ಉಚಿತ ಕೋಳಿ ಸಾಕಾಣಿಕೆ ತರಬೇತಿ ಎಲ್ಲಿ? ಯಾವಾಗ? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಪ್ರೀಯ ರೈತರೇ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ರೈತರ ಪರವಾಗಿ ಹಲವಾರು ವರ್ಷಗಳಿಂದ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಗೂ ರೈತರಿಗೆ ಕೃಷಿ ಹೆಚ್ಚಿನ ಆದಾಯ ಪಡೆಯಲು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗಿರುವ ಸರ್ಕಾರಗಳು ಹಾಗೂ ಹಲವಾರು ಖಾಸಗಿ ಸಂಸ್ಥೆಗಳು ರೈತರ ಅಭಿವೃದ್ಧಿಯತ್ತ ಸಾಗುತ್ತಿವೆ. ಅದೇ ರೀತಿ ಈಗ ಕೋಳಿ ಸಾಕಾಣಿಕೆ ತರಬೇತಿ ಸಹ
ರುಡ್ಸೆಟ್ ಸಂಸ್ಥೆಯ ವತಿಯಿಂದ ಕೋಳಿ ಸಾಕಾಣಿಕೆ ಕುರಿತ 20 ದಿನಗಳ ಉಚಿತ ತರಬೇತಿಗೆ ಅರ್ಜಿ ಪ್ರದೇಶದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ತರಬೇತಿಯು ಆಹ್ವಾನಿಸಲಾಗಿದೆ.
ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದ್ದು, ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಅಭ್ಯರ್ಥಿಗಳು ಬಲ್ಲವರಾಗಿರಬೇಕು. ಆಧಾರ್ ಕಾರ್ಡ್ನ್ನು ಹೊಂದಿರಬೇಕು ಹಾಗೂ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವ ಗ್ರಾಮೀಣ ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ ಎಂದು ರುಡ್ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಕನಿಷ್ಠ 18 – 40 ವಯಸ್ಸಾಗಿರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31/05/2024
ಜಾನುವಾರುಗಳಿಗೆ ಆಸರೆ:
ಹೈನುಗಾರಿಕೆ ಹೆಚ್ಚಿಸಲು ಸರ್ಕಾರ ದನಗಳ ಶೆಡ್ ನಿರ್ಮಾಣಕ್ಕೆ ಹಾಗೂ ಕೆರೆಗಳ ಅಭಿವೃದ್ಧಿ ಹೊಂದಲು ಹಾಗೂ ಬಿರುಬಿಸಿಲನ ಬೇಗೆಯಲ್ಲಿ ಕಾಡುಮೇಡು ಸುತ್ತಿ ದಣಿದ ಹಸು, ಕರು, ಎಮ್ಮೆ, ಆಡು, ಕುರಿಗಳ ದಣಿವಾರುಸುವುದಲ್ಲದೆ, ವಿವಿಧ ಪಕ್ಷಿಸಂಕುಲಗಳು ಹಾಗೂ ಜಲಜರಗಳ ವಾಸಕ್ಕೆ ಕೆರೆಗಳು ಉಪಯೋಗವಾಗಿವೆ. ಪ್ರಮುಖವಾಗಿ ಇದರಿಂದಾಗಿ ಜಾನುವಾರಗಳಿಗೆ ಕುಡಿಯುವ ನೀರಿನ ತೊಂದರೆ ತಪ್ಪಿದಂತಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ಬೇಸಿಗೆಯಲ್ಲಿ ನೀರಿನ ತೊಂದರೆ ಉಂಟಾಗುತ್ತದೆ ಆಗ ಗ್ರಾಮೀಣ ಪ್ರದೇಶದ ಜನರಿಗೆ ಬೇಸಿಗೆ ಕಾಲದಲ್ಲಿ ಕೆಲವೊಮ್ಮೆ ಕುಡಿಯಲು ಸಹ ನೀರಿನ ತೊಂದರೆ ಬಹಳ ಉಂಟಾಗುತ್ತದೆ. ಆದರೆ ಕೆರೆಗಳನ್ನು ತುಂಬಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆ ಸಮಯದಲ್ಲಿ ಮನೆ ಮನೆಗೆ ಕುಡಿಯಲು ಹಾಗೂ ಇತರೆ ಮನೆ ಕೆಲಸಗಳಿಗೆ ನೀರಿನ ಪೂರೈಕೆ ಹೆಚ್ಚಾಗುತ್ತದೆ.
ಗ್ರಾಮೀಣ ಪ್ರದೇಶದ ಜನರಿಗೆ ನೀರಿನ ಕೊರತೆ ನೀಗಿಸಿದಂತಾಗುತ್ತದೆ. ಹಾಗೂ ಜನರು ನೀರು ಎಂಬ ಕೊರತೆಯಿಂದ ಪಾರಾಗಲು ಹಾಗೂ ದಿನನಿತ್ಯ ಜೀವನ ನಡೆಸಲು ಸಹಾಯ ಮಾಡಿದಂತಾಗುತ್ತದೆ. ಗ್ರಾಮೀಣ ಭಾಗದಲ್ಲಿ ಇರುವ ಜಾನುವಾರುಗಳು, ಪಕ್ಷಿಗಳು, ಎಲ್ಲ ಜೀವಿಗಳಿಗೂ ಬದುಕಲು ಸಹಾಯವಾಗುತ್ತದೆ.
ಬೇಸಿಗೆ ಸಮಯದಲ್ಲಿ ಅದರಲ್ಲೂ ಉತ್ತರಕರ್ನಾಟಕದ ಭಾಗಕ್ಕೆ ನೀರಿನ ತೊಂದರೆ ಬಹಳ ಇದೆ. ಅದಕ್ಕಾಗಿ ಸರ್ಕಾರವು ಕೆರೆ, ಕಾಲುವೆ ನೀರು ಒದಗಿಸುವುದು ಬಹಳ ಮುಖ್ಯ ಪಾತ್ರ ವಹಿಸುತ್ತದೆ.