ಆತ್ಮೀಯ ರೈತ ಬಾಂಧವರೇ ಸರ್ಕಾರದಿಂದ ಇದೀಗ ಮತ್ತೊಮ್ಮೆ ಬೆಳೆ ವಿಮೆ ಪರಿಹಾರವನ್ನು ರೈತರ ಖಾತೆಗೆ ಡಿಪಿಟಿ ಮುಖಾಂತರ ಹಣ ಜಮಾ ಮಾಡಲಾಗಿದೆ. ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದಂತೆ ಈ ವರ್ಷ 25 ಲಕ್ಷಕ್ಕಿಂತ ಹೆಚ್ಚು ರೈತರು ಈ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆವಿಮೆಯನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಸರ್ಕಾರವು ಖಾತ್ರಿಪಡಿಸಿದೆ ಎಲ್ಲ ರೈತರು ಹೋದ ವರ್ಷ ತಮ್ಮ ಬೆಳೆಗಳ ಬೆಳೆ ವಿಮೆಯನ್ನು ಮಾಡಿಸಿದ್ದರಿಂದ ಈ ವರ್ಷ ಫಲ ಅನುಭವಿಗಳಾಗಿ ವಿಮೆಯನ್ನು ಪಡೆದುಕೊಳ್ಳಲಿದ್ದಾರೆ. ಬೆಳೆ ವಿಮೆಯಲ್ಲಿ ನೋಂದಾಯಿಸಿಕೊಂಡ 13 ಲಕ್ಷ ರೈತರಿಗೆ ಈ ಮಾರ್ಚ್ ಕೊನೆಯ ವಾರದಲ್ಲಿ 1,400 ಕೋಟಿ ರೂ ಹಣವನ್ನು ಜಮಾ ಮಾಡಲಾಗುವುದೆಂದು ಸರ್ಕಾರವು ಆದೇಶ ಹೊರಡಿಸಿದೆ. ಬೆಳೆ ವಿಮೆ ಮೊತ್ತವನ್ನು ಡಿಬಿಟಿ ಮುಖಾಂತರ ವಿತರಿಸಲಾಗುವುದು. ಪ್ರಸ್ತುತವಾಗಿ 8 ಲಕ್ಷ ರೈತರಿಗೆ 600 ಕೋಟಿ ರೂ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ. ಬಾಕಿ ಇರುವ 800 ಕೋಟಿ ರು ಹಣವನ್ನು ಉಳಿದ ರೈತರಿಗೆ ಮಾರ್ಚ್ ಅಂತ್ಯದವರೆಗೆ ತಮ್ಮ ತಮ್ಮ ಖಾತೆಗೆ ಅರ್ಹ ಫಲಾನುಭವಿಗಳಿಗೆ ಡಿಪಿಟಿ ಮುಖಾಂತರ ಬೆಳೆ ವಿಮೆಯ ಮೊತ್ತವನ್ನು ಪಾವತಿಸಲಾಗುವುದೆಂದು ಸರ್ಕಾರ ಸ್ಪಷ್ಟಪಡಿಸಿದೆ. ಬೆಳೆ ವಿಮೆಯ ಮೊತ್ತವನ್ನು ಹಂತಹಂತ ನೀಡಲಾಗುವುದೆಂದು ತಿಳಿದು ಬಂದಿದೆ. ಈ ಮಾಹಿತಿಯನ್ನು ಪತ್ರಿಕಾಗೋಷ್ಠಿ ನಡೆಸಿದ ಮೊನ್ನೆ ರಾಜ್ಯ ಸರ್ಕಾರದ ಕೃಷಿ ಸಚಿವರಾದ ಎನ್ ಚೆಲುವನಾರಾಯಣ ಸ್ವಾಮಿ ಅವರು ಹೇಳಿದ್ದಾರೆ.
ಬರಗಾಲದಿಂದ ರೈತರಿಗೆ ಸಂಕಷ್ಟಕಿಡಾಗಿದ್ದಾರೆ. ಮಳೆ ಇಲ್ಲದೆ ಬೆಳೆಯು ಹಾಳಾಗಿದೆ. ಇದೆಲ್ಲವನ್ನು ಮನಗಂಡ ರಾಜ್ಯ ಸರ್ಕಾರವು ರೈತರಿಗೆ ಮಧ್ಯಂತರ ಬೆಳೆಯೊಮ್ಮೆ ನೀಡಲು ಮುಂದಾಗಿದೆ. ಈ ಯೋಜನೆಯಡಿ ಅರ್ಹಗೊಂಡ ರೈತರಿಗೆ ಡಿಬಿಟಿ ಮೂಲಕ ಹಣವನ್ನು ಪಾವತಿ ಮಾಡಲಾಗುವುದು. ಈ ಯೋಜನೆಯು ಹಂತ ಹಂತದಲ್ಲಿ ರೈತರ ಖಾತೆಗೆ ಹಣವನ್ನು ಜಮಾ ಮಾಡಲಿದೆ ಮೊದಲನೇ ಹಂತದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಮಾಡಿಸಿದ್ದ ರೈತರಿಗೆ ಇದೀಗ ಮಧ್ಯಂತರ ವಿಮೆ ಯೋಜನೆ ಅಡಿ ಪರಿಹಾರವೂ ಕೂಡ ಸಿಗಲಿದೆ. ಮೊದಲನೇ ಹಂತದ ಕೂಡ ಪರಿಹಾರದ ಮೊತ್ತವು ಕೂಡ ಈಗಾಗಲೇ ವರ್ಗಾವಣೆಗೊಂಡಿದೆ ಎರಡನೇ ಹಂತದ ವಿಮೆಯ ಹಣವು ವರ್ಗಾವಣೆಗೊಳ್ಳುವ ಪ್ರಕ್ರಿಯೆಯಲ್ಲಿ ಚಾಲ್ತಿಯಲ್ಲಿದೆ. ಈಗಾಗಲೇ ಈ ಮಧ್ಯಂತರ ಬೆಳೆವಿಮೆಯನ್ನು ರಾಜ್ಯ ಸರ್ಕಾರ ರೈತರ ಖಾತೆಗೆ ಜಮಾ ಮಾಡಲಿದೆ.
ಮಧ್ಯಂತರ ಬೆಳೆಯಮೆಯಲ್ಲಿ 25 ಪ್ರತಿಶತ ಹಣವನ್ನು ಈಗಾಗಲೇ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಸದ್ಯದಲ್ಲೇ ಉಳಿದ 75 ಪ್ರತಿಶತ ಹಣವನ್ನು ಸರ್ಕಾರವು ನೇರವಾಗಿ ರೈತರ ಖಾತೆಗೆ ಡಿ ಬಿ ಟಿ ಮುಖಾಂತರ ಹಣವನ್ನು ಜಮಾ ಮಾಡಲಿದೆ ಅರ್ಹ ಫಲಾನುಭವಿಗಳು ನಿಮ್ಮ ನಿಮ್ಮ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಖಾತೆಯನ್ನು ಚೆಕ್ ಮಾಡಿಕೊಳ್ಳಲು ಕೆಳಗೆ ಸೂಚಿಸಲಾಗಿದೆ ಹಾಗೂ ಚೆಕ್ ಮಾಡಿಕೊಳ್ಳುವ ವಿಧಾನವನ್ನು ಕೆಳಗಡೆ ಹಂತ ಹಂತವಾಗಿ ನೀಡಿದ್ದೇವೆ. 2023ರ ಮುಂಗಾರಿನ ಬೆಳಕಟ್ಟಾವಿನ ಪ್ರಯೋಗಗಳು ಕೊನೆಯ ಹಂತದಲ್ಲಿವೆ ಇವುಗಳ ಆದಾರದ ಮೇಲೆ ಬೆಳೆಬಿಮೆಯನ್ನು ನೀಡಲಾಗುವುದೆಂದು ರಾಜ್ಯ ಸರ್ಕಾರದ ಕೃಷಿ ಸಚಿವರಾದ ಎನ್ ಚೆಲುವನಾರಾಯಣ ಸ್ವಾಮಿ ಅವರು ತಿಳಿಸಿದ್ದಾರೆ.
