ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ (ವಿಮಾ) ಯೋಜನೆ ಮುಂಗಾರು 2024-25
ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಮುಂತಾದ ಪ್ರಕೃತಿ ವಿಕೋಪಗಳು ಸೇರಿದಂತೆ ಹಲವಾರು ಕಾರಣಗಳಿಂದ ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರಲು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು 2024-25 ನೇ ಸಾಲಿನಲ್ಲಿ ಸಹ ಜಾರಿಗೆ ತರಲು ಉದ್ದೇಶಿಸಲಾಗಿದೆ. ಈ ಸಾಲಿನ ಮುಂಗಾರಿನಲ್ಲಿ ನಮ್ಮ ರಾಜ್ಯ ಸರ್ಕಾರವು ರೈತರ ನೆರವಿಗಾಗಿ ಸಜ್ಜಾಗಿ ನಿಂತಿದೆ. ಬಹುತೇಕ ರೈತರಿಗೆ ತಿಳಿದಿರಬಹುದು ತಾವು ಬೆಳೆದ ಫಸಲಿಗೆ ಕ್ರಾಪ್ ಇನ್ಸೂರೆನ್ಸ್ ಅಂದರೆ ಬೆಳೆ ವಿಮೆ ಮಾಡಿಸುವ ಪದ್ಧತಿಯನ್ನು ಹಲವಾರು ವರ್ಷದಿಂದ ಮಾಡಿಕೊಳ್ಳುತ್ತಾ ಬಂದಿದ್ದಾರೆ.
ಏನಿದು ಬೆಳೆವಿಮೆ? ಯಾವ ಬೆಳೆಗಳಿಗೆ ಬೆಳೆವಿಮೆ ಮಾಡುತ್ತಾರೆ?
ಕೃಷಿ ಹಾಗೂ ಕೃಷಿ ವಲಯಕ್ಕೆ ಒಳ್ಳೆಯ ಬೆಲೆ ಸಿಗಬೇಕು. ಹಾಗೂ ರೈತರು ತಮ್ಮ ಚಟುವಟಿಕೆಗಳಲ್ಲಿ ಬೆಲೆಸಿಗದೆ ಇದ್ದಾಗ ನಿರಾಸೆಯಾಗದಂತೆ ತಡೆಯಲು ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ರೂಪಿಸಲಾಗಿದೆ. ಇದರಲ್ಲಿ ರೈತರು ತಾವು ಬೆಳೆದ ಬೆಳೆಗೆ ಎಷ್ಟು ಹಣ ವಿಮೆ ಕಟ್ಟಬೇಕು, ಹಾಗೂ ರೈತರ ಬೆಳೆದ ಬೆಳೆಯು ಆಕಸ್ಮಿಕವಾಗಿ ನಾಶ ಹೊಂದಿದರೆ ಅದಕ್ಕೆ ಎಷ್ಟು ಪರಿಹಾರ ಬರುತ್ತದೆ
ಈ ಯೋಜನೆಗೆ ಒಳಪಡುವ ವಿವಿಧ ಬೆಳೆಗಳಿಗೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಿಗೆ ಘೋಷಣೆಗಳನ್ನು ಸಲ್ಲಿಸಲು ಬೆಳೆವಾರು ಪ್ರೀಮಿಯಂ ಮೊತ್ತ ಹಾಗೂ ಅಂತಿಮ ದಿನಾಂಕ 31/07/2024 ಆಗಿದೆ.
ಬೆಳೆಸಾಲ ಪಡೆಯದ ರೈತರು ನೋಂದಣಿಗಾಗಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಆಧಾರ ಸಂಖ್ಯೆ ಜೋಡಿಸಿದ ಬ್ಯಾಂಕ ಖಾತೆ / ಪಾಸ್ ಬುಕ್ ಮತ್ತು ಆಧಾರ ಸಂಖ್ಯೆಯೊಂದಿಗೆ ಡಿ.ಸಿ.ಸಿ/ಇತರೆ ಬ್ಯಾಂಕ್, ಗ್ರಾಮ್-ಒನ್ ಮತ್ತು ಸಿ.ಎಸ್.ಸಿ ಕೇಂದ್ರಗಳಿಗೆ ಸಂಪರ್ಕಿಸಿ. ರೈತರು ನೋಂದಣಿಗಾಗಿ ಕಡ್ಡಾಯವಾಗಿ FRUITS ID (FID) ಹೊಂದಿರಬೇಕು.
