ರೈತ ಮಿತ್ರರೇ ಇವತ್ತು ನಾವು ಒಂದು ಹೊಸ ವಿಷಯದ ಬಗ್ಗೆ ಚರ್ಚಿಸೋಣ. ರೈತರೇ ಈಗಾಗಲೇ ನಾವು ನೋಡಿದಂತೆ ತಂತ್ರಜ್ಞಾನ ಬಹಳ ಮುಂದೆ ಇದೆ. ಹಾಗೂ ಸರ್ಕಾರವು ಸಹ ರೈತರಿಗೆ ಅಲೆದಾಟ ಹಾಗೂ ರೈತರಿಗೆ ಹಲವಾರು ತಂತ್ರಜ್ಞಾನಗಳ ಮೂಲಕ ಹೊಸ ಹೊಸ ಭರವಸೆ ನೀಡುತ್ತಾ ಬಂದಿದೆ. ಅದೇ ರೀತಿ ಈಗ ನಾವು ಒಂದು ಮುಖ್ಯವಾದ ವಿಷಯದ ಬಗ್ಗೆ ನೋಡೋಣ ಏನೆಂದರೆ ರೈತರು ತಮ್ಮ ಜಮೀನಿನ ಮೋಜನಿ (ಹದ್ದುಬಸ್ತು) ಪಡೆಯಲು ಅರ್ಜಿ ಹಾಕಿರುತ್ತಾರೆ. ಆದರೆ ರೈತರಿಗೆ ಈ ಅರ್ಜಿ ಸಲ್ಲಿಸಿದ ನಂತರ ಏನು ಮಾಡಬೇಕು. ಅರ್ಜಿ ಸ್ಥಿತಿ ಹಾಗೂ ಅರ್ಜಿ ಸರ್ವೆ ಬಗ್ಗೆ ಹೇಗೆ ತಿಳಿಯಬೇಕು ಎಂಬ ಗೊಂದಲದಲ್ಲಿ ಬೀಳುತ್ತಾರೆ. ಅದಕ್ಕೆ ಈಗ ಸರ್ಕಾರವು ತನ್ನದೇ ಆದ ಒಂದು ಮೊಜನಿV3 ಎಂಬ ಹೊಸ ವೆಬ್ಸೈಟ್ ಅನ್ನು ತೆಗೆದಿದ್ದಾರೆ. ಇದರ ಮೂಲಕ ನಿಮ್ಮ ಅರ್ಜಿ ಮಾಹಿತಿ ನೀವು ಪಡೆಯಬಹುದು.
ಏನಿದು ಮೋಜನಿ (ಹದ್ದುಬಸ್ತು) V3 ವೆಬ್ಸೈಟ್?
ಹೌದು ಇದು ಒಂದು ಸರ್ಕಾರದ ವೆಬ್ಸೈಟ್ ಆಗಿದೆ. https://bhoomojini.karnataka.gov.in/index.html. ಇದರ ಮೇಲೆ ಕ್ಲಿಕ್ ಮಾಡಿದ ನಂತರ ಇದರಲ್ಲಿ ರೈತರು ತಮ್ಮ ಜಮೀನಿನ ಮೋಜನಿ (ಹದ್ದುಬಸ್ತು) ಪಡೆಯಲು ಅರ್ಜಿ ಸಲ್ಲಿಸಿದಾಗ ರೈತರಿಗೆ ತಮ್ಮ ಜಮೀನಿನ ಅಳತೆ ಮಾಡಲು ಆಯ್ಕೆ ಆಗಿರುವ ಸರ್ವೇದಾರರ ಹೆಸರು, ಜಮೀನಿಗೆ ಯಾವ ದಿನಾಂಕದಂದು ಅಳೆಯಲು ಬರುತ್ತಾರೆ ಹಾಗೂ ಅರ್ಜಿ ಸ್ಥಿತಿ ಏನು ಎಂದು ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ.
ಇದರಿಂದ ರೈತರಿಗೆ ಲಾಭ ಏನು?
* ರೈತರಿಗೆ ಜಮೀನಿನ ಹದ್ದುಬಸ್ತಿನ ಅರ್ಜಿ ಸ್ಟೇಟಸ್ ತಿಳಿಯುತ್ತದೆ.
