ಮೊಬೈಲಿನಲ್ಲೇ ಸ್ಪಿಂಕ್ಲರ್ ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ನೋಡಿ.

ಪ್ರಿಯ ರೈತರೇ ಸರ್ಕಾರವು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಗೂ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆದ್ಯತೆ ನೀಡಲು ಸರ್ಕಾರವು ಕೃಷಿಗೆ ನೀರು ನಿರ್ವಹಣೆ ಮಾಡಲು ಸರ್ಕಾರವು ಪೈಪುಗಳನ್ನು ವಿತರಿಸಲು ಮುಂದಾಗಿದೆ. 

ಕೃಷಿ ಭಾಗ್ಯ ಯೋಜನೆಯಡಿ ಫಲಾನುಭವಿಗಳು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದು, ನೀರಾವರಿ ಅವಲಂಬಿತ ಅನ್ನದಾತರು ಕಡಲೆ, ಜೋಳ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿ ನಾನಾ ಬೆಳೆಗಳನ್ನು ಬೆಳೆದಿದ್ದು, ಬೆಳೆಗೆ ಮಿತವಾಗಿ ನೀರು ಬಳಸಲು ವಿನೂತನ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಶೇ.90ರ ಸಬ್ಸಿಡಿಯಲ್ಲಿ ಪೈಪ್‌ ಸೆಟ್‌ ಲಭಿಸುತ್ತಿದ್ದು, 2 ಇಂಚಿನ ಸ್ಟ್ರಿಂಕ್ಲರ್‌ಗೆ 1,932 ರೂ.,2.5 ಇಂಚಿನ ಪೈಪ್‌ಗೆ 2,070 ರೂ. ರೈತರು ಪಾವತಿಸಬೇಕಾಗಿದೆ.

ರೈತರಿಗೆ ಮತ್ತೊಂದು ಸಂತಸದ ವಿಷಯ ಹೇಳುತ್ತೇನೆ. ಇವತ್ತು ನಾವು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪೂರೈಸುವ ಮೂಲಕ ಹಾಗೂ ಕೃಷಿಯಲ್ಲಿ ನೀರು ನಿರ್ವಹಣೆ ಮಾಡಲು ಸುಲಭವಾಗಿ ನುರು ಅತಿ ಮಿತ‌ ಬಳಕೆಯ ದೃಷ್ಟಿಯಿಂದ ರೈತರಿಗೆ ಡ್ರಿಪ್ ಹಾಗೂ ಸ್ಪಿಂಕ್ಲರ್ ವಿತರಣೆಗೆ ಸರ್ಕಾರದಿಂದ ಅರ್ಜಿ ಆಹ್ವಾನ ಕರೆದಿದ್ದಾರೆ. ರೈತ ಸಂಪರ್ಕ ಹನಿ ನೀರಾವರಿ/ ತುಂತುರು ನೀರಾವರಿ ಕೃಷಿ ಉಪಕರಣಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಕೂಡಲೇ ಅರ್ಜಿ ಸಲ್ಲಿಸಿ ಕೂಡಲೇ ಈ ಯೋಜನೆಯ ಲಾಭ ಪಡೆಯಲು ಇದೊಂದು ಮಹತ್ವದ ಉದ್ದೇಶ ಆಗಿದೆ.