ಅನುಷ್ಠಾನ ಸಂಸ್ಥೆ : ಓರಿಯಂಟಲ್ ಜನರಲ್ ಇನ್ಸುರನ್ಸ್ ಕಂಪನಿ ವತಿಯಿಂದ ಬೆಳೆದ ಬೆಳೆಗೆ ವಿಮೆ ಹಣ ಬಿಡುಗಡೆ ಆಗುತ್ತದೆ. ರೈತರಿಗೆ ಇದೊಂದು ಮಹತ್ವದ ಅವಕಾಶ ಆಗಿದೆ. ಈ ವರ್ಷ ವರುಣನ ಆರ್ಭಟ ಸರಿಯಾಗಿದ್ದು ಮುಂಗಾರು ಹಂಗಾಮಿನಲ್ಲಿ ಬೆಳೆ ಬೆಳೆಯುವ ಲಕ್ಷಣಗಳು ಸಂಪೂರ್ಣ ಆಗಿದೆ.
ರೈತರು ಅರ್ಜಿ ಸಲ್ಲಿಸುವ ಮುನ್ನ ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು –
1) ರೈತರು ಮೊದಲು ಜಮೀನಿನ ಪಹಣಿಗೆ ತಮ್ಮ ಎಪ್.ಐ.ಡಿ ( FID ) ಸಂಖ್ಯೆ ಇದೆಯೋ /ಇಲ್ಲಯೋ ಎಂಬುದನ್ನು ಪರಿಶೀಲಿಸುವುದು.
2) ತಮ್ಮ ಬ್ಯಾಂಕ್ ಖಾತೆಗೆ ಎನ್.ಪಿ.ಸಿ.ಆಯ್ ಲಿಂಕ್ ಇದೆಯೋ /ಇಲ್ಲಯೋ ಎಂಬುದನ್ನು ಪರಿಶೀಲಿಸುವುದು.
3) ಎನ್.ಪಿ.ಸಿ.ಆಯ್ ( NPCI ) ಲಿಂಕ್ ಇದ್ದಲ್ಲಿ ಎಫ್.ಐ.ಡಿ ( FID ) ದಲ್ಲಿ ಇರತಕ್ಕಂತ ಬ್ಯಾಂಕ್ ಖಾತೆ ಸಂಖ್ಯೆಗೂ ಎನ್.ಪಿ.ಸಿ.ಆಯ್ ಲಿಂಕ್ ಇರುವ ಸಂಖ್ಯೆಯು ಒಂದೇ ಯಾಗಿರತಕ್ಕದ್ದು.
4) ಎನ್.ಪಿ.ಸಿ.ಆಯ್ ಲಿಂಕ್ ( NPCI ) ಹಾಗೂ ಎಫ್.ಐ.ಡಿ ( FID ) ದಲ್ಲಿ ಇರತಕ್ಕಂತ ಬ್ಯಾಂಕ್ ಖಾತೆ ಸಂಖ್ಯೆ ಬೇರೆ-ಬೇರೆ ಇದ್ದಲ್ಲಿ ಎಫ್.ಐ.ಡಿ ( FID ) ದಲ್ಲಿ ಇರತಕ್ಕಂತ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬದಲಾವಣೆ ಮಾಡಿಸಿಕೊಳ್ಳುವುದು.
5) ಆಧಾರಕಾರ್ಡದಲ್ಲಿ ಇರತ್ತಕ್ಕಂತ ಹೆಸರಿಗೂ ಹಾಗೂ ಬ್ಯಾಂಕ್ ಖಾತೆಯಲ್ಲಿರುವ ಹೆಸರು ಒಂದೇ ಯಾಗಿರಬೇಕು.
6) ಅಕೌಂಟ್ ಇನ್ ವ್ಯಾಲಿಡ್, ಕ್ಲೋಸ್, ಬ್ಲಾಕ್ ಆಧಾರ ನಾಟ್ ಸಿಡಿಂಗ್ ಹಾಗೂ ಇತರ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಳ್ಳುತ್ತಿದ್ದು ಪರಿಶೀಲಿಸಿಕೊಂಡು ಚಾಲ್ತಿ ಮಾಡಿಸಿಕೊಳ್ಳುವುದು.
7) ಆಧಾರಕಾರ್ಡದಲ್ಲಿ ಹಾಗೂ ಪಹಣಿ ಪತ್ರಿಕೆಯಲ್ಲಿ ಹೆಸರು ಒಂದೇ ಯಾಗಿರಬೇಕು.