ಪ್ರೀಯ ರೈತರೇ ಇವತ್ತು ನಾವು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ ಬನ್ನಿ. ಈಗಾಗಲೇ ಸರ್ಕಾರವು ಕೈಗೊಂಡಿರುವ ಬೆಳೆ ವಿಮೆ ಬಗ್ಗೆ ಮಾಹಿತಿ ಪಡೆಯೋಣ. ಹಿಂಗಾರು ಬೆಳೆ 2024-25 ಸಮೀಕ್ಷೆ ಆರಂಭ. ರೈತರೇ ನೀವು ಕೂಡ ನಿಮ್ಮ ಮೊಬೈಲಿನಲ್ಲಿ ಬೆಳೆ ಸಮೀಕ್ಷೆ ಮಾಡಬಹುದು. ಹಿಂಗಾರು ಬೆಳೆಗಳ ಬೆಳೆ ಸಮೀಕ್ಷೆ ಬಹಳ ಮುಖ್ಯ ಹಾಗೂ ಬೆಳೆ ಸಮೀಕ್ಷೆ ಮಾಡುವುದರಿಂದ ಬೆಳೆವಿಮೆ ಹಣ ಪಡೆಯಬಹುದು. ಹಾಗೂ ಬೆಳೆಹಾನಿ ಪರಿಹಾರ ಸಹ ಸರ್ಕಾರವು ಬಿಡುಗಡೆ ಮಾಡುತ್ತದೆ. ಬನ್ನಿ ನಿಮ್ಮ ಮೊಬೈಲಿನಲ್ಲಿ ನೀವು ಬೆಳೆ ಸಮೀಕ್ಷೆ ಮಾಡಬಹುದು ಹೇಗೆ ಎಂದು ತಿಳಿಯೋಣ.
ಬೆಳೆ ಸಮೀಕ್ಷೆ ಮಾಡುವ ವಿಧಾನ –
• ಮೊದಲಿಗೆ ಈ https://play.google.com/store/apps/details?id=com.csk.farmer23_24.cropsurvey
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
• ಅಥವಾ ಗೂಗಲ್ ಪ್ಲೇ ಸ್ಟೋರ್ ನಲ್ಲಿ Bele darshak 2024 ಎಂದು ಟೈಪ್ ಮಾಡಿ ಡೌನ್ಹೋಡ್ ಮಾಡಿಕೊಳ್ಳಬಹುದು.
• ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಬೆಳೆ ದರ್ಶಕ್ ಆ್ಯಪ್ ಕಾಣಿಸುತ್ತದೆ. ಅಲ್ಲಿ install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು.
• ಆಗ ನಿಮಗೆ ಬೆಳೆ ದರ್ಶಕ್ 2024 ಕೆಳಗಡೆ ಬೆಳೆ ಸಮೀಕ್ಷೆ ಮಾಹಿತಿ ವೀಕ್ಷಣೆ ಕಾಣಿಸುತ್ತದೆ.
• ಅದರ ಕೆಳಗಡೆ ಸರ್ಕಾರಿ ಸಿಬ್ಬಂದಿ ಪ್ರೈವೆಟ್ ರೆಸಡೆಂಟ್ಸ್ ಹಾಗೂ ರೈತ ಎಂಬ ಆಯ್ಕೆಗಳು ಕಾಣಿಸುತ್ತವೆ. ರೈತ ಮೇಲೆ ಕ್ಲಿಕ್ ಮಾಡಬೇಕು.
• ವೈಲ್ ಯೂಸಿಂಗ್ ದಿಸ್ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ಮೇಲೆ ಕ್ಲಿಕ್ ಮಾಡಬೇಕು.
• ನಂತರ ಅಲ್ಲಿ ಆ್ಯಪ್ ಓಪನ್ ಆದ ತಕ್ಷಣ ಅಲ್ಲಿ ನಿಮ್ಮ ತಾಲೂಕು, ಜಿಲ್ಲೆ, ಸರ್ವೇ ನಂಬರ್, ಹಿಸ್ಸಾ ನಂಬರ್ ಹೀಗೆ ಕೇಳಲಾಗುತ್ತದೆ.
• ನಂತರ ಎಲ್ಲ ಮಾಹಿತಿ ಹಾಕಿ ಸಮೀಕ್ಷೇಗಳ ವಿವರಗಳನ್ನು ಮೇಲೆ ಕ್ಲಿಕ್ ಮಾಡಿ.
• ನಂತರ ಅಲ್ಲಿ ನಿಮಗೆ ಬೇಕಾದ ಮಾಹಿತಿ ದೊರೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಿಮಗೆ ಇಲ್ಲಿ ವಿಳಾಸವನ್ನು ನೀಡುತ್ತೇನೆ. ಈ ನಂಬರಿಗೆ ಕಾಲ್ ಮಾಡಿ ಬೆಳೆ ಸಮೀಕ್ಷೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು. ಹಾಗೂ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಕಾಲ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಬಹುದು. ಹೆಚ್ಚಿನ ವಿವರಗಳಿಗಾಗಿ ಬೆಳೆ ಸಮೀಕ್ಷೆ ಸಹಾಯವಾಣಿಗೆ ಕರೆಮಾಡಿ : 18004253553
ಅದೇ ರೀತಿ ಸುಮಾರು ನಾಲ್ಕು ವರ್ಷಗಳ ನಂತರ, ಡಿ-ಅಮೋನಿಯಾ ಫಾಸ್ಫೇಟ್ (ಡಿಎಪಿ) ಬೆಲೆಗಳು ಶೇಕಡಾ 12-15 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ, ಪ್ರತಿ ಚೀಲಕ್ಕೆ 1,350 ರಿಂದ 1550-1590 ಕ್ಕೆ. ಪರಿಷ್ಕೃತ ದರಗಳು ಜನವರಿ 1, 2025 ರಿಂದ ಜಾರಿಗೆ ಬರಬಹುದು. ದೇಶದಲ್ಲಿ ಯೂರಿಯಾ ನಂತರ ಎರಡನೇ ಅತಿ ಹೆಚ್ಚು ಬಳಸುವ ಗೊಬ್ಬರವಾಗಿರುವ ಡಿಎಪಿಯ ಒಂದು ಚೀಲ ಸುಮಾರು 50 ಕೆ.ಜಿ. ಕಚ್ಚಾ ವಸ್ತುಗಳ ಬೆಲೆಯಲ್ಲಿನ ಏರಿಕೆಯಿಂದಾಗಿ ಹೆಚ್ಚಳವನ್ನು ಕೈಗೊಳ್ಳಲಾಗಿದೆ.
ಪ್ರಧಾನ ಮಂತ್ರಿ ಫಸಲ್ ಭೀಮಾ ಅಡಿಯಲ್ಲಿ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ 👇
https://pmfby.gov.in/
ಈ ಲಿಂಕ್ ಅನ್ನು ಕ್ಲಿಕ್ ಮಾಡಿ. ನಂತರ ಅಲ್ಲಿ ಪ್ರಿಮಿಯಂ ಕ್ಯಾಲ್ಕುಲೇಟರ್ ಅಂತ ಇರುವುದರ ಮೇಲೆ ಕ್ಲಿಕ್ ಮಾಡಿ.
ನಂತರ ಅಲ್ಲಿ ಅಪ್ಲಿಕೇಶನ್ ಸ್ಟೇಟಸ್ ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಅಪ್ಲಿಕೇಶನ್ ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡಬಹುದು.