ಆತ್ಮೀಯ ರೈತ ಬಾಂಧವರೇ ರಾಜ್ಯದ ರೈತ ಸಮುದಾಯು ಬರಗಾಲದಿಂದ ಕಂಗಾಲಾಗಿದ್ದು, ಕೃಷಿಗೆ ನೀರಾವರಿ ಯೋಜನೆ ಕೊರತೆ ಅಥವಾ ನೀರಿನ ಹಾಹಾಕಾರ ಉಂಟಾಗಿದೆ. ಆದರೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ನದಿಗಳು ಹಾಗೂ ಕೆರೆಗಳು ಬತ್ತಿ ಹೋಗಿವೆ. ಎಲ್ಲೆಡೆ ಕುಡಿಯುವ ನೀರಿಗಾಗಿಯು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೂ ಬೆಳೆ ಮಾಡಿದ ರೈತರ ಗತಿಯೂ ದಿಕ್ಕೇ ತೋಚದಂತಾಗಿದೆ. ಆದರೆ ಸರ್ಕಾರ ಆಯಾ ಜಿಲ್ಲಾಡಳಿತಕ್ಕೆ ಸೂಚಿಸಿ, ಹಣ ಬಿಡುಗಡೆ ಮಾಡಿ ಕುಡಿಯುವ ನೀರಿನ ಬವಣೆ ನೀಗಿಸಲು ಕ್ರಮ ಕೈಗೊಳ್ಳುತ್ತಿದೆ. ಆದರೆ ಕೃಷಿಯ ಆಧಾರವಾಗಿಟ್ಟುಕೊಂಡ ರೈತರಿಗೆ ಬೆಳೆಗಳ ಚಟುವಟಿಕೆಗಳಿಗಾಗಿ ನೀರಿನ ಮೂಲ ಸೌಕರ್ಯ ಇಲ್ಲದಂತಾಗಿದೆ. ಇದೆಲ್ಲವನ್ನೂ ಗಮನಿಸಿದ ರಾಜ್ಯ ಸರ್ಕಾರ ಜಿಲ್ಲಾವಾರು ರೈತರಿಗೆ ಬೇರೆ ಪರಿಹಾರ ಘೋಷಿಸುತ್ತಾ ಬರುತ್ತಿದೆ. ನಿಮ್ಮ ಜಿಲ್ಲೆಯ ಬರಪರಿಹಾರದ ಮಾಹಿತಿಗಳನ್ನು ತಿಳಿದುಕೊಳ್ಳಲು ಕೃಷಿ ತಾಣವನ್ನು ವೀಕ್ಷಿಸಿ. ಅತ್ಯಂತ ಹೆಚ್ಚಿನ ಬರಗಾಲವನ್ನು ಎದುರಿಸುತ್ತಿರುವ ರೈತ ಸಮುದಾಯವನ್ನು ಪರಿಗಣಿಸಿದ ರಾಜ್ಯ ಸರ್ಕಾರವು ಆರ್ಥಿಕ ಸೌಕರ್ಯವನ್ನು ಜಿಲ್ಲಾವಾರು ನೀಡಲು ಸಜ್ಜಾಗಿದ್ದೆ. ಈಗಾಗಲೇ ಹಲವು ಜಿಲ್ಲೆಗಳ ರೈತರಿಗೆ ಬರಪರಿಹಾರ ಹಣ ಜಮಾ ಆಗಿದೆ ಎಂದು ಸರ್ಕಾರ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ. ಹಾಗೂ ಬರಪರಿಹಾರವನ್ನು ಹಂತ ಹಂತವಾಗಿ ನೀಡಲಾಗುವುದೆಂದು ಸರ್ಕಾರ ತಿಳಿಸಿದೆ.
ಈ ಬಾರಿಯ ಮುಂಗಾರಿನ ಕೊರತೆಯಿಂದ ನೀರಿನ ಮೂಲಗಳು ಬತ್ತಿ ಹೋಗಿವೆ. ಹಾಗೂ ಬೇಸಿಗೆಯ ಬಿಸಿಯೂ ರೈತರ ಹೊಟ್ಟೆಗೆ ತೀವ್ರವಾಗಿ ಘಾಸಿ ಮಾಡುವಂತೆ ಕಾಣುತ್ತಿದೆ. ರಾಜ್ಯ ಸರ್ಕಾರವು ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಆರ್ಥಿಕ ಸೌಕರ್ಯವನ್ನು ನೀಡಲು ಮುಂದಾಗಿದೆ. ಇದೀಗ ರಾಜ್ಯ ಸರ್ಕಾರವು ಪತ್ರಿಕಾ ಪ್ರಕಟಣೆ ಮುಖಾಂತರ 36944 ರೈತರಿಗೆ ಬೆಳೆ ಹಾನಿ ಪರಿಹಾರವನ್ನು ನೀಡಲಾಗಿದೆ ಎಂದು ಸರ್ಕಾರವು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ. ಈ ಮೇಲೆ ತಿಳಿಸಿದ ರೈತರು ಬಳ್ಳಾರಿ ಜಿಲ್ಲೆಗೆ ಒಳಪಟ್ಟಿರುತ್ತಾರೆ.
