ರೈತರ ಭಾಂದವರ ಗಮನಕ್ಕೆ ಇವತ್ತು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ ಹಾಗೂ ರೈತರಿಗೆ ಇದರಿಂದ ಏನೆಲ್ಲಾ ಉಪಯೋಗ ಇದೆ ಎಂದು ತಿಳಿಯೋಣ. 2024 ನೇ ಸಾಲಿನ ಮುಂಗಾರು ಹಂಗಾಮಿನ ಸರ್ಕಾರದ ಬೆಳೆ ವಿಮೆ ಅಥವಾ ಬರಪರಿಹಾರ ಪಡೆಯಲುರೈತರು ತಮ್ಮ ಬೆಳೆ ಸಮೀಕ್ಷೆ ಪೂರ್ಣಗೊಂಡಿದೆಯೇ ಇಲ್ಲವೋ ಎಂಬುದನ್ನು ಇಂದೇ ಬೆಳೆ ದರ್ಶಕ app ಮೂಲಕ ಖಚಿತ ಪಡಿಸಿಕೊಳ್ಳಿ. ಬೆಳೆ ಸಮೀಕ್ಷೆ ಮಾಹಿತಿ ತಪ್ಪಾಗಿದ್ರೆ ಏನು ಮಾಡಬೇಕು ಎಂದು ತಿಳಿಯೋಣ ಬನ್ನಿ.
ಏನಿದು ಬೆಳೆ ಸಮೀಕ್ಷೆ?
ರಾಜ್ಯದ ಎಲ್ಲಾ ಕೃಷಿ ಭೂಮಿಗಳಲ್ಲಿ ಬಿತ್ತಿದ ಬೆಳೆಗಳು ಮತ್ತು ನೀರಾವರಿಯ ಪ್ರಕಾರದ ಬಗ್ಗೆ ಸ್ಪಷ್ಟವಾದ ಚಿತ್ರಣವನ್ನು ಹೊಂದಲು ಸರ್ಕಾರ ಬಯಸುತ್ತದೆ. ರಾಜ್ಯದ ರೈತರು ಮತ್ತು ಬೆಳೆ ಮಾಹಿತಿಗಾಗಿ ಒಂದೇ ಒಂದು ಸತ್ಯದ ಮೂಲವನ್ನು ರಚಿಸುವ ಸಾಧನವಾಗುವುದು ಯೋಜನೆಯ ದೃಷ್ಟಿಯಾಗಿದೆ, ಇದನ್ನು ಪರಿಸರ ವ್ಯವಸ್ಥೆಯಲ್ಲಿ ಬಹು ಇಲಾಖೆಗಳು ಮತ್ತು ಇತರ ಏಜೆಂಟ್‌ಗಳು (ಬ್ಯಾಂಕ್‌ಗಳು, ವಿಮಾ ಏಜೆನ್ಸಿಗಳು ಇತ್ಯಾದಿ) ಬಳಸಿಕೊಳ್ಳಬಹುದು.
ಇದು ಪರಿಹಾರ, RTC, ಸಂರಕ್ಷಣೆ, ಇತ್ಯಾದಿಗಳಂತಹ ಎಲ್ಲಾ ಡೇಟಾಬೇಸ್‌ಗಳಾದ್ಯಂತ ದಾಖಲೆಗಳಲ್ಲಿ ಸ್ಥಿರತೆಯನ್ನು ಖಚಿತಪಡಿಸುತ್ತದೆ.
ಎಲ್ಲಾ ವ್ಯವಸ್ಥೆಗಳು ನಿಖರವಾದ ಮತ್ತು ನವೀಕೃತ ರೈತ ಮತ್ತು ಬೆಳೆ ಡೇಟಾವನ್ನು ಸಮಯೋಚಿತವಾಗಿ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳುವುದು ಗುರಿಯಾಗಿದೆ.
ಬೆಳೆ ಸಮೀಕ್ಷೆ ಮಾಡುವ ವಿಧಾನ –
• ಮೊದಲಿಗೆ ಈ https://play.google.com/store/apps/details?id=com.csk.farmer23_24.cropsurvey
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
• ಅಥವಾ ಗೂಗಲ್ ಪ್ಲೇ ಸ್ಟೋರ್ ನಲ್ಲಿ Bele darshak 2024 ಎಂದು ಟೈಪ್ ಮಾಡಿ ಡೌನ್ಹೋಡ್ ಮಾಡಿಕೊಳ್ಳಬಹುದು.
• ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಬೆಳೆ ದರ್ಶಕ್ ಆ್ಯಪ್ ಕಾಣಿಸುತ್ತದೆ. ಅಲ್ಲಿ install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು.
• ಆಗ ನಿಮಗೆ ಬೆಳೆ ದರ್ಶಕ್ 2024 ಕೆಳಗಡೆ ಬೆಳೆ ಸಮೀಕ್ಷೆ ಮಾಹಿತಿ ವೀಕ್ಷಣೆ ಕಾಣಿಸುತ್ತದೆ.
• ಅದರ ಕೆಳಗಡೆ ಸರ್ಕಾರಿ ಸಿಬ್ಬಂದಿ ಪ್ರೈವೆಟ್ ರೆಸಡೆಂಟ್ಸ್ ಹಾಗೂ ರೈತ ಎಂಬ ಆಯ್ಕೆಗಳು ಕಾಣಿಸುತ್ತವೆ. ರೈತ ಮೇಲೆ ಕ್ಲಿಕ್ ಮಾಡಬೇಕು.
• ವೈಲ್ ಯೂಸಿಂಗ್ ದಿಸ್ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ಮೇಲೆ ಕ್ಲಿಕ್ ಮಾಡಬೇಕು.
• ನಂತರ ಅಲ್ಲಿ ಆ್ಯಪ್ ಓಪನ್ ಆದ ತಕ್ಷಣ ಅಲ್ಲಿ ನಿಮ್ಮ ತಾಲೂಕು, ಜಿಲ್ಲೆ, ಸರ್ವೇ ನಂಬರ್, ಹಿಸ್ಸಾ ನಂಬರ್ ಹೀಗೆ ಕೇಳಲಾಗುತ್ತದೆ.
• ನಂತರ ಎಲ್ಲ ಮಾಹಿತಿ ಹಾಕಿ ಸಮೀಕ್ಷೇಗಳ ವಿವರಗಳನ್ನು ಮೇಲೆ ಕ್ಲಿಕ್ ಮಾಡಿ.
• ನಂತರ ಅಲ್ಲಿ ನಿಮಗೆ ಬೇಕಾದ ಮಾಹಿತಿ ದೊರೆಯುತ್ತದೆ.
ಮುಂಗಾರು ಬೆಳೆ ಸಮೀಕ್ಷೆ ವೇಳೇಯಲ್ಲಿ ಯಾವುದೇ ತಪ್ಪುಗಳು ಕಂಡುಬಂದಲ್ಲಿ ಹಾಗೂ ನೀವು ಸಮೀಕ್ಷೇ ಮಾಡುವಾಗ ಬೆಳೆಗಳ ಮಾಹಿತಿ ತಪ್ಪಾಗಿ ನೀಡಿದ್ದರೆ ಕೂಡಲೇ ಅದನ್ನು ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದ್ದು ರೈತರಿಗೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ರೈತರಿಗೆ ಇದೊಂದು ಮಹತ್ವದ ವಿಷಯವಾಗಿದೆ.
ಆಕ್ಷೇಪಣೆ ಹಾಗೂ ಮಹಜರ್ ಮಾಡಲು ಅವಕಾಶ ನೀಡಲಾಗಿದ್ದು ತಪ್ಪಾಗಿ ನಮೂದಿಸಿರುವ ಬೆಳೆ ಮಾಹಿತಿಯನ್ನು ಶೀಘ್ರವಾಗಿ ಸರಿಪಡಿಸಿಕೊಳಲ್ಲು ಸರ್ಕಾರವು ಮತ್ತೊಂದು ಬಾರಿ ಅವಕಾಶ ಕಲ್ಪಿಸಿದೆ.
ನಿಮ್ಮ ಬೆಳೆ ಸಮೀಕ್ಷೆ ಆಗಿದೆಯೇ ಇಲ್ಲವೇ ಎಂದು ಈ ಕೆಳಗೆ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ. ನಂತರ ಅಲ್ಲಿ ನಿಮಗೆ
https://cropsurvey.karnataka.gov.in/
ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ನೀಡುತ್ತದೆ.
• ನಂತರ ಅಲ್ಲಿ ವರ್ಷ ಹಾಗೂ ಮುಂಗಾರು ಎಂದು ಹಾಕಿ ನಿಮ್ಮ ಬೆಳೆ ಸಮೀಕ್ಷೆ ಸಂಪೂರ್ಣ ಮಾಹಿತಿ ಪಡೆಯಲು ಸಹಾಯವಾಗುತ್ತದೆ.