• ರೈತರಿಗೆ ಯಾವ ಸರ್ವೇ ದಾರರು ಆಯ್ಕೆ ಆಗಿದ್ದಾರೆ ಎಂದು ತಿಳಿಸುತ್ತದೆ.
• ರೈತರಿಗೆ ತಮ್ಮ ಜಮೀನಿನ ನಕಾಶೆ ದೊರೆಯುತ್ತದೆ.
• ರೈತರಿಗೆ ಇದರಿಂದ ಸರ್ವೇ ದಾರರು ನೀಡಿದ ನೋಟಿಸ್ ಹಾಗೂ ಪುತ್ರ (ಪುರಾವೆ) ದೊರೆಯುತ್ತದೆ.
• ನಿಮಗೆ ಬೇಕಾದ ಜಮೀನಿನ ಸಂಪೂರ್ಣ ಮಾಹಿತಿ ಇದರಲ್ಲಿ ಸಿಗುತ್ತದೆ.
• ರೈತರು ನಿರಂತರವಾಗಿ ತಮ್ಮ ಜಮೀನಿನ ನಕ್ಷೆ ಹಾಗೂ ಸರ್ವೆ ದಾರರು ನೀಡಿದ ನೋಟಿಸ್ ನೋಡಬಹುದು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ.https://bhoomojini.karnataka.gov.in/index.html.
ನಮ್ಮ ಅಕ್ಕಪಕ್ಕದಲ್ಲಿ ಇರುವ ಜಮೀನಿನ ಮಾಹಿತಿ ಪಡೆಯುವುದು ಎಂಬುದು ನಿಖರವಾಗಿ ತಿಳಿದಿಲ್ಲ, ಅದಕ್ಕೆ ಸರ್ಕಾರವು ಈಗ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಏನೆಂದರೆ ಆಧಾರ್ ಕಾರ್ಡ್ ಅನ್ನು ನಿಮ್ಮ ಪಹಣಿ(ಉತಾರ್) ಲಿಂಕ್ ಮಾಡುವುದು. ಒಂದು ವೇಳೆ ನಿಮ್ಮ ಪಹಣಿಗೆ (ಉತಾರಿಗೆ) ಆಧಾರ್ ಕಾರ್ಡ್ ಲಿಂಕ್ ಇಲ್ಲದಿದ್ದರೆ ಯಾವುದೇ ಮಾಹಿತಿ ನಿಖರವಾಗಿ ತಿಳಿಯುವುದಿಲ್ಲ. ಅದಕ್ಕಾಗಿ ಸರ್ಕಾರವು ರೈತರಿಗೆ ಸಿಗುವ ಸಂಪೂರ್ಣ ಯೋಜನೆ ಹಾಗೂ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಕೆಲಸಕ್ಕೆ ಕೈ ಹಾಕುತ್ತಿದೆ. ಸರ್ಕಾರದ ಈ ನಿರ್ಧಾರದಿಂದ ರೈತರಿಗೆ ಅದೆಷ್ಟೋ ಸಮಸ್ಯೆಗಳಿಂದ ಪಾರಾಗಬಹುದು.
ಪಹಣಿ ತಿದ್ದುಪಡಿಯನ್ನು ಹೇಗೆ ಮಾಡಬೇಕು?
ಅದರ ಪ್ರಕ್ರಿಯೆ ಏನು?
• ಭೂಮಿ ಕೇಂದ್ರದಲ್ಲಿರುವ ಅಧಿಕಾರಿಗಳು ನಿಮ್ಮ ಸದರಿ ದಾಖಲೆಗಳನ್ನು ನಿಮಗೆ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಳುಹಿಸುತ್ತಾರೆ.
• ಗ್ರಾಮ ಲೆಕ್ಕಾಧಿಕಾರಿಗಳು ತಮಗೆ ಬಂದಿರುವ ಅರ್ಜಿಯನ್ನು ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ.
• ದಾಖಲೆಗಳು ತಪ್ಪಾಗಿದ್ದಲ್ಲಿ ಅದನ್ನು ತಿರಸ್ಕರಿಸುವ ಹಕ್ಕನ್ನು ಹೊಂದಿರುತ್ತಾರೆ. ಒಂದು ವೇಳೆ ಎಲ್ಲಾ ದಾಖಲೆಗಳು ಸರಿಯಾಗಿದ್ದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಪಹಣಿ ತಿದ್ದುಪಡಿ ಮಾಡಲು ಭೂಮಿ ಕೇಂದ್ರಕ್ಕೆ ಆದೇಶಿಸುವ ಹಕ್ಕನ್ನು ಹೊಂದಿರುತ್ತಾರೆ.