ಅಲ್ಪ-ಸ್ವಲ್ಪ ನೀರಾವರಿ ಮೂಲಕ ಬಯಲು ಸೀಮೆಯ ರೈತರು ಹೆಚ್ಚಾಗಿ ತರಕಾರಿ, ಆಹಾರ ಬೆಳೆ ಬೆಳೆಯುವುದು ವಾಡಿಕೆ. ಕೃಷಿ ಭಾಗ್ಯ ಯೋಜನೆಯಡಿ ಫಲಾನುಭವಿಗಳು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದು, ನೀರಾವರಿ ಅವಲಂಬಿತ ಅನ್ನದಾತರು ಕಡಲೆ, ಜೋಳ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿ ನಾನಾ ಬೆಳೆಗಳನ್ನು ಬೆಳೆದಿದ್ದು, ಬೆಳೆಗೆ ಮಿತವಾಗಿ ನೀರು ಬಳಸಲು ವಿನೂತನ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಶೇ.90ರ ಸಬ್ಸಿಡಿಯಲ್ಲಿ ಪೈಪ್‌ ಸೆಟ್‌ ಲಭಿಸುತ್ತಿದ್ದು, 2 ಇಂಚಿನ ಸ್ಟ್ರಿಂಕ್ಲರ್‌ಗೆ 1,932 ರೂ., 2.5 ಇಂಚಿನ ಪೈಪ್‌ಗೆ 2,070 ರೂ. ರೈತರು ಪಾವತಿಸಬೇಕಾಗಿದೆ.

ಬೇಕಾಗುವ ಅಗತ್ಯ ದಾಖಲಾತಿಗಳು

1) ಅರ್ಜಿ ನಮೂನೆ

2) ಭಾವಚಿತ್ರ 2

3) ಉತಾರ & ಖಾತೆ ಉತಾರ

4) ಆಧಾರ ಕಾರ್ಡ

5) ಬ್ಯಾಂಕ ಪಾಸಬುಕ್ಕ

6) 20 ರೂ ಬಾಂಡ 1 ಪಾರ್ಟಿ- ರೈತರ ಹೆಸರು

2 ಪಾರ್ಟಿ- ಸಹಾಯಕ ಕೃಷಿ ನಿರ್ದೇಶಕರು ಕಚೇರಿ ಗೋಕಾಕ/ಮೂಡಲಗಿ

7) 20 ರೂ ಬಾಂಡ ಜಂಟಿ ಖಾತೆ ಹೊಂದಿದವರ ರೈತರಗೆ ಮಾತ್ರ

1ಪಾರ್ಟಿ- ರೈತರ ಹೆಸರು

2 ಪಾರ್ಟಿ- ಸಹಾಯಕ ಕೃಷಿ ನಿರ್ದೇಶಕರು.

8) ನೀರು& ಬೆಳೆ ಪ್ರಮಾಣ ಪಾತ್ರ

9) ಪಂಚಾಯತಿ ಠರಾವ್

10) ಜಾತಿ ಪ್ರಮಾಣ ಪಾತ್ರ- ಪರಿಶಿಷ್ಟ ಜಾತಿ & ಪಂಗಡ ರೈತರಿಗೆ ಮಾತ್ರ

11) ಆರ್ ಸಿ ಬುಕ ( ಟ್ರಾಕರ್ ಚಾಲಿತ ಉಪಕರಣಗಳಿಗೆ ಮಾತ್ರ)

12) ನಿರಕ್ಷೇಪಣಾ ಪ್ರಮಾಣ ಪತ್ರ ( NOC) – ತೋಟಗಾರಿಕೆ ಇಲಾಖೆಯಿಂದ.

ಎಫ್ ಐಡಿ ಮೂಲಕ ಅರ್ಜಿ ಹಾಕುವುದು ಹೇಗೆ?

ಮೊದಲಿಗೆ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

•👇 https://kkisan.karnataka.gov.in/Citizen/ApplicationEntryMI.aspx

• ನಂತರ ರೈತರ ರಿಜಿಸ್ಟರ್ ಮೊಬೈಲ್ ನಂಬರಿಗೆ ಓಟಿಪಿ ಹೋಗಿರುತ್ತದೆ. ಅದನ್ನು ಎಂಟರ್ ಮಾಡಿ.

• ಆಗ ನಿಮ್ಮ ವಿವರಗಳು ಓಪನ್ ಆಗುತ್ತವೆ.

