ಪ್ರೀಯ ರೈತರೇ ಇವತ್ತು ನಾವು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ. ದೇಶಾದ್ಯಂತ ಬಿಸಿಗಾಳಿ ಹಾಗೂ ಬರಗಾಲ ಪೀಡಿತ ಪ್ರದೇಶಗಳಿಗೆ ಸೂರ್ಯನ ಶಾಖ ಹೆಚ್ಚಿಗೆ ಬಡಿಯುತ್ತಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಾಗಿ ತಾಪಮಾನ ಏರಿಕೆ ಆಗಿದೆ. ಪೂರ್ವ ಮತ್ತು ದಕ್ಷಿಣ ಭಾರತದ ರಾಜ್ಯಗಳು ಬಿಸಿ ಗಾಳಿಯ ಹೊಡೆತದಿಂದ ನಲುಗುತ್ತಿದ್ದು, ಕೇರಳದಲ್ಲಿ ಒಬ್ಬ ವೃದ್ಧೆ ಬಿಸಿಲಾಘಾತಕ್ಕೆ ಬಲಿಯಾಗಿದ್ದಾರೆ. ಆರೋಗ್ಯ ರಕ್ಷಣೆಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜನರಿಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಮುಖ್ಯವಾಗಿ ಹೇಳಬೇಕೆಂದರೆ ಕರ್ನಾಟಕ ರಾಜ್ಯದಲ್ಲಿ ಸಹ ದಿನಾಲೂ 42,43 ಡಿಗ್ರಿ ವರೆಗೆ ಬಿಸಿಲಿನ ಝಳ ಹೆಚ್ಚಿದಂತೆ ಪ್ರಾಣಿ ಪಕ್ಷಿಗಳು, ರೈತರ ಪರಿಸ್ಥಿತಿ ಬಹಳ ತೊಂದರೆಯಾಗಿದೆ. ಪ್ರತಿ ದಿನ ಹಗಲು ಹೊತ್ತಿನ ತಾಪಮಾನ 41 ಡಿಗ್ರಿ ಸೆಲ್ಸಿಯಸ್ಗಿಂತ ಅಧಿಕವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ. ಬಿಸಿ ಗಾಳಿಯಿಂದ ತೀವ್ರ ಬಿಸಿ ಗಾಳಿವರೆಗಿನ ಪರಿಸ್ಥಿತಿ ಬುಧವಾರದ ವರೆಗೆ ಮುಂದುವರಿಯಲಿದೆ. ಒಡಿಶಾ, ಆಂಧ್ರ ಪ್ರದೇಶ, ತೆಲಂಗಾಣ, ಬಂಗಾಳ, ಜಾರ್ಖಂಡ್, ಛತ್ತೀಸ್ಗಢ, ಬಿಹಾರ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಮೊದಲಾದೆಡೆ ತಾಪಮಾನ 41ರಿಂದ 45 ಡಿಗ್ರಿ ಸೆಲ್ಸಿಯಸ್ ಇತ್ತು.
ಯಾವ ತಿಂಗಳು ಎಷ್ಟು ಮಳೆ ಸುರಿಯಲಿದೆ?
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮುಂಗಾರು ಮಳೆ ಭವಿಷ್ಯ ಚೆನ್ನಾಗಿದೆ. ಹಾಗೂ ಈ ವರ್ಷ ಬಿಸಿಲಿನ ತಾಪ ಹೆಚ್ಚಿದೆ. ಈ ಜೂನ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ ದೀರ್ಘ ಕಾಲೀನ ಸರಾಸರಿಯ ಶೇ.96ರಷ್ಟು ಮಳೆ ಸುರಿಯಲಿದೆ. ಇದರಲ್ಲಿ ಶೇ.5ರಷ್ಟು ಹೆಚ್ಚ-ಕಡಿಮೆ ಕೂಡ ಆಗಬ ಹುದು, ದೇಶಾದ್ಯಂತ ಸರಾಸರಿ 87 ಸೆಂ.ಮೀ. ಮಳೆ ಈ ಸಲ ಸುರಿಯಲಿದೆ’ ಎಂದು ಮುನ್ನೆಚ್ಚರಿಕೆ ನೀಡಿದೆ. ಅದೇ ರೀತಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಆಗುವ ಸಾಧ್ಯತೆ ಶೇ. 67ರಷ್ಟಿದೆ. ಅದೇ ರೀತಿ ಈಗ ರಾಜ್ಯದಲ್ಲಿ ಸ್ವಲ್ಪ ಅಲ್ಲಲ್ಲಿ ಆಲಿಕಲ್ಲು ಮಳೆ ಸಹ ಆಗಿದೆ.
