ಪಹಣಿ (ಉತಾರ)ಗೆ ಆಧಾರ್ ಕಾರ್ಡ್ ಲಿಂಕ್ ಈಗ ನಿಮ್ಮ ಮೊಬೈಲಿನಲ್ಲಿ

ಪ್ರೀಯ ರೈತರೇ ಇವತ್ತು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ. ನೀವು ನಿಮ್ಮ ಜಮೀನಿನ ಮಾಹಿತಿ ಪಡೆಯಲು ಸರ್ಕಾರದಿಂದ ಒಂದು ಕೆಲಸ ಮಾಡಬೇಕಾಗಿದೆ. ಅದೇನೆಂದರೆ ಉತಾರಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಅದೇ ರೀತಿ
ದೊಡ್ಡ ಮತ್ತು ಸಣ್ಣ ರೈತರ ಮಾಹಿತಿ ದಾಖಲಿಸುವುದರ ಜತೆಗೆ, ಭೂ ಸಂಬಂಧಿತ ವಂಚನೆ ತಡೆಯಲು ಈಗ ಸರ್ಕಾರವು ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜಮೀನು ಮಾಲೀಕರ ಭಾವಚಿತ್ರದೊಂದಿಗೆ ಆರ್ (ಪಹಣಿ) ಆಧಾರ್ ಜೋಡಣೆ ಕಡ್ಡಾಯಗೊಳಿಸಲಾಗಿದೆ.

ಹಲವಾರು ತಾಲೂಕಿನ ರೈತರು ಇನ್ನೂ ಸಹ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ. ತಮ್ಮ ಜಮೀನಿನ ಪಹಣಿ ಪತ್ರಕ್ಕೆ ಆಧಾರ್‌ಕಾರ್ಡ್ ಲಿಂಕ್ ಮಾಡುವಂತೆ ಅಂಕೋಲಾ ತಹಶೀಲ್ದಾ‌ರ್ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸರ್ಕಾರದ ಸವಲತ್ತುಗಳನ್ನು ಪಡೆಯಲು ರೈತರು ತಮ್ಮ ಜಮೀನಿನ ಪಹಣಿ ಪತ್ರಕ್ಕೆ ಆಧಾರ ಜೋಡಣೆ ಮಾಡುವುದು ಅಗತ್ಯವಾಗಿದ್ದು, ಇದರಿಂದಾಗಿ ಜಮೀನಿನ ದಾಖಲೆ ಸುರಕ್ಷಿತವಾಗಿರುತ್ತದೆ.

ಅದೇ ರೀತಿ ಈಗ ಪಹಣಿ ಉತಾರಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಮಾತ್ರ ಬರ ಪರಿಹಾರ ಹಣ ಬರುವುದು ಸರ್ಕಾರವು ಖಚಿತ ಮಾಹಿತಿ ನಿಡಿದೆ. ಸುಲಭವಾಗಿ ದಾಖಲೆ ಪಡೆಯಬಹುದು, ಸರ್ಕಾರಿ ಯೋಜನೆಗಳಿಗೆ ಸರಳವಾಗಿ ಅರ್ಜಿ ಸಲ್ಲಿಸಬಹುದು, ಖಾತೆ ವಿವಾದಗಳನ್ನು ತಪ್ಪಿಸಬಹುದು, ಸುಲಭವಾಗಿ ಸಾಲ ಪ್ರಕ್ರಿಯೆ, ಜಮೀನು ಮಾರಾಟದ ಪ್ರಕ್ರಿಯೆಗಳನ್ನು ಮಾಡಬಹುದು ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದ್ದು, ಇದಕ್ಕಾಗಿ ಸರ್ಕಾರ ಹೊಸ ತಂತ್ರಾಂಶ ಸಿದ್ಧಪಡಿಸಿದ್ದು ರೈತರು ತಮ್ಮ ಮನೆಯಲ್ಲಿ ಕುಳಿತು ತಮ್ಮ ಮೊಬೈಲ್ ಫೋನ್ ಮೂಲಕ ಪಹಣಿ ಪತ್ರಕ್ಕೆ ಆಧಾರ್‌ಕಾರ್ಡ್ ಜೋಡಣೆ ಮಾಡಬಹುದು ಅಥವಾ ಗ್ರಾಮ ಆಡಳಿತ ಕಚೇರಿಗೆ ಭೇಟಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದು ಸೂಚಿಸಲಾಗಿದೆ.
ಈ ಪ್ರಕ್ರಿಯೆ ಮಾಡಲು ಉದಾಸೀನ ತೋರಿದರೆ ಅಂತವರಿಗೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ತೊಂದರೆ ಉಂಟಾಗಿದೆ ಹೆಚ್ಚಿನ ಮಾಹಿತಿಗಾಗಿ ಗ್ರಾಮ ಆಡಳಿತ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಲಾಗಿದೆ.

ಆರ್.ಟಿ.ಸಿ – ಆಧಾರ್ ಲಿಂಕ್ ಮಾಡುವ ಸುಲಭ ವಿಧಾನ –
ನಿಮ್ಮ ಜಮೀನಿನ ಪಹಣಿ (RTC) ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಈಗ ತುಂಬಾ ಸುಲಭ! ಕೆಲವೇ ಕ್ಲಿಕ್ ಗಳಲ್ಲಿ ನೀವು ಈ ಕೆಲಸವನ್ನು ಮನೆಯಿಂದಲೇ ಮಾಡಬಹುದು. 👉
* https://landrecords.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

• ನಂತರ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ. ಓಟಿಪಿ ಬೀರುತ್ತದೆ.

• ನಂತರ ಲಾಗಿನ್ ಮೇಲೆ ಕ್ಲಿಕ್ ಮಾಡಿ.
• ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಕಬೇಕು.
ನಂತರ ಅಲ್ಲಿ ಆಧಾರ್ ಕಾರ್ಡ್ ಅಲ್ಲಿ ಇರುವ ಹೆಸರನ್ನು ತಪ್ಪದೇ ನಿಖರವಾಗಿ ಹಾಕಬೇಕು.
• ನಂತರ ಅಲ್ಲಿ ನಿಮ್ಮ ಜಮೀನಿನ ಸರ್ವೇ ನಂಬರ್ ಹಾಕಿ ಹಿಸ್ಸಾ ನಂಬರ್ ಹಾಕಿ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಲಿಂಕ್ ಆಗುತ್ತದೆ

Spread positive news

Leave a Reply

Your email address will not be published. Required fields are marked *