• ಗ್ರಾಮ ಲೆಕ್ಕಾಧಿಕಾರಿಗಳ ಆದೇಶದ ಮೇಲೆ ಭೂಮಿ ಕೇಂದ್ರದ ಅಧಿಕಾರಿಗಳು ನಿಮ್ಮ ಪಹಣಿಯಲ್ಲಿರುವ ಹೆಸರನ್ನು ತಿದ್ದುಪಡಿ ಮಾಡುತ್ತಾರೆ. ಸುಮಾರು ದಿನಗಳ ನಂತರ ತಿದ್ದುಪಡಿ ಆಗಿರುವ ಹೊಸ ಪಹಣಿ ನಿಮ್ಮ ಕೈ ಸೇರುತ್ತದೆ.
ಈ ರೀತಿಯಾಗಿ ನೀವು ಪಹಣಿಯಲ್ಲಿರುವ ಹೆಸರನ್ನು ತಿದ್ದುಪಡಿ ಮಾಡಬಹುದು.
ಪಹಣಿಯಲ್ಲಿ ಹೆಸರನ್ನು ತಿದ್ದುಪಡಿ ಮಾಡುವುದರಿಂದ ನಮಗಾಗುವ ಉಪಯೋಗಗಳೇನು?
• ಜಮೀನನ್ನು ಕೊಂಡುಕೊಳ್ಳುವಾಗ ಅಥವಾ ಮಾರುವಾಗ ಅಥವಾ ಭಾಗ ಮಾಡುವಾಗ ಯಾವುದೇ ಗೊಂದಲ ಉಂಟಾಗುವುದಿಲ್ಲ.
• ಇವತ್ತಿನ ದಿನದಲ್ಲಿ ಯಾವುದೇ ಒಂದು ಸರ್ಕಾರಿ ಕೆಲಸಕ್ಕೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗಿರುವುದರಿಂದ ಸರ್ಕಾರದಿಂದ ಸಿಗುವ ಸಹಾಯಧನ ಸರಿಯಾದ ಸಮಯಕ್ಕೆ ಸಿಗಬೇಕೆಂದರೆ ಪಹಣಿ ತಿದ್ದುಪಡಿಯ ಅವಶ್ಯಕತೆ ಇರುತ್ತದೆ.
• ಇದರ ಮುಖ್ಯ ಲಾಭ ಎಂದರೆ ಪಿಎಂ ಕಿಸಾನ್ ಆಗಲಿ ಅಥವಾ ಸರ್ಕಾರದ ಬೇರೆ ಯಾವುದೋ ಯೋಜನೆಯಿಂದ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರಲು ಪಹಣಿಯಲ್ಲಿ ತಿದ್ದುಪಡಿ ಮಾಡುವುದು ಅವಶ್ಯಕತೆ ಇರುತ್ತದೆ.
• ನೀವು ಬ್ಯಾಂಕಿನಲ್ಲಿ ಬೆಳೆ ಸಾಲ ತೆಗೆದುಕೊಳ್ಳುವಾಗ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಮತ್ತು ನಿಮ್ಮ ಪಹಣಿಯಲ್ಲಿರುವ ಹೆಸರು ಸರಿ ಹೊಂದಬೇಕಾಗುತ್ತದೆ. ಇದಕ್ಕಾಗಿ ಪಹಣಿ ತಿದ್ದುಪಡಿ ಮಾಡುವುದು ತುಂಬಾ ಅವಶ್ಯಕವಾಗಿರುತ್ತದೆ.
ಇದಿಷ್ಟು ಪಹಣಿ ತಿದ್ದುಪಡಿಯ ಬಗ್ಗೆ ಇರುವ ಸಂಪೂರ್ಣ ಮಾಹಿತಿಯಾಗಿದ್ದು ರೈತರು ಈ ಉಪಯುಕ್ತ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಇದರ ಲಾಭವನ್ನು ಪಡೆದುಕೊಳ್ಳಬೇಕು.