ರೈತರಿಂದ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳ

ಪ್ರೀಯ ರೈತರೇ ಮತ್ತೋಂದು ಹೊಸ ಸುದ್ದಿ. ರೈತರಿಂದ ಬೆಳೆದ ಮಾವು ಮಾರಾಟ ಮೇಳ.ಇದರಲ್ಲಿ ಯಾವ ತಳಿ ಬೆಳೆದಿದ್ದಾರೆ, ಬೆಳೆಯುವ ಸಂಪೂರ್ಣ ಮಾಹಿತಿ ಹಾಗೂ ಯಾವ ತಾಲೂಕು ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ ಬನ್ನಿ.
ಕುಂದಗೋಳ ತಾಲೂಕಿನ ಎಲ್ಲ ಮಾವು ಬೆಳೆಗಾರರು ಸದರಿ ಮಾರಾಟ ಮೇಳದ ಸದುಪಯೋಗ ಪಡೆಯಲು ಕೋರಿಕೆ. ಮಳಿಗೆಗಳನ್ನು ಉಚಿತವಾಗಿ ನೀಡಲಾಗುವುದು. ಮಾಹಿತಿಗಾಗಿ ತಮ್ಮ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ತಾಲೂಕಿನ ತೋಟಗಾರಿಕೆ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಮಳಿಗೆಗಳ ಬಾಡಿಗೆ ಕಡಿಮೆ ಇದ್ದು ಎಲ್ಲ ಮಾವು ಮಾರಾಟಗಾರರು ಇದರ ಲಾಭ ಪಡೆಯಬೇಕು. ಹಾಗೂ ಬೇರೆ ಬೇರೆ ತಳಿಯ ಹಣ್ಣುಗಳನ್ನು ಮಾರಾಟ ಮಾಡಿ ಮಾರುಕಟ್ಟೆಗೆ ಪರಿಚಯಿಸಲು ಇದೊಂದು ಹೊಸ ವೇದಿಕೆ ಆಗಿದೆ. ರೈತರು ಸಹ ಇದರಿಂದ ಬೇರೆ ಬೇರೆ ತಳಿಯ ಬಗ್ಗೆ ಮಾಹಿತಿ ಪಡೆಯುತ್ತಾರೆ. ಹಾಗೂ ರೈತರಿಗೆ ಇದರಿಂದ ಮಾವಿನ ಬೆಳೆಯ ಬಗ್ಗೆ ಹಾಗೂ ಮಾವಿನ ಕೃಷಿ ಮಾಡುವುದು ಹೇಗೆ? ಯಾವ ತಳಿಯ ಗಿಡಗಳು ಹಚ್ಚಿದರೆ ಒಳ್ಳೆಯದು ಎಂದು ಸಂಪೂರ್ಣ ಮಾಹಿತಿ ಪಡೆಯಲು ಈ ಮಾವು ಮೇಳ ಸಹಾಯಕಾರಿ ಆಗಿದೆ.

ಮಾವು ಪ್ರದರ್ಶನ ದಿನಾಂಕ – 14/05/2024 ರಿಂದ 16/05/2024 ರ ವರೆಗೆ ಇರುತ್ತದೆ.

ಸ್ಥಳ – ತೋಟಗಾರಿಕೆ ಆವರಣ ರೈಲ್ವೆ ನಿಲ್ದಾಣ ಹತ್ತಿರ ಧಾರವಾಡ.

ಈಗಿನ ಕಾಲದಲ್ಲಿ ಅತಿ ಹೆಚ್ಚಾಗಿ ತಂತ್ರಜ್ಞಾನ ಬಳಕೆ ಆಗುತ್ತಿದೆ. ಅದೇ ರೀತಿ ಕಾಲಕಾಲಕ್ಕೆ ಮಳೆ ಆಗುತ್ತಿಲ್ಲ. ಹೀಗಾಗಿ ರೈತರು ಹವಾಮಾನ ಏರಿಳಿತದ ಪರಿಣಾಮವಾಗಿ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಅದೇ ರೀತಿ ಕೆಲವು ರೈತರು ತಮ್ಮ ಧೈರ್ಯ ಸಾಹಸದಿಂದ ಸುಸ್ಥಿರ ಕೃಷಿಯಲ್ಲಿ ಮುನ್ನಡೆ ಸಾಧಿಸಿದ್ದು ಕಷ್ಟಪಟ್ಟರೆ ರೆ ಎಲ್ಲ ರೈತರೂ ಸಾಧಕರಾಗುತ್ತಾರೆ. ಬಹಳಷ್ಟು ರೈತರು ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ಕೈಗೊಂಡು ಕೆಲ ಸಂದರ್ಭದಲ್ಲಿ ಎಡವುತ್ತಾರೆ. ಅಂತಹವರು ಎದೆಗುಂದದೆ ಕೃಷಿ ಇಲಾಖೆ ಸಹಾಯ ಪಡೆದು ಮೇಲೇಳಬೇಕು. ಬಹಳಷ್ಟು ಸಾಧಕ ರೈತರು ಎಲೆಮರೆ ಕಾಯಿಯಂತಿದ್ದಾರೆ. ಅಂತಹವರನ್ನೂ ಕೃಷಿ ಇಲಾಖೆ ಗುರುತಿಸಿ ಪ್ರೋತ್ಸಾಹಿಸಬೇಕು.

