(Pm kisan) ಪಿಎಂ ಕಿಸಾನ್ ಹಣ ಹೊಸ ಅಪ್ಡೇಟ್.

ರೈತರೇ ಪಿಎಂ ಕಿಸಾನ್ ಹೊಸ ಅಪ್ಡೇಟ್ ಬಂದಿದೆ. ರೈತರು ಈ ಕೆಲಸ ಮಾಡದಿದ್ದರೆ ಹಣ ಬರಲ್ಲ.
ಕೇಂದ್ರ ಸರ್ಕಾರವು ಪಿ. ಎಂ. ಕಿಸಾನ್ ಯೋಜನೆಯಲ್ಲಿ ಫಲಾನುಭವಿಗಳ ಅರ್ಜಿಗೆ ಸಂಬಂಧಿಸಿದ ಮಾಹಿತಿಯನ್ನು ಸುಲಭವಾಗಿ ರೈತರಿಗೆ ತಲುಪಿಸಲು ಅನುಕೂಲವಾಗಲು ಇನ್ನು ಮುಂದೆ ಭಾರತ ಸರ್ಕಾರದ ಪಿ.ಎಂ. ಕಿಸಾನ್ ಪೋರ್ಟಲ್ ನಲ್ಲಿ ನೋಂದಣಿಯಾಗುವ ಫಲಾನುಭವಿಗಳಿಗೆ Unique Mobile number ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿರುತ್ತದೆ. ಪ್ರಸ್ತುತ ಪಿ. ಎಂ. ಕಿಸಾನ್ ದತ್ತಾಂಶದಲ್ಲಿ ಈಗಾಗಲೇ ಹಲವಾರು ಫಲಾನುಭವಿಗಳು ನಕಲಿ ಹಾಗೂ ಅಮಾನ್ಯ Mobile Number ಉಪಯೋಗಿಸಿಕೊಂಡು ನೋಂದಣಿಯಾಗಿರುವುದು ಕಂಡು ಬಂದಿರುತ್ತದೆ.

ಆದ್ದರಿಂದ, ಎರಡಕ್ಕಿಂತ ಹೆಚ್ಚು ಫಲಾನುಭವಿಗಳು ಒಂದೇ ಮಾನ್ಯ Mobile Number ಉಪಯೋಗಿಸಿಕೊಂಡು ಅಥವಾ ಅಮಾನ್ಯ Mobile Number ಉಪಯೋಗಿಸಿಕೊಂಡು ಯೋಜನೆಯಡಿ ನೋಂದಣಿಯಾಗಿದ್ದಲ್ಲಿ, ಅಂತಹ ಫಲಾನುಭವಿಗಳಿಗೆ ಮುಂದಿನ ಕಂತುಗಳ ಆರ್ಥಿಕ ನೆರವು ವರ್ಗಾವಣೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿರುತ್ತಾರೆ. ಕೇಂದ್ರ ಸರ್ಕಾರದ ಪಿ.ಎಂ. ಕಿಸಾನ್ ಪೋರ್ಟಲ್‌ನ ಮುಖಪುಟದಲ್ಲಿ Update Mobile Number” (https://pmkisan.gov.in/MobileUpdation_Pub.aspx) 2 ಆಯ್ಕೆಯನ್ನು ನೀಡಲಾಗಿದ್ದು, ಸದರಿ ಫಲಾನುಭವಿಗಳ ಮಾಹಿತಿಯನ್ನು ಈ ಲಿಂಕ್ ನಲ್ಲಿ ನೀಡಲಾಗಿದೆ.


18 ನೇ ಕಂತಿನ ಅರ್ಹ ರೈತರ ಪಟ್ಟಿ ಮೊಬೈಲ್ ನಲ್ಲಿ ನೋಡುವುದು ಹೇಗೆ??

ಈಗಾಗಲೇ ಪಿ ಎಮ್ ಕಿಸಾನ್ ಪೋರ್ಟಲ್ ನಲ್ಲಿ ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ನಿಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಿಕೊಳ್ಳುವುದು ಎಂಬುದನ್ನು ನೋಡಿ 👇🏻
1) ಮೊದಲಿಗೆ 18 ನೇ ಕಂತಿನ beneficiary list ರೈತರ ಪಟ್ಟಿ ತಿಳಿಯಲು ಈ ಕೆಳಗಿನ ಮೇಲೆ ಕ್ಲಿಕ್ ಮಾಡಿಕೊಳ್ಳಿ ಆ ಬಟನ್ ಮೇಲೆ ಕ್ಲಿಕ್ ಮಾಡಬೇಕು
https://pmkisan.gov.in/Rpt_BeneficiaryStatus_pub.aspx

2) ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ರಾಜ್ಯ ಜಿಲ್ಲೆ ತಾಲೂಕು ಗ್ರಾಮ ಹೆಸರನ್ನು ಆಯ್ಕೆ ಮಾಡಿಕೊಂಡು ಗೆಟ್ ರಿಪೋರ್ಟ್(Get report) ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ನಂತರ ನಿಮ್ಮ ಹಳ್ಳಿಯಲ್ಲಿ ಈ ಕಂತಿನ ಹಣ ಯಾವ ಅರ್ಹ ರೈತರಿಗೆ ಬರುತ್ತದೆ ಎಂಬ ಪಟ್ಟಿಯನ್ನು ಅಲ್ಲಿ ನೋಡಬಹುದು.. ಒಂದು ವೇಳೆ ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಹಾಗೆ ಪಿಎಂ ಕಿಸಾನ್ ಹಣ ಬರುವುದಿಲ್ಲ.

ಫಲಾನುಭವಿ ಸ್ಥಿತಿ ಲಿಂಕ್:
https://pmkisan.gov.in/BeneficiaryStatus New.aspx
ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಸಹ ನೀವು ಸಂಪೂರ್ಣ ಡೀಟೇಲ್ಸ್ ಪಡೆಯಬಹುದು. ಶ್ರೀ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರೊಂದಿಗೆ ಮಾತನಾಡುವುದನ್ನು ನೋಡಲು ಇಲ್ಲಿ ಕಿಳಗಡೆ ನೀಡಿರುವ ಆ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನೀವು ನೇರವಾಗಿ ಅವರು ಮಾತನಾಡುವುದನ್ನು ನೋಡಬಹುದು.

ಈ ಬಾರಿ ಅಂತಹ ಹೆಚ್ಚಿನ ಸಂಖ್ಯೆಯ ಜನರನ್ನು ಕೇಂದ್ರ ಸರ್ಕಾರವು ಗುರುತಿಸಿದೆ, ಅವರು ಈ ಯೋಜನೆಯ ಲಾಭವನ್ನು ಅನ್ಯಾಯದ ರೀತಿಯಲ್ಲಿ ಪಡೆಯುತ್ತಿದ್ದಾರೆ. ಅವರಿಗೆ ಭೂ ಪರಿಶೀಲನೆ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಯೋಜನೆಯ ಪ್ರಯೋಜನವನ್ನು ಪಡೆಯಲು, ಮೊದಲನೆಯದಾಗಿ, ಭೂ ಪರಿಶೀಲನೆ ಅಂದರೆ ಭೂಮಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಅವಶ್ಯಕ. ಅದೇ ರೀತಿ ಇನ್ನೂ ಹಣ ಬರದೆ ಇರುವವರಿಗೆ ಇ-ಕೆವೈಸಿ ಮಾಡಲು ಅವಕಾಶ ನೀಡಲಾಗಿದ್ದು ರೈತರು ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಕೆವೈಸಿ ಮಾಡಿಸಿಕೊಳ್ಳಿ.

ಹಣ ಜಮೆಯ ಬಗ್ಗೆ ಸ್ಟೇಟಸ್ ಚೆಕ್ ಹೇಗೆ ಮಾಡಬೇಕು?
ಮೊದಲಿಗೆ ಗೂಗಲ್ ಓಪನ್ ಮಾಡಿ.
• ನಂತರ ಅಲ್ಲಿ https://pmkisan.gov.in ಎಂಬ ಲಿಂಕ್ ಹಾಕಿ ಸರ್ಚ್ ಮಾಡಬೇಕು.
• ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್ ಕೇಳುತ್ತದೆ. ಮೊಬೈಲ್ ನಂಬರ್ ಹಾಕಬೇಕು.
• ನಂತರ ಅಲ್ಲಿ ಒಂದು ಕ್ಯಾಪ್ಚಾ ಅಲ್ಲಿ ಬರೆದ ಅಕ್ಷರಗಳನ್ನು ಹಾಕಬೇಕು.
• ನಂತರ get OTP ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅಲ್ಲಿ ಲಿಂಕ್ ಇರುವ ನಿಮ್ಮ ಮೊಬೈಲ್ ನಲ್ಲಿ ಬಂದ OTP ಹಾಕಬೇಕು.
• ನಂತರ ಅಲ್ಲಿ ಫಲಾನುಭವಿಗಳ ಹಣದ ಮಾಹಿತಿ ಸಿಗುತ್ತದೆ.

Spread positive news

Leave a Reply

Your email address will not be published. Required fields are marked *