ಬಳ್ಳಾರಿ ಜಿಲ್ಲಾಡಳಿತವು ಪತ್ರಿಕಾ ಗೋಷ್ಠಿ ನಡೆಸಿ ಜಿಲ್ಲೆಯ 36944 ರೈತರಿಗೆ ಬೆಳೆ ಹಾನಿ ಪರಿಹಾರವನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಈಗಾಗಲೇ ತಿಳಿಸಿದೆ ಹಾಗೇ ಪರಿಹಾರವೂ ಹಂತ ಹಂತವಾಗಿ ನೀಡಲಾಗುವುದೆಂದು ಖಚಿತವಾಗಿದೆ. ಬೆಳೆ ಹಾನಿ ಪರಿಹಾರ ಪಡೆಯುವ ಎಲ್ಲಾ ರೈತರು ಫ್ರೂಟ್ಸ್ ಐಡಿ ಹೊಂದಿರುವುದು ಕಡ್ಡಾಯವೆಂದು ಕೃಷಿ ಇಲಾಖೆಯೂ ಈಗಾಗಲೇ ತಿಳಿಸಿದೆ. ಬರ ಪರಿಹಾರನೀಡಲು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿರುವ ರೈತರನ್ನು ಒಟ್ಟು 7 ಗುಂಪುಗಳಾಗಿ ಮೌಖಿಕವಾಗಿ ವಿಂಗಡಿಸಲಾಗಿದೆ ಎಂದು ಜಿಲ್ಲಾಡಳಿತ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿಲಾಗಿದೆ. ಈ ಗುಂಪಿಗಳಲ್ಲಿ ಬರುವ ಮೊದಲಿನ ಗುಂಪಿನ ರೈತರಿಗೆ ಅಂದರೆ 36944 ರೈತರಿಗೆ 7.26 ಕೋಟಿ ರೂಪಾಯಿ ಹಣವನ್ನು ರೈತರಿಗೆ ಬೆಳೆ ಹಾನಿ ಪರಿಹಾರದ ರೂಪದಲ್ಲಿ ಅವರವರ ಖಾತೆಗೆ ಮೊದಲ ಹಂತದಲ್ಲಿ ಜಮಾ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಇಲಾಖೆಯಿಂದ ಬೆಳೆ ನಷ್ಟ ಸರ್ವೇ ನಡೆಸಿದ ಆಧಾರದ ಮೇಲೆ ಪರಿಹಾರ ಘೋಷಿಸಲಾಗಿದೆ. ಹಾಗೂ ಈ ಸರ್ವೇಯಲ್ಲಿ ಬಂದ ಭೂಮಿಗಳಿಗೆ ಕಂದಾಯ ಇಲಾಖೆಯಿಂದ ಬೆಳೆ ಪರಿಹಾರದ ಹಣ ಬಿಡುಗಡೆಯಾಗಿದೆ ಎಂದು ತಿಳಿದು ಬಂದಿದೆ. ಸಂಡೂರು, ಶಿರಗುಪ್ಪಾ, ಬಳ್ಳಾರಿ, ಕರಗೋಡಿ, ಕಂಪ್ಲಿ ಈ ಮೇಲೆ ತಿಳಿಸಿದ ಬಳ್ಳಾರಿ ತಾಲೂಕಿನ ರೈತರಿಗೆ ಬೆಳೆ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ತುರ್ತಾಗಿ ಮೊದಲ ಹಂತದಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪರಿಹಾರವನ್ನು ನೀಡಲಾಗುವುದು ಎಂದು ರಾಜ್ಯ ಸರ್ಕಾರವು ಸ್ಪಷ್ಟಪಡಿಸಿದೆ. ಸರ್ಕಾರದಿಂದ ರೈತರಿಗೆ ಬೆಳೆ ಪರಿಹಾರದ ಹಣ ಬಿಡುಗಡೆ ಮಾಡಿದ ಪಟ್ಟಿಯನ್ನು ನಾಡಕಛೇರಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಸರು ಬಿಡುಗಡೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.
ಬೆಳೆ ಪರಿಹಾರದ ಪಾವತಿ ಸ್ಥಿತಿಯನ್ನು ತಿಳಿದುಕೊಳ್ಳಲು ಅನುಸರಿಸಬೇಕಾದ ಹಂತಗಳು ಈ ಕೆಳಗಿನಂತಿವೆ:
ಹಂತ 1: ಮೊದಲಿಗೆ, ಅಧಿಕೃತ ವೆಬ್ಸೈಟ್ಗೆ (Official website) ಭೇಟಿ ನೀಡಿ.: https://parihara.karnataka.gov.in/service87/
ಹಂತ 2: ನಂತರ ಜಿಲ್ಲೆ ತಾಲೂಕು ಹೋಬಳಿ ಗ್ರಾಮವನ್ನು ಸೆಲೆಕ್ಟ್ ಮಾಡಿ.
ಹಂತ 3: ನಂತರ ವರ್ಷ ಹಾಗೂ ಕಾರಣವನ್ನು ಸೆಲೆಕ್ಟ್ ಮಾಡಿ. ಗೆಟ್ ರಿಪೋರ್ಟ್ ಮೇಲೆ ಸೆಲೆಕ್ಟ್ ಮಾಡಿ
ಹಂತ 4: ನಂತರ ನಿಮಗೆ ಬೆಳೆಹಾನಿಯ ಪರಿಹಾರದ ಜಮಾ ಆಗಿರುವ ಮಾಹಿತಿ ದೊರೆಯುತ್ತದೆ.
ನಿಮ್ಮ ಜಿಲ್ಲೆಯ ಬರ ಪರಿಹಾರವೂ ಯಾವಾಗ ಬೇಕಾದರೂ ಘೋಷಣೆಯಾಗಬಹುದು ಆದ ಕಾರಣ ಸಮಸ್ತ ರೈತ ಬಾಂಧವರು ಕೃಷಿ ತಾಣ ಸಾಮಾಜಿಕ ಜಾಲತಾಣದ ಟೆಲಿಗ್ರಾಂ ಗ್ರೂಪನ್ನು ಈಗಲೇ ಜಾಯಿನ್ ಆಗಿ: https://telegram.me/krishimahaiti