ಮಾವು ಬೆಳೆಯುವ ವಿಧಾನ –
ಮಳೆಗಾಲದಲ್ಲಿ ಸಾಲುಗಳ ಮಧ್ಯ ರೆಂಟಿ ಹೊಡೆದು, ಹರಗಿ ಭೂಮಿಯನ್ನು ಸ್ವಚ್ಛ ಮಾಡಬೇಕು, ಸೆಣಬು, ಅಲಸಂದಿ ಅಥವಾ ಹುರುಳಿ ಮುಂತಾದ ಅಂತರ ಬೆಳೆಗಳನ್ನು ಮಾವಿನ ತೋಟದಲ್ಲಿ ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿ ಗಿಡಗಳ ಬೆಳವಣಿಗೆ ಸುಧಾರಿಸಿ ಇಳುವರಿ ಹೆಚ್ಚುತ್ತದೆ. ಒಣ ಬೇಸಾಯದಲ್ಲಿ ಶೇಂಗಾ ಅಥವಾ ಸೂರ್ಯಕಾಂತಿ ಬೆಳೆಗಳನ್ನು ಅಂತರ ಬೆಳೆಗಳನ್ನಾಗಿ ಬೆಳೆದು ಹೆಚ್ಚಿನ ಆದಾಯ ಪಡೆಯಬಹುದು. ನೀರಾವರಿ ಸೌಲಭ್ಯ ಇದ್ದರೆ ತರಕಾರಿ ಬೆಳೆಗಳನ್ನು ಸಹ ಅಂತರ ಬೆಳೆಗಳನ್ನಾಗಿ ಬೆಳೆಯಬಹುದು. ಗಿಡಗಳ ಸುತ್ತಲೂ ಪಾತಿ ಮಾಡಿ, ಶಿಫಾರಸ್ಸು ಮಾಡಿದ ಗೊಬ್ಬರಗಳನ್ನು ಮಳೆಗಾಲ (ಜೂನ್ ಜುಲೈ) ದಲ್ಲಿ ಒದಗಿಸಬೇಕು. ಕಳೆ ನಿಯಂತ್ರಣಕ್ಕಾಗಿ ಹಾಗೂ ಭೂಮಿಯಲ್ಲಿರುವ ತೇವಾಂಶವನ್ನು ಸಂರಕ್ಷಿಸಲು ಅಂತರ ಬೇಸಾಯ ಮಾಡಬೇಕು. ಮಾವು ಮಳೆಯಾಶ್ರಿತ ಬೆಳೆಯಾಗಿದ್ದರೂ ಹಣ್ಣಿನ ಬೆಳವಣಿಗೆಯ ಹಂತದಲ್ಲಿ ಒಂದೆರಡು ಸಲ ನೀರು ಒದಗಿಸಿದರೆ ಹಣ್ಣಿನ ಗಾತ್ರ ಹೆಚ್ಚಿ ಇಳುವರಿ ಹೆಚ್ಚುತ್ತದೆ.

ಸೂಕ್ತ ತಳಿಗಳು
ಬಾದಾಮಿ
ಮಲ್ಲಿಕಾ
ದಶಹರಿ
ತೋತಾಪುರಿ
ಕೇಸರ
ನೀಲಂ

ಸಾಲುಗಳ ಅಂತರ –
5*5 ಮೀ
9*9 ಮೀ
10*10 ಮೀ

ಕಳೆ ನಿರ್ವಹಣೆ :
ಅಂತರ್ ಬೇಸಾಯ ಹಾಗೂ ಮಣ್ಣಿಗೆ ಹೊದಿಕೆ ಮಾಡುವುದರಿಂದ ಸಾಧ್ಯವಾದ ಮಟ್ಟಿಗೆ ಕಳೆ ನಿರ್ವಹಣೆ ಆಗುತ್ತದೆ. ನಿಯಮಿತ ಮಳೆ ಬೀಳುವ ಪ್ರದೇಶಗಳಲ್ಲಿ ಕಳೆಗಳ ನಿರ್ವಹಣೆಯನ್ನು ಸೂಕ್ತ ಕಳೆನಾಶಕ ಉಪಯೋಗಿಸಿ ನಿಯಂತ್ರಣ ಮಾಡಬಹುದಾಗಿದೆ.
ಅಟ್ರಾಜೆನ್ ಎನ್ನುವುದು ಒಂದು ಮುಖ್ಯ ಕಳೆನಾಶಕ ಆಗಿದೆ.

Spread positive news

Leave a Reply

Your email address will not be published. Required fields are marked *