ಫಸಲ್ ಭೀಮಾ ಯೋಜನೆ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳುವ ವಿಧಾನ ಕೆಳಗಿನಂತಿದೆ
1.PMFBY ಯ ಅಧಿಕೃತ ವೆಬ್ಸೈಟ್ಗೆ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ಭೇಟಿ ನೀಡಬೇಕು https://pmfby.gov.in
2. ಫಸಲ್ ಭೀಮಾ ಯೋಜನೆಯ ಮುಖಪುಟವು ಕಾಣಿಸಿಕೊಳ್ಳುತ್ತದೆ ಮತ್ತು ನೀವು ಅಪ್ಲಿಕೇಶನ್ ಸ್ಥಿತಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
3.ಚೆಕ್ ಅಪ್ಲಿಕೇಶನ್ ಸ್ಥಿತಿ ನಿಮಗೆ ಕಾಣಿಸುತ್ತದೆ.
ಇಲ್ಲಿ ನೀವು ನಿಮ್ಮ ಬೆಳೆ ವಿಮೆಯ ರಶೀದಿ ಸಂಖ್ಯೆ ಮತ್ತು “ಕ್ಯಾಪ್ಚಾ ಕೋಡ್” ಅನ್ನು ನಮೂದಿಸಬೇಕು ಮತ್ತು “ಸ್ಥಿತಿಯನ್ನು ಪರಿಶೀಲಿಸಿ” ಬಟನ್ ಅನ್ನು ಕ್ಲಿಕ್ ಮಾಡಬೇಕು.
4.ಕ್ಲಿಕ್ ಮಾಡಿದ ನಂತರ ನೀವು ಯಶಸ್ವಿಯಾಗಿ PMFBY ಪೋರ್ಟಲ್ಗೆ ಲಾಗ್ ಇನ್ ಆಗುತ್ತೀರಿ.
ಈ ಪ್ರಕ್ರಿಯೆಯ ಮೂಲಕ, ನೀವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಸ್ಥಿತಿಯನ್ನು ಪರಿಶೀಲಿಸಬಹುದು.
ನೀವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಫಲಾನುಭವಿಗಳ ಪಟ್ಟಿ 2023 ರಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬೇಕು.
ಬೆಳೆ ಪರಿಹಾರದ ಪಾವತಿ ಸ್ಥಿತಿಯನ್ನು ತಿಳಿದುಕೊಳ್ಳಲು ಅನುಸರಿಸಬೇಕಾದ ಹಂತಗಳು ಈ ಕೆಳಗಿನಂತಿವೆ:
ಹಂತ 1: ಮೊದಲಿಗೆ, ಅಧಿಕೃತ ವೆಬ್ಸೈಟ್ಗೆ (Official website) ಭೇಟಿ ನೀಡಿ.: https://parihara.karnataka.gov.in/service87/
ಹಂತ 2: ನಂತರ ಜಿಲ್ಲೆ ತಾಲೂಕು ಹೋಬಳಿ ಗ್ರಾಮವನ್ನು ಸೆಲೆಕ್ಟ್ ಮಾಡಿ.
ಹಂತ 3: ನಂತರ ವರ್ಷ ಹಾಗೂ ಕಾರಣವನ್ನು ಸೆಲೆಕ್ಟ್ ಮಾಡಿ. ಗೆಟ್ ರಿಪೋರ್ಟ್ ಮೇಲೆ ಸೆಲೆಕ್ಟ್ ಮಾಡಿ
ಹಂತ 4: ನಂತರ ನಿಮಗೆ ಬೆಳೆಹಾನಿಯ ಪರಿಹಾರದ ಜಮಾ ಆಗಿರುವ ಮಾಹಿತಿ ದೊರೆಯುತ್ತದೆ.
ನಿಮ್ಮ ಜಿಲ್ಲೆಯ ಬರ ಪರಿಹಾರವೂ ಯಾವಾಗ ಬೇಕಾದರೂ ಘೋಷಣೆಯಾಗಬಹುದು ಆದ ಕಾರಣ ಸಮಸ್ತ ರೈತ ಬಾಂಧವರು ಕೃಷಿ ತಾಣ ಸಾಮಾಜಿಕ ಜಾಲತಾಣದ ಟೆಲಿಗ್ರಾಂ ಗ್ರೂಪನ್ನು ಈಗಲೇ ಜಾಯಿನ್ ಆಗಿ: https://telegram.me/krishimahaiti