• ಅಜಿ೯ ಸಲ್ಲಿಸಲು ಕೆಳಗೆ ಫೈನಾನ್ಶಿಯಲ್ ಇಯರ್(ಆರ್ಥಿಕ ವರ್ಷ) ಸೆಲೆಕ್ಟ್ ಮಾಡಿ 2023-24 ಹಾಕಿ, ನಂತರ ರೈತರ ವಂತಿಗೆ ಎಂದು ಆಯ್ಕೆ ಮಾಡಿ.

• ಹನಿ ನೀರಾವರಿ, ಸ್ಪಿಂಕ್ಲರ್ ಅಥವಾ ಡ್ರಿಪ್ ಇರಿಗೇಷನ್ ಆಯ್ಕೆ ಮಾಡಿ.

• ನಂತರ ನಿಮ್ಮ ಹೊಲದಲ್ಲಿರುವ ಬೆಳೆ ಮೇಲೆ ಕ್ಲಿಕ್ ಮಾಡಿ.

• ನಂತರ 75ಎಂಎಂ ಅಥವಾ 63 ಇದ್ದರೆ ಆ ಸೈಜ್ ಮೇಲೆ ಕ್ಲಿಕ್ ಮಾಡಿ ನಂತರ ಏರಿಯಾವನ್ನು 2.5 ಹೆಕ್ಟೇರ್ ಸೆಲೆಕ್ಟ್ ಮಾಡಿ.

• ನಿಮ್ಮ ಹೊಲದಲ್ಲಿರುವ ಬೆಳೆ ಹಾಗೂ ನೀರಿನ ಮೂಲವನ್ನು ಹಾಕಬೇಕು. ಆಗ ಅದು ಆಟೋಮ್ಯಾಟಿಕ್ ಆಗಿ ಸಹಾಯಧನ ತೆಗೆದುಕೊಳ್ಳುತ್ತದೆ.

• ಇಲ್ಲಿ ನೀವು ಸ್ಪಿಂಕ್ಲರ್ ತಯಾರಕರ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಆಯ್ಕೆ ಮೈಡಿದ ನಂತರ ಸಮ್ಮಿಟ್ ಮಾಡಿ.

• ಆಗ ಅಕ್ನಾಲೆಡ್ನಮೆಂಟ್ ಕಾಪಿ ಬರುತ್ತದೆ. ಅದನ್ನು ತೆಗೆದುಕೊಂಡು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಕೊಟ್ಟರೆ ಅನುದಾನವಿದ್ದರೆ ಕಾರ್ಯಾದೇಶವನ್ನು ನೀಡುತ್ತಾರೆ. ಆಗ ನಿಮಗೆ ಸ್ಪಿಂಕ್ಲರ್ ಸಿಗುತ್ತದೆ.

ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾವ ರೈತ ಸಂಪರ್ಕ ಕೇಂದ್ರಗಳಲ್ಲಿ ಯೋಜನೆ ಪ್ರಾರಂಭ ಆಗಿದೆ?

ರೈತ ಸಂಪರ್ಕ ಕೇಂದ್ರ ಅರಭಾವಿ ಇವರ ಸಹಯೋಗದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಆರಂಭವಾಗಿದೆ. ಹಾಗೂ ರೈತರು ಸಹ ಕೂಡಲೇ ಇದರ ಸದುಪಯೋಗ ಪಡೆದುಕೊಳ್ಳಬೇಕು. ಕೂಡಲೇ ನೀವು ಸಹ ನಿಮ್ಮ ಹತ್ತಿರ ರೈತ ಸಂಪರ್ಕ ಕೇಂದ್ರಗಳಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಿ ಗುಣಮಟ್ಟದ ನೀರು ನಿರ್ವಹಣೆಗೆ ಒಂದು ಹೊಸ

ಹೆಜ್ಜೆ ಇಡಲು ಸರ್ಕಾರವು ನೆರವು ನೀಡುತ್ತದೆ.

Spread positive news

Leave a Reply

Your email address will not be published. Required fields are marked *