ರೈತರೇ ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಮುಂತಾದ ಪ್ರಕೃತಿ ವಿಕೋಪಗಳು ಸೇರಿದಂತೆ ಹಲವಾರು ಕಾರಣಗಳಿಂದ ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರಲು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು 2024-25 ನೇ ಸಾಲಿನಲ್ಲಿ ಸಹ ಜಾರಿಗೆ ತರಲು ಉದ್ದೇಶಿಸಲಾಗಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮುಂಗಾರು 2024 2025 ಸಣ್ಣ ಪ್ರೀಮಿಯಂ ದೊಡ್ಡ ಸುರಕ್ಷೆ (ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ) ಬ್ಯಾಂಕ್ ಖಾತೆಯೊಂದಿಗೆ ನಿಮ್ಮ ಆಧಾರ್ ಜೋಡಣೆ ಬೆಳೆ ವಿಮೆ ಪರಿಹಾರ ಇತ್ಯರ್ಥ ಶೀಘ್ರದಲ್ಲೆ ಮನ್ನಣೆ ನೀಡಲಿದೆ.
ಬೆಳೆವಿಮೆ ಅರ್ಜಿ ಸಲ್ಲಿಸಲು ನಿಯಮಗಳೇನು?
* ಹಾಲಿ ಇರುವ ಬೆಳೆಗಳಿಗೆ (ಬಿತ್ತನೆಯಿಂದ ಕಟಾವು ಹಂತದವರೆಗೆ) ಬರ, ಶುಷ್ಕ ಪರಿಸ್ಥಿತಿ, ಆಲಿಕಲ್ಲು ಮಳೆ. ಭೂ ಕುಸಿತ ಮುಂತಾದವುಗಳಿಂದ ಇಳುವರಿ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆಯನ್ನು ಒದಗಿಸಲಾಗುತ್ತದೆ.
* ಕಟಾವಿನ ನಂತರ ಬೆಳೆಯನ್ನು ಗುಡ್ಡಗಳಾಗಿ ಕಟ್ಟಿ ಜಮೀನಿನಲ್ಲೇ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ, 14 ದಿನಗಳೊಳಗೆ ಆಲಿಕಲ್ಲು ಮಳೆ. ಚಂಡಮಾರುತ ಹಾಗೂ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೆ ನಷ್ಟದ ನಿರ್ಧರಣೆಯನ್ನು ವ್ಯಕ್ತಿಗತ ತಾಕು / ಹೊಲದ ಆದಾರದ ಮೇಲೆ ನಿರ್ಧರಿಸಿ. ನಷ್ಟ ಪರಿಹಾರವನ್ನು ಒದಗಿಸಲಾಗುತ್ತದೆ.
* ಈ ಮೇಲೆ ನೀಡಲಾದ ಎರಡೂ ಪರಿಸ್ಥಿತಿಗಳಲ್ಲೂ ವಿಮೆಗೆ ಒಳಪಟ್ಟ ರೈತರು 72 ತಾಸುಗಳೊಳಗೆ ವಿಮಾ ಕಂಪನಿ, ಬ್ಯಾಂಕ್ ಅಥವಾ ಕೃಷಿ ಇಲಾಖೆ ಮೂಲಕ ದೂರು ದಾಖಲಿಸುವುದು ಕಡ್ಡಾಯವಾಗಿದೆ.
* ವಿಮಾ ಘಟಕದಲ್ಲಿ ಅಧಿ ಸೂಚಿತ ಬೆಳೆಯ ಸರಾಸರಿ ಇಳುವರಿಯು ಪ್ರಾರಂಭಿಕ ಇಳುವರಿಗಿಂತ ಕಡಿಮೆಯಾದರೆ ಇಳುವರಿ ಕೊರತೆ ಅನುಗುಣವಾಗಿ ಸದರಿ ವಿಮಾ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರು ವಿಮಾ ಪರಿಹಾರ ಮೊತ್ತ ಪಡೆಯಲು ಅರ್ಹರಾಗುತ್ತಾರೆ.
* ಯೋಜನೆಯು ಸಾಲ ಪಡೆದ ರೈತರಿಗೆ ಹಾಗೂ ಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿದೆ. ಸಾಲ ಪಡೆದ ರೈತರು ತಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಕೊನೆಯ ದಿನಾಂಕದ ಮೊದಲು ತಮ್ಮ ಖಾತೆಯಿಂದ ವಿಮೆಯ ಮೊತ್ತವನ್ನು ಕಡಿತ ಮಾಡಲಾಗಿದೆ ಎಂಬುವುದನ್ನು ಖಚಿತ ಪಡಿಸಿಕೊಳ್ಳಬೇಕು.
* ಒಂದು ವೇಳೆ ಸಾಲ ಪಡೆಯದ ರೈತರು ವಿಮೆ ಮಾಡಿಸಿಕೊಳ್ಳಲು ಕಂಪನಿಯ ಪ್ರತಿನಿಧಿ, ಗ್ರಾಮಒನ್ ಸೆಂಟರ್, ಸಿಎಸ್ಸಿ (CSC) ಸೆಂಟರ್ ಅಥವಾ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸತಕ್ಕದ್ದು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಪರಿಹಾರ ಪಡೆಯಲು ನಿಮ್ಮ ಆಧಾರನ್ನು ನಿಮ್ಮ ಬ್ಯಾಂಕ್ ಖಾತೆಗೆ ಅಂಕ್ ಮಾಡುವುದು ಕಡ್ಡಾಯವಾಗಿದೆ. ಬೆಳೆ ವಿಮೆ ಒಳಗೊಂಡಂತೆ ಇತರೇ ಯಾವುದೇ ನೇರ ಲಾಭ ವರ್ಗಾವಣೆ (ಡಿಬಿಟಿ) ಪಡೆಯಲು ಆಧಾರ್ ಕಡ್ಡಾಯವಾಗಿದೆ. ಆದ್ದರಿಂದ ಕೂಡಲೇ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ನಿಮ್ಮ ಆಧಾರ್ ವಿವರಗಳನ್ನು ಬ್ಯಾಂಕ್ ಖಾತೆಗೆ ಅಂಕ್ ಮಾಡಿಸಿ ಮತ್ತು ಅರ್ಹ ಬೆಳೆ ವಿಮಾ ಪರಿಹಾರ ಮೊತ್ತವನ್ನು ಇತ್ಯರ್ಥ ಪಡಿಸಿಕೊಳ್ಳಿ.
ಸೂಚನೆ: ಕೇವಲ ಒಂದು ಬ್ಯಾಂಕ್ ಖಾತೆಯನ್ನು ಮಾತ್ರ ಆಧಾರ್ ನೊಂದಿಗೆ ಅಂಕ್ ಮಾಡಲು ಅವಕಾಶವಿರುತ್ತದೆ. ನಿಮ್ಮ ಆಧಾರ್ ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಜೋಡಣೆ ಆಗಿದ್ದಲ್ಲಿ ಯಾವ ಖಾತೆಗೆ ಹೋಡಣೆಯಾಗಿದೆ ಎಂಬುದನ್ನು ಪರಿಶೀಲಿಸಿ, ವಿಮೆ ಪರಿಹಾರ ಮೊತ್ತವನ್ನು ಸ್ವೀಕರಿಸಲು ನಿಮಗೆ ಅವಶ್ಯವೆನಿಸುವ ಬ್ಯಾಂಕ್ ಖಾತೆಯೊಂದಿಗೆ ಆಧಾರನ್ನು ಜೋಡಣೆ ಮಾಡಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ.
https://samrakshane.karnataka.gov.in/ ಈ ಲಿಂಕ್ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿ.