9.3ಕೋಟಿ ರೈತರ 17 ನೇ ಪಿಎಂ ಕಿಸಾನ್ ಕಂತಿಗೆ ಮೋದಿ ಸಹಿ

ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ಪಿಎಂ ಕಿಸಾನ್ ನಿಧಿಯ 17 ನೇ ಕಂತಿನ ಬಿಡುಗಡೆಗೆ ಅಧಿಕಾರ ನೀಡುವ ಮೊದಲ ಕಡತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದ್ದಾರೆ. ಇದು 9.3 ಕೋಟಿ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಸುಮಾರು 20,000 ಕೋಟಿ ರೂ.ಗಳನ್ನು ವಿತರಿಸುತ್ತದೆ. ಕಡತಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಪ್ರಧಾನಿ ಮೋದಿ, “ನಮ್ಮದು ಕಿಸಾನ್ ಕಲ್ಯಾಣಕ್ಕೆ ಸಂಪೂರ್ಣವಾಗಿ ಬದ್ಧವಾಗಿರುವ ಸರ್ಕಾರ. ಆದ್ದರಿಂದ ಅಧಿಕಾರ ವಹಿಸಿಕೊಂಡ ನಂತರ ಸಹಿ ಮಾಡಿದ ಮೊದಲ ಕಡತವು ರೈತರ ಕಲ್ಯಾಣಕ್ಕೆ ಸಂಬಂಧಿಸಿದೆ ಎಂಬುದು ಸೂಕ್ತವಾಗಿದೆ. ಮುಂಬರುವ ದಿನಗಳಲ್ಲಿ ರೈತರು ಮತ್ತು ಕೃಷಿ ವಲಯಕ್ಕಾಗಿ ಇನ್ನೂ ಹೆಚ್ಚು ಕೆಲಸ ಮಾಡಲು ನಾವು ಬಯಸುತ್ತೇವೆ ಅಂಥ ಹೇಳಿದರು.
ನೀವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯಾ ಎಂದು ಖಾತ್ರಿಪಡಿಸಿಕೊಳ್ಳಿ. ಕೆಲವೊಮ್ಮೆ ಖಾತೆಗೆ ಹಣ ಜಮೆ ಆಗಲು ಒಂದು ವಾರದವರೆಗೂ ಸಮಯ ಆಗಬಹುದು. ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನೀವಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಕ್ರಮ ಅನುಸರಿಸಿ:

ಪಿಎಂ ಕಿಸಾನ್ ಯೋಜನೆಯ ವೆಬ್ಸೈಟ್ಗೆ ಹೋಗಿ: pmkisan.gov.in/
ಇಲ್ಲಿ ಕೆಳಗೆ ತುಸು ಸ್ಕ್ರಾಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣಬಹುದು. ಅದರಲ್ಲಿ ಬೆನಿಫಿಶಿಯರಿ ಲಿಸ್ಟ್ ಅನ್ನು ಕ್ಲಿಕ್ ಮಾಡಿ
ಇದರಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಊರನ್ನು ಆಯ್ದುಕೊಳ್ಳಿ.
ನಿಮ್ಮ ಊರಿನಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣುತ್ತದೆ. ಇದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ.

PM Kisan Nidhi ಪ್ರಧಾನಿಯಾದ ಮೊದಲ ಕಡತಕ್ಕೆ ಸಹಿ. ಪಿಎಂ ಕಿಸಾನ್ ನಿಧಿ 17 ನೇ ಕಂತು ಮಂಜೂರು ಇದರಿಂದ ದೇಶಾದ್ಯಂತ 9.3 ಕೋಟಿ ರೈತರಿಗೆ ಅನುಕೂಲವಾಗಲಿದೆ.

ಹಣ ಬಂದಿಲ್ಲದಿದ್ದರೆ ಅಥವಾ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಹೇಗೆ?

ಒಂದು ವೇಳೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ದರೆ ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಒಂದು, ನೀವು ಇಕೆವೈಸಿ ಪೂರ್ಣಗೊಳಿಸದೇ ಇರಬಹುದು, ಅಥವಾ ಮಾಡಿಲ್ಲದೇ ಇರಬಹುದು. ಇನ್ನೊಂದು, ನೀವು ಈ ಯೋಜನೆಯ ಫಲಾನುಭವಿಯಾಗಲು ಇರುವ ಅರ್ಹತೆಯ ಅಂಶಗಳು ನಿಮಗೆ ಅನ್ವಯ ಆಗದೇ ಇರಬಹುದು.

ಪಿಎಂ ಕಿಸಾನ್ ಫಲಾನುಭವಿಗಳೆಲ್ಲರೂ ಇಕೆವೈಸಿ ಮಾಡುವುದು ಕಡ್ಡಾಯ. ಕಳೆದ ಒಂದು ವರ್ಷದಲ್ಲಿ ನೀವು ಒಮ್ಮೆ ಇಕೆವೈಸಿ ಮಾಡಿಸಿದ್ದರೆ ಸಾಕು. ಇನ್ನೂ ನೀವು ಕೆವೈಸಿ ಅಪ್ಡೇಟ್ ಮಾಡದೇ ಹೋಗಿದ್ದರೆ ಕೂಡಲೇ ಮಾಡಿರಿ. ಪಿಎಂ ಕಿಸಾನ್ ವೆಬ್ಸೈಟ್ಗೆ ಹೋಗಿ ಅಲ್ಲಿಂದಲೇ ಇಕೆವೈಸಿ ಅಪ್ಡೇಟ್ ಮಾಡಬಹುದು. ಇದಕ್ಕೆ ನಿಮ್ಮ ಆಧಾರ್ ಕಾರ್ಡ್ ಇದ್ದರೆ ಸಾಕು. ಈ ಆಧಾರ್ಗೆ ಮೊಬೈಲ್ ನಂಬರ್ ಜೋಡಿತವಾಗಿರಬೇಕು. ಒಟಿಪಿ ಮೂಲಕ ಇಕೆವೈಸಿ ಅಪ್ಡೇಟ್ ಮಾಡಬಹುದು. ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅಲ್ಲಿಂದಲೂ ನೀವು ಇಕೆವೈಸಿ ಅಪ್ಡೇಟ್ ಮಾಡಲು ಸಾಧ್ಯ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಸಹಾಯವಾಣಿ ಸಂಖ್ಯೆ- 155261 ಅಥವಾ 1800115526 (ಟೋಲ್ ಫ್ರೀ) ಅಥವಾ 011-23381092 ಅನ್ನು ಸಹ ಸಂಪರ್ಕಿಸಬಹುದು. ಈ ಯೋಜನೆಗೆ ಸಂಬಂಧಿಸಿದ ನಿಮ್ಮ ಪ್ರತಿಯೊಂದು ಸಮಸ್ಯೆಯನ್ನು ಇಲ್ಲಿಯೂ ಪರಿಹರಿಸಲಾಗುವುದು.

ರೈತರು ತಮ್ಮ KYC ಅನ್ನು PM ಕಿಸಾನ್ ಯೋಜನೆಗಾಗಿ ನವೀಕರಿಸಿದರೆ ಲಾಭ ಪಡೆಯಬಹುದು. ಒಂದು ವೇಳೆ ಯಾರು ತಮ್ಮ KYC ಮಾಡಿಸಿದೆ ಇದ್ದಲ್ಲಿ ಅವರಿಗೆ ಈ ಹಣ ಬರುವುದಿಲ್ಲ. OTP-ಆಧಾರಿತ ತಂತ್ರವನ್ನು ಬಳಸಿಕೊಂಡು MKISAN ಪೋರ್ಟಲ್‌ನಲ್ಲಿ ಫಲಾನುಭವಿಗಳು eKYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಆದರೆ ಇ-ಕೆವೈಸಿ ಮಾಡಲು ಈಗ ಕೇಂದ್ರ ಸರ್ಕಾರ ಮತ್ತೊಂದು ಸರಳ ದಾರಿಮಾಡಿ ಕೊಟ್ಟಿದೆ. ಏನೆಂದರೆ ರೈತರು ಇನ್ನೂ ಮುಂದೆ ಇ-ಕೆವೈಸಿ ಅನ್ನು ತಮ್ಮ ಫೇಸ್(ಮುಖ) ತೋರಿಸುವುದರ ಮೂಲಕ ಮಾಡಬಹುದು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ ಫಲಾನುಭವಿಗಳು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಈಗ ಫೇಸ್‌ ಸ್ಕ್ಯಾನ್ ಮೂಲಕವೂ ಕೆವೈಸಿ ಅಪ್‌ಡೇಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ.

Spread positive news

Leave a Reply

Your email address will not be published. Required fields are marked *