ವಾಡಿಕೆಯಂತೆ ಈ ಸಲವೂ ಸಾಮಾನ, ಮುಂಗಾರು ಸುರಿಯಲಿದೆ ಎಂದು ಅದು ಮುನ್ಸೂಚನೆ ನೀಡಿದೆ.
ಮುಂದಿನ ದಿನಗಳಲ್ಲಿ ಗುಡುಗು ಸಹಿತ ಮಳೆ ಎಲ್ಲಿ?
ಈಗಾಗಲೇ ಹವಾಮಾನ ವರದಿ ಪ್ರಕಾರ ಮುಂದಿನ ಮುಂಗಾರು ನಿರೀಕ್ಷೆ ತುಂಬಾ ಚೆನ್ನಾಗಿದೆ. ಪಶ್ಚಿಮ ಹಿಮಾಲಯ ವಲಯದಲ್ಲಿ
ಸೋಮವಾರದ ವರೆಗೆ ಗುಡುಗುಸಹಿತ ಮಳೆ ಮತ್ತು ಭಾರಿ ಗಾಳಿ ಬೀಸುವ ಸಂಭವವಿದೆ. ಈಶಾನ್ಯ ವಲಯದಲ್ಲಿ ಸೋಮವಾರದಿಂದ ಮಂಗಳವಾರದ ವರೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ.
ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿಯೂ ತಾಪಮಾನ ತುಸು ಏರಿಕೆಯಾಗಿದೆ. ಗೋಕರ್ಣದಲ್ಲಿ 36.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.ದ.ಕ.ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸೋಮವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಉಡುಪಿಯ ಹೆಬ್ರಿ ಮುನಿಯಾಲು ಸಮೀಪದ ಎಳ್ಳಾರೆ ಶ್ರೀ ಜನಾರ್ದನ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಹೆಂಚು ಭಾರಿ ಗಾಳಿ ಮಳೆಗೆ ಹಾರಿವೆ. ಸಿಡಿಲು ಬಡಿದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಮೂವರು ಗಾಯಗೊಂಡಿದ್ದಾರೆ.
ಮುನ್ನೇಚ್ಚರಿಕೆ ಕ್ರಮಗಳು –
• 41-42 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದರಿಂದ ಯಾರು ಮಧ್ಯಾಹ್ನ ಸಮಯದಲ್ಲಿ ಓಡಾಡಬಾರದು.
• ಚಿಕ್ಕ ಮಕ್ಕಳ ಸುರಕ್ಷತೆ ತುಂಬಾ ಅವಶ್ಯಕವಾಗಿದೆ.
• ವಯಸ್ಕರಿಗೆ ಬಿಸಿಗಾಳಿ ಪರಿಣಾಮ ಎದುರಾಗುವ ಸಾಧ್ಯತೆ ಇದೆ.
• ದಯವಿಟ್ಟು ಯಾರು ಸಹ ಬಿಸಿಗಾಳಿ ವೀಪರೀತ ಇರುವುದರಿಂದ ಬಿಸಿಲಿನಲ್ಲಿ ಸಮಯ ಕಳೆಯಬೇಡಿ.
• ಪ್ರಾಣಿ ಪಕ್ಷಿಗಳ ಸುರಕ್ಷತೆ ತುಂಬಾ ಅವಶ್ಯಕವಾಗಿದೆ.
• ಮುಂದಿನ ತಿಂಗಳವರೆಗೆ ಬಿಸಿಗಾಳಿ ಬೀಸುವುದರಿಂದ ಮನುಷ್ಯನ ಜೀವಕ್ಕೆ ಕಷ್ಟದ ಕೆಲಸವಾಗಿದೆ.