯವಿರುವುದಿಲ್ಲ.
* ರೋಗಗ್ರಸ್ಥ ಕುರಿ/ಮೇಕೆಗಳಲ್ಲಿ ಹಲ್ಲು ಕಡಿಯುವಿಕೆ, ತಲೆ ಒಂದು ಕಡೆ ತಿರುಗಿಸುವುದು ಹಾಗೂ ಒಮ್ಮೊಮ್ಮೆ ಬೇಧಿ ಸಹ ಕಾಣಬಹುವುದು.
* ತ್ರಾಣವಿಲ್ಲದೆ ಬಿದ್ದು ಕಾಲುಗಳನ್ನು ಜೋರಾಗಿ ಅಡಿಸಿ ಸಾವನ್ನಪ್ಪುತ್ತವೆ.
ಬ್ರುಸೆಲ್ಲೋಸಿಸ್ (ಕಂದು ರೋಗ) –
ಈ ರೋಗವು ಕುರಿ/ಮೇಕೆಗಳಲ್ಲಿ ಬ್ರುಸೆಲ್ಲಾ ಎಂಬ ಬ್ಯಾಕ್ಟಿರಿಯಾದಿಂದ ಹರಡುತ್ತದೆ.
ಚಿಕಿತ್ಸೆ ರೋಗ ಬಂದ ನಂತರ ಯಾವುದೇ ಚಿಕಿತ್ಸೆ ಫಲಕಾರಿಯಲ್ಲ.
ನಿಯಂತ್ರಣ –
ಇದು ಮನುಷ್ಯರಿಗೂ ಹರಡಬಹುದಾದ ಪ್ರಾಣಿಜನ್ಯ ರೋಗವಾದ್ದರಿಂದ, ವರ್ಷಕ್ಕೊಮ್ಮೆ ಹಿಂಡಿನಲ್ಲಿನ ಎಲ್ಲ ಆಡು/ಕುರಿಗಳ ರಕ್ತ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಿ. ರೋಗವಿರುವುದು ಕಂಡುಬಂದರೆ ಆಡುಗಳನ್ನು ಬೇರ್ಪಡಿಸಿ ಹಿಂಡಿನಿಂದ ತೆಗೆದುಹಾಕಬೇಕು.
ಹೊಟ್ಟೆ ಉಬ್ಬರ –
* ಕುರಿ/ಮೇಕೆಗಳು ಒಮ್ಮೆಗೆ ಹೆಚ್ಚು ದವಸ ಧಾನ್ಯಗಳನ್ನು ಅಥವಾ ದ್ವಿದಳ ಧಾನ್ಯಗಳ ಹಸಿ ಮೇವನ್ನು ತಿಂದಾಗ ಹೊಟ್ಟೆ ಉಬ್ಬುವ ಸಂಭವವಿರುತ್ತದೆ.
* ಇದನ್ನು ತಡೆಗಟ್ಟಲು, ಆಡುಗಳು ಒಮ್ಮೆಗೆ ಹೆಚ್ಚು ದವಸ ಧಾನ್ಯಗಳನ್ನು ಅಥವಾ ದ್ವಿದಳ ಧಾನ್ಯಗಳ ಹಸಿ ಮೇವನ್ನು ತಿನ್ನದಂತೆ ಎಚ್ಚರಿಕೆ ವಹಿಸಬೇಕು.
* ಇಂತಹ ಸಂಧರ್ಭಗಳಲ್ಲಿ ಕುರಿ/ಮೇಕೆಗಳಿಗೆ ಮೊದಲು 100 ರಿಂದ 150 ಮೀಲಿ. ಅಡಿಗೆ ಎಣ್ಣೆಯನ್ನು ಕುಡಿಸಬೇಕು. ಅನಾವಶ್ಯಕವಾಗಿ ಸೋಡಾ ಬೈಕಾರ್ಬ್ ದ್ರಾವಣವನ್ನು ಕುಡಿಸಬಾರದು. ಪಶುವೈದ್ಯರಿಂದ ಸೂಕ್ತ ಸಲಹೆ ಪಡೆದು ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಬೇಕು